Chikkaballapur News: ಮುಖ್ಯಮಂತ್ರಿಗಳಿಗೆ ಗಂಟೆಗಟ್ಟಲೆ ಕಾದ ಮಾಧ್ಯಮ ಮಿತ್ರರು
ಎರಡು ಮೂರು ಬಾರಿ ಪೊಲೀಸ್ ಅಧಿಕಾರಿಗಳು ಬಂದು ಈಗ ಬರುತ್ತಾರೆ ಆಗ ಬರುತ್ತಾರೆ ಎಂದಿದ್ದೆ ಬಂತು. ಆದರೆ ಮುಖ್ಯಮಂತ್ರಿಗಳು ಬರಲೇ ಇಲ್ಲ. ನಂದಿ ಬೆಟ್ಟದ ಸಂಪುಟ ಸಭೆಯಲ್ಲಿ ಏನೆಲ್ಲ ಚರ್ಚೆಯಾಯಿತು ಎಂಬ ಸಂಗತಿಗಳನ್ನು ತಿಳಿಯಲು ಜಾತಕ ಪಕ್ಷಿಗಳಂತೆ ಸುದ್ದಿ ಮಾಧ್ಯಮದ ಮಿತ್ರರು ಮುಖ್ಯಮಂತ್ರಿಗಳಿಗೆ ಕಾದಂತೆ ಮೊಬೈಲ್ ಕ್ಯಾಮೆರಾಗಳು ಸಹ ಕಾದವು


ಚಿಕ್ಕಬಳ್ಳಾಪುರ: ನಂದಿ ಬೆಟ್ಟದಲ್ಲಿ ನಡೆದ 25ನೇ ಸಾಲಿನ 14ನೇ ಸಚಿವ ಸಂಪುಟ ಸಭೆ ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು. ಸಚಿವ ಸಂಪುಟ ಸಭೆ ನಂತರ ಮುಖ್ಯಮಂತ್ರಿಗಳು ಮಾಧ್ಯಮದವ ರನ್ನು ಉದ್ದೇಶಿಸಿ 3: ಗಂಟೆಗೆ ಮಾತನಾಡಬೇಕಿತ್ತು. ಬೆಳಗ್ಗೆ 10 ಗಂಟೆಗೆ ನಂದಿ ಬೆಟ್ಟದ ಮೇಲೆ ಪತ್ರಕರ್ತರನ್ನು ಕರೆದುಕೊಂಡು ಬಂದ ವಾರ್ತಾ ಇಲಾಖೆಯ ಅಧಿಕಾರಿಗಳು ಮಾಧ್ಯಮದವರಿಗಾಗಿ ನಿರ್ಮಿಸಲಾಗಿದ್ದ ಜರ್ಮನ್ ಟೆಂಟ್ ಹೌಸ್ ನಲ್ಲಿ ಕೂರಿಸಿದರು.

ಅಲ್ಲಿಂದ 4:30 ಗಂಟೆಗೆ ತನಕ ಮುಖ್ಯಮಂತ್ರಿಗಳಿಗಾಗಿ ಮಾಧ್ಯಮದವರು ಕಾದಿದ್ದೇ ಬಂತು. ಆದರೆ ಮುಖ್ಯಮಂತ್ರಿಗಳಾಗಲಿ ಅವರ ಸಚಿವ ಸಂಪುಟ ಸಹೋದ್ಯೋಗಿಗಳಾಗಲಿ ಸುದ್ದಿಗೋಷ್ಠಿ ನಡೆ ಯುವ ಸ್ಥಳಕ್ಕೆ ಆಗಮಿಸಲೇ ಇಲ್ಲ. ಮಾಹಿತಿ ನೀಡಲೂ ಇಲ್ಲ. ಪರಿಣಾಮ ಮಾಧ್ಯಮದವರು ಲೋಕಾಭಿರಾಮದ ಮಾತುಗಳಿಗೆ ಮೊರೆ ಹೋಗಬೇಕಾಯಿತು.
ಎರಡು ಮೂರು ಬಾರಿ ಪೊಲೀಸ್ ಅಧಿಕಾರಿಗಳು ಬಂದು ಈಗ ಬರುತ್ತಾರೆ ಆಗ ಬರುತ್ತಾರೆ ಎಂದಿದ್ದೆ ಬಂತು. ಆದರೆ ಮುಖ್ಯಮಂತ್ರಿಗಳು ಬರಲೇ ಇಲ್ಲ. ನಂದಿ ಬೆಟ್ಟದ ಸಂಪುಟ ಸಭೆಯಲ್ಲಿ ಏನೆಲ್ಲ ಚರ್ಚೆಯಾಯಿತು ಎಂಬ ಸಂಗತಿಗಳನ್ನು ತಿಳಿಯಲು ಜಾತಕ ಪಕ್ಷಿಗಳಂತೆ ಸುದ್ದಿ ಮಾಧ್ಯಮದ ಮಿತ್ರರು ಮುಖ್ಯಮಂತ್ರಿಗಳಿಗೆ ಕಾದಂತೆ ಮೊಬೈಲ್ ಕ್ಯಾಮೆರಾಗಳು ಸಹ ಕಾದವು. ಪೊಲೀಸರು ಸಹ ಮಾಧ್ಯಮದವರನ್ನು ಸುಮ್ಮನಿರಿಸಲು ಹೆಣಗಾಟ ನಡೆಸಿದರು.
ಕುಡಿಯಲು ನೀರಿಲ್ಲದೆ, ಕಾಫಿ ಟೀ ವ್ಯವಸ್ಥೆ ಇಲ್ಲದೆ ಕುಳಿತಲ್ಲಿಯೇ ನಾಲ್ಕೈದು ಗಂಟೆಗಳ ಕಾಲ ಕಾದು ಕಾದು ಮಾಧ್ಯಮದವರು ಬಸವಳಿದರೂ ಮುಖ್ಯಮಂತ್ರಿಗಳ ದರ್ಶನವಾಗಲೇ ಇಲ್ಲ. ಖಾಲಿ ಕುರ್ಚಿ ಗಳನ್ನು ನೋಡಿ ನೋಡಿ ಒಂದಷ್ಟು ಮಂದಿ ಪತ್ರಕರ್ತರು ನಿದ್ದೆಗೆ ಜಾರಿದ್ದು ಕಂಡು ಬಂತು.