ಲಕ್ಷ ಸಂಬಳವಿದ್ದರೂ ವೀಕೆಂಡ್‌ನಲ್ಲಿ 'ರ‍್ಯಾಪಿಡೋ' ಓಡಿಸಿದ ಪುಣೆ ಇಂಜಿನಿಯರ್ಸ್; ಗಳಿಸಿದ್ದು ಎಷ್ಟು ಗೊತ್ತಾ?
Viral News: ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಇಬ್ಬರು ಯುವಕರು, ತಿಂಗಳಿಗೆ ಉತ್ತಮ ಪ್ಯಾಕೇಜ್ ಪಡೆದರೂ ವೀಕೆಂಡ್ ಸಮಯ ಆನಂದಿಸಲು ರಾಪಿಡೊ ಆಯ್ಕೆ ಮಾಡಿದ್ದಾರೆ. ರೈಡರ್ ಆ್ಯಪ್‌ನಲ್ಲಿ ಆ ದಿನದ ಗಳಿಕೆಯಾಗಿ 929.87 ರೂ. ಸಂಪಾದಿಸಿದ್ದಾರೆ. ಉತ್ತಮ ವೇತನದ ಉದ್ಯೋಗ ಮತ್ತು ಸ್ಪೋರ್ಟ್ಸ್ ಬೈಕ್‌ಗಳನ್ನು ಹೊಂದಿದ್ದರೂ, ಆ ಇಬ್ಬರು ಯುವಕರು ವಾರಾಂತ್ಯದ ಚಟುವಟಿಕೆಯಾಗಿ ರಾಪಿಡೋ ಸೇವೆಯನ್ನು ಆಯ್ಕೆ ಮಾಡಿದ್ದಾರೆ.
ಇಂಟರ್ ನೆಟ್ ಚಿತ್ರ -
ಪುಣೆ,ಅ.13: ಇಂದು ಎಷ್ಟೋ ಯುವಕರು ರ‍್ಯಾಪಿಡೋವನ್ನು ಪಾರ್ಟ್ ಟೈಮ್ ಕೆಲಸವಾಗಿ ಆಯ್ದುಕೊಂಡಿದ್ದಾರೆ. ಇದೀಗ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಇಬ್ಬರು ಯುವಕರು, ತಿಂಗಳಿಗೆ ಉತ್ತಮ ಪ್ಯಾಕೇಜ್ ಪಡೆದರೂ ವೀಕೆಂಡ್ ಸಮಯ ಆನಂದಿಸಲು ರಾಪಿಡೊ ಆಯ್ಕೆ (Viral News) ಮಾಡಿದ್ದಾರೆ. ರೈಡರ್ ಆ್ಯಪ್‌ನಲ್ಲಿ ಆ ದಿನದ ಗಳಿಕೆಯಾಗಿ 929.87 ರೂ. ಸಂಪಾದಿಸಿದ್ದಾರೆ. ಉತ್ತಮ ವೇತನದ ಉದ್ಯೋಗ ಮತ್ತು ಸ್ಪೋರ್ಟ್ಸ್ ಬೈಕ್‌ಗಳನ್ನು ಹೊಂದಿದ್ದರೂ, ಆ ಇಬ್ಬರು ಯುವಕರು ವಾರಾಂತ್ಯದ ಚಟುವಟಿಕೆಯಾಗಿ ರಾಪಿಡೋ ಸೇವೆಯನ್ನು ಆಯ್ಕೆ ಮಾಡಿದ್ದಾರೆ.
ಪುಣೆಯ ಸಾಫ್ಟ್‌ವೇರ್ ಡೆವಲಪರ್ ನಂದಕಿಶೋರ್ ಎಂಬವರು ಈ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಅವರ ಇಬ್ಬರು ಸ್ನೇಹಿತರು ಈಗಾಗಲೇ ದುಬಾರಿ ಸ್ಪೋರ್ಟ್ಸ್ ಬೈಕ್‌ಗಳನ್ನು ಹೊಂದಿದ್ದು ಉತ್ತಮ ವೇತನವನ್ನು ಗಳಿಸುತ್ತಿದ್ದಾರೆ. ಹಾಗಿದ್ರೆ ಇವರು ರಾಪಿಡೋ ಏರಲು ಕಾರಣವೇನು ಎನ್ನುವ ಕುತೂಹಲ ನಿಮಗೂ ಇರಬಹುದು.
I have two roommates, and both earn ₹12 LPA+ Still, last weekend, they signed up for Rapido Bike Taxi and did a few rides just for fun. Both own sports bikes. One earned ₹900, and the other earned ₹500. Imagine earning ₹1 lakh/month and still doing this. Boys can do anything for fun.
— Nandkishor (@devops_nk) October 12, 2026
ಹಣಕ್ಕಾಗಿ ಅವರು ಈ ಕೆಲಸ ಆಯ್ದುಕೊಳ್ಳದೇ ಕೇವಲ ಆ ಕೆಲಸದ ಕುತೂಹಲ ಹಾಗೂ ಹೊಸ ಜನರ ಭೇಟಿಯ ಸಂದರ್ಭಕ್ಕೆ ರ‍್ಯಾಪಿಡೋ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ಕೆಲವು ರೈಡ್‌ಗಳನ್ನು ಮಾಡಿದ್ದಾರೆ. ಇಬ್ಬರು ಯುವಕರು ವಾರ್ಷಿಕ 12 ಲಕ್ಷ ರೂ.ಗಿಂತ ಹೆಚ್ಚು ಆದಾಯ ವನ್ನು ಹೊಂದಿದ್ದಾರೆ. ಆದರೂ, ಮೋಜಿನ ಸಲುವಾಗಿ ಕೆಲವು ರೈಡ್‌ಗಳನ್ನು ಮಾಡಿದ್ದು ಒಬ್ಬರು 900 ರೂ. ಮತ್ತು ಇನ್ನೊಬ್ಬರು 500 ರೂ. ಗಳಿಸಿದರು.
Viral Video: 8 ಅಡಿ 10 ಇಂಚು ಉದ್ದ ಕೂದಲು ಬೆಳೆಸಿ ದಾಖಲೆ ಬರೆದ ಉತ್ತರಾಖಂಡದ ಮಹಿಳೆ
"ತಿಂಗಳಿಗೆ 1 ಲಕ್ಷ ರೂಪಾಯಿ ಸಂಪಾದಿಸಿದರೂ ಹುಡುಗರು ಮಜಾಕ್ಕಾಗಿ ಏನೇನೋ ಮಾಡುತ್ತಾರೆ" ಎಂದು ಡೆವಲಪರ್ ತಮಾಷೆಯಾಗಿ ಪೋಸ್ಟ್ ನಲ್ಲಿ ಬರೆದಿದ್ದಾರೆ. ಬಳಕೆದಾರರೊಬ್ಬರು ಕಾರ್ಪೊ ರೇಟ್ ಉದ್ಯೋಗಿಗಳು ಒಂಟಿತನದಿಂದ ಬಳಲುತ್ತಾರೆ. ಹೀಗಾಗಿ ಬೋರ್ ಆದಾಗ ಇದು ಉತ್ತಮ ದಾರಿ ಎಂದು ಬರೆದಿದ್ದಾರೆ.