ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅ.14ರಂದು ಮಾನಸಗಂಗೋತ್ರಿಯಲ್ಲಿ ಕವನ ವಾಚನ; ರಾಜ್ಯದ ವಿವಿಧ ಜಿಲ್ಲೆಗಳ ಯುವ ಕವಿಗಳೊಂದಿಗೆ ಭಾಗಿ: ಮೈಸೂರು ದಸರಾ ಯುವ ಕವಿಗೋಷ್ಠಿಗೆ ಸೇಡಂನ ವಿಜಯಭಾಸ್ಕರರೆಡ್ಡಿ

ಯುವ ಕವಿಗೋಷ್ಠಿಗೆ ರಾಜ್ಯದ ವಿವಿಧ ಭಾಗಗಳಿಂದ ಯುವ ಕವಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ವಿಜಯಭಾಸ್ಕರರೆಡ್ಡಿ ಅವರಿಗೂ ಅವಕಾಶ ಲಭಿಸಿದೆ. ದಸರಾ ಮಹೋತ್ಸವದ ಪ್ರತಿಷ್ಠಿತ ಸಾಹಿತ್ಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಯುವ ಕವಿಯೊಬ್ಬರು ಭಾಗವಹಿಸುತ್ತಿರುವುದು ಸಾಹಿತ್ಯ ವಲಯದಲ್ಲಿ ಗಮನ ಸೆಳೆದಿದೆ.

ಮೈಸೂರು ದಸರಾ ಯುವ ಕವಿಗೋಷ್ಠಿಗೆ ಸೇಡಂನ ವಿಜಯಭಾಸ್ಕರರೆಡ್ಡಿ

-

Profile
Ashok Nayak Oct 6, 2026 9:15 AM

ಕಲಬುರಗಿ(ಸೇಡಂ): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ(Mysore Dasara Mahotsava)ದ ಅಂಗವಾಗಿ ಆಯೋಜಿಸಿರುವ ಯುವ ಕವಿಗೋಷ್ಠಿ–2026ರಲ್ಲಿ ಕಲಬುರಗಿ ಜಿಲ್ಲೆಯ ಸೇಡಂನ ಯುವ ಕವಿ ವಿಜಯ ಭಾಸ್ಕರರೆಡ್ಡಿ ಕವನ ವಾಚಿಸಲಿದ್ದಾರೆ.

ಯುವ ಕವಿಗೋಷ್ಠಿಗೆ ರಾಜ್ಯದ ವಿವಿಧ ಭಾಗಗಳಿಂದ ಯುವ ಕವಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ವಿಜಯಭಾಸ್ಕರರೆಡ್ಡಿ ಅವರಿಗೂ ಅವಕಾಶ ಲಭಿಸಿದೆ. ದಸರಾ ಮಹೋತ್ಸವದ ಪ್ರತಿಷ್ಠಿತ ಸಾಹಿತ್ಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಯುವ ಕವಿಯೊಬ್ಬರು ಭಾಗವಹಿಸುತ್ತಿರುವುದು ಸಾಹಿತ್ಯ ವಲಯದಲ್ಲಿ ಗಮನ ಸೆಳೆದಿದೆ.

ಇದನ್ನೂ ಓದಿ: Kalaburagi Red Gram: ‘ಮಾಲ್ಡೀವ್ಸ್‌’ಗೂ ಹಾರಿದ ‘ಕಲಬುರಗಿ ತೊಗರಿ’: ಕಲ್ಯಾಣ ಕರ್ನಾಟಕದ ರೈತನ ಬೆಳೆಗೆ ವಿಶ್ವಮನ್ನಣೆ, ಶೇ.30ಕ್ಕೂ ಹೆಚ್ಚು ಹೆಚ್ಚುವರಿ ಬೆಲೆ

ಅ.14ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಕವಿಗೋಷ್ಠಿ ನಡೆಯಲಿದೆ. ಆಯ್ಕೆಯಾಗಿರುವ ಯುವ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ.

ಸೇಡಂನಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವ ವಿಜಯಭಾಸ್ಕರರೆಡ್ಡಿ ಅವರಿಗೆ ಮೈಸೂರು ದಸರಾ ವೇದಿಕೆಯಲ್ಲಿ ಕವನ ವಾಚಿಸುವ ಅವಕಾಶ ದೊರೆತಿರುವುದು ಅವರ ಸಾಹಿತ್ಯ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ. ದಸರಾ ಕವಿಗೋಷ್ಠಿಯಲ್ಲಿ ಭಾಗವಹಿ ಸಲು ಅವಕಾಶ ದೊರೆತಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯಭಾಸ್ಕರರೆಡ್ಡಿ ಅವರ ಆಯ್ಕೆಗೆ ಜಿಲ್ಲೆಯ ಸಾಹಿತ್ಯಾಸಕ್ತರು, ಸ್ನೇಹಿತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.