Mass Varamahalakshmi Puja: ಕೈವಾರದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ
ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದ ಟ್ರಸ್ಟ್ ನ ವತಿ ಯಿಂದ ಸಭಾಂಗಣದಲ್ಲಿ ಶ್ರಾವಣ ಮಾಸದ ಶ್ರಾವಣ ಶುಕ್ರವಾರದಂದು ಏರ್ಪಡಿಸಲಾಗಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು ವಿಜೃಂಭಣೆಯಿAದ, ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಪ್ರಾತ:ಕಾಲ ಘಂಟನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಪೂಜೆಗಳು ಆರಂಭವಾಯಿತು.

ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು ವಿಜೃಂಭಣೆಯಿಂದ, ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಪ್ರಾತ:ಕಾಲ ಘಂಟನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಪೂಜೆಗಳು ಆರಂಭವಾಯಿತು.

ಚಿಂತಾಮಣಿ : ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದ ಟ್ರಸ್ಟ್ ನ ವತಿ ಯಿಂದ ಸಭಾಂಗಣದಲ್ಲಿ ಶ್ರಾವಣ ಮಾಸದ ಶ್ರಾವಣ ಶುಕ್ರವಾರ ಏರ್ಪಡಿಸಲಾಗಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು ವಿಜೃಂಭಣೆಯಿಂದ, ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಪ್ರಾತ:ಕಾಲ ಘಂಟನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಪೂಜೆಗಳು ಆರಂಭವಾಯಿತು.
ಶ್ರಾವಣ ಮಾಸದ ಶುಕ್ರವಾರ ಕೈವಾರದ ಯೋಗಿ ನಾರೇಯಣ ಮಠದಲ್ಲಿ ಸಾವಿರಾರು ಮುತ್ತೈದೆ ಯರು ವರಮಹಾಲಕ್ಷ್ಮೀ ಪೂಜೆಯನ್ನು ಸಾಮೂಹಿಕವಾಗಿ ಮಾಡಿದರು.
ವೇದಿಕೆಯಲ್ಲಿ ಲಕ್ಷ್ಮೀ ಅಮ್ಮನವರ ವಿಗ್ರಹವನ್ನು ಪ್ರತಿಷ್ಠಾಪಿಸಿ, ಅಭಿಷೇಕವನ್ನು ಸಲ್ಲಿಸಿ, ಪೂಜೆ ಯನ್ನು ನೆರವೇರಿಸಲಾಯಿತು. ವೇದಿಕೆಯನ್ನು ಸರ್ವಾಲಂಕಾರವಾಗಿ ಅಲಂಕರಿಸಲಾಗಿತ್ತು. ತಾತಯ್ಯನವರ ಉತ್ಸವ ವಿಗ್ರಹವನ್ನು ದೇವಾಲಯದಿಂದ ಸರ್ವಾಲಂಕೃತ ಪಲ್ಲಕ್ಕಿಯಲ್ಲಿ ಮಂಗಳ ವಾದ್ಯಗಳೊಂದಿಗೆ ಕರೆತಂದು ವೇದಿಕೆಯಲ್ಲಿ ಆಸೀನಗೊಳಿಸಲಾಯಿತು.
ಇದನ್ನೂ ಓದಿ: Varamahalaxmi Festival Fashion 2025: ವರಮಹಾಲಕ್ಷ್ಮಿ ಹಬ್ಬಕ್ಕೆ ಬಂತು ದಾವಣಿ-ಲಂಗ ಕಮ್ ಲೆಹೆಂಗಾ
ಆಗಮಿಸಿದ್ದ ಪ್ರತಿಯೊಬ್ಬ ಮುತ್ತೈದೆಯರಿಗೂ ಪೂಜಾ ಸಾಮಾಗ್ರಿಗಳನ್ನು ಮಠದ ವತಿಯಿಂದ ಓದಗಿಸಲಾಗಿತ್ತು. ಅರ್ಚಕ ವೃಂದದವರು ಲಕ್ಷ್ಮೀ ಅಷ್ಟೋತ್ತರವನ್ನು ಹೇಳುತ್ತಿದ್ದರೆ, ಮುತ್ತೈದೆ ಯರು ಕುಳಿತಲ್ಲಿಯೇ ಕುಂಕುಮಾರ್ಚನೆಯನ್ನು ಶ್ರದ್ದಾ ಭಕ್ತಿಗಳಿಂದ ಪೂಜಿಸಿದರು. ನಂತರ ಅಷ್ಟಾವಧಾನ ಸೇವೆಯನ್ನು ಸಲ್ಲಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ಧರ್ಮಾಧಿಕಾರಿ ಗಳಾದ ಡಾ||ಎಂ.ಆರ್.ಜಯರಾಮ್ ದಂಪತಿಗಳು ಪೂಜೆಯಲ್ಲಿ ಭಾಗವಹಿಸಿದ್ದರು.
ಸದ್ಗುರು ತಾತಯ್ಯನವರು ರಚಿಸಿರುವ ಶ್ರೀರಾಮತಾರಕ ಮಂತ್ರವನ್ನು ಸಾಮೂಹಿಕವಾಗಿ ಪಠಿಸ ಲಾಯಿತು. ಸಾಮೂಹಿಕ ವರಮಹಾಲಕ್ಷೀ ಪೂಜೆಯಲ್ಲಿ ಮುತ್ತೈದೆಯರು ಭಾಗವಹಿಸಿ ಭಕ್ತಿಭಾವದ ಸಂಚಲನವನ್ನುಂಟು ಮಾಡಿದರು. ಭಾಗವಹಿಸಿದ್ದ ಎಲ್ಲರಿಗೂ ವಿಶೇಷ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.