ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA SN Subbareddy: ಗ್ರಾಮ ಪಂಚಾಯತಿಗಳು ಜನರ ಕೆಲಸ ಮಾಡಿಕೊಡುವಲ್ಲಿ ಕಾಳಜಿ ವಹಿಸಬೇಕು: ಶಾಸಕ ಎಸ್.ಎನ್. ಸುಬ್ಬಾರೆಡ್ಡಿ

ಗ್ರಾಮೀಣ ಭಾಗದಲ್ಲಿ ಜನತೆಗೆ ಅಷ್ಟೊಂದು ತಿಳುವಳಿಕೆ ಇರುವುದಿಲ್ಲ. ಯಾವ ಕೆಲಸ ಎಲ್ಲಿ ಮಾಡಿಸಿ ಕೊಳ್ಳಬೇಕು ಎಂಬ ಅರಿವು ತುಂಬಾ ಕಡಿಮೆ ಇರುತ್ತದೆ. ಆದ್ದರಿಂದ ಅವರ ಸೇವೆ ಮಾಡುವುದು ಗ್ರಾಮ ಪಂಚಾಯತಿ ಸದಸ್ಯರ ಪ್ರಮುಖ ಕೆಲಸವಾಗಬೇಕು. ಗ್ರಾಮಗಳಲ್ಲಿ ಸ್ವಚ್ಚತೆ ಸೇರಿದಂತೆ ಮೂಲ ಸೌಕರ್ಯ ಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು

ಗ್ರಾಮ ಪಂಚಾಯತಿಗಳು ಜನರ ಕೆಲಸ ಮಾಡಿಕೊಡುವಲ್ಲಿ ಕಾಳಜಿ ವಹಿಸಬೇಕು

ತಾಲೂಕಿನ ತಿರುಮಣಿ ಗ್ರಾಮದಲ್ಲಿ 32 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ತಿರುಮಣಿ ಗ್ರಾಮ ಪಂಚಾಯತಿ ಕಟ್ಟಡವನ್ನು ಶಾಸಕ ಸುಬ್ಬಾರೆಡ್ಡಿ ಉದ್ಘಾಟಿಸಿದರು. -

Ashok Nayak
Ashok Nayak Dec 30, 2025 12:15 PM

ಗುಡಿಬಂಡೆ: ಗ್ರಾಮೀಣ ಭಾಗದ ಜನತೆಗೆ ಅಗತ್ಯವಾಗಿ ಬೇಕಾಗುವಂತಹ ಸೌಲಭ್ಯಗಳನ್ನು ಕಲ್ಪಿಸಿ ಕೊಡಲು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಕಾಳಜಿ ವಹಿಸಬೇಕು, ಜನರ ಸೇವೆ ಮೊದಲ ಆದ್ಯತೆ ಎಂದು ಭಾವಿಸಿ ಸೇವೆ ಮಾಡಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(MLA SN Subbareddy ಕಿವಿ ಮಾತು ಹೇಳಿದರು.

ತಾಲೂಕಿನ ತಿರುಮಣಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ತಿರುಮಣಿ ಗ್ರಾಮ ಪಂಚಾ ಯತಿ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜನತೆಗೆ ಅಷ್ಟೊಂದು ತಿಳುವಳಿಕೆ ಇರುವುದಿಲ್ಲ. ಯಾವ ಕೆಲಸ ಎಲ್ಲಿ ಮಾಡಿಸಿಕೊಳ್ಳಬೇಕು ಎಂಬ ಅರಿವು ತುಂಬಾ ಕಡಿಮೆ ಇರುತ್ತದೆ. ಆದ್ದರಿಂದ ಅವರ ಸೇವೆ ಮಾಡುವುದು ಗ್ರಾಮ ಪಂಚಾಯತಿ ಸದಸ್ಯರ ಪ್ರಮುಖ ಕೆಲಸವಾಗಬೇಕು. ಗ್ರಾಮಗಳಲ್ಲಿ ಸ್ವಚ್ಚತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಇದನ್ನೂ ಓದಿ: MLA SN Subbareddy: ಸಾಧಿಸಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧಿಸಬಹುದು: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಇಂದು ತಿರುಮಣಿ ಗ್ರಾಮದಲ್ಲಿ ಸುಸಜ್ಜಿತ, ಆಧುನಿಕವಾದ ಶೈಲಿಯ ಗ್ರಾಪಂ ಕಟ್ಟಡ ನಿರ್ಮಾಣ ಗೊಂಡಿದೆ. ಒಟ್ಟು 32 ಲಕ್ಷ ವೆಚ್ಚದಲ್ಲಿ ನರೇಗಾ ಹಾಗೂ 15ನೇ ಹಣಕಾಸಿನ ಅನುದಾನದಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಇದೇ ಮಾದರಿಯಲ್ಲಿ ಎಲ್ಲಾ ಗ್ರಾಪಂ ಕೇಂದ್ರಗಳಲ್ಲಿ ಕಟ್ಟಡಗಳು ನಿರ್ಮಾಣವಾಗಬೇಕು. ಆಯಾ ಗ್ರಾಪಂ ಆಡಳಿತ ಮಂಡಳಿಗಳು ಈ ಕುರಿತು ಆಸಕ್ತಿ ವಹಿಸಬೇಕು ಎಂದರು.

ಇನ್ನೂ ತಾಲೂಕಿನ ತೀಲಕುಂಟಹಳ್ಳಿ ಗ್ರಾಮದಲ್ಲಿ 20 ಲಕ್ಷ ವೆಚ್ಚದ ವಾಲ್ಮೀಕಿ ಸಮುದಾಯ ಭವನಕ್ಕೆ ಶಾಸಕ ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು. ಎಲ್ಲಾ ಸಮುದಾಯಗಳಿಗೂ ಭವನಗಳನ್ನು ನಿರ್ಮಾಣ ಮಾಡಿಕೊಡಲು ನಮ್ಮ ಸರ್ಕಾರ ಅನುದಾನ ನೀಡುತ್ತಿದೆ. ಆ ಸಮು ದಾಯ ಭವನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಮಯದಲ್ಲಿ ತಾಪಂ ಇಒ ನಾಗಮಣಿ, ತಿರುಮಣಿ ಗ್ರಾಪಂ ಅಧ್ಯಕ್ಷೆ ಮಮತಾ, ಪಿಡಿಒ ಶ್ರೀನಿವಾಸಮೂರ್ತಿ, ಮುಖಂಡರಾದ ಕೃಷ್ಣೇಗೌಡ, ಮಂಜುನಾಥ್, ವೆಂಕಟೇಶಪ್ಪ, ಅಶ್ವತ್ಥರೆಡ್ಡಿ, ಕೆ.ವಿ.ನಾರಾಯಣಸ್ವಾಮಿ, ನಾಗೇಶ್, ಗ್ರಾಪಂ ಸದಸ್ಯರಾದ ಇಂದಿರಾ, ಸುಬ್ರಮಣಿ, ಕೊಂಡಪ್ಪ, ಲಕ್ಷ್ಮೀದೇವಪ್ಪ ಸೇರಿದಂತೆ ಹಲವರು ಇದ್ದರು.