ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gilli Nata: ʻಪ್ಲೀಸ್..‌ ಗಿಲ್ಲಿಗೆ ಒಂದು ಬಾಚಣಿಗೆ ಕೊಡ್ರಿʼ; ಕೈಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ, ಅಬ್ಬಬ್ಬಾ! ಇಂಥ ಕ್ರೇಜ್‌ ಎಲ್ಲಾದರೂ ಉಂಟೇ?

Bigg Boss 12 Gilli Nata: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಸೃಷ್ಟಿಸಿರುವ ಕ್ರೇಜ್ ಈಗ ಮಂಡ್ಯದ ಅಭಿಮಾನಿಯೊಬ್ಬರು ಅವರ ಚಿತ್ರವನ್ನೇ ಕೈಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದೆ. ಟ್ಯಾಟೂ ಆರ್ಟಿಸ್ಟ್ "ಟ್ಯಾಟೂ ಘೋಸ್ಟ್" ಅವರು ಗಿಲ್ಲಿಯ ಕೆದರಿದ ಕೂದಲನ್ನು ಚಿತ್ರಿಸುವುದು ಕಷ್ಟವೆಂದು ಹಾಸ್ಯಮಯವಾಗಿ ಬಾಚಣಿಗೆ ನೀಡುವಂತೆ ಬಿಗ್ ಬಾಸ್ ಟೀಮ್‌ಗೆ ಮನವಿ ಮಾಡಿದ್ದಾರೆ.

'ಗಿಲ್ಲಿ ನಟನಿಗೆ ಬಾಚಣಿಗೆ ಕೊಡ್ರಿ': ಟ್ಯಾಟೂ ಆರ್ಟಿಸ್ಟ್ ಮನವಿ ಮಾಡಿದ್ದೇಕೆ?

-

Avinash GR
Avinash GR Jan 9, 2026 12:21 PM

ಬಿಗ್‌ ಬಾಸ್‌ ಮನೆಯಲ್ಲಿ ಇರುವ ಗಿಲ್ಲಿ ನಟ ಅವರಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಈಗಾಗಲೇ ರಾಜ್ಯಾದ್ಯಂತ ಗಿಲ್ಲಿ ಪರವಾಗಿ ಅಲೆ ಇದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ವಿನ್ನರ್‌ ಗಿಲ್ಲಿ ನಟ ಅವರೇ ಅಂತ ಜನರು ಫಿಕ್ಸ್‌ ಆಗಿಬಿಟ್ಟಿದ್ದಾರೆ. ಇದೀಗ ಗಿಲ್ಲಿ ನಟನ ಚಿತ್ರವನ್ನೇ ಕೈ ಮೇಲೆ ಅಭಿಮಾನಿಯೊಬ್ಬರು ಹಚ್ಚೆ ಹಾಕಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ವೈರಲ್‌ ಆಗುತ್ತಿದೆ.

ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ

ಇನ್‌ಸ್ಟಾಗ್ರಾಮ್‌ನಲ್ಲಿ ಫೇಮಸ್‌ ಆಗಿರುವ ಟ್ಯಾಟೂ ಘೋಸ್ಟ್‌ ಅವರು ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಅಭಿಮಾನಿಯೊಬ್ಬರು ಗಿಲ್ಲಿ ನಟನ ಫೋಟೋವನ್ನು ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಆದರೆ ಇಲ್ಲೊಂದು ಸಮಸ್ಯೆ ಟ್ಯಾಟೂ ಆರ್ಟಿಸ್ಟ್‌ಗೆ ಕಾಡಿದೆ, ಅದನ್ನು ಅವರೇ ಹೇಳಿಕೊಂಡಿದ್ದಾರೆ. "ಕಲರ್ಸ್‌ ಕನ್ನಡ ವಾಹಿನಿಯವರಿಗೂ, ಬಿಗ್‌ ಬಾಸ್‌ ಟೀಮ್‌ ಅವರಿಗೂ ಒಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಬಿಗ್‌ ಬಾಸ್‌ ಮನೆಯೊಳಗೆ ಇರುವ ಗಿಲ್ಲಿಗೆ ದಯವಿಟ್ಟು ಒಂದು ಬಾಚಣಿಗೆ ಕೊಡಿ" ಎಂದಿದ್ದಾರೆ.

Bigg Boss Kannada12: ನಿಮ್ಮನ್ನು ಇಷ್ಟ ಪಡೋರಿಗೆ ವ್ಯಾಲ್ಯೂ ಕೊಡಿ ; ಗಿಲ್ಲಿಗೆ ಸ್ನೇಹಿತೆ ರಕ್ಷಿತಾ ಬುದ್ಧಿಮಾತು

ಟ್ಯಾಟೂ ಕಲಾವಿದ ಹಂಚಿಕೊಂಡ ವಿಡಿಯೋ

ಮಂಡ್ಯದ ಅಭಿಮಾನಿ ಕೈಯಲ್ಲಿ ಟ್ಯಾಟೂ

ಅವರು ಹೀಗೆ ಹೇಳುವುದಕ್ಕೂ ಒಂದು ಕಾರಣ ಇದೆ. ಅದನ್ನು ಟ್ಯಾಟೂ ಘೋಸ್ಟ್‌ ಹೇಳಿದ್ದಾರೆ. "ಯಾಕೆಂದರೆ, ಎಲ್ಲಾ ಫೋಟೋಗಳಲ್ಲೂ ಗಿಲ್ಲಿ ನಟ ಅವರು ಕೂದಲನ್ನು ಕೆದರಿಕೊಂಡಿದ್ದಾರೆ. ಹಾಗಾಗಿ, ಅದನ್ನು ಟ್ಯಾಟೂ ಹಾಕೋಕೆ ಎಷ್ಟು ಕಷ್ಟ ಇದೆ ಗೊತ್ತಾ? ಇಲ್ಲಿ ಮಂಡ್ಯದಿಂದ ಕುಮಾರ್‌ ಎಂಬುವವರು ಬಂದು ಗಿಲ್ಲಿ ಅವರ ಟ್ಯಾಟೂ ಹಾಕಿಸಬೇಕು ಎಂದು ಬಂದಿದ್ದಾರೆ. ಮೊದಲ ಬಾರಿಗೆ ಗಿಲ್ಲಿ ಟ್ಯಾಟೂವನ್ನು ನಾವು ಹಾಕಿದ್ದೇವೆ" ಎಂದು ಹೇಳಿದ್ದಾರೆ.

Bigg Boss Kannada 12: ಗಿಲ್ಲಿಗೆ ಯಾವ ಮ್ಯಾರೇಜ್ ಇಷ್ಟ? ಲವ್‌, ಅರೇಂಜ್?

ಗಿಲ್ಲಿಗೆ ಒಂದು ಮಿಲಿಯನ್‌ ಫಾಲೋವರ್ಸ್‌

ಈ ಮಧ್ಯೆ ಗಿಲ್ಲಿ ನಟ ಅವರ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಸಂಖ್ಯೆಯು 1 ಮಿಲಿಯನ್‌ ಕ್ರಾಸ್‌ ಆಗಿದೆ. ಅಕ್ಟೋಬರ್‌ನಲ್ಲಿ ಗಿಲ್ಲಿ 1 ಲಕ್ಷ ಫಾಲೋವರ್ಸ್‌ ಇದ್ದರು. ಮೂರು ತಿಂಗಳು ಮುಗಿಯುವುದರೊಳಗೆ ಆ ಸಂಖ್ಯೆ ಈಗ 10+ ಲಕ್ಷ ಆಗಿದೆ. ಇಷ್ಟೊಂದು ವೇಗವಾಗಿ ಫಾಲೋವರ್ಸ್‌ ಹೆಚ್ಚಿಸಿಕೊಂಡ ಮತ್ತೋರ್ವ ಬಿಗ್‌ ಬಾಸ್‌ ಸ್ಪರ್ಧಿ ಇಲ್ಲ. ಗಿಲ್ಲಿಯನ್ನು ಹೊರತುಪಡಿಸಿ, ಸದ್ಯ ಬಿಗ್‌ ಬಾಸ್‌ ಮನೆಯೊಳಗೆ ಇರುವ ಯಾವ ಸ್ಪರ್ಧಿಗೂ 5 ಲಕ್ಷ ಫಾಲೋವರ್ಸ್‌ ಕೂಡ ಇಲ್ಲ. ಗಿಲ್ಲಿ ಜನಪ್ರಿಯತೆ ಎಷ್ಟಿದೆ ಎಂಬುದಕ್ಕೆ ಇದಕ್ಕಿಂತ ಬೇರೊಂದು ಉದಾಹರಣೆ ಬೇಕಿಲ್ಲ.