World Cancer Day: ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಸ್ಪರ್ಶ್ ಆಸ್ಪತ್ರೆಯಿಂದ ಆಯೋಜಿಸಿದ್ದ 7ಕೆ ವಾಕಥಾನ್ ಯಶಸ್ವಿ
ಕ್ಯಾನ್ಸರ್ ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಅತಿ ಮುಖ್ಯ. ಕ್ಯಾನ್ಸರ್ ಜಾಗೃತಿಯು ಕೇವಲ ಆಸ್ಪತ್ರೆಗೆ ಮಾತ್ರ ಸೀಮಿತವಾಗಿರದೇ ಇದು ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ಆಗಬೇಕು. ಮುನ್ನೆಚ್ಚರಿಕೆಯ ಜೀವನ ಶೈಲಿ, ಆಗಾಗ ತಪಾಸಣೆ ಹಾಗೂ ಸೂಕ್ತ ಸಮಯಕ್ಕೆ ವೈದ್ಯಕೀಯ ಸಮಾಲೋಚನೆ ಮೊದಲಾದ ಅಂಶಗಳು ಕ್ಯಾನ್ಸರ್ ವಿಷಮ ಸ್ಥಿತಿಗೆ ತಲುಪುವುದನ್ನು ತಡೆಗಟ್ಟಲಿದೆ. ಕ್ಯಾನ್ಸರ್ ಮುಂದುವರಿದ ಹಂತದಲ್ಲಿ ಚಿಕಿತ್ಸೆಯ ಒತ್ತಡವನ್ನು ಕಡಿಮೆ ಮಾಡುತ್ತದೆ.
-
ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನ(World Cancer Day)ದ ಪ್ರಯುಕ್ತ ಸ್ಪರ್ಶ್ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ 7ಕೆ ವಾಕಥಾನ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಕ್ಯಾನ್ಸರ್‌ನಲ್ಲಿ ಆರಂಭದಲ್ಲಿಯೇ ಪತ್ತೆಹಚ್ಚಿ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆ ಯಲ್ಲಿ "ನಾವು ಮಾಡಬಲ್ಲೆವು-ನಾನೂ ಮಾಡಬಲ್ಲೆ" ಶೀರ್ಷಿಕೆಯಡಿ ಯಲಹಂಕದ ಸ್ಪರ್ಶ್ ಆಸ್ಪತ್ರೆ ಯಿಂದ ವಾಕಥಾನ್ ಆಯೋಜಿಸಲಾಗಿತ್ತು. ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ "7ಕೆ ವಾಕಥಾನ್ ಕ್ಯಾನ್ಸರ್ ತಡೆಗಟ್ಟುವುದು, ಆರಂಭದಲ್ಲೇ ರೋಗ ಪತ್ತೆ ಹಚ್ಚುವುದು ಹಾಗೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಮೊದಲಾದ ಕುರಿತು ಸಂದೇಶ ಸಾರಿತು.
ಈ ಬಾರಿಯ ವಿಶ್ವ ಕ್ಯಾನ್ಸರ್ ದಿನದ ಘೋಷ ವಾಕ್ಯ “ವಿಶಿಷ್ಟತೆಯೊಂದಿಗೆ ಒಂದಾಗಿ” ಫಲಕ ಗಳೊಂದಿಗೆ ಕ್ಯಾನ್ಸರ್ ಕುರಿತಾದ ಸಂದೇಶಗಳನ್ನು ಹೊತ್ತ ಫಲಕಗಳೊಂದಿಗೆ ಐಎಂಎ ಯಲಹಂಕ ಘಟಕದ ವೈದ್ಯರು, ಸ್ಪರ್ಶ್ ಆಸ್ಪತ್ರೆ ತಜ್ಞರು, ಸಮಾಲೋಚಕರು, ದಾದಿಯರು, ಆರೋಗ್ಯ ಸೇವಾ ಸಿಬ್ಬಂದಿ ಹಾಗೂ ಸಾರ್ವಜನಿಕರು ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Lung Cancer: ಚಳಿಗಾಲದ ದಟ್ಟ ಹೊಗೆ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?
ಸ್ಪರ್ಶ್ ಆಸ್ಪತ್ರೆಯ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿಷೇಕ್ ಥಾಮಸ್ ಮಾತನಾಡಿ, ಕ್ಯಾನ್ಸರ್ ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಅತಿ ಮುಖ್ಯ. ಕ್ಯಾನ್ಸರ್ ಜಾಗೃತಿಯು ಕೇವಲ ಆಸ್ಪತ್ರೆಗೆ ಮಾತ್ರ ಸೀಮಿತವಾಗಿರದೇ ಇದು ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ಆಗಬೇಕು. ಮುನ್ನೆಚ್ಚರಿಕೆಯ ಜೀವನ ಶೈಲಿ, ಆಗಾಗ ತಪಾಸಣೆ ಹಾಗೂ ಸೂಕ್ತ ಸಮಯಕ್ಕೆ ವೈದ್ಯ ಕೀಯ ಸಮಾಲೋಚನೆ ಮೊದಲಾದ ಅಂಶಗಳು ಕ್ಯಾನ್ಸರ್ ವಿಷಮ ಸ್ಥಿತಿಗೆ ತಲುಪುವುದನ್ನು ತಡೆಗಟ್ಟಲಿದೆ. ಕ್ಯಾನ್ಸರ್ ಮುಂದುವರಿದ ಹಂತದಲ್ಲಿ ಚಿಕಿತ್ಸೆಯ ಒತ್ತಡವನ್ನು ಕಡಿಮೆ ಮಾಡು ತ್ತದೆ. ಈ ನಿಟ್ಟಿನಲ್ಲಿ ವಾಕಥಾನ್‌ನಂತಹ ಪ್ರಯತ್ನಗಳು ಸಂಘಟಿತ ಜವಾಬ್ಧಾರಿಯ ಕುರಿತು ಮನವರಿಕೆ ಮಾಡಿಕೊಡುವುದರೊಂದಿಗೆ ಆರೋಗ್ಯಕರ ಭವಿಷ್ಯವನ್ನು ರೂಪಿಸುವಲ್ಲಿಯೂ ಸಹಾಯ ಮಾಡುತ್ತದೆ ಎಂದರು.
ವಾಕಥಾನ್‌ನಲ್ಲಿ ಡಾ. ಮನೀಷ್ ಕುಮಾರ್, ಕ್ಯಾನ್ಸರ್ ವಿಭಾಗದ ಹಿರಿಯ ವೈದ್ಯಕೀಯ ಸಮಾಲೋಚಕರಾದ ಡಾ.ಪಳನಿಯಪ್ಪನ್ ರಾಮನಾಥನ್, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗದ ಹಿರಿಯ ಸಮಾಲೋಚಕಿ ಡಾ.ಪಿ.ಶಶಿಕಲಾ, ಡಾ.ಚಂದ್ರಕಲಾ.ಎಸ್, ಡಾ.ಸ್ಮಿತಾ ಶೇಖರ್ ಮೊದಲಾದವರು ಭಾಗವಹಿಸಿ ಆರಂಭಿಕ ರೋಗ ಪತ್ತೆಯು ಹೇಗೆ ಚಿಕಿತ್ಸೆ ಯಶಸ್ವಿಯಾಗುವುದಕ್ಕೆ ಮತ್ತು ರೋಗಿ ಜೀವಕ್ಕೆ ಅಪಾಯಕಾರಿಯಾಗಬಲ್ಲ ಸನ್ನಿವೇಶದಿಂದ ಪಾರು ಮಾಡುವುದಕ್ಕೆ ಸಹಾಯಕವಾಗಬಹುದು ಎಂಬುದರ ಕುರಿತು ತಿಳಿಸಿದರು.