ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಳೇ ಮೀಸಲಾತಿ ಮುಂದುವರಿಸಲು ಆಗ್ರಹಿಸಿ ಮಾ.24ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ

ಹೊಲಯ ಜಾತಿಗಳಿಗೆ ಸಂಬಂಧಿಸಿದ ಛಲವಾಡಿ, ಚನ್ನದಾನ, ದಾನ, ಅದಿ ಕರ್ನಾಟಕ, ಅದಿ ದ್ರಾವಿಡ ಇತರ ಹೊಲಯ ಜಾತಿಗಳಿಗೆ ಸಂಬಂಧಿಸಿ ವರ್ಗಗಳನ್ನು ಒಟ್ಟುಗೂಡಿಸಿ ಜನಸಂಖ್ಯೆ ನಮೂದಿಸುವ ಬದಲು ಪ್ರತ್ಯೇಕವಾಗಿ ವಿಂಗಡಿಸುವ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆಯಿರುವ ಹೊಲಯ ಬಲಗೈ ಜಾತಿಗೆ ಘೋರ ಅನ್ಯಾಯ ಮಾಡುವಂತಹ ಅವೈಜ್ಞಾನಿಕ ವರದಿಯನ್ನು ನೀಡಿದ್ದಾರೆ

ಮಾ.24ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ

-

Ashok Nayak
Ashok Nayak Mar 22, 2026 11:06 PM

ಚಿಕ್ಕಬಳ್ಳಾಪುರ: ನ್ಯಾ ನಾಗಮೋಹನ್‌ದಾಸ್‌ ಆಯೋಗದ ಒಳ ಮೀಸಲಾತಿ ವರದಿ( Justice Nagamohandas Commission's Internal Reservation Report) ಯನ್ನು ತಿರಸ್ಕರಿಸಿ ಹಳೆಯ ಮೀಸಲಾತಿ ಮುಂದುವರಿಸಲು ಆಗ್ರಹಿಸಿ ಮಾ.24ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬಲಗೈ ಜಾತಿಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಲಗೈ ಜಾತಿಗಳ ಮುಖಂಡರು ಆಗ್ರಹಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಲಗೈ ಜಾತಿಗಳ ಒಕ್ಕೂಟದ ಮುಖಂಡರು ಮಾತನಾಡಿದರು.

ನಾಗಮೋಹನ್ ದಾಸ್ ವರದಿ ಜಾರಿಯಾದರೆ ಬಲಗೈ ಸಮುದಾಯಗಳಿಗೆ ಅನ್ಯಾಯ ವಾಗಲಿದೆ. ಅವರು ಪೂರ್ವಗ್ರಹ ಪೀಡಿತರಾಗಿ ವರದಿ ನೀಡಿದ್ದಾರೆ ಹೀಗಾಗಿ ಅದನ್ನು ತಿರಸ್ಕರಿಸಿ ಹಳೆಯ ಮೀಸಲಾತಿಯನ್ನು ಮುಂದುವರಿಸಿ ನೇಮಕಾತಿ ಪ್ರಕ್ರಿಯೆ ನಡೆಯಲಿ ಎಂದರು.

ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ನಡೆದಿರುವ ಅನ್ನದ ಹಗರಣದ ವಿರುದ್ಧ ಮಾ-24 ರಂದು ಬಲಗೈಜಾತಿಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು  ಎಂದರು.

ಇದನ್ನೂ ಓದಿ: Chikkaballapur News: ಸದ್ಗುರು ಸನ್ನಿಧಿಯಲ್ಲಿ ‘ಸಪ್ತಋಷಿ ಆವಾಹನಂ’ ಪ್ರಕ್ರಿಯೆ ನಡೆಸಿಕೊಟ್ಟ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಜನ ಅರ್ಚಕರು

ಹೊಲಯ ಜಾತಿಗಳಿಗೆ ಸಂಬಂಧಿಸಿದ ಛಲವಾಡಿ, ಚನ್ನದಾನ, ದಾನ, ಅದಿ ಕರ್ನಾಟಕ, ಅದಿ ದ್ರಾವಿಡ ಇತರ ಹೊಲಯ ಜಾತಿಗಳಿಗೆ ಸಂಬಂಧಿಸಿ ವರ್ಗಗಳನ್ನು ಒಟ್ಟುಗೂಡಿಸಿ ಜನಸಂಖ್ಯೆ ನಮೂದಿಸುವ ಬದಲು ಪ್ರತ್ಯೇಕವಾಗಿ ವಿಂಗಡಿಸುವ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆಯಿರುವ ಹೊಲಯ ಬಲಗೈ ಜಾತಿಗೆ ಘೋರ ಅನ್ಯಾಯ ಮಾಡುವಂತಹ ಅವೈಜ್ಞಾನಿಕ ವರದಿಯನ್ನು ನೀಡಿದ್ದಾರೆ. 

ಪರಿಶಿಷ್ಟ ಜಾತಿಯ ಲಕ್ಷಾಂತರ ಜನಸಂಖ್ಯೆ ನಿಖರವಾದ ಜಾತಿ ನಮೂದಿಸದಿದ್ದರೂ ಅನುಬಂಧ ವರದಿಯನ್ನು ನೀಡಿ ಎ.ಬಿ.ಸಿ. ಗುಂಪುಗಳಾಗಿ ಮಾರ್ಪಡಿಸಿರುವ ಈ ವರದಿ ಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅಂಗೀಕರಿಸದೆ ತಿರಸ್ಕರಿಸಿ, ಹೊಲಯ ಜಾತಿಗಳಿಗೆ ಸಂಬಂಧಿಸಿದ ಎಲ್ಲಾ ಗುಂಪುಗಳನ್ನು ಒಟ್ಟುಗೂಡಿಸಿ ಎ.ಬಿ.ಸಿ.ವಾರು ವರ್ಗಿ ಕರಿಸದೇ ವೈಜ್ಞಾನಿಕವಾಗಿ ನಿರ್ದಿಷ್ಟ ವರದಿ ಬರುವವರೆಗೂ ನಾಗಮೋಹನ್ ದಾಸ್‌ ರವರ ವರದಿಯನ್ನು ತಡೆ ಹಿಡಿಯಬೇಕು ಎಂದು ಬಲಗೈಜಾತಿಗಳ ಒಕ್ಕೂಟದ ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಡಾ.ಟಿ.ಶ್ರೀನಿವಾಸಪ್ಪ ತಿಳಿಸಿದರು. 

ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಆಹಾರ ಸರಬರಾಜಿನ ಬಿಲ್ಲುಗಳನ್ನು ಮತ್ತು ಆಹಾರ ದಾನ್ಯ ತರಕಾರಿ, ಹಾಲು, ಮೊಟ್ಟೆ, ಬಾಳೆಹಣ್ಣು, ಚಿಕನ್ ,ನಂತಹ ಖರೀದಿಯ ನಕಲಿ ಬಿಲ್ ಗಳನ್ನು ನೀಡಿ, ಗತ್ತಿಗೆದಾರರಿಗೆ ಶೇ 30 ರಿಂದ 40 ರಷ್ಟು ನೀಡಿ ಉಳಿಕೆ ಶೇ 60 ರಿಂದ 70 ರಷ್ಟು ಅಧಿಕಾರಿಗಳ ಪಾಲಾಗುತ್ತಿದ್ದು, ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ನಡೆದಿರುವ ಅನ್ನದ ಹಗರಣದ ವಿರುದ್ಧ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಮುಂದ ಮಾ.24 ರಂದು ಬಲಗೈ ಜಾತಿಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಒಳ ಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ನೀಡಿರುವ ಅವೈಜ್ಞಾನಿಕ ಒಳ ಮೀಸಲಾತಿ ವರದಿ ತಿರಸ್ಕರಿಸಿ ವೈಜ್ಞಾನಿಕ ಗಣರಿ ಮಾಡುವ ಮುಖಾಂತರ ನ್ಯಾಯಬದ್ದ ಅಂಕಿ-ಅಂಶಗಳ ಮುಖಾಂತರ ಒಳ ಮೀಸಲಾತಿ ನೀಡಬೇಕು. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಲ ಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ನಡೆಸಿರುವ ಅನ್ನದ ಹಗರಣದ ಆಹಾರ ದಾನ್ಯ, ತರಕಾರಿ, ಹಾಲು, ಮೊಸರು, ಮುಟ್ಟೆ, ಬಾಳೆಹಣ್ಣು ಪ್ರತಿ ಸರಭರಾಜಿನ ಮುಂದೆ ತೆಗೊರುವ ಜಿ.ಪಿ.ಎಸ್. ಫೋಟೋಗಳನ್ನು ಪರಿಶೀಲಿಸಿ ಫೋಟೋಗಳಲ್ಲಿರುವ ವ್ಯಕ್ತಿಗಳನ್ನು ಸೂಕ್ತ ತನಿಖೆ ಒಳಪಡಿಸಬೇಕು ಎಂದರು.

ಜಿಲ್ಲಾ ಗೌರವಾಧ್ಯಕ್ಷ ತ್ಯಾಗರಾಜು ಮಾತನಾಡಿ, ಮೂಲಸೌಕರ್ಯಗಳಡಿ ನಿಯಮ ಉಲ್ಲಂಘಿಸಿ ಕೋಟೇಶನ್ ಮತ್ತು ಕಟ್ ಆಲ್ ಗಳ ಮುಖಾಂತರ ನಡೆಸಿರುವ ಅಕ್ರಮವದ ಹಿಂದಿನ 2 ವರ್ಷಗಳಿಂದ ತನಿಖೆಗೆ ಒಳಪಡಿಸಬೇಕು. ಅರ್ಹತೆ ಇಲ್ಲದ ನೌಕರರನ್ನು ಕೂಡಲೇ ತೆರವುಗೊಳಿಸಿ ಅವರ ಮೂಲ ಸ್ಥಳಕ್ಕೆ ವರ್ಗಾಯಿಸಬೇಕು. ಟೆಂಡರ್ ಪಡೆದ ಮೂಲ ಗುತ್ತಿಗೆದಾರ ಮಕ್ಕಳ ಅನ್ನದ ಹಗರಣದಲ್ಲಿ ಭಾಗಿದಾರನಾಗಿರುವ ಕಾರಣ ಇವರ ಇ.ಎಂ.ಡಿ. ಹಣವನ್ನು ಮುಟ್ಟುಗೋಲು ಹಾಕಿ ಕಪ್ಪುಪಟ್ಟಿಗೆ ಸೇರಿಸಬೇಕು. ಹಗರಣದಲ್ಲಿ ಭಾಗಿಯಾಗಿರುವ ಇಲಾಖೆಗಳ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ಮುಖಾಂತರ ಸೂಕ್ತ ಕ್ರಮ ಅಗಬೇಕು. ಮತ್ತು ಸುಮಾರು ವರ್ಷಗಳಿಂದ ಈ ಇಲಾಖೆಗಳಲ್ಲಿ ಈ ಜಿಲ್ಲೆಯಲ್ಲಿ ಬೀಡು ಬಿಟ್ಟರುವ ನೌಕರರನ್ನು ವರ್ಗಾವಣೆಗೊಳಿಸಬೇಕು ಜಿಲ್ಲಾಧಿಕಾರಿ ಗಳ ನೇತೃತ್ವದಲ್ಲಿ ಸರಬರಾಜು ಸಮಿತಿಯನ್ನು ರಚಿಸಿ ಆ ಮುಖಾಂತರ ಗುಣಮಟ್ಟದ ಅಪಾರ ದಾನ್ಯಗಳನ್ನು ತರಕಾರಿ ಪದಾರ್ಥಗಳನ್ನು ಸರಬರಾಜು ಮಾಡಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಕೆಏಡುಕೊಂಡಲ ಶ್ರೀನಿವಾಸ್,  ಸಲಹಾ ಸಮಿತಿ ಅಧ್ಯಕ್ಷ ವೆಂಕಟರೆಡ್ಡಿ, ನಾರಾಯಣ ಸ್ವಾಮಿ, ಖಜಾಂಚಿ ನರಸಿಂಹ ಮೂರ್ತಿ, ಮತ್ತಿತರರು ಇದ್ದರು.