ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss 12: ʻಇಲ್ಲಿಂದ ಹೋದ್ಮೇಲೆ ನಿನ್ನ ಬ್ಲಾಕ್‌ ಮಾಡ್ತಿನಿʼ ಎಂದ ಕಾವ್ಯ; ʻI Am Waiting..ʼ ಅಂತ ಕೌಂಟರ್‌ ಕೊಟ್ಟ ಗಿಲ್ಲಿ ನಟ!

Bigg Boss Kannada 12: ದೊಡ್ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ 'ಕ್ಷಮೆ ಕೇಳುವ' ವಿಶಿಷ್ಟ ಚಟುವಟಿಕೆ ನೀಡಿದ್ದರು. ಇದರಲ್ಲಿ ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ತಾನು ಈ ಹಿಂದೆ ಹರ್ಟ್ ಮಾಡಿದ್ದಕ್ಕಾಗಿ ಮತ್ತು ಜನರ ಮುಂದೆ ಕೂಗಾಡಿದ್ದಕ್ಕಾಗಿ ಮನಸಾರೆ ಕ್ಷಮೆ ಕೇಳಿದ್ದಾರೆ.

ಸೀರಿಯಸ್ ಆಗಿ ಕ್ಷಮೆ ಕೇಳಿದ ಕಾವ್ಯ; ಮತ್ತೆ ಕಾಲೆಳೆದ ಗಿಲ್ಲಿ ನಟ!

-

Avinash GR
Avinash GR Jan 16, 2026 7:54 AM

ಬಿಗ್‌ ಬಾಸ್‌ ಮುಗಿಯುವುದಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮನೆಯೊಳಗೆ ಇರುವ ಫಿನಾಲೆ ಸ್ಪರ್ಧಿಗಳಿಗೆ ಒಂದು ಚಟುವಟಿಕೆಯನ್ನ ಮಾಡಿಸಲಾಗಿದೆ. ಅದರ ಪ್ರಕಾರ, ಇಷ್ಟು ಯಾರಿಗಾದರೂ ನೋಯಿಸಿದ್ದರೆ, ಅವರಿಗೆ ಕ್ಷಮೆ ಕೇಳುವ ಅವಕಾಶವನ್ನು ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ನೀಡಿದ್ದರು. ಆಗ ಕಾವ್ಯ ಶೈವ ಅವರು ಮೊದಲು ಅಶ್ವಿನಿ ಗೌಡಗೆ ಕ್ಷಮೆ ಕೇಳಿದರೆ, ನಂತರ ಗಿಲ್ಲಿ ನಟ ಅವರಿಗೆ ಸಾರಿ ಎಂದಿದ್ದಾರೆ. ಹೇಗಿತ್ತು ಅವರ ಮಾತಿನ ವೈಖರಿ? ಮುಂದೆ ಓದಿ.

ನಿನ್ನ ಈಗೋ ನಾ ಹರ್ಟ್‌ ಮಾಡಿದ್ದೇನೆ ಎಂದ ಕಾವ್ಯ

"ಹೇಯ್‌ ಗಿಲ್ಲಿ.. ನೀನು ಯಾವತ್ತೂ ಬೇಜಾರ್‌ ಮಾಡ್ಕೊಂಡಿದ್ದನ್ನು ಹೇಳಿಕೊಂಡೇ ಇಲ್ಲ. ಹಾಗಂತ ನಾನು ನಿನಗೆ ಬೇಜಾರು ಮಾಡಿಲ್ಲ ಅಂತ ಅಲ್ಲ. ಆದರೂ ನೀನು ಅದನ್ನು ಹೇಳಿಕೊಳ್ಳದೇ ಇರುವುದು, ಬಹುಶಃ ಅದು ನಿನ್ನ ಒಳ್ಳೆತನ ಅಂತ ಅನ್ನಿಸುತ್ತದೆ. ನೀನು ನನಗೆ ಇರಿಟೇಟ್‌ ಮಾಡಿದಾಗೆಲ್ಲಾ, ಇದೊಂದು ಶೋ, ಇದನ್ನು ಸಾಕಷ್ಟು ಜನರು ನೋಡುತ್ತಿರುತ್ತಾರೆ ಎಂಬುದನ್ನು ಕೂಡ ನೋಡದೆ, ನಾನು ನಿನ್ನ ಈಗೋ ನಾ ಹರ್ಟ್‌ ಮಾಡಿದ್ದೇನೆ" ಎಂದು ಕಾವ್ಯ ಹೇಳಿದ್ದಾರೆ.

Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌! ಪಾತ್ರ ಏನು?

ನಿನಗೆ ಹರ್ಟ್‌ ಮಾಡಿದ್ದೇನೆ, ನನ್ನನ್ನು ಕ್ಷಮಿಸು

"ಸಿಟ್ಟಿನಲ್ಲಿ ನಿನ್ನ ಮೇಲೆ ಕೂಗಾಡಿದ್ದೇನೆ. ಕೆಲವೊಮ್ಮೆ ಬೇರೆಯವರ ಮುಂದೆ ನಿನ್ನನ್ನು ಬಿಟ್ಟುಕೊಟ್ಟಿದ್ದೇನೆ. ಇದೆಲ್ಲದಕ್ಕೂ ಕಾರಣ ಅಂತೂ ಇತ್ತು. ಅದು ನಿನಗೂ ಗೊತ್ತು. ಕಾರಣ ಇಲ್ಲದೇ ನಾನು ಏನೂ ಮಾಡಲ್ಲ ನೋಡು ಅದಕ್ಕೆ. ಆದರೆ ಒಬ್ಬ ಗೆಳತಿಯಾಗಿ ಯೋಚನೆ ಮಾಡಿದಾಗ, ಯೆಸ್‌, ನಾನು ನಿನಗೆ ಹರ್ಟ್‌ ಮಾಡಿದ್ದೇನೆ. ಅದಕ್ಕೆ ನನ್ನನ್ನು ಕ್ಷಮಿಸು" ಎಂದು ಕಾವ್ಯ ಹೇಳಿದ್ದಾರೆ.

Bigg Boss 12: ʻವಯಸ್ಸಲ್ಲಿ ನೀವು ದೊಡ್ಡವರು, ನಿಮ್‌ ಮನಸ್ಸಿಗೆ ತುಂಬಾ ನೋವು ಮಾಡಿಬಿಟ್ಟಿದ್ದೀನಿʼ; ಅಶ್ವಿನಿಗೆ ಕ್ಷಮೆ ಕೇಳಿದ ಗಿಲ್ಲಿ ನಟ!

ಇನ್ಮೇಲಾದರೂ ರೇಗಿಸಬೇಡ

"ನಾವಿಲ್ಲಿ ಇರೋದು ಇನ್ನೂ ಮೂರ್ನಾಲ್ಕು ದಿನ ಮಾತ್ರ. ಇವಾಗಾದರೂ ರೇಗಿಸುವುದನ್ನು ನಿಲ್ಲಿಸು. ಇಲ್ಲದಿದ್ದರೆ, ಹೊರಗೆ ಹೋದಮೇಲೆ ನಿನ್ನ ಬ್ಲಾಕ್‌ ಮಾಡೋದು ಪಕ್ಕಾ.." ಎಂದು ಸ್ವೀಟ್‌ ವಾರ್ನಿಂಗ್‌ ಕೂಡ ನೀಡಿದ್ದಾರೆ ಕಾವ್ಯ. ಅದಕ್ಕೆ ಕೌಂಟರ್‌ ಕೊಟ್ಟ ಗಿಲ್ಲಿ ನಟ, "ʻI Am Waiting.." ಎಂದು ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ನೀಡಿದ್ದಾರೆ. ನಂತರ ಇಬ್ಬರು ಸೇರಿ, ಕಾವ್ಯ ಬರೆದ ಪತ್ರವನ್ನು ಬೆಂಕಿಗೆ ಹಾಕಿದ್ದಾರೆ. ಈ ವೇಳೆ ಗಿಲ್ಲಿ ನಟ, "ಸಪ್ತಪದಿ ಇದು ಸಪ್ತಪದಿ.." ಹಾಡನ್ನು ಹೇಳಿ, ಮತ್ತೆ ಕಾಲೆಳೆದಿದ್ದಾರೆ.