ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಜೈದೇವ್‌ ಸ್ಥಿತಿ ಕಂಡು ಶಕುನಿ ಮಾಮ ಶಾಕ್‌!

Amruthadhaare Serial: ಅಮೃತಧಾರೆಯ ಹೊಸ ಎಪಿಸೋಡ್‌ಗಳು ಹಲವು ಕಾರಣಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಮಿಂಚು ಹಾಗೂ ಅಪ್ಪು ನಡುವಿನ ಮುದ್ದಿನ ಕಿತ್ತಾಟವು ಹೈಲೈಟ್‌ ಆಗಿದೆ. ಊಟದ ವಿಚಾರವಾಗಿ ಮತ್ತೆ ಕಿತ್ತಾಡಿಕೊಂಡಿದ್ದಾರೆ ಭೂಮಿ ಹಾಗೂ ಗೌತಮ್‌. ಜೈದೇವ್‌ ಇದೀಗ ತನ್ನ ಎರಡನೇ ಪತ್ನಿಯ ಮನೆಯಲ್ಲಿ ಕೆಲಸದಾಳಾಗಿದ್ದಾನೆ. ಜೈದೇವ್‌ಗೆ ಬೇಬಿ ಇನ್ನಷ್ಟು ಕೆಲಸ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ಕ್ಷಣ ಕ್ಷಣಕ್ಕೂ ಅವಮಾನ ಮಾಡುತ್ತಿದ್ದಾಳೆ.

Amruthadhaare Serial: ಜೈದೇವ್‌ ಸ್ಥಿತಿ ಕಂಡು ಶಕುನಿ ಮಾಮ ಶಾಕ್‌!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 16, 2026 11:00 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಕೆಡಿ ಜೈದೇವ್‌ ಕಥೆ ಅಯೋಮಯವಾಗಿದೆ. ಜೈದೇವ್‌ ಈಗ ಎರಡನೇ ಪತ್ನಿಯ ಮನೆಯಲ್ಲಿ ಕೆಲಸದಾಳಾಗಿದ್ದಾನೆ. ಜೈದೇವ್‌ (Jaidev) ಸ್ಥಿತಿ ನೋಡಿ ಶಾಕ್‌ ಆಗಿದ್ದಾನೆ ಶಕುನಿ ಮಾಮ. ಜೈದೇವ್‌ ಇದೀಗ ತನ್ನ ಎರಡನೇ ಪತ್ನಿಯ ಮನೆಯಲ್ಲಿ ಕೆಲಸದಾಳಾಗಿದ್ದಾನೆ. ಜೈದೇವ್‌ಗೆ ಬೇಬಿ ಇನ್ನಷ್ಟು ಕೆಲಸ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ಕ್ಷಣ ಕ್ಷಣಕ್ಕೂ ಅವಮಾನ ಮಾಡುತ್ತಿದ್ದಾಳೆ. ಒಂದು ಸಿಗ್‌ರೇಟ್‌ಗೂ ಜೈದೇವ್‌ ದಿಯಾ ಬಳಿ (Dia) ಭಿಕ್ಷೆ ಬೇಡುತ್ತಿದ್ದಾನೆ. ಜೈದೇವ್‌ ಸ್ಥಿತಿಯನ್ನು ಶಕುನಿ ಮಾವ ಕಣ್ಣಾರೆ ಕಂಡು ಶಾಕ್‌ ಆಗಿದ್ದಾನೆ.

ಮಕ್ಕಳು ಕೊಡೋ ಕಾಟಕ್ಕೆ ಭೂಮಿ-ಗೌತಮ್‌ ಸುಸ್ತು

ಅಮೃತಧಾರೆ ಸೀರಿಯಲ್‌ನಲ್ಲಿ ಮಿಂಚು ಹಾಗೂ ಅಪ್ಪು ನಡುವಿನ ಮುದ್ದಿನ ಕಿತ್ತಾಟವು ಹೈಲೈಟ್‌ ಆಗಿದೆ. ಊಟದ ವಿಚಾರವಾಗಿ ಮತ್ತೆ ಕಿತ್ತಾಡಿಕೊಂಡಿದ್ದಾರೆ ಭೂಮಿ ಹಾಗೂ ಗೌತಮ್‌.

ಇದನ್ನೂ ಓದಿ: Kiara Advani: ಮಗಳು ಒಬ್ಬರ ಜೊತೆ ಮಾತ್ರ ಡೇಟಿಂಗ್ ಮಾಡ್ಬೇಕು; ಟೀಕೆಗೆ ಗುರಿಯಾದ ಕಿಯಾರಾ

ವೀಕ್ಷಕರು ಕನ್‌ಫ್ಯೂಸ್‌

ಅಮೃತಧಾರೆಯ ಹೊಸ ಎಪಿಸೋಡ್‌ಗಳು ಹಲವು ಕಾರಣಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಮೊದಲನೆಯದಾಗಿ ಗೌತಮ್ ಹಾಗೂ ಭೂಮಿಕಾ ಅವರ ಮಗಳ ಪತ್ತೆಗೆ ಅಖಿಲಾಂಡೇಶ್ವರಿ ಅವರ ಅಭಯ ಹಸ್ತ ಸಿಕ್ಕಿದೆ. ಪೊಲೀಸ್ ಠಾಣೆಗೆ ಬಂದು ಮಾವ ಜಾಮೀನು ಕೊಡಿಸಲು ಮುಂದಾಗಿದ್ದರೂ, ಜೈದೇವ್ ಇದಕ್ಕೆ ಸಮ್ಮತಿ ಸೂಚಿಸಿಲ್ಲ. ಆದರೂ ಮಾವ ಬಿಡಿಸಿಕೊಂಡು ಹೋಗಿರೊದಕ್ಕೆ ಮಾವ ಹಾಗೂ ಶಕುಂತಲಾ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ ಅಂತ ಕಮೆಂಟ್‌ ಕೂಡ ಮಾಡುತ್ತಿದ್ದಾರೆ.



ಇನ್ನು ಮಹಿಮಾ ಗರ್ಭಿಣಿಯಾಗಿದ್ದಾರೆ. ಗೌತಮ್ ಮನೆಗೆ ಭೇಟಿ ನೀಡಿರುವ ಮಹಿಮಾ ಎಲ್ಲರೊಂದಿಗೆ ಮಾತನಾಡಿರುವುದು ಹೊಸ ಎಪಿಸೋಡ್‌ನಲ್ಲಿ ಇದೆ. ನೀನು ಹೆಚ್ಚು ಪ್ರವಾಸ ಮಾಡಬಾರದು ಎಲ್ಲಿಯೂ ಓಡಾಡಬಾರದು ಅಂತ ಹೇಳಿದ್ದಾರೆ.

ಅದಕ್ಕೆ ಮಹಿಮಾ ನನ್ನು ಇಷ್ಟೊಂದು ರಿಸ್ಟ್ರಿಕ್ ಮಾಡಬೇಡಿ, ನನ್ನ ಇಷ್ಟದಂತೆ ಬಿಡಿ ಅಂತ ಹೇಳಿದ್ದಾಳೆ. ಇದಕ್ಕೆ ಗೌತಮ್ ನಿನ್ನ ಇಷ್ಟದ ಪ್ರಕಾರವೇ ಇರು ಆದರೆ ಈ ರೀತಿಯ ಸಮಯದಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಅಂತ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Amruthadhaare Serial: ಬೇಬಿ ಮನೆಯಲ್ಲಿ ಜೈದೇವ್‌ ಕೆಲಸದಾಳು; ಮಕ್ಕಳನ್ನು ಸಂಭಾಳಿಸಲು ಗೌತಮ್‌-ಭೂಮಿ ಪರದಾಟ

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ