ಹಲ್ಲುಗಳ ಆರೋಗ್ಯವೇ ದೇಹಾರೋಗ್ಯದ ಭಾಗ್ಯ : ರಾಮಯ್ಯ ಆಸ್ಪತ್ರೆ ಡೆಂಟಲ್ ವಿಭಾಗದ ಡೀನ್ ಡಾ.ಕವಿತಾ ಪ್ರಸಾದ್
ಹಲ್ಲುಗಳ ಆರೋಗ್ಯದ ಬಗ್ಗೆ ಬಹಳಷ್ಟು ಬಾರಿ ಕಡೆಗಣಿಸಲಾಗುತ್ತದೆ. ಹಲ್ಲಿನ ಹುಳುಕು, ವಸಡಿನ ರೋಗಗಳು, ಬಾಯಿಯ ಕ್ಯಾನ್ಸರ್ ಮುಂತಾದ ಸಾಮಾನ್ಯ ಬಾಯಿಯ ಕಾಯಿಲೆಗಳು, ಅವುಗಳ ಕಾರಣಗಳು, ಪ್ರಾರಂಭಿಕ ಲಕ್ಷಣಗಳು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಜನರಿಗೆ ಅರಿವು ಇದ್ದರೆ ಈ ಕಾಯಿಲೆಗಳನ್ನು ಬಹುಪಾಲು ತಡೆಗಟ್ಟಬಹುದಾಗಿದೆ.
-
ಕೈವಾರ : ಬಾಯಿಯ ಆರೋಗ್ಯವು ಒಟ್ಟಾರೆ ಜೀವನದ ಗುಣಮಟ್ಟದ ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಬಾಯಿಯ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಹಲ್ಲುಗಳ ಆರೋಗ್ಯವೇ ದೇಹದ ಭಾಗ್ಯ ಎಂದು ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾ ಲಯದ ದಂತ ವಿಜ್ಞಾನದ ಡೀನ್ ಡಾ||ಕವಿತಾ ಪ್ರಸಾದ್ ಅಭಿಪ್ರಾಯಪಟ್ಟರು.
ಕೈವಾರದಲ್ಲಿ ನವೀಕರಿಸಿದ ಎಂ.ಎಸ್.ರಾಮಯ್ಯ ಗ್ರಾಮೀಣ ದಂತ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಹಲ್ಲುಗಳ ಮಹತ್ವದ ಕುರಿತಾಗಿ ಮಾತನಾಡಿದರು.
ಹಲ್ಲುಗಳ ಆರೋಗ್ಯದ ಬಗ್ಗೆ ಬಹಳಷ್ಟು ಬಾರಿ ಕಡೆಗಣಿಸಲಾಗುತ್ತದೆ. ಹಲ್ಲಿನ ಹುಳುಕು, ವಸಡಿನ ರೋಗಗಳು, ಬಾಯಿಯ ಕ್ಯಾನ್ಸರ್ ಮುಂತಾದ ಸಾಮಾನ್ಯ ಬಾಯಿಯ ಕಾಯಿಲೆ ಗಳು, ಅವುಗಳ ಕಾರಣಗಳು, ಪ್ರಾರಂಭಿಕ ಲಕ್ಷಣಗಳು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಜನರಿಗೆ ಅರಿವು ಇದ್ದರೆ ಈ ಕಾಯಿಲೆಗಳನ್ನು ಬಹುಪಾಲು ತಡೆಗಟ್ಟಬಹುದಾಗಿದೆ. ಆದ್ದರಿಂದ ಸಾರ್ವಜನಿಕ ಜಾಗೃತಿ ಈ ಕಾಯಿಲೆಗಳನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಇದನ್ನೂ ಓದಿ: Chinthamani News: ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಈಜು ಕಲೆ ಅಗತ್ಯ: ಕೇಶವ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಕೇಶವ
ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ಮಾತನಾಡಿ ಸಂಸ್ಥೆಗಳು ಸಮಾಜಮುಖಿಯಾಗಬೇಕು. ಈ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಕೈವಾರ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ರಾಮಯ್ಯ ಸಂಸ್ಥೆಯ ವತಿಯಿಂದ ಹಲವಾರು ಆರೋಗ್ಯದ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಾಯಿ ನಮ್ಮ ಮಿತ್ರನೂ ಹೌದು, ಶತ್ರುವೂ ಹೌದು. ಪೌಷ್ಠಿಕ ಆಹಾರ ಸೇವನೆ ಹಾಗೂ ಉತ್ತಮವಾದ ಮಾತುಗಳನ್ನು ಆಡಿದರೆ ಮಿತ್ರನಾಗುತ್ತಾನೆ, ಇಲ್ಲದಿದ್ದರೆ ಶತ್ರುವಾಗುತ್ತಾನೆ. ನಾಲಿಗೆಯ ಮೇಲೆ ಹತೋಟಿ ಸಾಧಿಸ ಬೇಕು ಎಂದರು.
ರಾಮಯ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ವಿಭಾಗದ ಮುಖ್ಯಸ್ಥ ರಾದ ಡಾ||ಕೆ.ಪುಷ್ಪಾಂಜಲಿ ರವರು ಮಾತನಾಡಿ ಇತ್ತೀಚಿಗೆ ಹೆಚ್ಚು ಹೆಚ್ಚು ತಂಬಾಕು ಸೇವನೆಯಿಂದ ಆರೋಗ್ಯದಲ್ಲಿ ಹಲವಾರು ತೊಂದರೆಗಳನ್ನು ಎದುರಿಸುವಂತಾಗಿದೆ. ಈ ಕಾರಣದಿಂದ ಕೈವಾರದ ದಂತ ಘಟಕದಲ್ಲಿ ತಂಬಾಕು ನಿಯಂತ್ರಣ ಕೇಂದ್ರವನ್ನು ತೆರೆಯಲಾಗಿದೆ. ಇಲ್ಲಿ ತಂಬಾಕಿನಿAದ ಉಂಟಾಗುವ ಹಾನಿಗಳ ಬಗ್ಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ. ತಂಬಾಕು ಸೇವನೆಯಿಂದ ಅತ್ಯಂತ ಕಡಿಮೆ ವಯಸ್ಸಿಗೆ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಇದೊಂದು ದುರಂತ. ಈ ಪ್ರಪಂಚದಲ್ಲಿ ನಮ್ಮ ಅಸ್ಥಿತ್ವ ಆರೋಗ್ಯ ದ ಮೇಲೆ ಆಧಾರಿತವಾಗಿದೆ. ಈ ಕಾರಣದಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ದಂತ ಸುರಕ್ಷಾ ಮೊಬೈಲ್ ಅಪ್ಲಿಕೇಶನ್ ಮತ್ತು ಆರೋಗ್ಯ ಶಿಕ್ಷಣ ಕೈಪಿಡಿ ಬಿಡುಗಡೆ ಮಾಡಲಾಯಿತು. ದಂತ ಚಿಕಿತ್ಸೆಗೆ ನೂತನವಾಗಿ ಅಳವಡಿಸಲಾಗಿರುವ ಉಪಕರಣಗಳಿಗೆ ಪೂಜೆಯನ್ನು ಸಲ್ಲಿಸಿ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ರಾಮಯ್ಯ ಅನ್ವಯಿಕ ವಿಶ್ವವಿದ್ಯಾಲಯದ ಡಾ||ವೆಂಕಟೇಶ್, ರಿಜಿಸ್ಟಾçರ್ ಅಶೋಕ್ ರಾವ್, ಡಾ||ತನುಜಾ, ಡಾ||ಕಾರ್ತಿಕ್, ಡಾ||ಶ್ವೇತಾ, ಡಾ||ಅನಿತಾ, ಡಾ||ವೀರಣ್ಣ, ಡಾ||ಶಿವಕುಮಾರ್, ಕೈವಾರ ಮಠದ ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಮುಂತಾದವರು ಉಪಸ್ಥಿತ ರಿದ್ದರು.