Bigg Boss Kannada 13: ಮಂಜನ ಜೊತೆಗೆ ಇನ್ನೂ ಇಬ್ಬರನ್ನು ನಾನು ಹೊರಗೆ ಕಳಿಸುತ್ತಿದ್ದೆ; ಸುದೀಪ್
Bigg Boss Kannada 13: ಬಿಗ್ ಬಾಸ್ ಮನೆಯಿಂದ ಮಂಜ ಔಟ್ ಆಗಿದ್ದಾರೆ. ಅವಾಚ್ಯವಾಗಿ ಬೈದಿದ್ದಕ್ಕೆ, ಪದೇ ಪದೇ ನಿಯಮ ಮುರಿದಿದ್ದಕ್ಕೆ ಮನೆಯಿಂದ ನೇರವಾಗಿ ಹೊರಗೆ ಬಂದಿದ್ದಾರೆ. ಶನಿವಾರ ಹೇಗೆ ಗಂಭೀರವಾಗಿ ಎಪಿಸೋಡ್ ನಡೆಸಿಕೊಟ್ಟಿದ್ದರೊ ಅದೇ ರೀತಿ ಭಾನುವಾರವೂ ನಡೆಸಿಕೊಟ್ಟರು ಕಿಚ್ಚ. ಆದರೆ ಕಿಚ್ಚ ಅವರು ಮಂಜ ಒಬ್ಬರನ್ನೆ ಹೊರಗೆ ಕಳಿಸಿದ್ದು ನನಗೆ ಇಷ್ಟ ಆಗ್ಲಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಿಂದ (Bigg Boss Kannada 13) ಮಂಜ ಔಟ್ (Mahakavi Manja) ಆಗಿದ್ದಾರೆ. ಅವಾಚ್ಯವಾಗಿ ಬೈದಿದ್ದಕ್ಕೆ, ಪದೇ ಪದೇ ನಿಯಮ ಮುರಿದಿದ್ದಕ್ಕೆ ಮನೆಯಿಂದ ನೇರವಾಗಿ ಹೊರಗೆ ಬಂದಿದ್ದಾರೆ. ಶನಿವಾರ ಹೇಗೆ ಗಂಭೀರವಾಗಿ ಎಪಿಸೋಡ್ ನಡೆಸಿಕೊಟ್ಟಿದ್ದರೊ ಅದೇ ರೀತಿ ಭಾನುವಾರವೂ ನಡೆಸಿಕೊಟ್ಟರು ಕಿಚ್ಚ. ಆದರೆ ಕಿಚ್ಚ ಅವರು ಮಂಜ ಒಬ್ಬರನ್ನೆ ಹೊರಗೆ ಕಳಿಸಿದ್ದು ನನಗೆ ಇಷ್ಟ ಆಗ್ಲಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಹೌದು ಮಂಜ ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ್ದರೂ ಅವರ ಜೊತೆಗೆ ಕೆಲವು ಸ್ಪರ್ಧಿಗಳು ಅತಿರೇಕದ ನಡವಳಿಕೆ ಪ್ರದರ್ಶಿಸಿದ್ದರು. ಈ ಮನೆಯಲ್ಲಿ ತಪ್ಪುಗಳನ್ನು ಮಾಡಿರುವ, ಗಂಭೀರ ತಪ್ಪುಗಳನ್ನು ಮಾಡಿರುವ ಹಲವು ಜನರು ಇದ್ದಾರೆ. ಮಂಜ ಅವರಿಗೆ ಎಷ್ಟೇ ಬಾರಿ ತಿದ್ದಿ ಹೇಳಿ ಪ್ರಯತ್ನಿಸಿದರೂ ಅವರಿಗೆ ಅರ್ಥ ಆಗಿಲ್ಲ. ಆದರೆ ತಪ್ಪು ಮಾಡಿದ್ದು ಆತ ಮಾತ್ರ ಆಗಿರಲಿಲ್ಲ ಎಂದರು ಸುದೀಪ್.
ಇದನ್ನೂ ಓದಿ: Bigg Boss Kannada 13: ʻನಾನು ಹೇಳಿಯೇ ಚೂರಿ ಹಾಕೋದುʼ; ಸೌಂದರ್ಯಗೆ ನೇರವಾಗಿ ಹೇಳಿದ ಕುಮಾರಿ!
ಮಾಡಿದ ತಪ್ಪಿಗೆ ಬಿಕ್ಕಳಿಸಿದ ಮಂಜುನಾಥ್ Super Sunday With ಬಾದ್ಷಾ ಸುದೀಪ | ಇಂದು ರಾತ್ರಿ 9 ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - https://t.co/96hibtGUwq #BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKSP https://t.co/aHlDQif9ZT
— Colors Kannada (@ColorsKannada) October 11, 2026
ಮಂಜ ಒಬ್ಬನನ್ನೇ ಮನೆಯಿಂದ ಹೊರಗೆ ಕಳಿಸಿದ್ದು ನನಗೆ ಇಷ್ಟವಾಗಲಿಲ್ಲ. ಇನ್ನೂ ಇಬ್ಬರು ಮೂವರು ಹೊರಗೆ ಹೋಗಬೇಕಿತ್ತು. ಒಂದು ವೇಳೆ ನನಗೆ ಅಧಿಕಾರ ಇದ್ದಿದ್ದರೆ, ಮಂಜನ ಜೊತೆಗೆ ಇನ್ನೂ ಇಬ್ಬರನ್ನು ನಾನು ಹೊರಗೆ ಕಳಿಸುತ್ತಿದ್ದೆ ಎಂದರು ಸುದೀಪ್.ನನ್ನ ಕೈಯಲ್ಲಿ ಏನೂ ಇಲ್ಲ. ನಾನು ಇಲ್ಲಿಗೆ ಬರುವುದು ಬಿಗ್ಬಾಸ್ ನನಗೆ ನೀಡಿದ ಹೆಸರನ್ನು ಘೋಷಣೆ ಮಾಡಲು ಮಾತ್ರ. ನಿಮಗೆ ಎಚ್ಚರಿಸಲು ಮಾತ್ರ. ನನ್ನ ಅಭಿಪ್ರಾಯಗಳಿಗೆ ಇಲ್ಲಿ ಬೆಲೆ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 13: ಪ್ಯಾಂಟ್ ಹೇಳಿಕೆ ವಿವಾದ; ಗಾನವಿಗೆ ಹೊಡೆಯುವ ಹಂತಕ್ಕೆ ಹೋದ ಗಗನ್
ಮನೆಯೊಳಗೆ ವಿಶೇಷವಾದ ವೈಲ್ಡ್ ಕಾರ್ಡ್ ಎಂಟ್ರಿಗಳು ನಡೆದಿವೆ. ಕುಮಾರಿ ಮತ್ತು ಲಕ್ಷ್ಮಿ ಅವರು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಇವರ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.