ಪ್ರೈವೆಟ್ ಜೆಟ್‌ಗೆ ಬೇಡಿಕೆ ಇಡುವ ನಟರ ಮಧ್ಯೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ ಕಮಲ್ ಹಾಸನ್; ಪ್ರಶಂಸಿದ ʻಕಲ್ಕಿʼ ನಿರ್ಮಾಪಕರು!
ಚಿತ್ರರಂಗದಲ್ಲಿ ನಟರ ಐಷಾರಾಮಿ ವೆಚ್ಚಗಳನ್ನು ಕಡಿತಗೊಳಿಸಿ, ನಿರ್ಮಾಣ ಬಜೆಟ್ ಅನ್ನು ಸಿನಿಮಾದ ಗುಣಮಟ್ಟಕ್ಕೆ ಬಳಸಬೇಕೆಂದು ಕರೆ ನೀಡಿದ್ದ ನಟ ಕಮಲ್ ಹಾಸನ್, ತಾವೇ ಮೊದಲು ಅದನ್ನು ಪಾಲಿಸಿ ಮಾದರಿಯಾಗಿದ್ದಾರೆ. 'ಕಲ್ಕಿ 2' ಚಿತ್ರದ ಹೈದರಾಬಾದ್ ಶೂಟಿಂಗ್‌ಗಾಗಿ ಅವರು ಪ್ರೈವೇಟ್ ಜೆಟ್ ಹಾಗೂ ಬಿಸಿನೆಸ್ ಕ್ಲಾಸ್ ಸೌಕರ್ಯಗಳನ್ನು ಬದಿಗಿಟ್ಟು, ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.
-
ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ನಿರ್ಮಾಣ ವೆಚ್ಚಕ್ಕಿಂತ ಹೆಚ್ಚಾಗಿ ನಟ-ನಟಿಯರ ವೈಯಕ್ತಿಕ ಐಷಾರಾಮಿ ಸೌಕರ್ಯಗಳಿಗಾಗಿಯೇ ನಿರ್ಮಾಪಕರು ಹೆಚ್ಚು ಖರ್ಚು ಮಾಡಬೇಕಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಲೇ ಇವೆ. ಈಗಿನ ಸ್ಟಾರ್ ನಟರಂತೂ ಬೇರೆ ಬೇರೆ ರಾಜ್ಯಗಳ ಪ್ರೆಸ್‌ಮೀಟ್‌ಗೆ ಹೋಗಬೇಕೆಂದರೇ ಪ್ರೈವೆಟ್ ಜೆಟ್ ಬೇಕೇಬೇಕು ಅಂತಾರೆ. ಅಷ್ಟೇ ಅಲ್ಲ, ಶೂಟಿಂಗ್‌ಗೆ ಬರುವುದಕ್ಕೂ ಐಷಾರಾಮಿ ವ್ಯವಸ್ಥೆಯ ಬೇಡಿಕೆ ಇಡುತ್ತಾರೆ.
ಈ ಮಧ್ಯೆ ಅನಗತ್ಯ ಆಡಂಬರಗಳಿಗೆ ಮನ್ನಣೆ ನೀಡದೆ, ದುಬಾರಿ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ನಟ ಕಮಲ್ ಹಾಸನ್ ಚಿತ್ರೋದ್ಯಮಕ್ಕೆ ಕರೆ ನೀಡಿದ್ದರು. ಆದರೆ, ಅವರು ಅದನ್ನು ಕೇವಲ ಮಾತಿಗೆ ಸೀಮಿತವಾಗಿಸಿಲ್ಲ. ಸ್ವತಃ ಅದನ್ನು ಅವರೇ ಪಾಲನೆ ಮಾಡಿ ತೋರಿಸಿರುವುದು ಈಗ ಚರ್ಚೆ ಆಗುತ್ತಿದೆ.
ಪತ್ರ ಬರೆದು ಹಂಚಿಕೊಂಡಿದ್ದ ಕಮಲ್
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಜಗತ್ತಿನಾದ್ಯಂತ ಆರ್ಥಿಕ ಸವಾಲುಗಳು ಎದುರಾಗುತ್ತಿವೆ. ಇದರ ಪ್ರಭಾವ ಚಿತ್ರರಂಗದ ಮೇಲೂ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದ ಕಮಲ್ ಹಾಸನ್, ಕೆಲವು ದಿನಗಳ ಹಿಂದಷ್ಟೇ ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗ ಪತ್ರವೊಂದನ್ನು ಹಂಚಿಕೊಂಡಿದ್ದರು.
ಸಿನಿಮಾ ನಿರ್ಮಾಣದ ಪ್ರತಿಯೊಂದು ಪೈಸೆಯೂ ಔಟ್‌ಪುಟ್‌ಗಾಗಿ ಮಾತ್ರವೇ ಖರ್ಚಾಗಬೇಕು, ಅದೇ ಸಮಯದಲ್ಲಿ ದಿನಗೂಲಿ ಕಾರ್ಮಿಕರ ವೇತನ, ಅವರ ಭದ್ರತೆ ಮತ್ತು ಊಟದ ಸೌಕರ್ಯಗಳಿಗೆ ಯಾವುದೇ ತೊಂದರೆಯಾಗಬಾರದು ಎಂದು ಅವರು ಸೂಚಿಸಿದ್ದರು. ಈ ನಿಟ್ಟಿನಲ್ಲಿ ಇಡೀ ಭಾರತೀಯ ಚಿತ್ರರಂಗವೇ ಒಗ್ಗಟ್ಟಾಗಿ ನಿಲ್ಲಬೇಕಾದ ಸಮಯ ಬಂದಿದೆ ಎಂದು ಸ್ಪಷ್ಟಪಡಿಸಿದ್ದರು.
Kamal Haasan Movie: 44 ವರ್ಷಗಳ ಬಳಿಕ ಒಟಿಟಿಗೆ ಬರ್ತಿದೆ ಈ ಸೌತ್ ಹಿಟ್ ಮೂವಿ!
ಎಕಾನಮಿ ಕ್ಲಾಸ್‌ನಲ್ಲಿ ಕಮಲ್ ಪ್ರಯಾಣ!
ತಾವು ಹೇಳಿದ ಉಳಿತಾಯದ ಸೂತ್ರವನ್ನು ತಾವೇ ಮೊದಲು ಅಳವಡಿಸಿಕೊಂಡಿರುವ ಕಮಲ್ ಹಾಸನ್, ಬಹುನಿರೀಕ್ಷಿತ 'ಕಲ್ಕಿ 2' ಚಿತ್ರದ ಹೊಸ ಶೂಟಿಂಗ್ ಶೆಡ್ಯೂಲ್‌ಗಾಗಿ ಚೆನ್ನೈನಿಂದ ಹೈದರಾಬಾದ್‌ಗೆ ಒಬ್ಬ ಸಾಮಾನ್ಯ ಪ್ರಯಾಣಿಕನಂತೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ವಿಲಾಸಿ ಪ್ರೈವೇಟ್ ಚಾರ್ಟರ್ಡ್ ವಿಮಾನಗಳು ಹಾಗೂ ಬಿಸಿನೆಸ್ ಕ್ಲಾಸ್ ಸೌಕರ್ಯಗಳನ್ನು ಬದಿಗಿಟ್ಟು ಎಕಾನಮಿ ಕ್ಲಾಸ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಮಲ್ ಹಾಸನ್ ಅವರ ಈ ನಡೆಯನ್ನು 'ಕಲ್ಕಿ' ಚಿತ್ರದ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಪ್ರಸಂಸಿದೆ.
ಕಮಲ್ ಹಾಸನ್ ಅವರು ಎಕಾನಮಿ ಕ್ಲಾಸ್‌ನಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿರುವ ಸಂಸ್ಥೆ, "ಚಿತ್ರರಂಗ ಕಷ್ಟದಲ್ಲಿರುವ ಈ ಸಮಯದಲ್ಲಿ ಕಮಲ್ ಹಾಸನ್ ಅವರು ಪ್ರೈವೇಟ್ ಚಾರ್ಟರ್ಡ್ ವಿಮಾನಗಳು ಮತ್ತು ಐಷಾರಾಮಿ ಪ್ರಯಾಣವನ್ನು ತ್ಯಜಿಸಿ, ಎಕಾನಮಿ ಕ್ಲಾಸ್ ಫ್ಲೈಟ್‌ನಲ್ಲಿ ಪ್ರಯಾಣಿಸಿ ನೇರವಾಗಿ ಶೂಟಿಂಗ್ ಸೆಟ್‌ಗೆ ಬರಲು ನಿರ್ಧರಿಸಿರುವುದು, ಅವರು ಎಂತಹ ಲೆಜೆಂಡ್ ಎಂಬುದಕ್ಕೆ ಸಾಕ್ಷಿ. ಸಿನಿಮಾ ರಂಗದಲ್ಲಿ ಮತ್ತಷ್ಟು ಅದ್ಭುತ ಬದಲಾವಣೆಗಳು ಆಗಲು ಇದು ಮೊದಲ ಹೆಜ್ಜೆ" ಎಂದು ಶ್ಲಾಘಿಸಿದೆ.
ಕಮಲ್ ಹಾಸನ್‌ಗೆ ಹೊಗಳಿದ ವೈಜಯಂತಿ ಮೂವೀಸ್
Mr. @ikamalhaasan choosing to let go of private charters and luxury travel to take an economy flight and head straight to the shoot sets, at a time when the industry is navigating tough realities, this says everything about the legend he is.
— Vyjayanthi Movies (@VyjayanthiFilms) May 18, 2026
A first step towards greater things… pic.twitter.com/1bzVYc6igg
ಕಲ್ಕಿ 2 ಅಪ್ಡೇಟ್ ಏನು?
ನಾಗ್ ಅಶ್ವಿನ್ ನಿರ್ದೇಶನದ, ಪ್ರಭಾಸ್ ನಾಯಕತ್ವದ 'ಕಲ್ಕಿ 2898 ಎಡಿ' ಜಾಗತಿಕ ಮಟ್ಟದಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ 'ಕಲ್ಕಿ ಪಾರ್ಟ್ 2' ಸಿದ್ಧವಾಗುತ್ತಿದೆ. ಪ್ರಸ್ತುತ ಈ ಸಿನಿಮಾದ ಹೊಸ ಶೆಡ್ಯೂಲ್ ಹೈದರಾಬಾದ್‌ನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಮೊದಲ ಭಾಗದ ಕ್ಲೈಮ್ಯಾಕ್ಸ್‌ನಲ್ಲಿ ಕೆಲವೇ ನಿಮಿಷಗಳು ಕಾಣಿಸಿಕೊಂಡು ಗಮನಸೆಳೆದಿದ್ದ ಕಮಲ್ ಹಾಸನ್, ಪಾರ್ಟ್ 2ರಲ್ಲಿ ವಿಲನ್ 'ಸುಪ್ರೀಂ ಯಾಸ್ಕಿನ್' ಪಾತ್ರದಲ್ಲಿ ಪೂರ್ಣಪ್ರಮಾಣದಲ್ಲಿ ಅಬ್ಬರಿಸಲಿದ್ದಾರೆ.