ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ಡಬಲ್ ಧಮಾಕ; ಏನದು?
Ram Charan Updates: ರಾಮ್ ಚರಣ್ ಅವರು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿನ ತಂದೆಯಾಗಿರುವ ಸಂತಸದಲ್ಲಿದ್ದಾರೆ. ಇದರ ಬೆನ್ನಲ್ಲೇ ಮಾರ್ಚ್ 27ರ ಅವರ ಹುಟ್ಟುಹಬ್ಬ ಮತ್ತು ಶ್ರೀರಾಮ ನವಮಿಯ ವಿಶೇಷ ದಿನದಂದು, ಬುಚ್ಚಿ ಬಾಬು ಸನಾ ನಿರ್ದೇಶನದ 'ಪೆದ್ದಿ' ಚಿತ್ರದ ಟೀಸರ್ ಬಿಡುಗಡೆಯಾಗುವ ನಿರೀಕ್ಷೆ ಇದೆ.
-
ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಕುಟುಂಬದಲ್ಲಿ ಈಗ ಸಂತಸ ಮನೆ ಮಾಡಿದೆ. ಯಾಕೆಂದರೆ, ಅವರೀಗ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಒಟ್ಟು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ತಂದೆಯಾಗಿರುವ ರಾಮ್ ಚರಣ್, ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಬರೀ ಕುಟುಂಬದ ವಿಚಾರದಲ್ಲಿ ಮಾತ್ರವಲ್ಲ, ಫ್ಯಾಮಿಲಿ ವಿಚಾರದಲ್ಲೂ ಕೂಡ ರಾಮ್ ಚರಣ್, ಫ್ಯಾನ್ಸ್‌ಗೆ ಟ್ರೀಟ್ ನೀಡಲು ರೆಡಿಯಾಗಿದ್ದಾರೆ.
ಮಾರ್ಚ್ 27ಕ್ಕೆ ಹುಟ್ಟುಹಬ್ಬ
ರಾಮ್ ಚರಣ್ ಅವರಿಗೆ ಮಾರ್ಚ್ 27ರಂದು ಹುಟ್ಟುಹಬ್ಬ. ಹಾಗಾಗಿ, ಅಂದು ಏನಾದರೂ ವಿಶೇಷವಾದ ಗಿಫ್ಟ್ ನೀಡಲು ರಾಮ್ ಚರಣ್ ರೆಡಿಯಾಗಿದ್ದಾರೆ. ಅಲ್ಲದೆ, ಅದೇ ದಿನ ಶ್ರಿರಾಮ ನವಮಿ ಕೂಡ ಇದೆ. ಆದ್ದರಿಂದ ಅಂದು ಡಬಲ್ ಧಮಾಕಾ ನೀಡುವುದಕ್ಕೆ ರಾಮ್ ಚರಣ್ ಸಜ್ಜಾಗಿದ್ದಾರೆ. ಏನದು ಡಬಲ್ ಧಮಾಕಾ? ಮುಂದಿನ ಎರಡು ಸಿನಿಮಾಗಳ ಕುರಿತ ಅಪ್ಡೇಟ್!
ಪೆದ್ದಿ ಟೀಸರ್ ರಿಲೀಸ್?
ಮಾರ್ಚ್ 27ರ ಚರಣ್ ಹುಟ್ಟುಹಬ್ಬದ ಪ್ರಯುಕ್ತ ಮುಂಬರುವ ಪೆದ್ದಿ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಜಗಪತಿ ಬಾಬು, ದಿವ್ಯೆಂದು ಶರ್ಮಾ ಮುಂತಾದವರು ನಟಿಸಿದ್ದು, ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
Ram Charan: ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್ ಚರಣ್; ವಿಡಿಯೋ ಕಂಡು ನೆಟ್ಟಿಗರು ಛೀಮಾರಿ
ಹೊಸ ಸಿನಿಮಾ ಘೋಷಣೆ
ಪೆದ್ದಿ ಸಿನಿಮಾದ ಟೀಸರ್ ರಿಲೀಸ್ ಜೊತೆಗೆ ಅದೇ ದಿನ ರಾಮ್ ಚರಣ್ ಅವರ ಹೊಸ ಸಿನಿಮಾ ಕೂಡ ಘೋಷಣೆ ಆಗುವ ಸಾಧ್ಯತೆ ಇದೆಯಂತೆ. ಹೌದು, . ಬುಚ್ಚಿ ಬಾಬು ಸನಾ ಬಳಿಕ ಸುಕುಮಾರ್ ಜೊತೆಗೆ ರಾಮ್ ಚರಣ್ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್‌ಗೆ ಪುಷ್ಪದಂತಹ ಹಿಟ್ ಸಿನಿಮಾವನ್ನು ಕೊಟ್ಟಿರುವ ಸುಕುಮಾರ್ ಈಗ ರಾಮ್ ಚರಣ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸುಕುಮಾರ್ ಮತ್ತು ರಾಮ್ ಚರಣ್ ಕಾಂಬಿನೇಷನ್‌ನಲ್ಲಿ ಬಂದಿದ್ದ ರಂಗಸ್ಥಲಂ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆ ಹಿನ್ನೆಲೆಯಲ್ಲಿ ಈ ಹೊಸ ಸಿನಿಮಾದ ನಿರೀಕ್ಷೆ ಜೋರಾಗಿದೆ. ಒಟ್ಟಿನಲ್ಲಿ ರಾಮ್ ಚರಣ್ ಫ್ಯಾನ್ಸ್ ಅಂತೂ ಸಖತ್ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.