Amruthadhaare Serial: ಕೇಡಿಗಳ ತಾಳಕ್ಕೆ ಕುಣಿಯೋಲ್ಲ ದೀಪಿಕಾ! ಪ್ರತಿರೂಪಗಳು ಒಂದಾದಮೇಲೆ ಶತ್ರು ಸಂಹಾರ ತಡೆಯೋಕಾಗುತ್ತಾ?
Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿ ಕೊನೆಯ ಹಂತ ತಲುಪಿದಂತಿದೆ. ಇದೀಗ ಶಕುಂತಲಾ ಮುಖವಾಡ ಬಯಲಾಗಿದೆ. ಮಲ್ಲಿಗೆ- ಭೂಮಿಕಾಗೆ ಎಲ್ಲ ಸತ್ಯ ಗೊತ್ತಾಗಿದೆ. ಮತ್ತೊಂದು ಕಡೆ ದಿವಾನ್ ಮನೆಯಲ್ಲಿರುವ ದೀಪಿಕಾಳನ್ನು ಹೊರಗೆ ತಂದು ಆ ಸ್ಥಾನಕ್ಕೆ ಭೂಮಿಕಾ ಹೊರಟಿದ್ದಾಳೆ. ಜೈದೇವ್ ಮತ್ತು ಶಕುಂತಲಾ ಮುಂದೆ ದೀಪಿಕಾಳಾಗಿ ಭೂಮಿಕಾ ಹೊರಟಿದ್ದಾಳೆ. ಈಗ ಇವರಿಬ್ಬರ ಅದಲು-ಬದಲು ಆಟ ಕೂಡ ಶುರವಾಗಿದೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿ (Amruthdhaare serial) ಕೊನೆಯ ಹಂತ ತಲುಪಿದಂತಿದೆ. ಇದೀಗ ಶಕುಂತಲಾ ಮುಖವಾಡ ಬಯಲಾಗಿದೆ. ಮಲ್ಲಿಗೆ- ಭೂಮಿಕಾಗೆ (Malli Bhoomika) ಎಲ್ಲ ಸತ್ಯ ಗೊತ್ತಾಗಿದೆ. ಮತ್ತೊಂದು ಕಡೆ ದಿವಾನ್ ಮನೆಯಲ್ಲಿರುವ ದೀಪಿಕಾಳನ್ನು ಹೊರಗೆ ತಂದು ಆ ಸ್ಥಾನಕ್ಕೆ ಭೂಮಿಕಾ ಹೊರಟಿದ್ದಾಳೆ. ಜೈದೇವ್ ಮತ್ತು ಶಕುಂತಲಾ (Jaidev Shakuntala) ಮುಂದೆ ದೀಪಿಕಾಳಾಗಿ ಭೂಮಿಕಾ ಹೊರಟಿದ್ದಾಳೆ. ಈಗ ಇವರಿಬ್ಬರ ಅದಲು-ಬದಲು ಆಟ ಕೂಡ ಶುರವಾಗಿದೆ.
ಕೇಡಿಗಳ ತಾಳಕ್ಕೆ ದೀಪಿಕಾ ಕುಣಿಯುತ್ತಿಲ್ಲ
ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಮಲ್ಲಿ, ಭೂಮಿ ತಮ್ಮನ ಬಳಿ ಎಲ್ಲ ವಿಚಾರ ಹೇಳಿದ್ದಾಳೆ. ಶಕುಂತಲಾ ಬದಲಾಗಿಲ್ಲ. ಅವರೇ ಭೂಮಿ ಅವರನ್ನ ಆಕ್ಸಿಡೆಂಟ್ ಮಾಡಿಸಿದ್ದು ಎಂದಿದ್ದಾಳೆ. ಅಲ್ಲಿಗೆ ಎಲ್ಲ ಸತ್ಯ ಗೊತ್ತಾಗಿದೆ. ಇನ್ನೊಂದು ಕಡೆ ಜೈದೇವ್, ಭೂಮಿ ದೀಪಿಕಾ ಬಳಿ ಸಹಿ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಕೇಡಿಗಳ ತಾಳಕ್ಕೆ ದೀಪಿಕಾ ಕುಣಿಯುತ್ತಿಲ್ಲ. ಬದಲಾಗಿ ನಾನು ಇಲ್ಲಿ ನಾಟಕ ಮಾಡಲು ಬಂದೇ ಹೊರತು ಸಹಿ ಮಾಡಲು ಅಲ್ಲ ಎಂದು ನೇರವಾಗಿ ಹೇಳಿದ್ದಾಳೆ.
ಇದನ್ನೂ ಓದಿ: Simple Suni: ಸಿಂಪಲ್ ಸುನಿಯ ಲಂಬೋದರ 2.0 ಚಿತ್ರಕ್ಕೆ ಈ ಬಾಲಿವುಡ್ ನಿರ್ಮಾಪಕ ಸಾಥ್!
ಪ್ರತಿರೂಪಗಳು ಒಂದಾದಮೇಲೆ ಶತ್ರು ಸಂಹಾರ ಫಿಕ್ಸ್ ಆದಂತಿದೆ. ಭೂಮಿಕಾ ಮತ್ತು ಮಲ್ಲಿ ಸೇರಿ ಎಲ್ಲಾ ವಿಷಯಗಳನ್ನೂ ದೀಪಿಕಾಗೆ ಹೇಳಿದ್ದರು. ಜೈದೇವ ಹೇಗೆ ಮಲ್ಲಿಯ ಬದುಕನ್ನು ನಾಶ ಮಾಡಿದ ಎಂದೂ ಹೇಳಿದ್ದರು.ಇದನ್ನು ಕೇಳಿದ ದೀಪಿಕಾಗೆ ತಾನು ಮೋಸ ಹೋಗಿರುವುದು ತಿಳಿದಿದೆ. ಏನೂ ವಿಚಾರ ಮಾಡದೇ ಜೈದೇವ್ ಮತ್ತು ಶಕುಂತಲಾರನ್ನು ನಂಬಿರುವುದಾಗಿ ಅವಳಿಗೆ ತಿಳಿದಿದೆ.ಅದೇ ಇನ್ನೊಂದೆಡೆ, ದೀಪಿಕಾಳ ಸಹಿ ಹಾಕಿಸಿಕೊಂಡು ಎಲ್ಲಾ ಆಸ್ತಿಯನ್ನೂ ತನ್ನ ಪಾಲಿಗೆ ಮಾಡಿಕೊಳ್ಳಲು ಜೈದೇವ ಹೊರಟ್ಟಿದ್ದ. ಇದಕ್ಕೆ ಶಕುಂತಲಾ ಬೆಂಬಲ ಕೊಟ್ಟಿದ್ದಳು. ಆದರೆ ಅಷ್ಟರಲ್ಲಿಯೇ ದೀಪಿಕಾಗೆ ಸತ್ಯ ಗೊತ್ತಾಗಿ ಈಗ ಉಲ್ಟಾ ಹೊಡೆಯುತ್ತಿದ್ದಾಳೆ. ಬಹುತೇಕ ಕಥೆ ಅಂತ್ಯವಾಗಲಿದೆ.
ಇದನ್ನೂ ಓದಿ: Aishwarya Lekshmi: ಎಐ ಹಾವಳಿಗೆ ಬೇಸತ್ತು ಇನ್‌ಸ್ಟಾಗ್ರಾಮ್ ತೊರೆದ ನಟಿ ಐಶ್ವರ್ಯ ಲಕ್ಷ್ಮಿ
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.