ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದು ಕುಮಾರಣ್ಣ ಸಿಎಂ ಅಗೋದು ಖಚಿತ
ಜಿಲ್ಲೆಯ ಎನ್‌ಡಿಎ ಮೈತ್ರಿ ಪಕ್ಷಗಳಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಮುಸುಕಿನ ಗುದ್ದಾಟ ಸ್ಪೋಟಗೊಂಡಿರುವುದು ನಿಜ. ಶಾಸಕ ರವಿಕುಮಾರ್ ಮತ್ತು ಸಂಸದ ಡಾ ಕೆ ಸುಧಾಕರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೆ, ರಾಜ್ಯ ನಾಯಕರ ಗಮನಕ್ಕೆ ಎರಡೂ ಪಕ್ಷಗಳ ಮುಖಂಡರು ತರಬೇಕು. ಅವರು ಅದಕ್ಕೆ ಏನುಬೇಕೋ ಅದನ್ನು ಹೇಳಿ ಸರಿಪಡಿಸುತ್ತಾರೆ.
-
ಚಿಕ್ಕಬಳ್ಳಾಪುರ : ಮೈತ್ರಿ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಬರುವುದು ನಿಜ. ಏನೇ ಭಿನ್ನಾಭಿಪ್ರಾಯ ಬಂದರೂ ಅದನ್ನು ಸರಿ ಮಾಡಿಕೊಂಡು ಮುನ್ನಡೆಯುವುದೇ ಮೈತ್ರಿ ಧರ್ಮವಾಗಿದೆ. ಶಾಸಕ ರವಿಕುಮಾರ್(MLA Ravikumar) ಮತ್ತು ಸಂಸದ ಡಾ.ಕೆ.ಸುಧಾಕರ್ (MP Dr.K.Sudhakar) ನಡುವೆ ಎದ್ದಿರುವ ಅಸಮಾಧಾನವನ್ನು ಶೀಘ್ರವೇ ತಿಳಿಯಾಗಿಸಲು ವರಿಷ್ಠರಿಗೆ ಮನವಿ ಮಾಡಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಜೆಡಿಎಸ್ ಪಕ್ಷದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯ ಎನ್‌ಡಿಎ ಮೈತ್ರಿ ಪಕ್ಷಗಳಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಮುಸುಕಿನ ಗುದ್ದಾಟ ಸ್ಪೋಟಗೊಂಡಿರುವುದು ನಿಜ. ಶಾಸಕ ರವಿಕುಮಾರ್ ಮತ್ತು ಸಂಸದ ಡಾ ಕೆ ಸುಧಾಕರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೆ, ರಾಜ್ಯ ನಾಯಕರ ಗಮನಕ್ಕೆ ಎರಡೂ ಪಕ್ಷಗಳ ಮುಖಂಡರು ತರಬೇಕು. ಅವರು ಅದಕ್ಕೆ ಏನುಬೇಕೋ ಅದನ್ನು ಹೇಳಿ ಸರಿಪಡಿಸುತ್ತಾರೆ. ಅದು ಬಿಟ್ಟು ದುರಹಂಕಾರದ ಮಾತುಗಳಾಡಬೇಡಿ. ಇದರಿಂದ ಮುಂದಿನ ಚುನಾವಣೆಗಳಲ್ಲಿ ಇಬ್ಬರಿಗೂ ಭಾರಿ ನಷ್ಟ ಉಂಟಾಗ ಲಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: Chikkaballapur News: ಗುರುತಿನ ಚೀಟಿಯಿರುವ ಶಾಲಾ ಮಕ್ಕಳಿಗೆ 10 ದಿನಗಳ ವಿಶೇಷ ರಿಯಾಯಿತಿ ಘೋಷಣೆ
ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಕೈಗಾರಿಕಾ ವಲಯ ನಿರ್ಮಾಣ ವಿಷಯದಲ್ಲಿ ಮೈತ್ರಿ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮದ್ಯೆ ಗುದ್ದಾಟ ಶುರುವಾಗಿದೆ. ರೈತರ ಪ್ರತಿಭಟನೆ ವೇದಿಕೆಗೆ ಹೋಗಿದ್ದ ಸಂಸದ ಡಾ ಕೆ.ಸುಧಾಕರ್ ಶಿಡ್ಲಘಟ್ಟ ಶಾಸಕರನ್ನು ಹಗುರವಾಗಿ ಮಾತನಾಡಿ ದ್ದರಿಂದ ಪರ ವಿರೋಧ ಚರ್ಚೆಗಳು ಮುನ್ನೆಲೆಗೆ ಬಂದವು. ಶಾಸಕರು-ಸಂಸದರ ಬೆಂಬಲಿಗರ ಮಧ್ಯೆ ಕಿಚ್ಚು ಹೊತ್ತಿಕೊಂಡು ಇಬ್ಬರೂ ಕೂಡ ವೈಯುಕ್ತಿಕ ನಿಂದನೆಗಿಳಿದಿದ್ದಾರೆ. ಇದು ಸರಿಯಲ್ಲಾ ಎಂದರು.
ಶಾಸಕ ಮತ್ತು ಸಂಸದರ ಮಧ್ಯೆ ಉಲ್ಬಣಗೊಂಡಿರುವ ವಿವಾದಕ್ಕೆ ರಾಜ್ಯ ನಾಯಕರು ಕುಮಾರ ಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BJP State President B.Y. Vijayendra)ರ ಗಮನಕ್ಕೆ ತರಲಾಗು ವುದು. ಇದು ಇಷ್ಟಕ್ಕೆ ನಿಲ್ಲಿಸಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಎರಡೂ ಪಕ್ಷಗಳ ನಾಯಕರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ಡಾ.ಕೆ.ಸುಧಾಕರ್ ಬೆಂಬಲಿಗರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ನಮ್ಮ ಶಾಸಕ ರವಿಕುಮಾರ್ ವಿರುದ್ಧ ಹಗುರವಾಗಿ ಮಾತನಾಡಿರುವುದು ಎಂತವರಿಗೂ ಬೇಸರ ಮೂಡಿಸುತ್ತದೆ. ರವಿಕುಮಾರ್ ಅಪ್ಪಟ ರೈತ ಕುಟುಂಬದಿಂದ ಬಂದವರು. ಒಬ್ಬ ರೈತನಾಗಿ ಅವರ ಕ್ಷೇತ್ರದ ರೈತರನ್ನು ಉಳಿಸಿ ಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಮತ್ತೊಂದು ಕಡೆ ಉದ್ಯೋಗವಿಲ್ಲದೆ ದಿನನಿತ್ಯ 15 ಸಾವಿರ ಜನ ನರಸಾಪುರ ದೊಡ್ಡಬಳ್ಳಾಪುರ ಹೊಸಕೋಟೆಗೆ ಅಲೆದಾಡುವುದನ್ನು ದೊಡ್ಡಬಳ್ಳಾಪುರ ತಪ್ಪಿಸಲು ಕೈಗಾರಿಕೆ ಸ್ಥಾಪನೆಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಕೈಗಾರಿಕೆ ಅಭಿವೃದ್ದಿ ನಿಗಮದಿಂದ ರೈತರ ಫಲವತ್ತಾದ 471ಕ್ಕೂ ಹೆಚ್ಚು ಎಕರೆ ಉಳಿಸಿಕೊಟ್ಟಿದ್ದಾರೆ. ಅದನ್ನ ಅರ್ಥ ಮಾಡಿಕೊಳ್ಳದೆ ಅವರ ವಿರುದ್ದ ಕೆಲವರು ದುರಹಂಕಾರದ ಮಾತುಗಳನ್ನು ಆಡುವುದು ನಿಲ್ಲಿಸಬೇಕು ಎಚ್ಚರಿಕೆ ನೀಡಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಮಾತನಾಡಿ, ಜೆಡಿಎಸ್ ಪಕ್ಷದ ಸರ್ವೋಚ್ಛ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೂ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೂ ಅತ್ಮೀಯತೆ ಹೆಚ್ಚಾಗಿದೆ. ಅವರ ಗಟ್ಟಿ ಸಂಬಂಧದಿಂದ ಕರ್ನಾಟಕದಲ್ಲೂ ಎನ್‌ಡಿಎ ಒಗ್ಗಟ್ಟು ಬಲಪಡಿಸಲು ಸಹಕಾರಿಯಾಗುತ್ತದೆ. ಸುಖಾಸುಮ್ಮನೆ ನಮ್ಮಿಬ್ಬರ ಮಧ್ಯೆ ಉಂಟಾಗುತ್ತಿರುವ ವಿವಾದ-ರಗಳೆ ಈ ರಂಪಾಟವನ್ನು ವಿರೋಧ ಪಕ್ಷಗಳು ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ ಇದಾಗಬಾರದು ಎಂದರು.
ಯುವ ಘಟಕದ ಅಕಿಲ್ ರೆಡ್ಡಿ ಮಾತನಾಡಿ, ಸಂಸದ ಸುಧಾಕರ್ ಅವರು ನಮ್ಮ ಶಾಸಕರಾದ ರವಿಕುಮಾರ್ ಬಗ್ಗೆ ಹಗುರವಾಗಿ ಮಾತನಾಡಿರುವುದು ತಪ್ಪು.ಅವರ ಬೆಂಬಲಿಗರೂ ಕೂಡ ಇದೇ ಹಾದಿ ತುಳಿದಿರುವುದು ಕೂಡ ತಪ್ಪು.ಜೆ ಡಿಎಸ್ ಬೆಂಬಲವಿಲ್ಲದೆ ನೀವು ಸಂಸದರಾಗುತ್ತಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಇನ್ನು ಮುಂದಾದರೂ ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡು ವಾಗ ಎಚ್ಚರಿಕೆಯಿಂದಿರಿ. ಏನು ಆಡುತ್ತಿದ್ದೇವೆ ಎಂಬುದನ್ನು ಅರಿತು ಆಡುವುದು ಒಳಿತು. ಇಲ್ಲವಾದಲ್ಲಿ ಸರಿಯಿರುವುದಿಲ್ಲ ಎಂದರು.
ಈ ವೇಳೆ ಜೆಡಿಎಸ್ ತಾಲ್ಲೂಕು ಮಹಿಳಾಧ್ಯಕ್ಷೆ ಅರುಣಾ,ಟಿಎಪಿಸಿಎಂಎಸ್ ನಿರ್ದೇಶಕಿ ಸುಮಾ ಅನಿಲ್, ಪ್ರಕಾಶ್, ಮುಖಂಡರಾದ ಶಾಂತಮೂರ್ತಿ, ನಾರಾಯಣಸ್ವಾಮಿ, ರಾಜಣ್ಣ, ಅಖಿಲ್ ರೆಡ್ಡಿ, ಅಡ್ಡಗಲ್ ಅನಿಲ್, ಕಾಚಕಡತ ಬೈರಾರೆಡ್ಡಿ, ಮತ್ತಿತರರು ಇದ್ದರು.