ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದುವೆ ಮತ್ತು ಹನಿಮೂನ್ ರಜೆ ನಿರಾಕರಿಸಿದಕ್ಕೆ ಕಂಪನಿ ಕೆಲಸಕ್ಕೆ ಗುಡ್ ಬೈ? ವೈರಲ್‌ ಆಯ್ತು ಯುವಕನ ಪೋಸ್ಟ್‌

Viral News: ಮಿತಿ ಮೀರಿದ ಸಮಯ, ಕೆಲಸದ ಟಾರ್ಗೆಟ್ ನಿಂದಾಗಿ ವೈಯಕಿಕ್ತ ಜೀವನಕ್ಕೂ ಸಮಯ ಇಲ್ಲಂತಾಗಿದೆ. ಇದೀಗ ​ಉದ್ಯೋಗಿಯೊಬ್ಬರು ತಮ್ಮ ಮದುವೆ ಮತ್ತು ಹನಿಮೂನ್ ಗಾಗಿ ಕೇಳಿದ ರಜೆಯನ್ನು ಕಂಪನಿಯೊಂದು ಆರಂಭದಲ್ಲಿ ನಿರಾಕರಿಸಿತ್ತು. ನಂತರ ಉದ್ಯೋಗಿ ಕೆಲಸ ಬಿಡಲು ಇಚ್ಚಿಸಿದ್ದು ಈ ದೃಢ ನಿರ್ಧಾರದಿಂದ ಬಳಿಕ ರಜೆಯನ್ನು ಅನುಮೋದಿಸಿರುವ ಘಟನೆಯು ರೆಡ್ಡಿಟ್ ನಲ್ಲಿ ಭಾರೀ ವೈರಲ್ ಆಗಿದೆ

ಮದುವೆಗೆ ರಜೆ ನಿರಾಕರಣೆ: ಕೆಲಸ ಬಿಡುವ ನಿರ್ಧಾರ ಕೈಗೊಂಡ ಉದ್ಯೋಗಿ

ಇಂಟರ್ ನೆಟ್ ಚಿತ್ರ -

Profile
Pushpa Kumari Oct 13, 2026 8:43 PM

ನವದೆಹಲಿ,ಅ.13: ಇತ್ತೀಚಿಗೆ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸದ ಒತ್ತಡ ಅನ್ನೋದು ಹೆಚ್ಚಾಗಿದೆ. ಮಿತಿ ಮೀರಿದ ಸಮಯ, ಕೆಲಸದ ಟಾರ್ಗೆಟ್ನಿಂದಾಗಿ ವೈಯಕಿಕ್ತ ಜೀವನಕ್ಕೂ ಸಮಯ ಇಲ್ಲಂತಾಗಿದೆ. ಇದೀಗ ​ಉದ್ಯೋಗಿಯೊಬ್ಬರು ತಮ್ಮ ಮದುವೆ ಮತ್ತು ಹನಿಮೂನ್‌ಗಾಗಿ ಕೇಳಿದ ರಜೆಯನ್ನು ಕಂಪನಿಯೊಂದು ಆರಂಭದಲ್ಲಿ ನಿರಾಕರಿಸಿತ್ತು. ನಂತರ ಉದ್ಯೋಗಿ ಕೆಲಸ ಬಿಡಲು ಇಚ್ಚಿಸಿದ್ದು ಈ ದೃಢ ನಿರ್ಧಾರದಿಂದ ಬಳಿಕ ರಜೆಯನ್ನು ಅನುಮೋದಿಸಿರುವ ಘಟನೆಯು ರೆಡ್ಡಿಟ್ ನಲ್ಲಿ ಭಾರೀ ವೈರಲ್ (Viral News) ಆಗಿದೆ.

ಉದ್ಯೋಗಿಯೊಬ್ಬರು ತಮ್ಮ ಮದುವೆ ಹಾಗೂ ಹನಿಮೂನ್‌ಗಾಗಿ ಅಕ್ಟೋಬರ್ ತಿಂಗಳಲ್ಲಿ 7 ದಿನಗಳ ರಜೆಯನ್ನು ಕೋರಿದ್ದರು. ಆದರೆ ಕಂಪನಿಯೂ ಕೆಲಸಕ್ಕೆ ತೊಂದರೆ‌ಯಾಗುತ್ತದೆ. ಹಾಗೂ ಕೆಲಸ ಸರಿದೂಗಿಸಲು ಜನ ಇಲ್ಲದ ಕಾರಣ ರಜೆಯನ್ನು ನಿರಾಕರಣೆ ಮಾಡಿದೆ.

ಕೆಲಸಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ಮ್ಯಾನೇಜ್‌ಮೆಂಟ್ ರಜೆ ನೀಡಲು ಹಿಂದೇಟು ಹಾಕಿದ್ದು ಮದುವೆ ದಿನ ಮಾತ್ರ ರಜೆ ನೀಡುವುದಾಗಿ ತಿಳಿಸಿದೆ.‌ ಆದರೆ ಉದ್ಯೋಗಿ ಇದಕ್ಕೆ ಒಪ್ಪದೆ ಕೆಲಸ ಹೋದರೂ ಪರವಾಗಿಲ್ಲ, ಮದುವೆ ಮತ್ತು ಹನಿಮೂನ್ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಉದ್ಯೋಗಿ ದೃಢ ನಿರ್ಧಾರ ಕೈಗೊಂಡಿದ್ದರು.

ಈ ಬಗ್ಗೆ ಪೋಸ್ಟ್ ಶೇರ್ ಮಾಡಿದ ಉದ್ಯೋಗಿ ನಾನು ದಿನಗಳಲ್ಲೂ ರಜೆ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ, ಏಕೆಂದರೆ ಇದು ನನ್ನ ಮದುವೆ. ದುರದೃಷ್ಟವಶಾತ್, ಇದಕ್ಕಾಗಿ ನನ್ನ ಉದ್ಯೋಗವನ್ನೇ ಕಳೆದುಕೊಳ್ಳಲು ನಾನು ಸಂಪೂರ್ಣ ಸಿದ್ಧನಿದ್ದೇನೆ ಎಂದು ಈ ಬಗ್ಗೆ ಬಳಕೆದಾರರಲ್ಲೂ ಸಲಹೆ ಕೇಳಿದ್ದರು.

Viral Video: ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ; ಜನಪ್ರಿಯವಾಗುತ್ತಿದೆ ದೇಶದ ಹೆಲ್ತ್‌ ಟೂರಿಸಂ

ಕೊನೆಯಲ್ಲಿ ಉದ್ಯೋಗಿಯು ನೇರವಾಗಿ ಮುಖ್ಯಸ್ಥರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಕಂಪನಿಯ ನಿಯಮಗಳ ಪ್ರಕಾರವೇ ರಜೆ ಕೋರಿದ್ದು ಇದನ್ನು ತಿಳಿಸಿದ ನಂತರ, ವಿಭಾಗದ ಮುಖ್ಯಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿ ಒಂದು ಗಂಟೆಯೊಳಗೆ ರಜೆಗೆ ಅನುಮೋದನೆ ನೀಡಿದ್ದಾರೆ. ಸದ್ಯ ಈ ಪೋಸ್ಟ್ ಬಳಕೆದಾರರಿಂದ ಬಹಳಷ್ಟು ಪ್ರತಿಕ್ರಿಯೆಗಳನ್ನು ಪಡೆದಿದೆ. 

ಕೆಲವರು ಉದ್ಯೋಗಿಗೆ ತಮ್ಮ ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡುವಂತೆ ಮತ್ತು ಆ ಕಂಪನಿಯಲ್ಲಿ ಮುಂದುವರಿಯುವುದು ಯೋಗ್ಯವೇ ಎಂದು ಮರುಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ.