ಬೆಂಗಳೂರಿನ 86 ವಿಶೇಷಚೇತನರಿಗೆ ಆಸರೆಯಾದ ‘ಲರ್ನಿಂಗ್ ಫಾರ್ ಲೈಫ್’: ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ
2026ನೇ ಹಣಕಾಸು ವರ್ಷದಲ್ಲಿ ಆಹಾರ ಮತ್ತು ಪಾನೀಯ ಸೇವಾ ವಿಭಾಗದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹಾಕಿಕೊಂಡಿದೆ. ಇದರ ಭಾಗವಾಗಿ ಬೆಂಗಳೂರಿನ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿದ 86 ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭವು ಡಿಯಾಜಿಯೋ ಇಂಡಿಯಾದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್ಆರ್ಒ) ಚಿನ್ಮಯ್ ಶರ್ಮಾ ಮತ್ತು ಎಸ್ಸಿಪಿಡಬ್ಲ್ಯುಡಿ ಸಿಇಒ ರವೀಂದ್ರ ಸಿಂಗ್ ಅವರ ಸಮ್ಮುಖದಲ್ಲಿ ನಡೆಯಿತು.
-
ಬೆಂಗಳೂರು: ಡಿಯಾಜಿಯೋ ಇಂಡಿಯಾ (ಯುನೈಟೆಡ್ ಸ್ಪಿರಿಟ್ಸ್ ಲಿ.), ತನ್ನ ‘ಲರ್ನಿಂಗ್ ಫಾರ್ ಲೈಫ್’ ಕಾರ್ಯಕ್ರಮದಡಿ ವಿಶೇಷಚೇತನರಿಗೆ ಆತಿಥ್ಯ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ವಿಶೇಷಚೇತನರ ಕೌಶಲ್ಯ ಅಭಿವೃದ್ಧಿ ಮಂಡಳಿಯೊಂದಿಗೆ (ಎಸ್ಸಿಪಿಡಬ್ಲ್ಯೂಡಿ) ಕೈಜೋಡಿಸಿದೆ.
2026ನೇ ಹಣಕಾಸು ವರ್ಷದಲ್ಲಿ ಆಹಾರ ಮತ್ತು ಪಾನೀಯ ಸೇವಾ ವಿಭಾಗದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹಾಕಿಕೊಂಡಿದೆ. ಇದರ ಭಾಗವಾಗಿ ಬೆಂಗಳೂರಿನ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿದ 86 ವಿದ್ಯಾರ್ಥಿಗಳ ಘಟಿಕೋ ತ್ಸವ ಸಮಾರಂಭವು ಡಿಯಾಜಿಯೋ ಇಂಡಿಯಾದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್ಆರ್ಒ) ಚಿನ್ಮಯ್ ಶರ್ಮಾ ಮತ್ತು ಎಸ್ಸಿಪಿಡಬ್ಲ್ಯುಡಿ ಸಿಇಒ ರವೀಂದ್ರ ಸಿಂಗ್ ಅವರ ಸಮ್ಮುಖದಲ್ಲಿ ನಡೆಯಿತು.
2023ರಲ್ಲಿ ವಿಶೇಷಚೇತನರನ್ನೂ ಒಳಗೊಳ್ಳುವಂತೆ ‘ಲರ್ನಿಂಗ್ ಫಾರ್ ಲೈಫ್’ ಕಾರ್ಯಕ್ರಮವನ್ನು ವಿಸ್ತರಿಸಲಾಗಿದ್ದು, ಬೆಂಗಳೂರು ಸೇರಿದಂತೆ ಗುರುಗ್ರಾಮ್, ಜೈಪುರ, ಪುಣೆ ಮತ್ತು ದೆಹಲಿ-ಎನ್ಸಿಆರ್ ನಲ್ಲಿರುವ ಎಸ್ಸಿಪಿಡಬ್ಲ್ಯುಡಿ ಸಂಯೋಜಿತ ಕೇಂದ್ರಗಳಲ್ಲಿ ಪ್ರಮಾಣೀಕೃತ ತರಬೇತು ದಾರರಿಂದ ಮೂರು ತಿಂಗಳ ವಸತಿ ಸಹಿತ ತರಬೇತಿ ನೀಡಲಾಗುತ್ತಿದೆ.
ಇದನ್ನೂ ಓದಿ: Bangalore News: ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ
ಇದುವರೆಗೆ ಈ ಕೇಂದ್ರಗಳಲ್ಲಿ ಸುಮಾರು 1,000 ವಿದ್ಯಾರ್ಥಿಗಳು ಯಶಸ್ವಿಯಾಗಿ ತರಬೇತಿ ಪೂರ್ಣ ಗೊಳಿಸಿದ್ದು, ಆತಿಥ್ಯ, ಲಾಜಿಸ್ಟಿಕ್ಸ್ ಹಾಗೂ ಐಟಿ ಮತ್ತು ಐಟಿಇಎಸ್ ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಆಹಾರ ಮತ್ತು ಪಾನೀಯ ಸೇವೆ, ಗೋದಾಮು ಪ್ಯಾಕಿಂಗ್, ಡೇಟಾ ಎಂಟ್ರಿ ಹಾಗೂ ಸಂವಹನ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗುತ್ತಿದೆ.
ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ: ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಮ್ಯಾರಿಯಟ್, ರಾಯಲ್ ಆರ್ಕಿಡ್, ಕ್ರೌನ್ ಪ್ಲಾಜಾ, ತಾಜ್, ಲೆಮನ್ ಟ್ರೀ, ಹಿಲ್ಟನ್, ತಮಾರಾ ಲೀಸರ್ ಎಕ್ಸ್ಪೀರಿ ಯನ್ಸಸ್, ಕಾನ್ರಾಡ್, ಕ್ಲಬ್ ಮಹೀಂದ್ರಾ ರೆಸಾರ್ಟ್ ಸೇರಿದಂತೆ ಫೆದರ್ಲೈಟ್, ಅಕ್ವರೆಲ್ಲಾ ಹಾಗೂ ಟಾಟಾ ಮೋಟಾರ್ಸ್ನಂತಹ ಪ್ರತಿಷ್ಠಿತ ಪಾಲುದಾರ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸ ಲಾಗುತ್ತಿದೆ.
ವಿಶೇಷವೆಂದರೆ, ವಿಶೇಷಚೇತನರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಕೈಗೊಂಡಿರುವ ಈ ಉಪಕ್ರಮವು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (ಎಂಎಸ್ಡಿಇ) ‘ಮಹಿಳೆಯರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಅತ್ಯುತ್ತಮ ಕಾರ್ಯಪದ್ಧತಿಗಳ ಸಂಕಲನ’ದ ಅಂತಿಮ ಪಟ್ಟಿಗೆ ಆಯ್ಕೆಯಾಗಿದೆ.
ಸಮಾರಂಭದಲ್ಲಿ ಮಾತನಾಡಿದ ಚಿನ್ಮಯ್ ಶರ್ಮಾ, "ಪ್ರತಿಯೊಬ್ಬರಿಗೂ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಲು ಸಮಾನ ಅವಕಾಶ ಕಲ್ಪಿಸುವುದೇ ನಿಜವಾದ ಒಳಗೊಳ್ಳುವಿಕೆ. ಈ ತರಬೇತಿ ಪಡೆದ ಯುವಜನರು ಉದ್ಯೋಗಕ್ಕೆ ಸಿದ್ಧರಾಗಿರುವುದನ್ನು ನೋಡಿದಾಗ ಸಹಭಾಗಿತ್ವದ ಶಕ್ತಿಯ ಮೇಲಿನ ನಮ್ಮ ನಂಬಿಕೆ ಮತ್ತಷ್ಟು ಬಲಗೊಳ್ಳುತ್ತದೆ" ಎಂದರು.
ಎಸ್ಸಿಪಿಡಬ್ಲ್ಯುಡಿ ಸಿಇಒ ರವೀಂದ್ರ ಸಿಂಗ್ ಮಾತನಾಡಿ, "ನಾವು ಕೇವಲ ಉದ್ಯೋಗ ಸೃಷ್ಟಿಸುತ್ತಿಲ್ಲ, ಬದಲಾಗಿ ವಿಶೇಷಚೇತನರು ಮುಖ್ಯವಾಹಿನಿಯ ಉದ್ಯೋಗ ಪಡೆಯಲು ಇದ್ದ ಅಡೆತಡೆಗಳನ್ನು ನಿವಾರಿಸುತ್ತಿದ್ದೇವೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2015ರಲ್ಲಿ ಎಂಎಸ್ಡಿಇ ಮಾರ್ಗದರ್ಶನದಲ್ಲಿ ಎಂಎಸ್ಜೆಇ, ಎನ್ಎಸ್ಡಿಸಿ ಮತ್ತು ಸಿಐಐ ಸಹಯೋಗದಲ್ಲಿ ಸ್ಥಾಪನೆಯಾದ ವಿಶೇಷ ಚೇತನರ ಕೌಶಲ್ಯ ಅಭಿವೃದ್ಧಿ ಮಂಡಳಿಯು ಬೆಂಗಳೂರು ಕೇಂದ್ರಿತ ಹಾಗೂ ದೇಶಾದ್ಯಂತ 35 ಘಟಕಗಳನ್ನು ಹೊಂದಿರುವ ಡಿಯಾಜಿಯೋ ಇಂಡಿಯಾ (ಯುನೈಟೆಡ್ ಸ್ಪಿರಿಟ್ಸ್) ಜೊತೆಗೂಡಿ ಈ ಸಮಾಜಮುಖಿ ಕಾರ್ಯವನ್ನು ಮುಂದು ವರಿಸಿದೆ.