ಕ್ಯಾಮರೂನ್ ನ 65 ವರ್ಷದ ಮಹಿಳೆಗೆ ಅತ್ಯಾಧುನಿಕ ಬೆನ್ನುಮೂಳೆ ಶಸ್ತ್ರಚಿಕಿತ್ಸೆ: ಗಾಲಿಕುರ್ಚಿಯ ಅವಲಂಬನೆಯಿಂದ ಮುಕ್ತಿ
ಸುಮಾರು 100 ಕೆಜಿ ತೂಕ ಹೊಂದಿದ್ದು, ಅತಿಯಾದ ಸ್ಥೂಲಕಾಯ ಹೊಂದಿದ್ದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕರು ಮತ್ತು ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆಯ ಕ್ಲಿನಿಕಲ್ ಲೀಡ್ ಆಗಿರುವ ಡಾ.ಉಮೇಶ್ ಶ್ರೀಕಂಠ ಅವರ ತಜ್ಞ ಮಾರ್ಗದರ್ಶನದಲ್ಲಿ 'ಅಡ್ವಾನ್ಸ್ಡ್ ಮಿನಿಮಲಿ ಇನ್ವೇಸಿವ್ ಸ್ಪೈನ್ ಸರ್ಜರಿ' (ಸುಧಾರಿತ ಕನಿಷ್ಠ ಆಕ್ರಮಣಕಾರಿ ಬೆನ್ನುಮೂಳೆ ಯ ಶಸ್ತ್ರಚಿಕಿತ್ಸೆ) ನಡೆಸಲಾಯಿತು.
-
ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರು, ಕಳೆದ ಹಲವಾರು ವರ್ಷಗಳಿಂದ ತೀವ್ರವಾದ ಬೆನ್ನುನೋವಿನಿಂದ ಬಳಲುತ್ತಿದ್ದ ಮತ್ತು ಇದರಿಂದಾಗಿ ಚಲನಶೀಲತೆ ಹಾಗೂ ಆರೋಗ್ಯಕರ ಬದುಕು ಕಳೆದುಕೊಂಡು ಗಾಲಿಕುರ್ಚಿಗೆ ಸೀಮಿತವಾಗಿದ್ದ ಕ್ಯಾಮರೂನ್ ನ 65 ವರ್ಷದ ರೋಗಿಯೊಬ್ಬರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಗುಣಮುಖ ರನ್ನಾಗಿಸಿದ ಸಾಧನೆ ಮಾಡಿದ್ದಾರೆ.
ಸುಮಾರು 100 ಕೆಜಿ ತೂಕ ಹೊಂದಿದ್ದು, ಅತಿಯಾದ ಸ್ಥೂಲಕಾಯ ಹೊಂದಿದ್ದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕರು ಮತ್ತು ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯ ಕ್ಲಿನಿಕಲ್ ಲೀಡ್ ಆಗಿರುವ ಡಾ. ಉಮೇಶ್ ಶ್ರೀಕಂಠ ಅವರ ತಜ್ಞ ಮಾರ್ಗದರ್ಶನದಲ್ಲಿ 'ಅಡ್ವಾನ್ಸ್ಡ್ ಮಿನಿಮಲಿ ಇನ್ವೇಸಿವ್ ಸ್ಪೈನ್ ಸರ್ಜರಿ' (ಸುಧಾರಿತ ಕನಿಷ್ಠ ಆಕ್ರಮಣಕಾರಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ) ನಡೆಸಲಾಯಿತು. ಚಿಕಿತ್ಸೆ ನಡೆಸಿದ ನಂತರ ರೋಗಿಯ ಜೀವನದ ಗುಣಮಟ್ಟದಲ್ಲಿ ಅದ್ಭುತ ಸುಧಾರಣೆ ಕಂಡುಬಂದಿದೆ. ಈ ಶಸ್ತ್ರಚಿಕಿತ್ಸೆಯು 5 ಗಂಟೆಗಳ ಕಾಲ ನಡೆದಿದ್ದು, ರೋಗಿಯನ್ನು 4 ದಿನಗಳಲ್ಲೇ ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ರೋಗಿಯು ಫೋರ್ಟಿಸ್ ಬನ್ನೇರುಘಟ್ಟ ರಸ್ತೆ ಆಸ್ಪತ್ರೆಗೆ ದಾಖಲಾದಾಗ, ಎರಡೂ ಕಾಲುಗಳಲ್ಲಿ ತೀವ್ರ ನೋವು (ವಿಶೇಷವಾಗಿ ಬಲಗಾಲಿನಲ್ಲಿ ಹೆಚ್ಚು), ಕಾಲು ಮತ್ತು ಪಾದಗಳಲ್ಲಿ ಮರಗಟ್ಟುವಿಕೆ ಹಾಗೂ ಜುಮುಗುಟ್ಟುವಿಕೆಯ ಸಮಸ್ಯೆ ಇರುವುದಾಗಿ ಹೇಳಿದ್ದರು. ಇದು ಅವರ ನರಗಳ ಮೇಲೆ ಒತ್ತಡ ವಿರುವುದನ್ನು ಸೂಚಿಸುತ್ತಿತ್ತು. ಫೋರ್ಟಿಸ್ ಬನ್ನೇರುಘಟ್ಟ ರಸ್ತೆಗೆ ಬರುವ ಮೊದಲು ಅವರು ತಮ್ಮ ದೇಶದಲ್ಲಿ ಹಾಗೂ ಭಾರತದ ಹಲವು ಆಸ್ಪತ್ರೆಗಳಲ್ಲಿ ಈ ಕುರಿತು ಸಮಾಲೋಚನೆ ನಡೆಸಿದ್ದರು.
ಇದನ್ನೂ ಓದಿ: Health Tips: ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ
ಫೋರ್ಟಿಸ್ ಬನ್ನೇರುಘಟ್ಟ ರಸ್ತೆಯಲ್ಲಿ ದಾಖಲಾದ ನಂತರ ನಡೆಸಿದ ಎಂಆರ್‌ಐ ಸ್ಕ್ಯಾನ್ ಸೇರಿದಂತೆ ವಿವರವಾದ ತಪಾಸಣೆಗಳು, ಅವರ ಬೆನ್ನುಮೂಳೆಯ ಹಲವು ಡಿಸ್ಕ್ ಗಳು ತೀವ್ರವಾಗಿ ಸವೆದಿರುವುದನ್ನು ಮತ್ತು ಬೆನ್ನುಮೂಳೆಯ ಕಾಲುವೆ ಕಿರಿದಾಗಿ ಪ್ರಮುಖ ನರಗಳ ಮೇಲೆ ಒತ್ತಡ ಬೀರುತ್ತಿರುವುದನ್ನು ಬಹಿರಂಗಪಡಿಸಿದವು. ಇದರಿಂದಾಗಿ ಅವರಿಗೆ ನಿರಂತರ ನೋವು, ಸಿಯಾಟಿಕಾ, ದೌರ್ಬಲ್ಯ ಮತ್ತು ನಡೆಯಲು ತೊಂದರೆಯಾಗುತ್ತಿತ್ತು. ನರಮಂಡಲದ ಸ್ಥಿತಿ ಮತ್ತಷ್ಟು ಹದಗೆಡುವು ದನ್ನು ತಡೆಯಲು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ರೋಗಿ ಮತ್ತು ಅವರ ಕುಟುಂಬದೊಂದಿಗೆ ವಿವರವಾಗಿ ಚರ್ಚೆ ನಡೆಸಿದ ನಂತರ, ಡಾ. ಉಮೇಶ್ ಶ್ರೀಕಂಠ ಅವರು ಅತ್ಯಾಧುನಿಕ 'ಪರ್ಕ್ಯುಟೇನಿ ಯಸ್ ಮಲ್ಟಿ-ಲೆವೆಲ್ ಸ್ಪೈನಲ್ ಫ್ಯೂಷನ್' ಶಸ್ತ್ರಚಿಕಿತ್ಸಾ ವಿಧಾನವನ್ನು ಆಯ್ದುಕೊಂಡರು.
ಸಾಮಾನ್ಯವಾಗಿ, ಇಂತಹ ಸಂಕೀರ್ಣವಾದ ನಾಲ್ಕು ಹಂತದ ಬೆನ್ನುಮೂಳೆಯ ಸಮಸ್ಯೆಗಳಿಗೆ ದೊಡ್ಡ ಗಾತ್ರದ ಗಾಯ, ಸ್ನಾಯು ಮತ್ತು ಅಸ್ಥಿರಜ್ಜುಗಳನ್ನು ಕತ್ತರಿಸುವ 'ಓಪನ್ ಸರ್ಜರಿ'ಗಳನ್ನು ಮಾಡಲಾಗುತ್ತದೆ. ಇವುಗಳಲ್ಲಿ ಸೋಂಕಿನ ಅಪಾಯ ಹೆಚ್ಚಿರುವುದಲ್ಲದೆ, ದೀರ್ಘಕಾಲದ ಬೆಡ್ ರೆಸ್ಟ್ ಅಗತ್ಯವಿರುತ್ತದೆ. ಈ ರೋಗಿಯ ವಿಷಯದಲ್ಲಿ, ಮಧುಮೇಹ ಸೇರಿದಂತೆ ಹಲವು ಹೆಚ್ಚುವರಿ ಆರೋಗ್ಯ ಸಮಸ್ಯೆಗಳಿದ್ದವು. ಇದರಿಂದ ಸಾಂಪ್ರದಾಯಿಕ ಮುಕ್ತ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಅಪಾಯಕಾರಿಯಾಗಿತ್ತು, ಜೊತೆಗೆ ಗಾಯ ವಾಸಿಯಾಗಲು ವಿಳಂಬವಾಗುವ ಮತ್ತು ಚೇತರಿಕೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿದ್ದವು.
ಈ ಪ್ರಕರಣದ ಕುರಿತ ವಿವರಗಳನ್ನು ನೀಡಿದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕರು ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ಕ್ಲಿನಿಕಲ್ ಲೀಡ್ ಆಗಿರುವ ಡಾ.ಉಮೇಶ್ ಶ್ರೀಕಂಠ ಅವರು, “ರೋಗಿಯ ಆರೋಗ್ಯ ದ ಇತರ ಸಮಸ್ಯೆಗಳ ಜೊತೆಗೆ ಬೆನ್ನುಮೂಳೆಯ ಹಲವು ಹಂತಗಳಲ್ಲಿನ ಅಸ್ಥಿರತೆ ಯಿಂದಾಗಿ ಈ ಪ್ರಕರಣವು ನಮಗೆ ಬಹಳ ಸವಾಲಾಗಿತ್ತು. ನಾವು ಅತ್ಯಂತ ಚಿಕ್ಕದಾದ ಕೀ-ಹೋಲ್ ಚುಚ್ಚುಮದ್ದಿನ ರಂಧ್ರಗಳ ಮೂಲಕ ಹೊಸದಾದ 'ಮಸಲ್-ಸ್ಪೇರಿಂಗ್' ತಂತ್ರಜ್ಞಾನವನ್ನು ಬಳಸಿದ್ದೇವೆ. ಈ ವಿಧಾನವು ಸಾಂಪ್ರದಾಯಿಕ ಕನಿಷ್ಠ ಆಕ್ರಮಣಕಾರಿ ಬೆನ್ನುಮೂಳೆಯ ಶಸ್ತ್ರ ಚಿಕಿತ್ಸೆಗಿಂತ ಹೆಚ್ಚು ಸುಧಾರಿತವಾಗಿದೆ ಮತ್ತು ಪ್ರಸ್ತುತ ಭಾರತದಾದ್ಯಂತ ಕೆಲವೇ ಶಸ್ತ್ರಚಿಕಿತ್ಸಕರು ಮಾತ್ರ ಇದನ್ನು ನಿರ್ವಹಿಸುತ್ತಿದ್ದಾರೆ. ನಾಲ್ಕು ಹಂತದ ಫ್ಯೂಷನ್ ಮತ್ತು 10 ಸ್ಕ್ರೂಗಳನ್ನು ಅಳವಡಿಸುವ ಸಂಕೀರ್ಣ ಚಿಕಿತ್ಸೆ ಮಾಡಬೇಕಿದ್ದರೂ ಸ್ನಾಯುಗಳು, ಅಸ್ಥಿರಜ್ಜುಗಳನ್ನು ಕತ್ತರಿಸದೆ ಅಥವಾ ಮೂಳೆಯನ್ನು ತೆಗೆದುಹಾಕದೆ 5 ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸಲಾಯಿತು. ಈ ವಿಧಾನವು ಬೆನ್ನುಮೂಳೆಯನ್ನು ಸ್ಥಿರಗೊಳಿಸಲು, ನರಗಳ ಮೇಲಿನ ಒತ್ತಡವನ್ನು ನಿವಾರಿಸಲು, ಶಸ್ತ್ರಚಿಕಿತ್ಸೆಯ ಒತ್ತಡವನ್ನು ಕಡಿಮೆ ಮಾಡಲು ಮತ್ತು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿದೆ. ಗಾಲಿ ಕುರ್ಚಿಗೆ ಸೀಮಿತವಾಗಿದ್ದ ರೋಗಿಯು ಮತ್ತೆ ನಡೆಯುವುದನ್ನು ನೋಡುವುದು ನಮಗೆ ತುಂಬಾ ತೃಪ್ತಿ ತಂದಿದೆ” ಎಂದು ಹೇಳಿದರು.
ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ರೋಗಿಯು ಮಾತನಾಡಿ, “ವರ್ಷಗಳಿಂದ ನಾನು ನಿರಂತರ ನೋವು ಮತ್ತು ನಡೆಯಲು ಕಷ್ಟಪಡುತ್ತಾ ಬದುಕುತ್ತಿದ್ದೆ. ಫೋರ್ಟಿಸ್ ಗೆ ಬರುವ ಮೊದಲು ನಾನು ಅನೇಕ ಆಸ್ಪತ್ರೆಗಳನ್ನು ಸಂಪರ್ಕಿಸಿದ್ದೆ. ಆದರೆ ಇಲ್ಲಿನ ವೈದ್ಯರು ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸಿದರು ಮತ್ತು ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಶಸ್ತ್ರಚಿಕಿತ್ಸೆಯ ನಂತರ ನಾನು ಈಗ ತುಂಬಾ ಆರಾಮವಾಗಿದ್ದೇನೆ ಮತ್ತು ಮತ್ತೆ ನಡೆಯಬಲ್ಲೆ. ನನಗೆ ದೊರೆತ ಅತ್ಯುತ್ತಮ ಆರೈಕೆ ಮತ್ತು ಬೆಂಬಲಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ” ಎಂದು ಹೇಳಿದರು.
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ವಿಪಿ ಮತ್ತು ಬಿಸಿನೆಸ್ ಹೆಡ್ ಆಗಿರುವ ಡಾ. ಅನಂತ್ ರಾವ್ ಅವರು ಮಾತನಾಡಿ, “ಅನೇಕ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಲ್ಲಿ ಯೂ ಸಹ ಸಂಕೀರ್ಣವಾದ ಬೆನ್ನುಮೂಳೆಯ ಸಮಸ್ಯೆಗಳನ್ನು ಸೂಕ್ತವಾಗಿ ನಿರ್ವಹಿಸುವ ಫೋರ್ಟಿಸ್ ಬನ್ನೇರುಘಟ್ಟ ರಸ್ತೆಯ ಪರಿಣತಿಯನ್ನು ಈ ಪ್ರಕರಣವು ತೋರಿಸಿ ಕೊಟ್ಟಿದೆ. ನಮ್ಮ ಬಹುಶಿಸ್ತೀಯ ವಿಧಾನ ಮತ್ತು ಸುಧಾರಿತ ಕನಿಷ್ಠ ಆಕ್ರಮಣಕಾರಿ ತಂತ್ರಜ್ಞಾನಗಳ ಬಳಕೆಯು ಭಾರತ ಮತ್ತು ಪ್ರಪಂಚದಾದ್ಯಂತದ ಇರುವ ರೋಗಿಗಳಿಗೆ ಉತ್ಕೃಷ್ಟ ಫಲಿತಾಂಶಗಳು, ಸುರಕ್ಷತೆ, ವೇಗವಾಗಿ ಚೇತರಿಸಿಕೊಳ್ಳುವಿಕೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತದೆ” ಎಂದು ಹೇಳಿದರು.