Amruthadhaare Serial: ಅನುಮಾನ ಹುಟ್ಟಿದೆ ಶಕುಂತಲಾ ನಡೆ! ಜೈದೇವ್ ಮುಂದಿನ ಮಾಸ್ಟರ್ ಪ್ಲ್ಯಾನ್ ಏನು?
Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಭೂಮಿ ವಿರುದ್ಧ ಕೆಂಡವಾಗಿದ್ದಾಳೆ. ಇದೀಗ ಶಕುಂತಲಾ ನಡೆ ಶಕುನಿ ಮಾಮಾಗೂ ಅನುಮಾನ ಬರುವಂತೆ ಮೂಡಿದೆ. ಅಮೃತಧಾರೆಯಲ್ಲಿ ಭೂಮಿಕಾಗೆ ಅವಳ ನೆಚ್ಚಿನ ಪತಿ ಗೌತಮ್ ಒಂದು ಸರ್‌ಪ್ರೈಸ್ ಕೊಟ್ಟಿದ್ದಾರೆ. ಭೂಮಿ ಬರೆದ ಡೈರಿಯಲ್ಲಿರುವ ಭಾವುಕ ಬರಹ, ಕವನಗಳನ್ನೆಲ್ಲ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾನೆ. ಆದರೆ ಇದರಲ್ಲಿ ಜೈದೇವ್ ಹಾಗೂ ಶಕುಂತಲಾ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಬರೆದಿದ್ದಾಳೆ ಭೂಮಿ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannnada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare Serial) ಶಕುಂತಲಾ ಭೂಮಿ ವಿರುದ್ಧ ಕೆಂಡವಾಗಿದ್ದಾಳೆ. ಇದೀಗ ಶಕುಂತಲಾ ನಡೆ ಶಕುನಿ ಮಾಮಾಗೂ ಅನುಮಾನ ಬರುವಂತೆ ಮೂಡಿದೆ. ಅಮೃತಧಾರೆಯಲ್ಲಿ ಭೂಮಿಕಾಗೆ ಅವಳ ನೆಚ್ಚಿನ ಪತಿ ಗೌತಮ್ (Gowtham) ಒಂದು ಸರ್‌ಪ್ರೈಸ್ ಕೊಟ್ಟಿದ್ದಾರೆ. ಭೂಮಿ ಬರೆದ ಡೈರಿಯಲ್ಲಿರುವ ಭಾವುಕ ಬರಹ, ಕವನಗಳನ್ನೆಲ್ಲ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾನೆ. ಆದರೆ ಇದರಲ್ಲಿ ಜೈದೇವ್ ಹಾಗೂ ಶಕುಂತಲಾ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಬರೆದಿದ್ದಾಳೆ ಭೂಮಿ.
ಶಕುನಿ ಮಾಮನ ಮುಂದೆ ಕೋಪ
ಈ ಪುಸ್ತಕವನ್ನು ಓದಿದ ಶಕುಂತಲಾ, ಶಕುನಿ ಮಾಮನ ಮುಂದೆ ಕೋಪ ವ್ಯಕ್ತಪಡಿಸಿದ್ದಾಳೆ. ನನ್ನ ಜೈದೇವ್ ಬಗ್ಗೆ ಇಷ್ಟು ಕೆಟ್ಟದ್ದಾಗಿ ಬರೆದಿದ್ದಾಳೆ ಭೂಮಿ. ಅವಳಿಗೆ ಧೈರ್ಯ ಎಷ್ಟಿರಬೇಡ? ಎಂದಿದ್ದಾಳೆ. ಶಕುಂತಲಾ ಪುಸ್ತಕವನ್ನು ಬಿಸಾಕಿರೋದನ್ನ ಗಮನಿಸಿದ ಲಕ್ಷ್ಮೀಕಾಂತ್, ನಿಜವಾಗಲೂ ನೀನು ಬದಲಾಗಿದ್ದೀಯಾ ಎಂದು ಪ್ರಶ್ನೆ ಇಟ್ಟಿದ್ದಾನೆ. ಶಕುಂತಲಾ ಕೂಡ ಜೈದೇವ್ ಮುಂದೆ ಈ ಬಗ್ಗೆ ಪ್ರಸ್ತಾಪ ಇಟ್ಟಿದ್ದಾಳೆ. ಜೈದೇವ್ ಹಾಗೂ ಶಕುಂತಲಾ ಸೇರಿ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: S Janaki: ಗಾನಕೋಗಿಲೆ ಎಸ್.ಜಾನಕಿ ಅಸ್ತಂಗತ; ಪ್ರಧಾನಿ ಮೋದಿ ಸಂತಾಪ
ಕಥಾನಾಯಕಿ ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಆದರೆ, ಈ ಶಾಕಿಂಗ್ ವರದಿಯ ಹಿಂದೆ ಗೌತಮ್ ಮಲತಾಯಿ ಶಾಕುಂತಲಾದೇವಿಯ ಕುತಂತ್ರ ಇರಬಹುದೇ ಎಂಬ ಬಲವಾದ ಅನುಮಾನ ಈಗ ವೀಕ್ಷಕರಲ್ಲಿ ಮೂಡಿದೆ.
ಜೈದೇವ್ ಈಗಾಗಲೇ ದಿಯಾಳನ್ನ ಕೊಲೆ ಮಾಡಿದ್ದಾನೆ. ಆದರೆ ಈ ಬಗ್ಗೆ ದಿಯಾಳ ಬಾಯ್‌ಫ್ರೆಂಡ್‌ಗೆ ಅನುಮಾನ ಮೂಡಿದೆ. ನೇರವಾಗಿ ಜೈದೇವ್ ಬಳಿ ಬಂದು ದಿಯಾಳ ಬಗ್ಗೆ ಪ್ರಶ್ನೆ ಇಟ್ಟಿದ್ದಾನೆ. ದಿಯಾಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ತಾನು ಸುಮ್ಮನೆ ಇರೋಲ್ಲ ಅಂತ ವಾರ್ನ್ ಕೂಡ ಮಾಡಿದ್ದಾನೆ. ಅಷ್ಟೇ ಅಲ್ಲ ಸಣ್ಣ ಸುಳಿವೂ ಸಿಕ್ಕರೂ ಪೊಲೀಸ್ ಮೊರೆ ಹೋಗುತ್ತೇನೆ ಎಂದಿದ್ದಾನೆ. ಇದು ಜೈದೇವ್‌ಗೆ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ. ಸಣ್ಣ ಸುಳಿವೂ ಸಿಗದಂತೆ ಇರಲು ಎಚ್ಚರ ವಹಿಸುತ್ತಿದ್ದಾನೆ.
ಇನ್ನೊಂದು ಕಡೆ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್. ಈ ಟ್ವಿಸ್ಟ್ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಭೂಮಿಕಾಗೆ ಇಂತಹ ಕಾಯಿಲೆ ಬರಬಾರದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗೌತಮ್ ಮಲತಾಯಿ ಶಾಕುಂತಲಾದೇವಿ ಭೂಮಿಕಾಗೆ ನಿಜವಾಗಿಯೂ ಕ್ಯಾನ್ಸರ್ ಇಲ್ಲದಿದ್ದರೂ, ವೈದ್ಯರೊಂದಿಗೆ ಕೈಜೋಡಿಸಿ ಶಾಕುಂತಲಾ ಈ ಸುಳ್ಳು ವರದಿಯನ್ನು ಸೃಷ್ಟಿಸಿರಬಹುದು ಎಂಬ ಬಲವಾದ ಅನುಮಾನ ವೀಕ್ಷಕರಲ್ಲಿದೆ.
ಇದನ್ನೂ ಓದಿ: Amruthadhaare Serial: ದಿಯಾ ಕಾಣೆಯಾಗಿರೋ ವಿಷ್ಯ ಜೈದೇವ್ ನೆಮ್ಮದಿ ಕೆಡಿಸ್ತಿದೆ! ಮುಂದೇನು?
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ