BBK 12: ದೊಡ್ಮನೆ ಮನೆಯಿಂದ ಹೊರಬಿದ್ದ ಧ್ರುವಂತ್ - ರಕ್ಷಿತಾ ಶೆಟ್ಟಿ; ಈ ವಾರ ಬಿಗ್ ಟ್ವಿಸ್ಟ್ ಕೊಡ್ತಿದ್ದಾರೆ ಬಿಗ್ ಬಾಸ್! ಏನದು?
gg Boss Kannada 12 Elimination: ದೊಡ್ಮನೆಯಲ್ಲಿ ವೀಕ್ಷಕರಿಗೆ ಮತ್ತು ಸ್ಪರ್ಧಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಈ ವಾರ ವೋಟಿಂಗ್ ಲೈನ್ಸ್ ತೆರೆಯದಿದ್ದರೂ, ಸೂಪರ್ ಸಂಡೇಯಲ್ಲಿ ಸುದೀಪ್ ಅವರು ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಡಬಲ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಹಾಕಿದ್ದಾರೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು. ಯಾಕೆ ಗೊತ್ತಾ? ಮುಂದೆ ಓದಿ.
-
ಬಿಗ್ ಬಾಸ್ ಮನೆಯಲ್ಲಿ ಬಿಗ್ ಶಾಕ್ ಎದುರಾಗಿದೆ. ಅದು ಎಲಿಮಿನೇಷನ್ ವಿಚಾರಕ್ಕೆ. ಅಸಲಿಗೆ, ಈ ವಾರ ಮನೆಯಿಂದ ಹೊರಗೆ ಹೋಗಲು ರಜತ್, ಗಿಲ್ಲಿ ನಟ, ಧ್ರುವಂತ್, ರಕ್ಷಿತಾ ಶೆಟ್ಟಿ, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ನಾಮಿನೇಟ್ ಆಗಿದ್ದರು. ಇವರಲ್ಲಿ ಯಾರು ಮನೆಗೆ ಹೋಗ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಇದೆ. ಈ ಮಧ್ಯೆ ರಿಲೀಸ್ ಆಗಿರುವ ಹೊಸ ಪ್ರೋಮೋ ಅಚ್ಚರಿಯನ್ನು ಉಂಟು ಮಾಡಿದೆ.
ಸೂಪರ್ ಸಂಡೇಯಲ್ಲಿ ಸಖತ್ ಟ್ವಿಸ್ಟ್
ಸೂಪರ್ ಸಂಡೇ ವಿತ್ ಬದ್‌ಷಾ ಸುದೀಪ್ ಸಂಚಿಕೆಯಲ್ಲಿ ಇಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ. ಈ ಮೇಲೆ ಹೇಳಿದ ಏಳು ಮಂದಿಯಲ್ಲಿ ಕಡೆಯದಾಗಿ ಮೂವರು ಉಳಿದಿದ್ದಾರೆ. ರಜತ್, ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ. ರಿಲೀಸಾಗಿರುವ ಪ್ರೋಮೋ ಪ್ರಕಾರ, ಸುದೀಪ್ ಅವರು ರಜತ್ ಅವರಿಗೆ ಸೇಫ್ ಎಂದು ಹೇಳಿದ್ದಾರೆ. ಜೊತೆಗೆ ಡಬಲ್ ಎಲಿಮಿನೇಷನ್ ಎಂದು ಹೇಳಿದ್ದಾರೆ. ಹಾಗಾಗಿ, ಕೊನೆದಾಗಿ ಉಳಿದ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಟ್ ಎಂದು ಘೋಷಿಸಲಾಗಿದೆ.
Bigg Boss Kannada 12: ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಅಶ್ವಿನಿ, ಧ್ರುವಂತ್ ದೂರು! ಕ್ಲಾಸ್ ತೆಗೆದುಕೊಂಡ ಕಿಚ್ಚ
ಮನೆಯಿಂದ ಹೊರಗೆ ಹೊರಟ ಧ್ರುವಂತ್ ಮತ್ತು ರಕ್ಷಿತಾ
ಅಸಲಿಗೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುವವರ ಪ್ರೋಮೋಗಳನ್ನು ರಿಲೀಸ್ ಮಾಡುವುದಿಲ್ಲ. ಆದರೆ ಈಗ ರಿಲೀಸಾಗಿರುವ ಪ್ರೋಮೋದಲ್ಲಿ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಎಂದು ಘೋಷಿಸಲಾಗಿದೆ. ಇಬ್ಬರು ಕೂಡ ಮನೆಯ ಸದಸ್ಯರಿಗೆ ಬೈ ಬೈ ಹೇಳಿ ಹೊರಗೆ ಹೋಗಿದ್ದಾರೆ. ರಕ್ಷಿತಾ ಅವರಂತೂ ತುಂಬಾ ಭಾವುಕರಾಗಿದ್ದರು. ಅಲ್ಲದೆ, ಅಶ್ವಿನಿ ಗೌಡ ಕೂಡ ಕಣ್ಣೀರಿಟ್ಟಿದ್ದಾರೆ. ಹೀಗೆ ಇಬ್ಬರು ಮುಖ್ಯದ್ವಾರದಿಂದ ಹೊರಗೆ ಹೋಗುವುದನ್ನೂ ತೋರಿಸಿದ್ದಾರೆ. ಈ ರೀತಿ ಯಾವತ್ತೂ ಕೂಡ ಎಲಿಮಿನೇಷನ್ ಆಗುವುದನ್ನು ಬಿಗ್ ಬಾಸ್ನಲ್ಲಿ ಮೊದಲೇ ತೋರಿಸಿಲ್ಲ.
Bigg Boss Kannada 12: ದೇವರ ಎದುರು ಗಿಲ್ಲಿಯನ್ನು ನಿಲ್ಲಿಸಿಕೊಂಡು, ಕೈ ಮುಗಿದು ಧ್ರುವಂತ್ ಮನವಿ ಮಾಡಿದ್ದೇನು?
ಎಲಿಮಿನೇಟ್ ಆಗಿಯೇ ಇಲ್ಲ!
ಹೌದು, ಹೀಗೆ ಪ್ರೋಮೋ ಮೂಲಕ ಇಬ್ಬರ ಎಲಿಮಿನೇಷನ್ ಅನ್ನು ಬಿಗ್ ಬಾಸ್ ತೋರಿಸಿದ್ದಾರೆ ಎಂದರೆ, ಪಕ್ಕಾ ಇಲ್ಲಿ ಯಾರನ್ನು ಎಲಿಮಿನೇಟ್ ಮಾಡಿಲ್ಲ ಎಂಬುದು ಗೊತ್ತಾಗುತ್ತಿದೆ. ಇನ್ನೊಂದು ಅಚ್ಚರಿ ವಿಚಾರ ಎಂದರೆ, ಈ ವಾರ ವೋಟಿಂಗ್ ಲೈನ್ ತೆರೆದೇ ಇರಲಿಲ್ಲ. ಹಾಗಾಗಿ, ಯಾರನ್ನೂ ಕೂಡ ಎಲಿಮಿನೇಷನ್ ಮಾಡುವ ಪ್ರಮೇಯವೇ ಬರುವುದಿಲ್ಲ! ಹೌದು, ನಾಮಿನೇಷನ್ ಪ್ರಕ್ರಿಯೆ ಮುಗಿದರೂ ವೋಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ. ಹೀಗಾಗಿ ಈ ವಾರ ಎಲಿಮಿನೇಷನ್ ಇರುತ್ತೋ, ಇಲ್ವೋ ಎಂಬ ಅನುಮಾನ ವೀಕ್ಷಕರಲ್ಲಿ ಕಾಡುತ್ತಿತ್ತು. ಈಗ ವೋಟಿಂಗ್ ಲೈನ್ಸ್ ಓಪನ್ ಮಾಡದೆಯೇ ಇಬ್ಬರನ್ನು ಎಲಿಮಿನೇಟ್ ಮಾಡಿದ್ದೇವೆ ಎಂದು ತೋರಿಸುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ 12 ಹೊಸ ಪ್ರೋಮೋ
ಸಿಕ್ರೇಟ್ ರೂಮ್‌ಗೆ ಹೋಗ್ತಾರಾ ಸ್ಪರ್ಧಿಗಳು!
ಧ್ರುವಂತ್ ಮತ್ತು ರಕ್ಷಿತಾ ಎಲಿಮಿನೇಟ್ ಆಗಿಲ್ಲ. ಬದಲಿಗೆ ಅವರನ್ನು ಸೀದಾ ಸೀಕ್ರೆಟ್ ರೂಮ್‌ಗೆ ಕಳಿಸುವ ಸಾಧ್ಯತೆ ಜಾಸ್ತಿ ಇದೆ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿಯು ಇಂದಿನ (ಡಿ.14) ಸಂಚಿಕೆಯಲ್ಲಿ ಗೊತ್ತಾಗಲಿದೆ.