ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rajyotsava awardee Prameela Mahadev: ಮಹಾಜನ್ ವರದಿ ಯಥಾವತ್ ಜಾರಿಯಾಗಲಿ: ಪ್ರಮೀಳ ಮಹಾದೇವ್

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಮಹಾಜನ್ ವರದಿ: ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿ ದರು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯಗಳ ರಚನೆ ಕುರಿತು ದೇಶದಲ್ಲಿ ಹಲವು ಚರ್ಚೆಗಳು ನಡೆದವು. ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಬಹುದೆಂಬ ಆತಂಕವೂ ಇತ್ತು.

ಮಹಾಜನ್ ವರದಿ ಯಥಾವತ್ ಜಾರಿಯಾಗಲಿ: ಪ್ರಮೀಳ ಮಹಾದೇವ್

-

Profile
Ashok Nayak Oct 13, 2026 7:59 PM

ಚಿಕ್ಕಬಳ್ಳಾಪುರ: ಒಕ್ಕೂಟ ವ್ಯವಸ್ಥೆಯಲ್ಲಿ ಸಾಮರಸ್ಯ ಮೂಡಿಸಿ, ಕರ್ನಾಟಕದ ಗಡಿ ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಮಹಾಜನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದು ಅಗತ್ಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ(Rajyotsava awardee) ಸಾಹಿತಿ ಹಾಗೂ ಅಧ್ಯಾಪಕಿ ಪ್ರಮೀಳ ಮಹಾದೇವ್(Prameela Mahadev) ಅಭಿಪ್ರಾಯಪಟ್ಟರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಮಹಾಜನ್ ವರದಿ: ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯಗಳ ರಚನೆ ಕುರಿತು ದೇಶದಲ್ಲಿ ಹಲವು ಚರ್ಚೆಗಳು ನಡೆದವು. ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಬಹುದೆಂಬ ಆತಂಕವೂ ಇತ್ತು. 

ಇದನ್ನೂ ಓದಿ: Chikkaballapur News: ಜಿಲ್ಲೆಯಲ್ಲಿ ಶೇ.51ರಷ್ಟು ಮಳೆ ಕೊರತೆ; ಮುನ್ನೆಚ್ಚರಿಕೆ ಕ್ರಮಕ್ಕೆ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ಮಂಜುಳ ಸೂಚನೆ

ಈ ಹಿನ್ನೆಲೆಯಲ್ಲಿ ವಿವಿಧ ಆಯೋಗಗಳು ರಚನೆಯಾದವು. ಪೊಟ್ಟಿ ಶ್ರೀರಾಮುಲು ಅವರ ಹೋರಾಟ ಹಾಗೂ ತ್ಯಾಗದ ಬಳಿಕ ಭಾಷಾವಾರು ರಾಜ್ಯಗಳ ರಚನೆಗೆ ವೇಗ ದೊರೆಯಿತು. 1956ರ ನವೆಂಬರ್ 1ರಂದು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಅಸ್ತಿತ್ವಕ್ಕೆ ಬಂದವು ಎಂದು ವಿವರಿಸಿದರು.

ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳ ನಡುವೆ ಗಡಿ ವಿವಾದ ತಲೆದೋರಿದ ಹಿನ್ನೆಲೆ ಯಲ್ಲಿ ನಿವೃತ್ತ ನ್ಯಾಯಮೂರ್ತಿ ಮೇಹರ್ ಚಂದ್ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಯಿತು. 1967ರಲ್ಲಿ ವರದಿ ಸಲ್ಲಿಸಿದ ಆಯೋಗವು ಬೆಳಗಾವಿ, ಕಾರವಾರ, ಕಾಸರಗೋಡು ಸೇರಿದಂತೆ ಹಲವು ಪ್ರದೇಶಗಳ ಗಡಿ ಕುರಿತು ಶಿಫಾರಸುಗಳನ್ನು ಮಾಡಿತು.

ಕರ್ನಾಟಕ ವರದಿಯನ್ನು ಸ್ವಾಗತಿಸಿದರೆ, ಮಹಾರಾಷ್ಟ್ರ ವಿರೋಧಿಸಿತು. ಹೀಗಾಗಿ ಗಡಿ ವಿವಾದ ಇಂದಿಗೂ ಬಗೆಹರಿಯದೆ ಉಳಿದಿದ್ದು, ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಕೋಡಿ ರಂಗಪ್ಪ, ಭಾಷಾವಾರು ರಾಜ್ಯಗಳ ರಚನೆಗೆ ಆರಂಭದಲ್ಲಿ ರಾಷ್ಟ್ರೀಯ ನಾಯಕರು ಹಿಂಜರಿ ದಿದ್ದರು. ಆದರೆ ಪೊಟ್ಟಿ ಶ್ರೀರಾಮುಲು ಅವರ ಹೋರಾಟದ ನಂತರ ಭಾಷಾವಾರು ಪ್ರಾಂತ್ಯಗಳ ರಚನೆಗೆ ಸಂವಿಧಾನಾತ್ಮಕವಾಗಿ ಕ್ರಮ ಕೈಗೊಳ್ಳಲಾಯಿತು ಎಂದರು.

ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ವಸುಂಧರಾ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕಸಾಪ(Kasapa) ತಾಲೂಕು ಕಾರ್ಯದರ್ಶಿ ಕೆ.ಎಂ. ರೆಡ್ಡಪ್ಪ, ಸಹ ಕಾರ್ಯದರ್ಶಿ ವಿ. ಮಂಜುನಾಥ್, ಜಂಟಿ ಕಾರ್ಯದರ್ಶಿ ಅಣ್ಣಮ್ಮ, ಎ.ಆರ್. ಶಶಿಕಲಾ, ಅಡ್ಡಗಲ್ ಅನಿಲ್, ಸೌಭಾಗ್ಯ, ಎಂ.ವಿ. ಶ್ರೀನಿವಾಸ್ ಹಾಗೂ ಉಪನ್ಯಾಸಕರಾದ ವೆಂಕಟ್ರಾಮ್, ಬಿ. ಸದಾಶಿವ, ಕೆ.ಎನ್. ಕೃಷ್ಣಪ್ಪ, ವೆಂಕಟೇಶ್, ಲಿಂಗಪ್ಪ, ಸುನಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.