ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಂದೆಯ ಚಿತೆ ಮುಂದೆ ಭೀಷ್ಮ ಪ್ರತಿಜ್ಞೆ ಮಾಡಿದ ಭಾರ್ಗವಿ; ಲಾಯರ್ ವೃತ್ತಿಗೆ ವಿದಾಯ ಹೇಳಿದ್ದೇಕೆ?

Bhargavi LLB: ಕಲರ್ಸ್‌ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ಟ್ವಿಸ್ಟ್‌ ಮೂಲಕ ವೀಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ತನ್ನ ತಂದೆ ರವೀಂದ್ರ ಭಟ್ಕಳರನ್ನು ಮರಳಿ ಕೋರ್ಟ್ ಹಾಲಿಗೆ ಕರೆತಂದು ನ್ಯಾಯದ ಪರ ವಾದಿಸುವಂತೆ ಮಾಡಿದ್ದ ಭಾರ್ಗವಿ, ಆ ಗೆಲುವನ್ನು ಸಂಭ್ರಮಿಸುವ ಮೊದಲೇ ತಂದೆಯನ್ನು ಕಳೆದುಕೊಂಡಿದ್ದಾಳೆ. ತನ್ನ ತಂದೆಯ ಸಾವಿನ ಹಿಂದಿರುವ ರಹಸ್ಯವನ್ನು ಹೇಗೆ ಬೇಧಿಸುತ್ತಾಳೆ ಎಂಬುದು ಈಗಿನ ಕುತೂಹಲ.

ʻಭಾರ್ಗವಿ LLBʼ ಸೀರಿಯಲ್ ಮಹಾ ತಿರುವು: ತಂದೆಯ ಚಿತೆ ಮುಂದೆ ಮಹಾ ಶಪಥ!

-

Avinash GR
Avinash GR Feb 11, 2026 4:11 PM

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿರುವ 'ಭಾರ್ಗವಿ LLB' ಧಾರಾವಾಹಿ ಈಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ವಿಶಿಷ್ಟ ಕಥಾಹಂದರದ ಮೂಲಕ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿರುವ ಈ ಸೀರಿಯಲ್‌, ಈಗ ಕಥೆಯ ದಿಕ್ಕನ್ನೇ ಬದಲಿಸುವ ತಿರುವಿನಲ್ಲಿದೆ. ಲಾಯರ್‌ ಆಗಿ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಭಾರ್ಗವಿಯ ಬದುಕಿನಲ್ಲಿ ವಿಧಿ ಭೀಕರ ‌ಟ್ವಿಸ್ಟ್‌ ನೀಡಿದೆ.

ತಂದೆಯನ್ನು ಕೋರ್ಟ್‌ನಲ್ಲಿ ನೋಡಬಯಸಿದ್ದ ಭಾರ್ಗವಿ

ಪ್ರಭಾವಿ ವಕೀಲ ಜೆಪಿ ಪಾಟೀಲ್‌ನಿಂದ ವಕೀಲಿಕೆ ತ್ಯಜಿಸಿದ್ದ ತನ್ನ ತಂದೆ ರವೀಂದ್ರ ಭಟ್ಕಳ್‌ರನ್ನು ಪುನಃ ಕೋರ್ಟ್‌ಗೆ ಕರೆತರುವ ದಿಟ್ಟ ಗುರಿ ಹೊಂದಿದ್ದಳು ಭಾರ್ಗವಿ. ಅಂದುಕೊಂಡಂತೆ ಆ ಕನಸನ್ನೂ ಸಹ ಭಾರ್ಗವಿ ಸಾಕಾರ ಮಾಡಿಕೊಂಡಿದ್ದಳು. ಆದರೆ, ಇದೀಗ ಆ ದೊಡ್ಡ ಗೆಲುವನ್ನು ಸಂಭ್ರಮಿಸೋಕೆ ಅವಳ ಜೊತೆಗೆ ತಂದೆಯೇ ಇಲ್ಲ! ಇದು ಅವಳ ಸಾಧನೆಗೆ ಸಂದ ಸೋಲಾ ಅಥವಾ ವಿಧಿಯಾಟವೇ?

Bhargavi LL.B: ಮಹಾ ತಿರುವಿನಲ್ಲಿ ಭಾರ್ಗವಿ LL.B! ಜೆಪಿ ವಿರುದ್ಧ ನಿಂತೇ ಬಿಟ್ಟ ಅರ್ಜುನ್‌

ಚಿತೆಯ ಮುಂದೆಯೇ ಶಪಥ

ಇದುವರೆಗೆ ಕಥೆಯಲ್ಲಿ ಧೈರ್ಯದ ಸಂಕೇತವಾಗಿದ್ದ ಭಾರ್ಗವಿಗೆ ಈಗ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ತಂದೆ ರವೀಂದ್ರ ಭಟ್ಕಳ್ ಅಕಾಲಿಕ ಸಾವು ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈ ಸಾವು ಕೇವಲ ಅಪಘಾತವೋ ಅಥವಾ ಭಾರ್ಗವಿಯ ವೈರಿಗಳು ಮಾಡಿದ ಸಂಚೋ ಎಂಬ ಸಂಶಯ ಈಗ ವೀಕ್ಷಕರಲ್ಲಿ ಮೂಡಿದೆ. ಅತ್ತ ಪತಿಯ ಸಾವಿನಿಂದ ಕಂಗಾಲಾಗಿರುವ ತಾಯಿ, ಅಪ್ಪನ ಸಾವಿಗೆ ಕಾರಣವಾದ ಈ ಲಾಯರ್‌ ಕೆಲಸ ಬಿಡುವಂತೆ ಮಗಳು ಭಾರ್ಗವಿಗೆ ತಾಕೀತು ಮಾಡಿದ್ದಾರೆ. ತಾಯಿಯ ನೋವಿಗೆ ಸ್ಪಂದಿಸಿದ ಭಾರ್ಗವಿ, ಅಪ್ಪನ ಚಿತೆಯ ಮುಂದೆಯೇ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. ಅಮ್ಮನೇ ಹೇಳುವವರೆಗೂ ಕಪ್ಪು ಕೋಟ್‌ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದಾಳೆ. ಈ ಮೂಲಕ ತನ್ನ ವೃತ್ತಿಜೀವನಕ್ಕೆ ಅಂತ್ಯ ಹಾಡಲು ಭಾರ್ಗವಿ ಮುಂದಾಗಿದ್ದಾಳೆ.

Bhargavi LLB: ಭಾರ್ಗವಿ LL. B ಯಲ್ಲಿ ಹೊಸ ಟ್ವಿಸ್ಟ್! ಧಾರಾವಾಹಿಗೆ ಉಗ್ರಂ ಮಂಜು ಎಂಟ್ರಿ

ಇದು ಹೊಸ ಅಧ್ಯಾಯದ ಆರಂಭವೇ?

ಲಾಯರ್‌ ಕೆಲಸ ಬಿಟ್ಟು ಮುಂದೆ ಏನ್‌ ಮಾಡ್ತಾಳೆ ಭಾರ್ಗವಿ? ವಕೀಲೆ ಪಟ್ಟ ಕಳಚಿಟ್ಟ ಭಾರ್ಗವಿ ಈಗ ಸಾಮಾನ್ಯ ಯುವತಿಯಾಗಿ ಹೇಗೆ ಬದುಕುತ್ತಾಳೆ? ರವೀಂದ್ರ ಭಟ್ಕಳರ ಸಾವು ಪೂರ್ವನಿಯೋಜಿತ ಕೊಲೆಯಾಗಿದ್ದರೆ, ಅದರ ಹಿಂದಿರುವ ಅಸಲಿ ಮುಖವಾಡಗಳು ಯಾರು? ಕೋರ್ಟ್ ಮೆಟ್ಟಿಲೇರದೇ ಭಾರ್ಗವಿ ತನ್ನ ತಂದೆಯ ಸಾವಿಗೆ ನ್ಯಾಯ ಒದಗಿಸಲು ಸಾಧ್ಯವೇ? ಈ ಮಹಾ ತಿರುವುಗಳನ್ನು ನೋಡಿದರೆ, ಕಥೆ ಇಲ್ಲಿಗೆ ಮುಗಿಯಿತೇ ಅಥವಾ ಇದು ಹೊಸ ಅಧ್ಯಾಯದ ಆರಂಭವೇ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಎಳೆ ಎಳೆಯಾಗಿ ಉತ್ತರ ಸಿಗಲಿದೆ. ಭಾರ್ಗವಿಯ ಈ ಹೊಸ ಅವತಾರ ಮತ್ತು ಕಥೆಯ ಹೊರಳುವಿಕೆ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಾಮಾಜಿಕ ಕಳಕಳಿ ಮತ್ತು ಕೌಟುಂಬಿಕ ಸೆಂಟಿಮೆಂಟ್ ಮೂಲಕ ವೀಕ್ಷಕರ ಮನಗೆದ್ದಿರುವ 'ಭಾರ್ಗವಿ LLB', ಸೋಮವಾರದಿಂದ ಶುಕ್ರವಾರದ ವರೆಗೆ ಬದಲಾದ ಸಮಯದಲ್ಲಿ ರಾತ್ರಿ 9.30ಕ್ಕೆ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.