ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chimul Election: ಚಿಮುಲ್ ಚುನಾವಣೆ: ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ. ನಾಗರಾಜ್ ಎನ್‌ಡಿಎ ಅಭ್ಯರ್ಥಿ; ಒಗ್ಗಟ್ಟಿನ ಮಂತ್ರ ಜಪಿಸಿದ ಸಂಸದ ಡಾ.ಕೆ.ಸುಧಾಕರ್

ಪೆರೇಸಂದ್ರ ಕ್ಷೇತ್ರದಲ್ಲಿ ಸಂಸದ ಡಾ. ಕೆ. ಸುಧಾಕರ್(MP Dr.K.Sudhakar) ಅವರ ಸಂಬಂಧಿಕರಾದ ಗರಗಿರೆಡ್ಡಿ ಅವರು ಟಿಕೆಟ್ ಆಕಾಂಕ್ಷಿ ಯಾಗಿದ್ದರು. ಆದರೆ, ಒಕ್ಕೂಟದ ಹಿತದೃಷ್ಟಿಯಿಂದ ಅನುಭವೀ ನಾಯಕ ಕೆ.ವಿ. ನಾಗರಾಜ್ ಅವರಿಗೆ ಟಿಕೆಟ್ ನೀಡ ಲಾಗಿದೆ. ಈ ಹಿನ್ನೆಲೆಯಲ್ಲಿ, ಅಸಮಾಧಾನಗೊಂಡಿ ರುವ ಗರಗಿರೆಡ್ಡಿ ಅವರಿಗೆ ಮುಂದಿನ ದಿನಗಳಲ್ಲಿ ನಾಮನಿರ್ದೇಶಿತ ನಿರ್ದೇಶಕ ಸ್ಥಾನ ನೀಡಿ, ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವ ಭರವಸೆಯನ್ನು ಸಂಸದರು ನೀಡಿದ್ದಾರೆ

ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ. ನಾಗರಾಜ್ ಎನ್‌ಡಿಎ ಅಭ್ಯರ್ಥಿ

ಚಿಮುಲ್ ಚಿತ್ರ -

Ashok Nayak
Ashok Nayak Jan 20, 2026 10:19 PM

ಚಿಕ್ಕಬಳ್ಳಾಪುರ: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಚಿಮುಲ್) ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪೆರೇಸಂದ್ರ ಕ್ಷೇತ್ರದಿಂದ ಎನ್‌ಡಿಎ ಮೈತ್ರಿ ಕೂಟ(NDA alliance)ದ ಅಧಿಕೃತ ಅಭ್ಯರ್ಥಿಯಾಗಿ ಜಿಲ್ಲೆಯ ಹಿರಿಯ ಸಹಕಾರ ಧುರೀಣ ಹಾಗೂ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ. ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ಅಸಮಾಧಾನ ಶಮನಕ್ಕೆ ಸಂಸದ ಸುಧಾಕರ್ ತಂತ್ರ: ಪೆರೇಸಂದ್ರ ಕ್ಷೇತ್ರದಲ್ಲಿ ಸಂಸದ ಡಾ. ಕೆ. ಸುಧಾಕರ್(MP Dr.K.Sudhakar) ಅವರ ಸಂಬಂಧಿಕರಾದ ಗರಗಿರೆಡ್ಡಿ ಅವರು ಟಿಕೆಟ್ ಆಕಾಂಕ್ಷಿ ಯಾಗಿದ್ದರು. ಆದರೆ, ಒಕ್ಕೂಟದ ಹಿತದೃಷ್ಟಿಯಿಂದ ಅನುಭವೀ ನಾಯಕ ಕೆ.ವಿ. ನಾಗರಾಜ್ ಅವರಿಗೆ ಟಿಕೆಟ್ ನೀಡ ಲಾಗಿದೆ. ಈ ಹಿನ್ನೆಲೆಯಲ್ಲಿ, ಅಸಮಾಧಾನಗೊಂಡಿರುವ ಗರಗಿರೆಡ್ಡಿ ಅವರಿಗೆ ಮುಂದಿನ ದಿನಗಳಲ್ಲಿ ನಾಮನಿರ್ದೇಶಿತ ನಿರ್ದೇಶಕ ಸ್ಥಾನ ನೀಡಿ, ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವ ಭರವಸೆಯನ್ನು ಸಂಸದರು ನೀಡಿದ್ದಾರೆ ಹಾಗೂ ಮತ್ತೋರ್ವ ಹಿರಿಯ ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ ಅವರಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸೂಕ್ತ ಸ್ಥಾನಮಾನ ಕೊಡಿಸುವ ಭರವಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಆ ಮೂಲಕ ಕ್ಷೇತ್ರದಲ್ಲಿ ಉಂಟಾಗ ಬಹುದಾಗಿದ್ದ ಬಂಡಾಯದ ಶಮನಕ್ಕೆ ಸಂಸದರು ಮುಂದಾಗಿದ್ದಾರೆ.

ಇದನ್ನೂ ಓದಿ: Chimul Election: ಚೀಮುಲ್ ಚುನಾವಣೆ: ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಚಟುವಟಿಕೆ ಗರಿಗೆದರಿಕೆ

ಪಕ್ಷ ದ್ರೋಹಿಗಳಿಗೆ ಎಚ್ಚರಿಕೆ: ಇನ್ನೊಂದೆಡೆ, ನಂದಿ ಕ್ಷೇತ್ರದಲ್ಲಿ ಬಿಜೆಪಿಯ ಕೆಲವು ಸ್ಥಳೀಯ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಎನ್‌ಡಿಎ ವರಿಷ್ಠರ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ನಡೆಯುವವರ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಲಾಗಿದ್ದು, ಮೈತ್ರಿಕೂಟದ ಶಿಸ್ತನ್ನು ಉಲ್ಲಂಘಿಸದಂತೆ ಎಚ್ಚರಿಕೆ ನೀಡಲಾಗಿದೆ.

ಕಾಂಗ್ರೆಸ್‌ನ 'ಅಡ್ಡಗಾಲು' ರಾಜಕೀಯಕ್ಕೆ ತಿರುಗೇಟು: ಕೋಚಿಮುಲ್ ವಿಂಗಡಣೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ‘ಚಿಮುಲ್’ ಒಕ್ಕೂಟವನ್ನು ತರುವಲ್ಲಿ ಸಂಸದ ಡಾ.ಕೆ.ಸುಧಾಕರ್ ಸುದೀರ್ಘ ಹೋರಾಟ ನಡೆಸಿದ್ದರು. ಈ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಅಡ್ಡಗಾಲು ಹಾಕಿದ್ದ ಕಾಂಗ್ರೆಸ್ ಪಕ್ಷದ ನಡೆಯನ್ನು ಮತದಾರರ ಮುಂದೆ ಕೊಂಡೊಯ್ಯಲು ಎನ್‌ಡಿಎ ನಿರ್ಧರಿಸಿದೆ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ರಚನೆಯಾದ ಚಿಮುಲ್ ಆಡಳಿತವನ್ನು ರೈತಪರ ಕಾಳಜಿಯುಳ್ಳ ಎನ್‌ಡಿಎ ಅಭ್ಯರ್ಥಿಗಳ ಕೈಗೆ ನೀಡಬೇಕೆಂದು ಸಂಸದರು ಹಾಗೂ ಮೈತ್ರಿಕೂಟದ ಅಭ್ಯರ್ಥಿಗಳು ಮತದಾರರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೈತರು ಮತ್ತು ಹಾಲು ಉತ್ಪಾದಕರು ಅಭಿವೃದ್ಧಿಯ ಪರವಾಗಿ ಮತ ಚಲಾಯಿಸಲಿದ್ದಾರೆ ಎಂಬ ಭರವಸೆಯೊಂದಿಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಚುನಾವಣಾ ಕಣದಲ್ಲಿ ದಾಪುಗಾಲು ಹಾಕುತ್ತಿದೆ.

ಕ್ಷೇತ್ರವಾರು ಎನ್ ಡಿಎ ಅಭ್ಯರ್ಥಿಗಳ ಪಟ್ಟಿ

ಪೆರೇಸಂದ್ರ - ಕೆ.ವಿ.ನಾಗರಾಜ್
ಮಂಚೇನಹಳ್ಳಿ - ಶ್ರೀನಾಥ್ ಬಾಬು
ಚಿಕ್ಕಬಳ್ಳಾಪುರ (ಮಹಿಳೆ) - ಸುನಂದಮ್ಮ
ಗುಡಿಬಂಡೆ - ಭೈರರೆಡ್ಡಿ