ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಸದ್ಗುರು ಸನ್ನಿಧಿಯಲ್ಲಿ ‘ಸಪ್ತಋಷಿ ಆವಾಹನಂ’ ಪ್ರಕ್ರಿಯೆ ನಡೆಸಿಕೊಟ್ಟ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಜನ ಅರ್ಚಕರು

ಸಾಂಪ್ರದಾಯಿಕವಾಗಿ ಕಾಶಿ ವಿಶ್ವನಾಥ ದೇವಾಲಯದಲ್ಲಿ ನಡೆಯುವ 'ಸಪ್ತಋಷಿ ಆವಾಹ ನಂ' ಪ್ರಕ್ರಿಯೆಯನ್ನು, ಇತ್ತೀಚಿನ ವರ್ಷಗಳಲ್ಲಿ ಸದ್ಗುರುಗಳ ಮೇಲಿನ ಭಕ್ತಿಯಿಂದಾಗಿ ಕಾಶಿಯ ಏಳು ಜನ ಅರ್ಚಕರು ಕೊಯಂಬತ್ತೂರಿನ 112 ಅಡಿ ಎತ್ತರದ ಆದಿಯೋಗಿಯ ಬಳಿಯಿರುವ ಯೋಗೇಶ್ವರ ಲಿಂಗದ ಸಾನ್ನಿಧ್ಯದಲ್ಲಿ ಅಯನ ಸಂಕ್ರಾಂತಿಯಂದು ನಡೆಸುತ್ತಿದ್ದಾರೆ.

ಸದ್ಗುರು ಸನ್ನಿಧಿಯಲ್ಲಿ ‘ಸಪ್ತಋಷಿ ಆವಾಹನಂ’ ಪ್ರಕ್ರಿಯೆ

-

Ashok Nayak
Ashok Nayak Mar 22, 2026 10:04 PM

ಚಿಕ್ಕಬಳ್ಳಾಪುರ(Chikkaballapur) : ಶಿವನ ಅನುಗ್ರಹವನ್ನು ಆಹ್ವಾನಿಸಲು ವಾರಣಾಸಿ ಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ನಡೆಸಲಾಗುವ ಶಕ್ತಿಯುತ 'ಸಪ್ತಋಷಿ ಆವಾಹ ನಂ'(Saptarishi Avahanam) ಪ್ರಕ್ರಿಯೆಯನ್ನು ಭಾನುವಾರ ಸಂಜೆ 6 ರಿಂದ 8:15 ರವರೆಗೆ ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಪವಿತ್ರ ಪ್ರಕ್ರಿಯೆಯನ್ನು ಕಾಶಿ ವಿಶ್ವನಾಥ ದೇವಾಲಯದ ಅರ್ಚಕರು ಶುದ್ಧ ರೂಪದಲ್ಲಿ ಸಂರಕ್ಷಿಸಿದ್ದಾರೆ.

ಸಾಂಪ್ರದಾಯಿಕವಾಗಿ ಕಾಶಿ ವಿಶ್ವನಾಥ ದೇವಾಲಯದಲ್ಲಿ ನಡೆಯುವ 'ಸಪ್ತಋಷಿ ಆವಾಹ ನಂ' ಪ್ರಕ್ರಿಯೆಯನ್ನು, ಇತ್ತೀಚಿನ ವರ್ಷಗಳಲ್ಲಿ ಸದ್ಗುರುಗಳ ಮೇಲಿನ ಭಕ್ತಿಯಿಂದಾಗಿ ಕಾಶಿಯ ಏಳು ಜನ ಅರ್ಚಕರು ಕೊಯಂಬತ್ತೂರಿನ 112 ಅಡಿ ಎತ್ತರದ ಆದಿಯೋಗಿಯ ಬಳಿಯಿರುವ ಯೋಗೇಶ್ವರ ಲಿಂಗದ ಸಾನ್ನಿಧ್ಯದಲ್ಲಿ ಅಯನ ಸಂಕ್ರಾಂತಿಯಂದು ನಡೆಸುತ್ತಿದ್ದಾರೆ.

ಈ ಸಂಪ್ರದಾಯವನ್ನು ಮುಂದುವರಿಸುತ್ತಾ, ಅರ್ಚಕರು ಮಾ.20 ರಂದು ವಸಂತ ಕಾಲದ ವಿಷುವತ್ ಸಂಕ್ರಾಂತಿಯ ಸುಸಂದರ್ಭದಲ್ಲಿ ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿರುವ ಯೋಗೇಶ್ವರ ಲಿಂಗದ ಸಾನ್ನಿಧ್ಯದಲ್ಲಿ 'ಸಪ್ತಋಷಿ ಆವಾಹನಂ' ಪ್ರಕ್ರಿಯೆಯನ್ನು ನಡೆಸಿ ಕೊಟ್ಟರು. ಯೋಗೇಶ್ವರ ಲಿಂಗವು ಮಾನವ ದೇಹದ ಐದು ಪ್ರಮುಖ ಚಕ್ರಗಳ ಅಭಿವ್ಯಕ್ತಿ ಯಾಗಿದೆ.

ಇದನ್ನೂ ಓದಿ: Sadguru Sri Madhusudan Sai: ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ: ಶ್ರೀ ಮಧುಸೂದನ ಸಾಯಿ

ಸದ್ಗುರುಗಳು ಮೊದಲ ಬಾರಿಗೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದಾಗ ಈ ಪ್ರಕ್ರಿಯೆಯನ್ನು ಕಂಡು, ಅದರ ಅನುಭವವು ಅತ್ಯಂತ ಗಹನ ಹಾಗೂ ಶಕ್ತಿಯುತವಾಗಿರು ವುದಾಗಿ ವಿವರಿಸಿದರು. ಇದರ ಬಗ್ಗೆ ಮಾತನಾಡುತ್ತಾ, “ಇದೊಂದು ತಂತ್ರಜ್ಞಾನ. ಆ ನಲವತ್ತೈದು ನಿಮಿಷದಿಂದ ಒಂದು ಗಂಟೆಯ ಅವಧಿಯಲ್ಲಿ ಅವರು ಈ ದೇವಾಲಯದಲ್ಲಿ ಸೃಷ್ಟಿಸುವ ವಾತಾವರಣವು ಅದ್ಭುತವಾದುದು. ಅರ್ಚಕರು ನಡೆಸಿ ಕೊಡುವ ಇಂತಹ ಪ್ರಕ್ರಿಯೆಯನ್ನು ನಾನು ಎಲ್ಲಿಯೂ ನೋಡಿಲ್ಲ” ಎಂದು ಹೇಳಿದರು.

Sadguru 2

ಸಪ್ತಋಷಿ ಆವಾಹನಂ ನಂತರ, ಹತ್ತಿರದ ಗ್ರಾಮಗಳಾದ ಕುರ್ಲಹಳ್ಳಿ, ಲಿಂಗಶೆಟ್ಟಿಪುರ, ವಡ್ರೇಪಾಳ್ಯ, ಕವರನಹಳ್ಳಿ ಮತ್ತು ಹನುಮಂತಪುರದ ಸುಮಾರು ಎಂಬತ್ತು ಮಕ್ಕಳ ತಂಡವು ಒಟ್ಟಾಗಿ ಸೇರಿ ಸಾಂಕೇತಿಕವಾಗಿ ಶಿವನ ನಿದ್ರೆಗೆ ಅನುವು ಮಾಡಿಕೊಡುವ ಮಂತ್ರ ಪಠಣಗಳನ್ನೊಳಗೊಂಡ ಭಕ್ತಿಪೂರ್ವಕ 'ಶಯನ ಆರತಿ'ಯನ್ನು ಅರ್ಪಿಸಿದರು. ಕಳೆದ ಹದಿನೈದು ದಿನಗಳಿಂದ ಪವಿತ್ರ ಅರ್ಪಣೆಯನ್ನು ಕಲಿತ ಮಕ್ಕಳ ಉಪಸ್ಥಿತಿಯಿಂದಾಗಿ, ಸಂಜೆಯ ವಾತಾವರಣವು ಭಕ್ತಿ ಮತ್ತು ಪ್ರಶಾಂತತೆಯ ಚೈತನ್ಯದಿಂದ ಕೂಡಿತ್ತು.

ಸಪ್ತಋಷಿ ಆವಾಹನಂ ಮತ್ತು ಶಯನ ಆರತಿಯನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸ ಬಹುದು.

ಸದ್ಗುರು ಸನ್ನಿಧಿಯಲ್ಲಿ 'ಸಪ್ತಋಷಿ ಆವಾಹನಂ' ಪ್ರಕ್ರಿಯೆಯನ್ನು ಅರ್ಪಿಸುವುದು, ಇಡೀ ಮಾನವಕುಲಕ್ಕೆ ‘ಅಧ್ಯಾತ್ಮದ ಒಂದು ಹನಿ’ಯನ್ನು ಅರ್ಪಿಸಲು ವಿಶ್ವದಾದ್ಯಂತ ಆಧ್ಯಾತ್ಮಿಕ ಮೂಲಸೌಕರ್ಯವನ್ನು ನಿರ್ಮಿಸುವ ಸದ್ಗುರುಗಳ ದೂರದೃಷ್ಟಿಯ ಭಾಗವಾಗಿದೆ. ಸದ್ಗುರು ಸನ್ನಿಧಿಯು ಪ್ರಸ್ತುತ ನಾಗ ಮಂಟಪ, ಆದಿಯೋಗಿ ಮತ್ತು ಯೋಗೇಶ್ವರ ಲಿಂಗಕ್ಕೆ ನೆಲೆಯಾಗಿದೆ. ಇದು ಶೀಘ್ರದಲ್ಲೇ ಲಿಂಗ ಭೈರವಿ ದೇವಿಯ ಸನ್ನಿಧಿ, ನವಗ್ರಹ ಮಂಟಪಗಳು ಮತ್ತು ಎರಡು ತೀರ್ಥಕುಂಡಗಳನ್ನು ಒಳಗೊಳ್ಳಲಿದೆ.