MP Dr K Sudhakar: ಗೌರಿಬಿದನೂರಿನ ಅಭಿವೃದ್ಧಿಗೆ ಕೇಂದ್ರದಿಂದ ಸಾವಿರಾರು ಕೋಟಿ ಅನುದಾನ: ಸಂಸದ ಡಾ.ಕೆ.ಸುಧಾಕರ್.
100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ 27 ಕೋಟಿ ರೂ., ಜಲ ಜೀವನ್ ಮಿಷನ್ ಯೋಜನೆ ಯಡಿ 296 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ 102.50 ಕೋಟಿ ರೂ., ಅಮೃತ್–2.0 ಯೋಜನೆ ಯಡಿ ನಗರ ನೀರು ಸರಬರಾಜಿಗೆ 66.60 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 398.48 ಕೋಟಿ ರೂ., ಗೌರಿಬಿದನೂರು ಬೈಪಾಸ್‌ಗೆ 40.68 ಕೋಟಿ ರೂ. ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾರೀ ಅನುದಾನ ಬಿಡುಗಡೆಯಾಗಿದೆ
-
ಗೌರಿಬಿದನೂರು: ನಗರದ ಗಾಂಧಿ ವೃತ್ತದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದ ನಂತರ ಗೌರಿಬಿದನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರಸ್ತೆ, ನೀರು, ಆಸ್ಪತ್ರೆ, ರೈಲ್ವೆ ಮೇಲ್ಸೇತುವೆ, ರೈತರಿಗೆ ಹಾಗು ವಿವಿಧ ಯೋಜನೆಗಳು ಸೇರಿ ಸಾವಿರ ಕೋಟಿಗೂ ಅಧಿಕ ಅನುದಾನ ಕೇಂದ್ರ ಸರ್ಕಾರದಿಂದ ತಂದಿರುವುದಾಗಿ ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ವಿವರವನ್ನು ಸಂಸದ ಡಾ.ಕೆ.ಸುಧಾಕರ್(MP Dr K Sudhakar) ನಗರದ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆ ಮಾಡಿದರು.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರೈತರು, ಕುಡಿಯುವ ನೀರು, ರಸ್ತೆ, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಅದರ ಫಲವಾಗಿ ಗೌರಿಬಿದನೂರು ಕ್ಷೇತ್ರದಲ್ಲಿ ಅನೇಕ ಮಹತ್ವದ ಯೋಜನೆಗಳು ಅನುಷ್ಠಾನಗೊಂಡಿವೆ ಎಂದು ಅವರು ತಿಳಿಸಿದರು.
ಕುಸುಮ್–ಸಿ ಯೋಜನೆಯಡಿ ತೊಂಡೇಬಾವಿ ಹಾಗೂ ಚರಕಮಟ್ಟನಹಳ್ಳಿಯಲ್ಲಿ 19.7 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ನಿರ್ಮಾಣವಾಗಿದ್ದು, ರೈತರಿಗೆ ಹಗಲಿನಲ್ಲೇ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ.
ಗೌರಿಬಿದನೂರು–ಹಿಂದೂಪುರ ರಸ್ತೆಯ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ 79 ಕೋಟಿ ರೂ. ವೆಚ್ಚದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೂ ಶೀಘ್ರದಲ್ಲೇ ಚಾಲನೆ ಸಿಗಲಿದೆ ಎಂದು ಹೇಳಿದರು.
100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ 27 ಕೋಟಿ ರೂ., ಜಲ ಜೀವನ್ ಮಿಷನ್ ಯೋಜನೆಯಡಿ 296 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ 102.50 ಕೋಟಿ ರೂ., ಅಮೃತ್–2.0 ಯೋಜನೆಯಡಿ ನಗರ ನೀರು ಸರಬರಾಜಿಗೆ 66.60 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 398.48 ಕೋಟಿ ರೂ., ಗೌರಿಬಿದನೂರು ಬೈಪಾಸ್‌ಗೆ 40.68 ಕೋಟಿ ರೂ. ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾರೀ ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 7.59 ಕೋಟಿ ರೂ., ಫಸಲ್ ಭೀಮಾ ಯೋಜನೆ ಯಡಿ 15.95 ಕೋಟಿ ರೂ., ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 116.61 ಕೋಟಿ ರೂ. ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ ಎಂದರು.
ಇದಲ್ಲದೆ ಕೇಂದ್ರೀಯ ವಿದ್ಯಾಲಯ ಕಟ್ಟಡ, ಆಯುಷ್ಮಾನ್ ಆರೋಗ್ಯ ಕೇಂದ್ರಗಳು, ಆದಿ ಆದರ್ಶ ಗ್ರಾಮ ಯೋಜನೆ, ವಿಶ್ವಕರ್ಮ ಯೋಜನೆ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಭರಪೂರ ಅನುದಾನ ದೊರೆತಿದೆ
ರಾಜ್ಯ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಅನುದಾನ ದೊರೆಯದಿದ್ದರೂ, ಕೇಂದ್ರ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ನೆರವು ನೀಡುತ್ತಿದೆ" ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
*
ಕೇಂದ್ರ ಸರ್ಕಾರದಿಂದ ಗೌರಿಬಿದನೂರು ತಾಲೂಕಿಗೆ ಬಿಡುಗಡೆಯಾಗಿರುವ ಅನುದಾನದ ಪಟ್ಟಿ.
398.48 ಕೋಟಿ – ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ
102.50 ಕೋಟಿ – ಜಲ ಜೀವನ್ ಮಿಷನ್
79 ಕೋಟಿ – ರೈಲ್ವೆ ಮೇಲ್ಸೇತುವೆ
66.60 ಕೋಟಿ – ಅಮೃತ್ 2.0 ನೀರು ಸರಬರಾಜು
40.68 ಕೋಟಿ – ಗೌರಿಬಿದನೂರು ಬೈಪಾಸ್
27 ಕೋಟಿ – 100 ಹಾಸಿಗೆಗಳ ಆಸ್ಪತ್ರೆ
116.61 ಕೋಟಿ – ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ನೆರವು
15.95 ಕೋಟಿ – ಫಸಲ್ ಭೀಮಾ ಪರಿಹಾರ
24.60 ಕೋಟಿ – ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಾಣ
ಈ ಪತ್ರಿಕಾಗೋಷ್ಟಿಯಲ್ಲಿ ಮಂಡಲ ನಗರ ಅಧ್ಯಕ್ಷ ವೇಣುಗೋಪಾಲ್, ಗ್ರಾಮಾಂತರ ಅಧ್ಯಕ್ಷಾ ಕೊಡಿರ್ಲಪ್ಪಾ, ಮುರಳಿದರ್, ಮಾರ್ಕೆಟ್ ಮೋಹನ್, ಮಧುಸೂರ್ಯನಾರಾಯಣ ರೆಡ್ಡಿ, ಜಿಮ್ ಹರೀಶ್, ದಾಲ್ ರಮೇಶ್, ಅನಿಲ್, ಛತ್ರಮ್ ವೆಂಕಟಾದ್ರಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು.