ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare serial: ಶಕುನಿ ಮಾವನನ್ನು ಅಟ್ಟಾಡಿಸಿಕೊಂಡು ಹೋದ ಕೆಡಿ ಜೈದೇವ್‌!

Amruthadhaare serial: ಗೌತಮ್ ಬಾಳಲ್ಲಿ ಬೆಳಕಾಗಿ ಬಂದಿರುವ ಅಖಿಲಾಂಡೇಶ್ವರಿ ಅವರು ಗೌತಮ್ ಬಳಿ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳುವುದಕ್ಕೆ ಕರೆ ಮಾಡಿದ್ದರು. ಮಗಳ ಸುಳಿವನ್ನು ಶಕುನಿ ಮಾಮಗೆ ಹೇಳಿದ್ದಾರೆ. ಮಿಂಚು ಕೈಯಲ್ಲಿ ಇರುವ ಮಚ್ಚೆ ತ್ರಿಶೂಲ್‌ ನೋಡಿ, ಮಿಂಚುನೇ ಗೌತಮ್‌ ಮಗಳು ಅನ್ನೋ ಸತ್ಯ ಗೊತ್ತಾಗಿದೆ. ಮಿಂಚು ಕುರಿತಾದ ಅಡ್ರೆಸ್‌ ಈಗ ಶಕುನಿ ಮಾಮಗೆ ಸಿಕ್ಕಿದೆ. ಆ ವಿಚಾರವನ್ನು ಗೌತಮ್‌ಗೆ ಹೇಳಬೇಕು ಅಂತ ಎಷ್ಟೇ ಪ್ರಯತ್ನ ಮಾಡಿದ್ದರೂ ಆಗದೇ ಹೋಯ್ತು.

ಶಕುನಿ ಮಾವನನ್ನು ಅಟ್ಟಾಡಿಸಿಕೊಂಡು ಹೋದ ಕೆಡಿ ಜೈದೇವ್‌!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 21, 2026 10:14 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಮಿಂಚು ಮೇಲೆ ಕಥೆ ಸಾಗುತ್ತಿದೆ. ಗೌತಮ್‌ ಈಗ ಮಗಳನ್ನು ಹುಡುಕುವ ಪ್ರಯತ್ನದಲ್ಲಿ ಇದ್ದಾನೆ. ಅದರಲ್ಲೂ ಅಖಿಲಾಂಡೇಶ್ವರಿ ಈ ಸುದ್ದಿಯನ್ನು ಶಕುನಿ ಮಾಮಗೆ ತಿಳಿಸಿದ್ದಾಳೆ. ಮಿಂಚು ಸುಳಿವು ಸಿಕ್ಕಿದ್ದು ಕೆಡಿ ಜೈದೇವ್‌ಗೆ (Jaidev) ಗೊತ್ತಾಗಿದೆ. ಅದರ ಡಿಟೇಲ್ಸ್‌ಗಾಗಿ ಮಾಮನನ್ನು ಪೀಡಿಸಿದ್ದಾನೆ ಜೈದೇವ್‌.

ಗೌತಮ್ ಬಾಳಲ್ಲಿ ಬೆಳಕಾಗಿ ಬಂದಿರುವ ಅಖಿಲಾಂಡೇಶ್ವರಿ ಅವರು ಗೌತಮ್ ಬಳಿ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳುವುದಕ್ಕೆ ಕರೆ ಮಾಡಿದ್ದರು. ಮಗಳ ಸುಳಿವನ್ನು ಶಕುನಿ ಮಾಮಗೆ ಹೇಳಿದ್ದಾರೆ. ಮಿಂಚು ಕೈಯಲ್ಲಿ ಇರುವ ಮಚ್ಚೆ ತ್ರಿಶೂಲ್‌ ನೋಡಿ, ಮಿಂಚುನೇ ಗೌತಮ್‌ ಮಗಳು ಅನ್ನೋ ಸತ್ಯ ಗೊತ್ತಾಗಿದೆ. ಮಿಂಚು ಕುರಿತಾದ ಅಡ್ರೆಸ್‌ ಈಗ ಶಕುನಿ ಮಾಮಗೆ ಸಿಕ್ಕಿದೆ. ಆ ವಿಚಾರವನ್ನು ಗೌತಮ್‌ಗೆ ಹೇಳಬೇಕು ಅಂತ ಎಷ್ಟೇ ಪ್ರಯತ್ನ ಮಾಡಿದ್ದರೂ ಆಗದೇ ಹೋಯ್ತು.

ಇದನ್ನೂ ಓದಿ: Jr NTR: ಪ್ರಶಾಂತ್ ನೀಲ್ ಮೇಲೆ ಜ್ಯೂ. ಎನ್‌ಟಿಆರ್ ಪತ್ನಿ ಅಸಮಾಧಾನಗೊಂಡಿದ್ದೇಕೆ?

ಡ್ರಾಪ್‌ ಮಾಡ್ತೀನಿ ಅನ್ನೋ ನೆಪದಲ್ಲಿ ರೌಡಿಸಂ

ಗೌತಮ್‌ ಮಗುವಿನ ಡಿಟೇಲ್ಸ್‌ ಕುರಿತಾಗಿ ಜೈದೇವ್‌, ಮಾಮಗೆ ಹೇಳು ಅಂತ ಟಾರ್ಚರ್‌ ಕೊಟ್ಟಿದ್ದಾನೆ. ಬೈಕ್‌ನಲ್ಲಿ ಡ್ರಾಪ್‌ ಮಾಡ್ತೀನಿ ಅನ್ನೋ ನೆಪದಲ್ಲಿ ರೌಡಿಸಂ ತೋರಿಸಿದ್ದಾನೆ. ಶಕುನಿ ಮಾಮ ಓಡಲು ಪ್ರಯತ್ನಿಸಿದ್ದಾನೆ.

ಈಚೆಗೆ ಜೈಲಿನಿಂದ ಜೈದೇವ್ ಬಿಡುಗಡೆಗೂ ಶಕುನಿ ಮಾವನೇ ಮುಂದಾಳತ್ವ ವಹಿಸಿದ್ದ. ಹೀಗಾಗಿ, ಅಮೃತಧಾರೆಯಲ್ಲಿ ಶಕುನಿ ಮಾವ ಬದಲಾಗಿಲ್ಲ, ಮತ್ತೆ ತನ್ನ ಕಳ್ಳಾಟಗಳನ್ನು ಶುರು ಮಾಡಲಿದ್ದಾನೆಯೇ ಎನ್ನುವ ಅನುಮಾನ ಪ್ರೇಕ್ಷಕರಿಗೆ ಇತ್ತು.

ಆದರೆ ಶಕುನಿ ಮಾಮನಿಂದ ದೆ ಜೈದೇವ್ ಆ ಅಡ್ರೆಸ್ ಕಸಿದುಕೊಂಡು ಹೋಗಿ ಮತ್ತೆ‌ ಮಗುವ ಕಿಡ್ನಾಪ್ ಮಾಡುವ ಸಾಧ್ಯತೆ ಇದೆ ಹಾಗೆ ಗೌತಮ್ ಸಿಕ್ಕಿ ಜೈಲಿಗೆ ಹೋಗ್ತಾನೆ ಎಂದು ಗೆಸ್ ಮಾಡಲಾಗ್ತಿದೆ‌‌. ಇನ್ನೂ ಭೂಮಿಕಾ ಹಾಗೂ ಗೌತಮ್‌ ದಿವಾನ್‌ ಅವರ ಮಗಳು ಮಿಂಚು ಅನ್ನುವುದು ಪ್ರೇಕ್ಷಕರ ನಿರೀಕ್ಷೇ ಆದರೆ ಭೂಮಿಕಾ ಹಾಗೂ ಗೌತಮ್‌ಗೆ ವಿಚಾರ ತಿಳಿದಿಲ್ಲ.



ಆ ಮಗುವನ್ನು ಕಾಪಾಡಲು ಹೋಗಿ ಗೌತಮ್‌ಗೆ ಏನಾದರೂ ಆದರೂ ಆಗಬಹುದು. ಈಗಾಗಲೇ ಪುರೋಹಿತರು ನಿಮ್ಮ ಮಗಳಿಂದಲೇ ನಿಮಗೆ ಕಂಟಕ ಎಂದು ಈ ಹಿಂದೆ ಹೇಳಿದ್ದರು. ಆದರೆ ಇದೆಲ್ಲ ಕಥೆಯನ್ನು ನೋಡಿದ್ರೆ ಶಕುಂತಲಾ ಕೂಡ ಮಗನಿಗೆ ಸಾಥ್‌ ಕೊಡ್ತಾಳಾ ಅನ್ನೋದು ಕುತೂಹಲ. ಮಕ್ಕಳ ಜೊತೆ ಗೌತಮ್‌ ಹಾಗೂ ಭೂಮಿ, ಮಕ್ಕಳಾಗಿ ಚೆಂದವಾಗಿ ಬದುಕುತ್ತಿದ್ದಾರೆ. ಮತ್ತೆ ಜೈದೇವ್‌ ವಕ್ರದೃಷ್ಟಿ ಬಿಳೋದು ಕನ್ಫ್‌ರ್ಮ್‌ ಆದಂತಿದೆ.

ಇದನ್ನೂ ಓದಿ: Amruthadhaare Serial: ಮಿಂಚು ಮೇಲೆ ಬಿದ್ದೇ ಬಿಡ್ತು ಜೈದೇವ್‌ ವಕ್ರದೃಷ್ಟಿ; ಗೌತಮ್‌ ಕಥೆ ಏನು?

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ