ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಈ ಸ್ಪರ್ಧಿಗೆ ನೇರವಾಗಿ ಫಿನಾಲೆ ಟಿಕೆಟ್? ಇಂದು ಮತ್ತೊಬ್ಬರೂ ಔಟ್!

Bigg Boss: ಬಿಗ್‌ ಬಾಸ್‌ ಸೀಸನ್‌ 12ರ ಅತ್ಯಂತ ಕುತೂಹಲ ಘಟ್ಟ ತಲುಪಿದೆ. ಈಗಾಗಲೇ ಸೂರಜ್‌ ಅವರು ಮನೆಯಿಂದ ಔಟ್‌ ಆಗಿದ್ದಾರೆ. ಈ ವಾರ ಡಬಲ್‌ ಎಲಿಮಿನೇಶನ್‌ ಇರುವುದರಿಂದ ಇನ್ನೊಬ್ಬರು ಇಂದು ಎಲಿಮಿನೇಟ್‌ ಆಗುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗ್ತಿದೆ. ಇದೇ ವೇಳೆ ಓರ್ವ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಟಿಕೆಟ್ಸಿ ಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ಅದು ಯಾರಿರಬಹುದು?

ಈ ಸ್ಪರ್ಧಿಗೆ ನೇರವಾಗಿ ಫಿನಾಲೆ ಟಿಕೆಟ್? ಇಂದು ಮತ್ತೊಬ್ಬರೂ ಔಟ್!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 28, 2025 10:09 AM

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಅತ್ಯಂತ ಕುತೂಹಲ ಘಟ್ಟ ತಲುಪಿದೆ. ಈಗಾಗಲೇ ಸೂರಜ್‌ (Suraj Singh) ಅವರು ಮನೆಯಿಂದ ಔಟ್‌ (Out) ಆಗಿದ್ದಾರೆ. ಈ ವಾರ ಡಬಲ್‌ ಎಲಿಮಿನೇಶನ್‌ (Double elimination) ಇರುವುದರಿಂದ ಇನ್ನೊಬ್ಬರು ಇಂದು ಎಲಿಮಿನೇಟ್‌ ಆಗುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗ್ತಿದೆ. ಇದೇ ವೇಳೆ ಓರ್ವ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಟಿಕೆಟ್ (Finale Ticket) ಸಿಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ಅದು ಯಾರಿರಬಹುದು?

ನೇರವಾಗಿ ಫಿನಾಲೆಗೆ ಟಿಕೆಟ್?

ಸ್ಪಂದನಾ ಸೋಮಣ್ಣ ಅವರು ಇಂದು ಎಲಿಮಿನೇಟ್‌ ಆಗ್ತಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್‌ ಅವರು ಇಲ್ಲದ ಕಾರಣ ಈ ವಾರ ನಿರ್ದೇಶಕ ಪ್ರೇಮ್‌, ನಟ ರೀಷ್ಮಾ ಹಾಗೂ ಸುಷ್ಮಾ, ತಾಂಡವ್‌ ಅತಿಥಿಗಳಾಗಿ ಬಂದಿದ್ದರು. ಬಿಗ್‌ ಬಾಸ್‌ ಕೊಟ್ಟ ಕೆಲವು ಟಾಸ್ಕ್‌ಗಳನ್ನು ನಿಭಾಯಿಸಿದ್ದಾರೆ. ಇದೀಗ ಮತ್ತೊಂದು ಸುದ್ದಿ ಸಖತ್‌ ವೈರಲ್‌ ಆಗ್ತಿದೆ. ಓರ್ವ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಟಿಕೆಟ್ ಸಿಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: Bigg Boss Kannada 12: ಈ ವೀಕೆಂಡ್‌ಗೆ ಕಿಚ್ಚ ಸುದೀಪ್‌ ಬದಲಿಗೆ ಯಾರು ಬರ್ತಾ ಇದ್ದಾರೆ ಗೊತ್ತಾ?

ಫಿನಾಲೆ ಟಿಕೆಟ್ ಪಡೆದುಕೊಳ್ಳುವ ಸ್ಪರ್ಧಿ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಈ ವಿಷಯ ಕೇಳುತ್ತಿದ್ದಂತೆ ಬಿಗ್‌ಬಾಸ್ ವೀಕ್ಷಕರು ಗಿಲ್ಲಿ ನಟ ಅವರೇ ಫಿನಾಲೆ ಸ್ಪರ್ಧಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಹಾಗೆಯೇ ಗಿಲ್ಲಿಯೇ ಈ ಸೀಸನ್ ವಿನ್ನರ್ ಎಂದು ಸಂಭ್ರಮಿಸುತ್ತಿದ್ದಾರೆ.

ಅನುಪಮಾ ಎಂಟ್ರಿ

ಇನ್ನು ಸೂರಜ್ ಎಲಿಮಿನೇಟ್ ಆಗಿರುವ ವಿಷಯ ತಿಳಿಯುತ್ತಿದ್ದಂತೆ ರಾಶಿಕಾ ಮತ್ತು ರಕ್ಷಿತಾ ಕಣ್ಣೀರು ಹಾಕಿದ್ದಾರೆ. ಇಂದು ನಿರೂಪಕಿ, ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಅನುಪಮಾ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಅಶ್ವಿನಿ ಗೌಡ ಅವರು ರಘು ಬಗ್ಗೆ ಹೊಗಳಿ ಸಖತ್‌ ಮಜಾ ಮಾಡಿದ್ದಾರೆ.

ಅನುಪಮಾ ಅವರು ಎಂಟ್ರಿ ಕೊಡುತ್ತಲೇ ಒಬ್ಬೊಬ್ಬರನ್ನೇ ಪರಿಚಯ ಮಾಡಿಕೊಡಿ ಎಂದಿದ್ದಾರೆ. ಈ ವೇಳೆ ಅಶ್ವಿನಿ ಗೌಡ ಅವರು 14 ವಾರದಲ್ಲಿ ಅವತ್ತು ರಘು ಅವರನ್ನು ಕಂಡೆ. ಇವತ್ತು ಮಗುನ ನೋಡ್ತಾ ಇದ್ದೀನಿ. ಪ್ರೀತಿಯಿಂದ ಈ ಮನೆಯಲ್ಲಿ ರಘು ಅಣ್ಣ ಅಂತಾರೆ, ನಂಗೂ ರಘು ಅಣ್ಣ ಅಂತ ಕರಿಬೇಕು ಅನ್ಸತ್ತೆ. ನನ್ನನ್ನು ಅವರು ಅರ್ಥ ಮಾಡಿಕೊಂಡರು. ನಾನು ಅವರನ್ನು ಅರ್ಥ ಮಾಡಿಕೊಂಡೆ ಎಂದಿದ್ದಾರೆ. ರಘು ಕೂಡ ಅಶ್ವಿನಿ ಅವರು ತುಂಬಾ ಇಷ್ಟ ಎಂದಿದ್ದಾರೆ. ಇನ್ನು ಇವರಿಬ್ಬರ ಮಾತುಗಳನ್ನು ಕೇಳಿ, ಸ್ವಯಂವರ ರೀತಿ ಫೀಲ್‌ ಆಗ್ತಿದೆ ಅಂತ ಗಿಲ್ಲಿ ಹೇಳಿದ್ದಾರೆ.

ಗಿಲ್ಲಿ ಕ್ಯಾಪ್ಟನ್‌

ಈ ವಾರ ಗಿಲ್ಲಿ ನಟ ಅವರಿಗೆ ತುಂಬಾನೇ ಹೈಪ್ ಸಿಕ್ಕಿತು. ಮನೆಯಿಂದ ಬಂದ ಸ್ಪರ್ಧಿಗಳ ಕುಟುಂಬದವರು ಗಿಲ್ಲಿಯನ್ನು ಮೆಚ್ಚಿಕೊಂಡರು. ಹೀಗಾಗಿ, ಅವರಿಗೆ ಕ್ಯಾಪ್ಟನ್ ಆಗಬೇಕು ಎಂದು ಸಾಕಷ್ಟು ವೋಟ್​​ಗಳು ಬಿದ್ದವು. ಬಿಗ್ ಬಾಸ್​​ಗೆ ಟಾಸ್ಕ್ ಕೊಡೋಕೆ ರಘು ಹಾಗೂ ಸೂರಜ್ ಆಡಿದ ಮಾತು ಕಾರಣವೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: Bigg Boss Kannada 12: ರಘು ಅಣ್ಣ ಅಂತ ಕರೆಯಬೇಕು ಅನ್ಸತ್ತೆ ಆದ್ರೆ....; ಅಶ್ವಿನಿ ಮಾತಿಗೆ ಸ್ವಯಂವರ ರೀತಿ ಫೀಲ್‌ ಆಯ್ತು ಎಂದ ಗಿಲ್ಲಿ ನಟ

ಈ ಮೊದಲು ಮಾತನಾಡಿದ ರಘು, ‘ಗಿಲ್ಲಿ ಇವತ್ತು ಮಲಗೋದಿಲ್ಲ. ಈಗಾಗಲೇ ನಾಲ್ಕು ವೋಟ್ ಸಿಕ್ಕಿದೆ. ಅವನು ಗೇಮ್ ಆಡಿಯಂತೂ ಕ್ಯಾಪ್ಟ್ ಆಗಲ್ಲ, ಹೀಗಾದರೂ ಮಾಡೋಣ ಅಂತ’ ಎಂದು ರಘು ಹೇಳಿದ್ದರು. ‘ಬಿಗ್ ಬಾಸ್​ ಪ್ಲ್ಯಾನ್ ಹಾಕಿದಾರೆ’ ಎಂದು ಸೂರಜ್ ಹೇಳಿದ್ದರು.