ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟಿ ಸಾಯಿ ಪಲ್ಲವಿ ಕೈತಪ್ಪಿದ ಲಕ್ಕಿ ಚಾನ್ಸ್; ಸಮಂತಾಗೆ ಭರ್ಜರಿ ಲಾಭ ತಂದುಕೊಟ್ಟ 'ಮಾ ಇಂಟಿ ಬಂಗಾರಂ'!

ನಟಿ ಸಾಯಿ ಪಲ್ಲವಿ ಅವರ ಕಾಲ್‌ಶೀಟ್ ಸಮಸ್ಯೆಯಿಂದಾಗಿ ಕೈತಪ್ಪಿದ ‘ಮಾ ಇಂಟಿ ಬಂಗಾರಂ’ ಚಿತ್ರದ ಆಫರ್ ನಟಿ ಸಮಂತಾ ಪಾಲಿಗೆ ಲಕ್ಕಿ ಚಾನ್ಸ್ ಆಗಿ ಬದಲಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ, ಸಮಂತಾ ಅವರ ಸ್ವಂತ ಬ್ಯಾನರ್ ಅಡಿಯ ಈ ಫ್ಯಾಮಿಲಿ ಆ್ಯಕ್ಷನ್ ಡ್ರಾಮಾ ಜೂನ್ 19 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ.

‘ಮಾ ಇಂಟಿ ಬಂಗಾರಂ’ ಭರ್ಜರಿ ಕಮಾಯಿ; ಸಾಯಿ ಪಲ್ಲವಿ ಕೈಬಿಟ್ಟ ಲಕ್ಕಿ ಚಾನ್ಸ್!

-

Avinash GR
Avinash GR Jun 22, 2026 8:02 PM

ಕಲಾವಿದರ ವೃತ್ತಿ ಬದುಕಿನಲ್ಲಿ ಒಂದಲ್ಲಾ ಒಂದು ಬಾರಿ ಉತ್ತಮ ಅವಕಾಶಗಳು ಕೈತಪ್ಪಿ ಹೋಗುವುದು ತೀರಾ ಸಹಜ. ಕಾಲ್‌ಶೀಟ್‌ ಸಮಸ್ಯೆಯಿಂದಲೋ ಅಥವಾ ಡೇಟ್ಸ್ ಹೊಂದಾಣಿಕೆಯಾಗದೆಯೋ ನಟ-ನಟಿಯರು ಕೈಬಿಟ್ಟ ಸಿನಿಮಾಗಳು ಮುಂದೆ ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಉದಾಹರಣೆಗಳು ಸಾಕಷ್ಟಿವೆ.

ಸದ್ಯ ಅಂಥದ್ದೊಂದು ಪರಿಸ್ಥಿತಿ ನಟಿ ಸಾಯಿ ಪಲ್ಲವಿ ಅವರಿಗೆ ಎದುರಾಗಿದೆ. ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' (Maa Inti Bangaaram) ಸಿನಿಮಾ ಈಗ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಅಸಲಿಗೆ ಈ ಚಿತ್ರದ ಆಫರ್‌ ಮೊದಲು ಹೋಗಿದ್ದೇ ಸಾಯಿ ಪಲ್ಲವಿ ಅವರಿಗೆ!

ಹೌದು, 'ಮಾ ಇಂಟಿ ಬಂಗಾರಂ' ಚಿತ್ರದ ನಾಯಕಿ ಪಾತ್ರಕ್ಕಾಗಿ ಚಿತ್ರತಂಡ ಮೊದಲು ಸಾಯಿ ಪಲ್ಲವಿ ಅವರನ್ನು ಸಂಪರ್ಕಿಸಿತ್ತು. ಕಥೆ ಕೇಳಿ ಸಾಯಿ ಪಲ್ಲವಿ ಅವರಿಗೆ ತುಂಬಾ ಇಷ್ಟವಾಗಿತ್ತಾದರೂ, ಅವರ ಕಾಲ್‌ಶೀಟ್‌ಗಳು ಆಗಲೇ ಬೇರೆ ಚಿತ್ರಗಳಿಗೆ ನಿಗದಿಯಾಗಿದ್ದರಿಂದ ಅನಿವಾರ್ಯವಾಗಿ ಈ ಸಿನಿಮಾವನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

Samantha Ruth Prabhu: ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’!

ಸಮಂತಾ ಪಾಲಿಗೆ ಖುಲಾಯಿಸಿದ ಅದೃಷ್ಟ

ಸಾಯಿ ಪಲ್ಲವಿ ಅವರಿಂದ ರಿಜೆಕ್ಟ್ ಆದ ಈ ಚಿತ್ರದ ಆಫರ್ ತಕ್ಷಣವೇ ನಟಿ ಸಮಂತಾ ಅವರ ಕೈಸೇರಿತು. ಕಥೆಯ ಗಾಂಭೀರ್ಯತೆ ಮತ್ತು ತೂಕವನ್ನು ಅರಿತ ಸಮಂತಾ ತಕ್ಷಣವೇ ಗ್ರೀನ್ ಸಿಗ್ನಲ್ ನೀಡಿದರು. ಸದ್ಯ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ. ತೆಲುಗು ರಾಜ್ಯಗಳು ಹಾಗೂ ವಿದೇಶಗಳಲ್ಲೂ ಮೊದಲ ವಾರಾಂತ್ಯದಲ್ಲೇ ದಾಖಲೆ ಮಟ್ಟದ ಕಲೆಕ್ಷನ್ ಮಾಡಿರುವ ಈ ಚಿತ್ರ, 2026ರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ವಿಶೇಷವೆಂದರೆ, ಸಮಂತಾ ಅವರೇ ತಮ್ಮ ಸ್ವಂತ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಸದ್ಯ ಭಾರಿ ಪ್ರಮಾಣದ ಲಾಭವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ.

Maa Inti Bangaram: ಸಮಂತಾ- ದೂದ್ ಪೇಡಾ ದಿಗಂತ್‌ ನಟನೆಯ 'ಮಾ ಇಂಟಿ ಬಂಗಾರಂ' ; ರಿಲೀಸ್‌ ಡೇಟ್‌ ಅನೌನ್ಸ್‌

ಆ್ಯಕ್ಷನ್ ಅವತಾರದಲ್ಲಿ ಬೆರಗುಗೊಳಿಸಿದ ಸ್ಯಾಮ್!

ʻಮಾ ಇಂಟಿ ಬಂಗಾರಂʼ ಚಿತ್ರದಲ್ಲಿ ಸಮಂತಾ ಅವರ ನಟನೆಗೆ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸಿನಿಮಾದಲ್ಲಿರುವ ಸಾಹಸ ದೃಶ್ಯಗಳಲ್ಲಿ ಸಮಂತಾ ಅವರ ಆಕ್ಷನ್‌ ಎಲ್ಲರನ್ನೂ ಬೆರಗುಗೊಳಿಸಿದೆ. ಈ ಚಿತ್ರವನ್ನು ನಂದಿನಿ ರೆಡ್ಡಿ ನಿರ್ದೇಶಿಸಿದ್ದು, 'ತ್ರಲಾಲಾ ಮೋಷನ್ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಕರ್ನಾಟಕದಲ್ಲಿ ಉತ್ತಮ ಕಲೆಕ್ಷನ್‌

'ಮಾ ಇಂಟಿ ಬಂಗಾರಂ' ಸಿನಿಮಾವು ಕರ್ನಾಟಕದ ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಕಮಾಯಿ ಮಾಡಿದೆ. ಬಿಡುಗಡೆಯಾದ ಮೊದಲ ವೀಕೆಂಡ್‌ನಲ್ಲೇ 'ಡಬಲ್ ಬ್ಲಾಕ್‌ಬಸ್ಟರ್' ಆಗಿ ಹೊರಹೊಮ್ಮಿದೆ. ಜೂನ್ 19 ರಂದು ತೆರೆಕಂಡ ಈ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 80 ಲಕ್ಷ ರೂ. ಗಳಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡಿತ್ತು. ಮಾಧ್ಯಮಗಳು ಹಾಗೂ ಪ್ರೇಕ್ಷಕರಿಂದ ಸಿಕ್ಕ ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಎರಡನೇ ದಿನ 1.37 ಕೋಟಿ ಮತ್ತು ಮೂರನೇ ದಿನವಾದ ಭಾನುವಾರ ದಾಖಲೆಯ 1.71 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಕೇವಲ ಮೂರೇ ದಿನಗಳಲ್ಲಿ ಕರ್ನಾಟಕದಾದ್ಯಂತ ಒಟ್ಟು 3.88 ಕೋಟಿ ಭರ್ಜರಿ ಕಮಾಯಿ ಮಾಡಿದೆ ಈ ಸಿನಿಮಾ.