ಏಕರೂಪದ ಬಾಡಿಗೆ ನಿಗದಿಗೆ ಸಂಘದ ತೀರ್ಮಾನ : ನಿಯಮ ಮೀರಿದರೆ 10 ಸಾವಿರ ದಂಡದ ಎಚ್ಚರಿಕೆ
ಜೆಸಿಬಿ ಬಿಡಿಭಾಗಗಳ ಬೆಲೆ ಗಗನಕ್ಕೇರಿದೆ. ಹೊಸ ಜೆಸಿಬಿಗಳ ಬೆಲೆ ಸದ್ಯ 42 ಲಕ್ಷಮುಟ್ಟಿದೆ. ಹಿಂದೆ 18 ಲಕ್ಷಕ್ಕೆ ಜೆಸಿಬಿ ಖರೀದಿ ಮಾಡಬಹುದಾಗಿತ್ತು.ಈ ವರ್ಷ ಏಕಾಏಕಿ ಹೊಸ ಜೆಸಿಬಿಗಳ ಮೇಲೆ 10 ಲಕ್ಷಕ್ಕೆ ಹೆಚ್ಚಳವಾಗಿದೆ. ಆಪರೇಟರ್‌ಗಳ ಸಂಬಳ 10 ಸಾವಿದಿಂದ 20 ಸಾವಿರಕ್ಕೆ ಏರಿಕೆಯಾಗಿದೆ.ಇತ್ತೀಚೆಗೆ ತೈಲಬೆಲೆಯೂ ಹೆಚ್ಚಿದೆ. ಇವೆಲ್ಲಾ ಮಾನದಂಡಗಳ ಹಿನ್ನೆಲೆಯಲ್ಲಿ ಜೆಸಿಬಿಯಲ್ಲಿ ಒಂದು ಗಂಟೆ ಕೆಲಸಕ್ಕೆ 1100 ಬಾಡಿಗೆ,ಟ್ರಾಕ್ಟರ್ ಒಂದು ಬಾಡಿಗೆ ದಿನಕ್ಕೆ-4000, ಟಿಪ್ಪರ್ ಒಂದು ದಿನಕ್ಕೆ 7000 ಬಾಡಿಗೆ ನಿಗದಿ ಮಾಡಲಾಗಿದ್ದು ನಾಗರೀಕರು ಸಹಕರಿಸಬೇಕು
-
ಜಿಲ್ಲಾ ಕೇಂದ್ರದಲ್ಲಿ ಜೆಸಿಬಿ ಮಾಲಿಕರ ಸಂಘದಿAದ ಜೆಸಿಬಿ ರ‍್ಯಾಲಿಯ ಮೂಲಕ ಜನ ಜಾಗೃತಿ
ಚಿಕ್ಕಬಳ್ಳಾಪುರ: ನಗರ ಗ್ರಾಮೀಣ ಎನ್ನದೆ ಎಲ್ಲೆಡೆ ಯಂತ್ರನಾಗರೀಕತೆಗೆ ಜನತೆ ಒಗ್ಗಿಕೊಂಡಿರುವ ಬೆನ್ನಲ್ಲೇ ಜಿಲ್ಲಾ ಕೇಂದ್ರದ ಜೆಸಿಬಿ ಮಾಲಿಕರ ಸಂಘವು ಏಕರೂಪದ ಬಾಡಿಗೆ ಧರ ನಿಗದಿಗೆ ತೀರ್ಮಾನ ಕೈಗೊಂಡಿರುವುದಾಗಿ ಪ್ರಕಟಿಸಲು ಜೆಸಿಬಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.ಸಂಘದ ನಿಯಮ ಮೀರಿದರೆ 10 ಸಾವಿರ ದಂಡ ವಿಧಿಸುವ ಎಚ್ಚರಿಕೆ ರವಾನಿಸಲಾಯಿತು.
ತಾಲೂಕು ಜೆಸಿಬಿ ಮಾಲಿಕರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ಜೆಸಿಬಿ ಬಿಡಿಭಾಗಗಳ ಬೆಲೆ ಗಗನಕ್ಕೇರಿದೆ. ಹೊಸ ಜೆಸಿಬಿಗಳ ಬೆಲೆ ಸದ್ಯ 42 ಲಕ್ಷಮುಟ್ಟಿದೆ. ಹಿಂದೆ 18 ಲಕ್ಷಕ್ಕೆ ಜೆಸಿಬಿ ಖರೀದಿ ಮಾಡಬಹುದಾಗಿತ್ತು.ಈ ವರ್ಷ ಏಕಾಏಕಿ ಹೊಸ ಜೆಸಿಬಿಗಳ ಮೇಲೆ 10 ಲಕ್ಷಕ್ಕೆ ಹೆಚ್ಚಳವಾಗಿದೆ. ಆಪರೇಟರ್‌ಗಳ ಸಂಬಳ 10 ಸಾವಿದಿಂದ 20 ಸಾವಿರಕ್ಕೆ ಏರಿಕೆಯಾಗಿದೆ.ಇತ್ತೀಚೆಗೆ ತೈಲಬೆಲೆಯೂ ಹೆಚ್ಚಿದೆ. ಇವೆಲ್ಲಾ ಮಾನದಂಡಗಳ ಹಿನ್ನೆಲೆಯಲ್ಲಿ ಜೆಸಿಬಿಯಲ್ಲಿ ಒಂದು ಗಂಟೆ ಕೆಲಸಕ್ಕೆ 1100 ಬಾಡಿಗೆ,ಟ್ರಾಕ್ಟರ್ ಒಂದು ಬಾಡಿಗೆ ದಿನಕ್ಕೆ-4000, ಟಿಪ್ಪರ್ ಒಂದು ದಿನಕ್ಕೆ 7000 ಬಾಡಿಗೆ ನಿಗದಿ ಮಾಡಲಾಗಿದ್ದು ನಾಗರೀಕರು ಸಹಕರಿಸಬೇಕು ಎಂದರು.
ಜೆಸಿಬಿ ಸಂಘದ ಉಪಾಧ್ಯಕ್ಷ ಶಶಿಕುಮಾರ್ ಮಾತನಾಡಿ ಜಿಲ್ಲಾ ಕೇಂದ್ರದಲ್ಲಿ ಜೆಸಿಬಿಗಳಿಗೆ ಪ್ರಸ್ತುತ ಇರುವ ಗಂಟೆ-900ರ ಬಾಡಿಗೆ ದರದಲ್ಲಿ ಕುಟುಂಬ ನಿರ್ವಹಣೆ, ದಿನನಿತ್ಯದ ಖರ್ಚುಗಳು ಹಾಗೂ ಜೆಸಿಬಿಯಲ್ಲಿ ಆಗುವ ಸಣ್ಣಪುಟ್ಟ ರಿಪೇರಿ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೆ ಜೆಸಿಬಿ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜೆಸಿಬಿ ಮಾಲೀಕರ ಸಂಘದ ವತಿಯಿಂದ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ,ರೈತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಹೊರೆ ಆಗದ ರೀತಿಯಲ್ಲಿ ಬಾಡಿಗೆ ದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಲಾಗಿದೆ.ನಾಗರೀಕರಿಂದ ಹಣಪಡೆದು ಕೆಲಸ ಮಾಡುವಾಗ ನಮ್ಮ ಆಪರೇಟರ್‌ಗಳಿಂದ ಏನಾದರೂ ತೊಂದರೆಯಾದಲ್ಲಿ ಸಂಘಕ್ಕೆ ದೂರು ನೀಡಿದಲ್ಲಿ ಕ್ರಮ ವಹಿಸಲಾಗುವುದು ಎಂದೂ ತಿಳಿಸಿದರು.
ಖಜಾಂಚಿ ಜ ಯಕುಮಾರ್ ಮಾತನಾಡಿ, ರೈತರಿಂದ ಹಿಡಿದು ಸಾಮಾನ್ಯ ಜನರ ತನಕ ಸೈಟ್ ಕ್ಲೀನ್, ಮನೆ ಧ್ವಂಸ,ಸೇರಿದಂತೆ ಅನೇಕ ಕೆಲಸಗಳಿಗೆ ಅತಿ ವೇಗದಲ್ಲಿ ಕೆಲಸ ಮುಗಿಸಲು ಜೆಸಿಬಿ ಅವಶ್ಯಕವಾಗಿದೆ. ಪ್ರಸ್ತುತ ಒಂದು ಜೆಸಿಬಿಯ ಬೆಲೆ ಸುಮಾರು 42 ಲಕ್ಷ ರೂ. ಆಗಿದ್ದು,ವಾಹನದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಉಂಟಾದರೂ ರಿಪೇರಿ ವೆಚ್ಚ ಹೆಚ್ಚಿದೆ. ಜೊತೆಗೆ ಡೀಸೆಲ್ ದರ ಏರಿಕೆ ಹಾಗೂ ಇತರೆ ನಿರ್ವಹಣಾ ವೆಚ್ಚಗಳಿಂದ ಮಾಲೀಕರಿಗೆ ಆರ್ಥಿಕ ನಷ್ಟ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ನಿರ್ವಹಣೆಯೂ ಕಷ್ಟ.ಜೆಸಿಬಿ ಮಾಲೀಕರ ಸಂಘವು ಮಾಲೀಕರ ಹಿತದೃಷ್ಟಿಯಿಂದ ಜೆಸಿಬಿ,ಟ್ರಾಕ್ಟರ್ ಹಾಗೂ ಟಿಪ್ಪರ್‌ಗಳ ಬಾಡಿಗೆ ದರವನ್ನು ಪರಿಷ್ಕರಿಸುವ ನಿರ್ಧಾರ ಕೈಗೊಂಡಿದ್ದು, ರೈತರು, ಸಾರ್ವಜನಿಕರು ಹಾಗೂ ಗುತ್ತಿಗೆದಾರರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸದಸ್ಯರಾದ ಚೇತನ್ ಮಾತನಾಡಿ, ಈ ಹಿಂದೆ ಗಂಟೆಗೆ 900 ರೂ.ಇದ್ದ ಜೆಸಿಬಿ ಬಾಡಿಗೆ ದರವನ್ನು 1100 ರೂ.ಗೆ, 3500 ರೂ.ಇದ್ದ ಟ್ರಾಕ್ಟರ್ ಬಾಡಿಗೆ ದರವನ್ನು 4000 ರೂ.ಗೆ ಹಾಗೂ 5000 ರೂ. ಇದ್ದ ಟಿಪ್ಪರ್ ಬಾಡಿಗೆ ದರವನ್ನು 7000 ರೂ.ಗೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಈ ದರ ಕಡಿಮೆಯೇ ಇದ್ದು,ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಹೆಚ್ಚಳವನ್ನು ಮಿತವಾಗಿ ಮಾಡಲಾಗಿದೆ ಎಂದರು.
ಇದೆ ವೇಳೆ ಜೆಸಿಬಿ ಮಾಲೀಕರು ಅನುಭವಿಸುತ್ತಿರುವ ತೊಂದರೆಗಳು ಹಾಗೂ ಬಾಡಿಗೆ ದರ ಹೆಚ್ಚಳದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಬಿ.ಬಿ.ರಸ್ತೆ ಹಾಗೂ ಎಂ.ಜಿ. ರಸ್ತೆಯಲ್ಲಿ ಜೆಸಿಬಿ ರ್ಯಾಲಿ ನಡೆಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಮಂಜುನಾಥ್,ಖಜಾAಚಿ ಜಯ ಕುಮಾರ್, ಚೇತನ್ ರೆಡ್ಡಿ,ಶ್ರೀ ನಿವಾಸ್,ಮುನಿರೆಡ್ಡಿ, ಮೋಹನ್ ಹಾಗು ಹಲವಾರು ಜೆಸಿಬಿ ಮಾಲೀಕರು ಉಪಸ್ಥಿತರಿದ್ದರು.
*
ರೈತರ ಕೆಲಸದಲ್ಲಿ ಜೆಸಿಬಿಗೆ ಹೆಚ್ಚಿನ ಡೀಸೆಲ್ ಅಗತ್ಯವಿದ್ದರೂ ಸಹ ರೈತರ ಕೆಲಸವನ್ನು ಸದಾ ಮಾಡಿಕೊಡಲಾಗುತ್ತಿದೆ.ಪ್ರತಿಯೊಂದು ಕೆಲಸದಲ್ಲೂ ಲಾಭದ ದೃಷ್ಟಿಯಿಂದ ಮಾತ್ರ ನೋಡಲಾ ಗುವುದಿಲ್ಲ. ತಿಂಗಳಿಗೆ ಡ್ರೈವರ್ ಸಂಬಳ, ವಾಹನ ನಿರ್ವಹಣೆ,ಇತರೆ ವೆಚ್ಚಗಳು ಹಾಗೂ ಜೆಸಿಬಿಯ ಮಾಸಿಕ ಇಎಂಐ ಪಾವತಿ ಮಾಡಿದ ಬಳಿಕ ಉಳಿಕೆ ಏನೂ ಉಳಿಯದ ಸ್ಥಿತಿ ಇದೆ. ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಗಂಟೆಗೆ 900 ರೂ.ಇದ್ದ ದರವನ್ನು 1100 ರೂ.ಗೆ ಮಾತ್ರ ಹೆಚ್ಚಿಸಲಾಗಿದೆ.ಎಲ್ಲರೂ ಸಹಕಾರ ನೀಡಬೇಕು
-ಶಶಿಕುಮಾರ್.ಜೆಸಿಬಿ ಮಾಲೀಕರ ಸಂಘದ ಖಜಾಂಚಿ