Bigg Boss Kannada 12: ಗಿಲ್ಲಿಗೆ ಯಾವ ಮ್ಯಾರೇಜ್ ಇಷ್ಟ? ಲವ್, ಅರೇಂಜ್?
Gilli Nata: ಬಿಗ್ ಬಾಸ್ ಇನ್ನು ಕೆಲವೇ ದಿನಗಳಲ್ಲಿ ಅಂತ್ಯ ಹಾಡಲಿದೆ. ಫಿನಾಲೆ ಸಮೀಪಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿಯ ನಂದಗೋಕುಲ ಧಾರಾವಾಹಿ ತಂಡ ಮದುವೆಗೆ ಕರೆಯಲು ಬಂದಿದೆ. ಇಡೀ ತಂಡ ಬಿಗ್ ಬಾಸ್ ಮನೆಗೆ ಆಗಮಿಸಿದೆ. ಈ ವೇಳೆ ಗಿಲ್ಲಿ ನಟನಿಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಇನ್ನು ಕೆಲವೇ ದಿನಗಳಲ್ಲಿ ಅಂತ್ಯ ಹಾಡಲಿದೆ. ಫಿನಾಲೆ ಸಮೀಪಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿಯ ನಂದಗೋಕುಲ (nandagokula serial) ಧಾರಾವಾಹಿ ತಂಡ ಮದುವೆಗೆ (Marriage) ಕರೆಯಲು ಬಂದಿದೆ. ಇಡೀ ತಂಡ ಬಿಗ್ ಬಾಸ್ ಮನೆಗೆ ಆಗಮಿಸಿದೆ. ಈ ವೇಳೆ ಗಿಲ್ಲಿ (Gilli Nata) ನಟನಿಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ.
ಗಿಲ್ಲಿಗೆ ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಇಷ್ಟನಾ?
ಗಿಲ್ಲಿಗೆ ಲವ್ ಮ್ಯಾರೆಜ್ ಅಥವಾ ಅರೇಂಜ್ ಮ್ಯಾರೆಜ್ ಇಷ್ಟನಾ ಅಂತ ಕೇಳಿದೆ ತಂಡ. ಅದಕ್ಕೆ ಗಿಲ್ಲಿ ಮ್ಯಾರೇಜ್ ಆಗಬಾರದು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ ಗಿಲ್ಲಿ. ಇನ್ನು ಕಾವ್ಯ ಕೂಡ ಯಾರಾದರೂ ಇಷ್ಟ ಆದರೆ ಲವ್ ಮ್ಯಾರೆಜ್ ಆಗ್ತೀನಿ ಎಂದಿದ್ದಾರೆ. ಇನ್ನು ರಕ್ಷಿತಾಗೆ ಕಾಮಿಡಿ ಆಗಿರೋ ಹುಡುಗ ಅಂದರೆ ಇಷ್ಟ ಅಂತೆ. ಅದೇ ಥರ ಇರೋ ಹುಡುಗನನ್ನ ಮದುವೆ ಆಗ್ತಾರಂತೆ.
ಮಾಧವನ ಮದುವೆ ಸಂಭ್ರಮ
ಕಲರ್ಸ್ ಕನ್ನಡ ವಾಹಿನಿಯ ನಂದಗೋಕುಲ ಧಾರಾವಾಹಿ ಸದ್ಯ ವೀಕ್ಷಕರ ಮೆಚ್ಚಿನ ಧಾರಾವಾಹಿ. ಇನ್ನು ಮೊದಲನೇ ಮಗ ಮಾಧವನ ಮದುವೆ ಸಂಭ್ರಮ ಈಗ ನಂದಗೋಕುಲ ಕುಟುಂಬದಲ್ಲಿ ಕಳೆ ಗಟ್ಟಿದೆ. ಅಪ್ಪನ ಮೇಲಿನ ಗೌರವ, ಭಯಕ್ಕೆ ಮೊದಲು ಪ್ರೀತಿಸಿದ ಹುಡುಗಿಯನ್ನ ಕಳೆದುಕೊಂಡ ಮಾಧವನಿಗೆ ಕೊನೆಗೂ ಅಪ್ಪಟ ದೇಸಿ ಹುಡುಗಿ ಸಿಕ್ಕಿದ್ದಾಳೆ.
ವೈರಲ್ ವಿಡಿಯೋ
ಏನು ಧಾರಾವಾಹಿ ಪ್ರಮೋಷನ್ ಬಿಗ್ ಬಾಸ್ ಅಲ್ಲಿ ಏನು ವೀಕೆಂಡ್ ಇದು 🤣🤣🤣#BBK12 pic.twitter.com/1UndoeF1tz
— Srinidhi (@srinidhi92) January 9, 2026
ನಂದಕುಮಾರ್ ಪಾತ್ರದಲ್ಲಿ ನಟ ಅರವಿಂದ್ ಕುಮಾರ್, ಗಿರಿಜಾ ಪಾತ್ರದಲ್ಲಿ ಅಮೃತಾ ರೂಪೇಶ್ ನಾಯ್ಡು, ಮೀನಾ ಪಾತ್ರದಲ್ಲಿ ಮೇಘಾ ಸಂಜು, ಕೇಶವ ಪಾತ್ರದಲ್ಲಿ ಯಶವಂತ್, ವಲ್ಲಭ ಪಾತ್ರದಲ್ಲಿ ಅಭಿದಾಸ್, ಅಮೂಲ್ಯ ಪಾತ್ರದಲ್ಲಿ ಊರ್ಜಿತಾ ವಾಲ್ತಾಜೆ, ರಕ್ಷಾ ಪಾತ್ರದಲ್ಲಿ ಕೃಷ್ಣಪ್ರಿಯಾ, ಮಾಧವ ಪಾತ್ರದಲ್ಲಿ ವಿಜಯ್ ಚಂದ್ರ, ಸುಕನ್ಯಾ ಪಾತ್ರದಲ್ಲಿ ಅರ್ಪಿತಾ ಗೌಡ, ಸುಂದರ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಗೋವಿಂದೆ ಗೌಡ ಸೇರಿದಂತೆ ಕಲಾವಿದರ ದಂಡೆ ಇದೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್ ತುಂಬಾ ಪಾಪ, ಕೆಟ್ಟ ಮನುಷ್ಯ ಅಲ್ಲ; ರಕ್ಷಿತಾ ಶೆಟ್ಟಿಗೆ ಮೂಡಿದೆ ಅನುಕಂಪ
ಕಳೆದ ಕೆಲ ದಿನಗಳಿಂದ ಗಿಲ್ಲಿ ಇನ್ಸ್ಟಾ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಲೇ ಇದೆ. ಬಿಗ್ ಬಾಸ್ ಮನೆಯೊಳಗೆ ಕಾಲಿಡುವಾಗ ಗಿಲ್ಲಿ ನಟ ಅವರಿಗೆ 1.02 ಲಕ್ಷ ಫಾಲೋವರ್ಸ್ ಇದ್ದರು. ಆದರೆ ಇದೀಗ 3 ತಿಂಗಳಲ್ಲಿ 10 ಲಕ್ಷ ಫಾಲೋವರ್ಸ್ ಬಂದಿದ್ದಾರೆ. ಇದು ಗಿಲ್ಲಿ ನಟ ಅವರ ಕ್ರೇಜ್ ಏನೆಂಬುದನ್ನು ತೋರಿಸುತ್ತದೆ.