ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾಂಗ್ರೆಸ್ ಕಚೇರಿಯಲ್ಲಿ ಪುಷ್ಪನಮನದ ಮೂಲಕ ರಾಜೀವ್‌ಗಾಂಧಿ ಪುಣ್ಯಸ್ಮರಣೆ

ಭಾರತ ಕಂಡ ದೂರದೃಷ್ಟಿಯ ನೇತಾರರಲ್ಲಿ ಒಬ್ಬರಾಗಿದ್ದ ರಾಜೀವ್‌ಗಾಂಧಿ ಅವರು ಅಪ್ರತಿಮ ನಾಯಕರಾಗಿದ್ದರು.ಅವರು ಪ್ರಧಾನಿಗಳಾಗಿದ್ದ ಅವಧಿಯಲ್ಲಿ ಭಾರತವು ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆಗೋಳನ್ನು ಹಾಕಿತ್ತು. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ದೇಶದ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿ ಅಭಿವೃದ್ದಿಯ ಶಕೆಯನ್ನು ಹುಟ್ಟು ಹಾಕುವ ಮೂಲಕ ಯುವಕರ ಕಣ್ಮಣಿಯಾಗಿದ್ದರು

ಕಾಂಗ್ರೆಸ್ ಕಚೇರಿಯಲ್ಲಿ ಪುಷ್ಪನಮನದ ಮೂಲಕ ರಾಜೀವ್‌ಗಾಂಧಿ ಪುಣ್ಯಸ್ಮರಣೆ

ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಪುಣ್ಯಸ್ಮರಣೆಯನ್ನು ಭಾವಚಿತ್ರಕ್ಕೆ ಪುಷ್ಪ ಸಲ್ಲಿಸುವ ಮೂಲಕ ಆಚರಿಸಲಾಯಿತು. -

Profile
Ashok Nayak May 21, 2026 10:09 PM

ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಪುಣ್ಯಸ್ಮರಣೆ(Rajiv Gandhi's death anniversary)ಯನ್ನು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಿಲಾಯಿತು.

ನಗರದ ಬಿಬಿ ರಸ್ತೆಯಲ್ಲಿರುವ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್‌ರೆಡ್ಡಿ ನೇತೃತ್ವದಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಪುಣ್ಯಸ್ಮರಣೆಯನ್ನು ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ನಡೆಸುವ ಮೂಲಕ ಆಚರಿಸಿದರು.

ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್‌ರೆಡ್ಡಿ ಭಾರತ ಕಂಡ ದೂರದೃಷ್ಟಿಯ ನೇತಾರರಲ್ಲಿ ಒಬ್ಬರಾಗಿದ್ದ ರಾಜೀವ್‌ಗಾಂಧಿ ಅವರು ಅಪ್ರತಿಮ ನಾಯಕರಾಗಿದ್ದರು.ಅವರು ಪ್ರಧಾನಿಗಳಾಗಿದ್ದ ಅವಧಿಯಲ್ಲಿ ಭಾರತವು ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆಗೋಳನ್ನು ಹಾಕಿತ್ತು. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ದೇಶದ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿ ಅಭಿವೃದ್ದಿಯ ಶಕೆಯನ್ನು ಹುಟ್ಟು ಹಾಕುವ ಮೂಲಕ ಯುವಕರ ಕಣ್ಮಣಿಯಾಗಿದ್ದರು ಎಂದರು.

ಇದನ್ನೂ ಓದಿ: Chikkaballapur News: ಕೋಡಿಹಳ್ಳಿ ಚಂದ್ರಶೇಖರ್ ಬಣದ ಕೆಐಎಡಿಬಿ ರೈತಪರ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀಮಠದ ಅಭಯ

ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿಯೇ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಧೃಢಗೊಳಿಸಿದರು.ಸಾಕ್ಷರತಾ ಪ್ರಮಾಣ ಹೆಚ್ಚಿಸಲುವಾಗಿ ದೇಶ ದಲ್ಲಿ ಸಂಪೂರ್ಣ ಸಾಕ್ಷರತಾ ಆಂದೋಲನ ಜಾರಿಗೆ ತಂದು ಹಳ್ಳಿ ಹಳ್ಳಿಗಳಲ್ಲಿ ರಾತ್ರಿ ಶಾಲೆಗಳನ್ನು ತೆರೆದರು.ಪಂಚಾಯತ್ ರಾಜ್‌ಗೆ ತಿದ್ದುಪಡಿ ಮಾಡಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ಪಕ್ಷಾಂತರಕ್ಕೆ ಮೂಗುದಾರ ಹಾಕಿದ್ದರು ಎಂದರು.

ಶಿಕ್ಷಣಕ್ಕೆ ಒತ್ತು ನೀಡಿ ಪ್ರತಿಯೊಂದು ಜಿಲ್ಲೆಯಲ್ಲಿ ನವೋದಯ ಶಾಲೆ ತೆರೆದರು. ಬಡತನ ನಿರ್ಮೂ ಲನೆಗಾಗಿ ಜವಹರ್ ರೋಜ್‌ಗಾರ್ ಯೋಜನೆ ಜಾರಿಗೆ ತರುವ ಮುಖಾಂತರ ಆಧುನಿಕ ಭಾರತದ ನಿರ್ಮಾತೃಗಳೆನಿಸಿದ್ದರು.ಇಂತಹ ನಾಯಕರ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಅವರ ಬಗ್ಗೆ ಮಾತನಾಡಿದ್ದು ನನ್ನ ಬದುಕಿನ ಅತ್ಯಂತ ಸ್ಮರಣೀಯ ಕ್ಷಣವಾಗಿದೆ ಎಂದರು.

ಕುಡಾ ನಾಮನಿರ್ದೇಶಿತ ಸದಸ್ಯೆ ನಾರಾಯಣಮ್ಮ ಮಾತನಾಡಿ ದೇಶದ ಐಕ್ಯತೆ ಮತ್ತು ಅಖಂಡತೆ ಗಾಗಿ ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ಅವಧಿಯಲ್ಲಿ ದೇಶ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿತ್ತು. ಬಡವರು ನಿರ್ಗತಿಕರಿಗಾಗಿ ತಂದ ಯೋಜನೆಗಳು ಇಂದಿಗೂ ಮಾದರಿ.ದೇಶ ಪ್ರೇಮದ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ಬಿಜೆಪಿ ಮುಖಂಡರು ಇದನ್ನು ಮನಗಾಣಬೇಕು. ದೇಶಕ್ಕಾಗಿ, ಅದರ ಅಖಂಡತೆಗಾಗಿ ಯಾವ ಬಿಜೆಪಿ ಮುಖಂಡರು ಪ್ರಾಣ ತ್ಯಾಗ ಮಾಡಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಂಗಳಪ್ರಕಾಶ್ ಮಾತನಾಡಿ, ದೇಶ ಮತ್ತು ದೇಶದ ಹಿತಕ್ಕಾಗಿ ಮಹಾತ್ಮಾಗಾಂಧೀಜಿ ಕುಟುಂಬ ಮಾಡಿದ ತ್ಯಾಗ ಬಲಿದಾನ ಮರೆಯುವಂತಿಲ್ಲ. ಅದರಲ್ಲೂ ರಾಜೀವ್‌ಗಾಂಧಿ ಪ್ರಧಾನಿಯಾಗಿ ವಿಜ್ಞಾನ ತಂತ್ರಜ್ಞಾನ ಮತ್ತು ಅಧಿಕಾರ ವಿಕೇಂದ್ರೀ ಕರಣದ ಮೂಲಕ ದೇಶಕ್ಕೆ ನೀಡಿದ ಅಸಾಮಾನ್ಯ ಕೊಡುಗೆ ಮರೆಯುವಂತಿಲ್ಲ ಎಂದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ನಿರ್ಮಲ, ಅಭಿ, ಅಶೋಕ್, ಕುಡ ಸದಸ್ಯೆ ನಾರಾಯಣಮ್ಮ, ತಂಜೀಮ್, ಹಸೀನಾ ಭಾನು ಮತ್ತಿತರರು ಇದ್ದರು.