Gauribidanur News: ಡ್ರಗ್ಸ್ ನಿಯಂತ್ರಣಕ್ಕೆ ಪಂಚೇಂದ್ರಿಯಗಳ ನಿಯಂತ್ರಣ ಅವಶ್ಯಕ: ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್
ಇಡೀ ವಿಶ್ವದಲ್ಲಿಯೇ ಹೆಚ್ಚು ಯುವ ಶಕ್ತಿ ಹೊಂದಿರುವ ಭಾರತದಲ್ಲಿ, ಯುವ ಶಕ್ತಿಯನ್ನೇ ಗುರಿ ಯಾಗಿಸಿ ಕೊಂಡು ಕೆಲ ಬಾಹ್ಯ ದುಷ್ಟ ಶಕ್ತಿಗಳು ನಮ್ಮ ದೇಶದ ಯುವಕರನ್ನು ಷಡ್ಯಂತರದಿಂದ ಮಾದಕವಸ್ತು ಗಳ ಅಮಲಿಗೆ ದೂಡುತ್ತಾ ದೇಶದ ಭವಿಷ್ಯಕ್ಕೆ ಗಂಡಾಂತರ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿವೆ.
ದೇಶದ ಭವಿಷ್ಯಕ್ಕೆ ಮಾರಕವಾದ ಡ್ರಗ್ಸ್ ನಿಯಂತ್ರಣಕ್ಕೆ, ಪಂಚೇಂದ್ರಿಗಳ ನಿಯಂತ್ರಣ ಅವಶ್ಯಕ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. -
ಗೌರಿಬಿದನೂರು: ದೇಶದ ಭವಿಷ್ಯಕ್ಕೆ ಮಾರಕವಾದ ಡ್ರಗ್ಸ್ ನಿಯಂತ್ರಣಕ್ಕೆ, ಪಂಚೇಂದ್ರಿಗಳ ನಿಯಂತ್ರಣ ಅವಶ್ಯಕ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ವಿದ್ಯಾರ್ಥಿ ಗಳಿಗೆ ಕಿವಿ ಮಾತನ್ನು ಹೇಳಿದರು.
ನಗರದ ಸೇಂಟ್ ಅನ್ಸ್ ಶಾಲೆಯ ಆವರಣದಲ್ಲಿ ಮಾದಕ ವಸ್ತುಗಳ ಸೇವನೆ ವಿರುದ್ಧ ಪರಿವರ್ತನಾ ಟ್ರಸ್ಟ್, ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇಡೀ ವಿಶ್ವದಲ್ಲಿಯೇ ಹೆಚ್ಚು ಯುವ ಶಕ್ತಿ ಹೊಂದಿರುವ ಭಾರತದಲ್ಲಿ, ಯುವ ಶಕ್ತಿಯನ್ನೇ ಗುರಿ ಯಾಗಿಸಿಕೊಂಡು ಕೆಲ ಬಾಹ್ಯ ದುಷ್ಟ ಶಕ್ತಿಗಳು ನಮ್ಮ ದೇಶದ ಯುವಕರನ್ನು ಷಡ್ಯಂತರದಿಂದ ಮಾದಕವಸ್ತುಗಳ ಅಮಲಿಗೆ ದೂಡುತ್ತಾ ದೇಶದ ಭವಿಷ್ಯಕ್ಕೆ ಗಂಡಾಂತರ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿವೆ.
ಇದನ್ನೂ ಓದಿ: Chikkaballapur News: ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಕೆಲಸ ಜಿಲ್ಲೆಯಲ್ಲಿ ಆಗಬೇಕು: ಜಿಲ್ಲಾಧಿಕಾರಿ ಜಿ.ಪ್ರಭು
ಇಂತಹ ಸಂದರ್ಭದಲ್ಲಿ ಪರಿವರ್ತನಾ ಟ್ರಸ್ಟ್ ಮಾದಕವಸ್ತುಗಳ ಸೇವನೆ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸುವ ಮೂಲಕ ಲಕ್ಷಾಂತರ ಯುವಕರಲ್ಲಿ ಜಾಗೃತಿ ಮೂಡಿಸಲು ನಡೆಸಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ ವಿಚಾರ ಎಂದು ತಿಳಿಸಿದರು.
ಪರಿವರ್ತನಾ ಟ್ರಸ್ಟ್ ಸದಸ್ಯ ಸ್ವಾಗತ್ ಮಾತನಾಡುತ್ತಾ ದೇಶದ ರಕ್ಷಣೆಗಾಗಿ, ಸ್ವಾಸ್ಥ್ಯ ಸಮಾಜಕ್ಕಾಗಿ, ಭಾರತದ ಭವಿಷ್ಯವನ್ನೇ ಕೊಲ್ಲುವ ಮಾದಕವಸ್ತುಗಳ ಸೇವನೆ ಮತ್ತು ಯುವಕರನ್ನು ವ್ಯಸನ ಮುಕ್ತ ರನ್ನಾಗಿ ಮಾಡುವ ಸಂಕಲ್ಪದಿAದ ಪರಿವರ್ತನಾ ಟ್ರಸ್ಟ್ ಕಳೆದ ಕೆಲದಿನಗಳಿಂದ ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಸ್ತಬ್ಧ ಚಿತ್ರಗಳ ಮುಖಾಂತರ ಸಾವಿರಾರು ಶಾಲಾ ಕಾಲೇಜುಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾದಕವಸ್ತುಗಳ ಸೇವನೆ ವಿರುದ್ಧ ಜಾಗೃತಿಯನ್ನು ಮೂಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪರಿವರ್ತನಾ ಟ್ರಸ್ಟ್ ಸಂಚಾಲಕ ವೆಂಕಟೇಶ್, ಜಿಲ್ಲಾ ಸಹ ಸಂಯೋಜಕ ಶಿವಾರೆಡ್ಡಿ, ವಕೀಲ ಚಲುವರಾಜ್,ನಗರ ಬಿಜೆಪಿ ಕಾರ್ಯದರ್ಶಿ ವೇಣುಮಾದವ, ನವೀನ್, ಶೇಷು, ಬಾಲಾಜಿ, ಹರೀಶ್, ಮಹೇಶ್, ಕಿರಣ್ ಸಿಂಗ್, ರಾಜಶೇಖರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.