ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ಕಡಿಮೆ ಬಂಡವಾಳದಲ್ಲಿ ಹೆಚ್ಚು ಉತ್ಪಾದನೆ ಮತ್ತು ಹೆಚ್ಚು ಲಾಭ ಪಡೆಯುವುದರತ್ತ ಚಿಂತನೆ ನಡೆಸಬೇಕಿದೆ : ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಲಿಂಗಯ್ಯ

ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಮತ್ತು ಈಗಾಗಲೆ ಉದ್ಯಮವನ್ನು ಆರಂಭಿಸಿರುವವರಿಗೆ ಸರಕಾರವು ವಿವಿಧ ಇಲಾಖೆಗಳ ನಾನಾ ಯೋಜನೆಗಳ ಮೂಲಕ ಅನೇಕ ರೀತಿಯ ಸವಲತ್ತುಗಳನ್ನು ಒದಗಿಸುತ್ತಿದೆ. ಬಂಡವಾಳ, ತಾಂತ್ರಿಕ ನೆರವು, ತರಬೇತಿ ಇನ್ನಿತರೆ ರೂಪಗಳಲ್ಲಿ ಉದ್ಯಮಗಳನ್ನು ಉತ್ತೇಜಿಸುವ ಮತ್ತು ಲಾಭದಾಯಕವಾಗಿ ನಡೆಯುವಂತೆ ಮಾಡಲಾಗುತ್ತಿದೆ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ನಡೆದ ಸಂವಾದ ಕಾರ್ಯಕ್ರಮ

-

Ashok Nayak
Ashok Nayak Dec 29, 2025 10:01 PM

ರೇಷ್ಮೆ ನೂಲು ಬಿಚ್ಚಾಣಿಕೆಯ ಉದ್ದಿಮೆದಾರರು ಭಾಗಿ : ಉದ್ದಿಮೆಯಲ್ಲಿ ಸಮಸ್ಯೆಗಳು ಹಾಗೂ ಪರಿಹಾರ ಕುರಿತು ಸಂವಾದ

ಶಿಡ್ಲಘಟ್ಟ: ನೂಲು ಬಿಚ್ಚಾಣಿಕೆಯ ವಿವಿಧ ಹಂತಗಳಲ್ಲಿ ತಾಂತ್ರಿಕತೆಯನ್ನು ಇನ್ನಷ್ಟು ಪರಿಣಾಮ ಕಾರಿಯಾಗಿ ಬಳಸಿಕೊಂಡು ಬಳಕೆ ಹೆಚ್ಚಬೇಕು, ಕಡಿಮೆ ಖರ್ಚು ಕಡಿಮೆ ಬಂಡವಾಳದಲ್ಲಿ ಹೆಚ್ಚು ಉತ್ಪಾದನೆ ಮತ್ತು ಹೆಚ್ಚು ಲಾಭ ಪಡೆಯುವುದರತ್ತ ಚಿಂತನೆ ನಡೆಸಬೇಕಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಲಿಂಗಯ್ಯ ತಿಳಿಸಿದರು.

ಶಿಡ್ಲಘಟ್ಟ ನಗರದ ಶ್ರೀರಾಮ ಪ್ಯಾಲೇಸ್‌ನ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ವಿ ಕೇರ್ ಸೊಸೈಟಿ ಆಶ್ರಯದಲ್ಲಿ ಸೋಮವಾರ ಆರ್‌ಎಎಂಪಿ ಯೋಜನೆಯಡಿ ಎಂಎಸ್‌ಎಂಇ ಕ್ಲಸ್ಟರ್ ಟೆಕ್ನಾಲಜಿ ಕುರಿತು ಉದ್ಯಮಿಗಳ ಜತೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ಮಾತನಾಡಿ, ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಮತ್ತು ಈಗಾಗಲೆ ಉದ್ಯಮವನ್ನು ಆರಂಭಿಸಿರುವವರಿಗೆ ಸರಕಾರವು ವಿವಿಧ ಇಲಾಖೆಗಳ ನಾನಾ ಯೋಜನೆಗಳ ಮೂಲಕ ಅನೇಕ ರೀತಿಯ ಸವಲತ್ತುಗಳನ್ನು ಒದಗಿಸುತ್ತಿದೆ. ಬಂಡವಾಳ, ತಾಂತ್ರಿಕ ನೆರವು, ತರಬೇತಿ ಇನ್ನಿತರೆ ರೂಪಗಳಲ್ಲಿ ಉದ್ಯಮಗಳನ್ನು ಉತ್ತೇಜಿಸುವ ಮತ್ತು ಲಾಭದಾಯಕವಾಗಿ ನಡೆಯುವಂತೆ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ: Chikkaballapur News: ಏಡುಕೊಂಡುಲ ಶ್ರೀನಿವಾಸ್‌ಗೆ ಗೌರವ ಡಾಕ್ಟರೇಟ್: ಹಿತೈಷಿಗಳ ಸನ್ಮಾನ

ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ಉದ್ಯಮಿಗಳು ಸರಕಾರದ ಯೋಜನೆಗಳ ಸಂಪೂರ್ಣ ಪ್ರಯೋಜನ ಪಡೆಯುವಂತೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಾಗಿದ್ದು, ಉದ್ಯಮಿಗಳ ಆರ್ಥಿಕ ಸಬಲೀಕರಣ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ತಿಳಿಸಿದರು.

ಸಂವಾದದಲ್ಲಿ ಯೋಜನೆಯ ಉದ್ದೇಶ, ಅನುಷ್ಠಾನ ವಿಧಾನ, ಕೈಗಾರಿಕಾ ವಲಯಕ್ಕೆ ಲಭ್ಯವಿರುವ ಸರಕಾರದ ಸಬ್ಸಿಡಿ, ಸಾಲ ಸೌಲಭ್ಯ, ಮಾರುಕಟ್ಟೆ ಸಂಪರ್ಕ, ತಂತ್ರಜ್ಞಾನ ಬಳಕೆ ಹಾಗೂ ಉದ್ಯಮ ವಿಸ್ತರಣೆ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.

ಎಂಎಸ್‌ಎಂಇ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಜಾರಿಗೆ ತರಲಾಗಿ ರುವ ವಿವಿಧ ಯೋಜನೆಗಳು, ಅನುದಾನ ಸಹಾಯ, ತರಬೇತಿ ಕಾರ್ಯಕ್ರಮಗಳು, ಉದ್ಯೋಗ ಸೃಷ್ಟಿ ಅವಕಾಶಗಳು ಹಾಗೂ ಹೊಸ ನೀತಿಗಳ ಕುರಿತು ಅಕಾರಿಗಳು ಮತ್ತು ವಿವಿಧ ಕ್ಷೇತ್ರದ ತಜ್ಞರು ಸಂವಾದ ನಡೆಸಿದರು.

ವಿ ಕೇರ್ ಸೊಸೈಟಿಯ ಸಂಸ್ಥಾಪಕಿ ಅನಿತಾರಾವ್, ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನ ಮಹೇಶ್, ರೇಷ್ಮೆಗೂಡು ಮಾರುಕಟ್ಟೆ ಉಪ ನಿರ್ದೇಶಕ ಎನ್.ಉಮೇಶ್, ಶಿಡ್ಲಘಟ್ಟ ಸಿಲ್ಕ್ ರರ‍್ಸ್ ಅಸೋಸಿ ಯೇಷನ್ ಅಧ್ಯಕ್ಷ ಅನ್ಸರ್ ಖಾನ್, ಸಿಲ್ಕ್ ರರ‍್ಸ್ ಸಹಕಾರಿ ಸಂಘದ ಅಧ್ಯಕ್ಷ ಮಹಮದ್ ಮುರ್ತುಜಿ, ಬಳೆ ಜಗದೀಶ್, ಕಾಸಿಯಾ ಜಿಲ್ಲಾ ಪ್ರತಿನಿ ಅನಿಲ್ ಕುಮಾರ್ ಇನ್ನಿತರರು ಹಾಜರಿದ್ದರು.