Badshah : ಎರಡನೇ ಮದುವೆಯಾದ ರ‍್ಯಾಪರ್ ಬಾದ್‌ಶಾ; ಯಾರು ಆ ನಟಿ?
Badshah : ರ‍್ಯಾಪರ್-ಗಾಯಕ ಬಾದ್‌ಶಾ ಮತ್ತು ಪಂಜಾಬಿ ನಟಿ ಇಶಾ ರಿಖಿ ಅವರ ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿವೆ. ರ‍್ಯಾಪರ್ ಬಾದ್‌ಶಾ ಎರಡನೇ ಬಾರಿಗೆ ರಹಸ್ಯವಾಗಿ ವಿವಾಹವಾಗಿದ್ದಾರೆ. ಅವರ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆರು ವರ್ಷಗಳ ಹಿಂದೆ, ಬಾದ್‌ಶಾ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದರು. ಇದರ ನಂತರ, ಇಶಾ ರಿಖಿಯೊಂದಿಗಿನ ಅವರ ಸಂಬಂಧದ ಸುದ್ದಿ ಹೊರಬಿತ್ತು, ಮತ್ತು ಈಗ ವಧುವಿನ ತಾಯಿ ಪೂನಮ್ ರಿಖಿ ಅವರ ವಿವಾಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಗಾಯಕ ಬಾದ್‌ಶಾ -
ರ‍್ಯಾಪರ್-ಗಾಯಕ ಬಾದ್‌ಶಾ (badshah) ಮತ್ತು ಪಂಜಾಬಿ ನಟಿ ಇಶಾ ರಿಖಿ (isha rikhi) ಅವರ ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿವೆ. ರ‍್ಯಾಪರ್ ಬಾದ್‌ಶಾ ಎರಡನೇ ಬಾರಿಗೆ ರಹಸ್ಯವಾಗಿ ವಿವಾಹವಾಗಿದ್ದಾರೆ. ಅವರ ವಿವಾಹದ ಫೋಟೋಗಳು (viral wedding) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆರು ವರ್ಷಗಳ ಹಿಂದೆ, ಬಾದ್‌ಶಾ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದರು. ಇದರ ನಂತರ, ಇಶಾ ರಿಖಿಯೊಂದಿಗಿನ ಅವರ ಸಂಬಂಧದ ಸುದ್ದಿ ಹೊರಬಿತ್ತು, ಮತ್ತು ಈಗ ವಧುವಿನ ತಾಯಿ ಪೂನಮ್ ರಿಖಿ ಅವರ ವಿವಾಹದ (Marriage) ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಾಂಪ್ರದಾಯಿಕ ವಿವಾಹ ಆಚರಣೆ
ಬಾದ್‌ಶಾ ಮತ್ತು ಇಶಾ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಾಂಪ್ರದಾಯಿಕ ವಿವಾಹ ಆಚರಣೆಗಳಲ್ಲಿ ಭಾಗವಹಿಸಿದ್ದರು.
ಪೂನಂ ರಿಖಿ ಈ ಪೋಸ್ಟ್ ಜೊತೆಗೆ "ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂಬ ಶೀರ್ಷಿಕೆಯನ್ನು ಬರೆದಿದ್ದು, ಇದು ವಿವಾಹದ ಬಗ್ಗೆ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ತಮ್ಮ ಪೋಸ್ಟ್‌ನಲ್ಲಿ ಇಶಾ ಅವರನ್ನು ತಮ್ಮ ಸಹೋದರಿ ಎಂದು ಉಲ್ಲೇಖಿಸಿರುವ ಪೂಜಾ ಸಿಂಗ್ ಗುಜ್ರಾಲ್, ದಂಪತಿ ಹೊಸ ಪ್ರಯಾಣಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಬಾದ್‌ಶಾ ಮತ್ತು ಇಶಾ ರಿಖಿ ತಮ್ಮ ವಿವಾಹದ ಸುದ್ದಿಯನ್ನು ಇನ್ನೂ ಅಧಿಕೃತವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿಲ್ಲ.
ದಂಪತಿ 2020 ರಲ್ಲಿ ವಿಚ್ಛೇದನ
ಬಾದ್‌ಶಾ ಈ ಹಿಂದೆ ಜಾಸ್ಮಿನ್ ಮಸಿಹ್ ಅವರನ್ನು ವಿವಾಹವಾಗಿದ್ದರು. ದಂಪತಿ 2020 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಅವರಿಗೆ ಜೆಸ್ಸಿಮಿ ಗ್ರೇಸ್ ಮಸಿಹ್ ಸಿಂಗ್ ಎಂಬ ಮಗಳಿದ್ದಾಳೆ, ಆಕೆ ಜನವರಿ 2017 ರಲ್ಲಿ ಜನಿಸಿದಳು. ಬಾಲಿವುಡ್‌ನ ''ಡಿಜೆ ವಾಲೆ ಬಾಬು''. ತಮ್ಮ ಚಿನ್ನದ ಕಂಠದಿಂದ ಹಲವರ ಮನ ಗೆದ್ದ ಬಾದ್‌ಷಾ ಇಲ್ಲಿಯವರೆಗೆ 500ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಆ ಪೈಕಿ ''ಪ್ರಾಪರ್ ಪಟೋಲಾ''.. ''ಅಭಿ ತೋ ಪಾರ್ಟಿ ಶುರು ಹುಯಿ ಹೈ'' ಮುಂತಾದವು.
ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮದೇ ''ಟಟೀರಿ'' ಹಾಡು ವಿವಾದಕ್ಕೀಡಾಗಿ ಸದ್ದು ಮಾಡುತ್ತಿರುವ ಸಮಯದಲ್ಲಿ ಸಪ್ತಪದಿ ತುಳಿದಿದ್ದಾರೆ.
ಇದನ್ನೂ ಓದಿ: Dhurandhar 2 : 'ಧುರಂಧರ್ 2' ವಿರುದ್ಧ ಸಿಖ್ ಸಂಘಟನೆಯಿಂದ FIR; ಮಾಧವನ್ ಕೊಟ್ಟ ಸ್ಪಷ್ಟನೆ ಇದು
ಟಟೀರಿ ಆಕ್ಷೇಪಾರ್ಹ ಸಾಹಿತ್ಯವಿದೆ ಎಂದು ಆರೋಪಿಸಿ ಹರಿಯಾಣ ರಾಜ್ಯ ಮಹಿಳಾ ಆಯೋಗ ಔಪಚಾರಿಕ ಸಮನ್ಸ್ ಜಾರಿ ಮಾಡಿದ ನಂತರ ರ‍್ಯಾಪರ್-ಗಾಯಕ ಬಾದ್‌ಶಾ ಹೊಸ ವಿವಾದವನ್ನು ಎದುರಿಸಿದ್ದರು. ಕೆಲವು ಪದಗಳು ಅಸಭ್ಯತೆಯಿಂದ ಕೂಡಿವೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕೆಡಿಸುವಂತಿವೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.