ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻಆ ವಿಚಾರದಲ್ಲಿ ಅಶ್ವಿನಿ ಗೌಡ ಎಕ್ಸ್‌ಪರ್ಟ್‌, ರಕ್ಷಿತಾ ಇನ್ನೊಸೆಂಟ್‌ ಕಿಲಾಡಿʼ; ರಜತ್‌ ಹಿಂಗ್ಯಾಕೆ ಹೇಳಿದ್ರು?

Rajath on Ashwini and Rakshitha: ಬಿಗ್ ಬಾಸ್ ಅತಿಥಿಯಾಗಿ ಮಿಂಚಿದ ರಜತ್, ಅಶ್ವಿನಿ ಗೌಡ ಅವರ ಬಗ್ಗೆ ಮಾತನಾಡಿದ್ದಾರೆ. ಅಶ್ವಿನಿ ಅವರು ಯಾವುದೇ ವಿಚಾರಕ್ಕಾದರೂ ನೂರಾರು ಆಯಾಮಗಳನ್ನು ನೀಡಿ ಮಾತನಾಡುವ ಶಕ್ತಿ ಹೊಂದಿದ್ದಾರೆ, ಅಂತಹವರಿಂದ ತಾವು ದೂರವಿರುವುದಾಗಿ ರಜತ್ ತಿಳಿಸಿದ್ದಾರೆ.

Bigg Boss 12: ಆ ಒಬ್ಬ ಸ್ಪರ್ಧಿಗೆ ʼಇನ್ನೋಸೆಂಟ್ ಕಿಲಾಡಿʼ ಎಂದ ರಜತ್!‌

-

Avinash GR
Avinash GR Dec 23, 2025 11:55 AM

ಬಿಗ್‌ ಬಾಸ್‌ ಮನೆಗೆ ಅತಿಥಿಯಾಗಿ ಹೋಗಿದ್ದ ರಜತ್‌ ಬುಜ್ಜಿ ಈಗ ಹೊರಗೆ ಬಂದಿದ್ದಾರೆ. ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಅಶ್ವಿನಿ ಗೌಡ ಅವರ ಬಗ್ಗೆ ರಜತ್‌ ಮಾತನಾಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಇರುವಷ್ಟು ದಿನ ರಜತ್‌ ಮತ್ತು ಅಶ್ವಿನಿ ನಡುವೆ ಒಂದು ವಾರ್‌ ನಡೆಯುತ್ತಲೇ ಇತ್ತು. ಅದರ ಕುರಿತು ಪ್ರತಿಕ್ರಿಯೆ ನೀಡಿರುವ ರಜತ್‌, "ಅಶ್ವಿನಿ ಗೌಡ ಅವರು ಒಂದು ವಿಷಯವನ್ನು ತಿರುಚುವುದರಲ್ಲಿ ಎಕ್ಸ್‌ಪರ್ಟ್"‌ ಎಂದು ರಜತ್‌ ಹೇಳಿದ್ದಾರೆ.

ಕೆಲವೊಬ್ಬರ ವ್ಯಕ್ತಿತ್ವ ಹಾಗೇ ಇರುತ್ತದೆ

"ಕೆಲವೊಬ್ಬರ ವ್ಯಕ್ತಿತ್ವ ಹಾಗೇ ಇರುತ್ತದೆ. ಅದನ್ನು ಚೇಂಜ್‌ ಮಾಡುವುದಕ್ಕೆ ಆಗೋದಿಲ್ಲ. ನಾವು ಒಂದು ವಿಷಯವನ್ನು ಹೇಳ್ತೀವಿ. ಅದಕ್ಕೆ ನೂರಾರು ಆಂಗಲ್‌ ಕೊಟ್ಟು ಮಾತನಾಡುವ ಶಕ್ತಿ ಅಶ್ವಿನಿ ಗೌಡ ಅವರಿಗೆ ಇದೆ. ನಂದು ಮತ್ತು ಅವರದ್ದು ಒಳಗೆ ದೊಡ್ಡ ಜಗಳವೇ ಆಗತ್ತೆ. ಒಂದು ವಿಷಯಕ್ಕೆ ಬೇರೆ ಬೇರೆ ಆಯಾಮ ಕೊಡುವುದರಲ್ಲಿ ಅವರು ಎಕ್ಸ್‌ಪರ್ಟ್. ಅಂತಹ ಗುಣದವರಿಂದ ನಾನು ತುಂಬಾ ಇರುತ್ತೇನೆ" ಎಂದು ರಜತ್‌ ಹೇಳಿದ್ದಾರೆ.

Bigg Boss Kannada 12: ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ ಕಾವು! ರಜತ್‌-ಧ್ರುವಂತ್‌ ಮಧ್ಯೆ ಮಾರಾಮಾರಿ

ರಕ್ಷಿತಾ ಬಗ್ಗೆ ಏನಂದ್ರು ರಜತ್?‌

"ರಕ್ಷಿತಾ ಒಂಥರಾ ಇನ್ನೋಸೆಂಟ್ ಕಿಲಾಡಿ. ಕೋಪ ಬಂದರೆ ಅವಳು ಮನುಷ್ಯಳೇ ಅಲ್ಲ. ಏನಾದರೂ ಕಿತಾಪತಿ ಮಾಡಿಬಿಡ್ತಾಳೆ. ಅವಳ ಆ ಕಿತಾಪತಿ ಕೆಲಸವೇ ಅವಳಿಗೆ ಎಫೆಕ್ಟ್‌ ಆಗ್ತಾ ಇರೋದು ಅನ್ಸತ್ತೆ. ಅವಳು ಶುದ್ಧ ಮನಸ್ಸಿನ ವ್ಯಕ್ತಿ. ಸ್ವಲ್ಪ ಸಮಾಧಾನದಿಂದ ಯೋಚನೆ ಮಾಡಿದರೆ ರಕ್ಷಿತಾಗೆ ಒಳ್ಳೇದಾಗುತ್ತದೆ. ರಕ್ಷಿತಾ ಕಂಡರೆ ನನಗೆ ತುಂಬಾ ಇಷ್ಟ. ಮನಸ್ಸಿನಲ್ಲಿರೋದನ್ನು ನೇರವಾಗಿ ಹೇಳ್ತಾಳೆ. ಆದರೆ ಕಾವ್ಯ, ಸ್ಪಂದನಾ ಇವರ ವಿಷಯಗಳನ್ನು ಬಿಟ್ಟರೆ, ಇವಳು ಚೆನ್ನಾಗಿ ಆಡ್ತಾಳೆ" ಎಂದು ರಜತ್‌ ಹೇಳಿದ್ದಾರೆ.‌

BBK 12: ಕಾವ್ಯ ವಿರುದ್ಧದ ರಕ್ಷಿತಾ ಶೆಟ್ಟಿಯ ದ್ವೇಷ ಅತಿರೇಕಕ್ಕೆ ಹೋಯ್ತಾ? ರಜತ್‌ ಕೊಟ್ಟ ತಿರುಗೇಟಿಗೆ ಗಿಲ್ಲಿ ವಂಶದ ಕುಡಿ ಫುಲ್‌ ಸೈಲೆಂಟ್‌!

ಟ್ಯಾಟೂ ಬಗ್ಗೆ ರಜತ್‌ ಮಾತು

ಈ ಸಲ ಟಾಸ್ಕ್‌ ವೊಂದರಲ್ಲಿ ಬಿಗ್‌ ಬಾಸ್‌ ಟ್ಯಾಟೂ ಹಾಕಿಸಿಕೊಳ್ಳಬೇಕಿತ್ತು, ಅದನ್ನು ರಜತ್‌ ಹಾಕಿಸಿಕೊಂಡರು. "ಹೌದು, ನಾನು ಟ್ಯಾಟೂ ಹಾಕಿಸಿಕೊಂಡೆ. ಅಸಲಿಗೆ ರಘು ಸರ್ ಹೇಳಿದ್ರು‌, ನಾನು ಹಾಕಿಸಿಕೊಳ್ಳುತ್ತೇನೆ ಎಂದು. ಆದರೆ ನನ್ನ ಬಳಿ ಒಂದು ಮೌಲ್ಯಯುತ ಕಾರಣ ಇತ್ತು. ಯಾಕೆಂದರೆ, ನಾನು ಕಳೆದ ಬಾರಿ ಕೂಡ ವೈಲ್ಡ್‌ ಕಾರ್ಡ್‌ ಸ್ಪರ್ಧಿ, ಈ ಬಾರಿಯೂ ವೈಲ್ಡ್‌ ಕಾರ್ಡ್‌ ಸ್ಪರ್ಧಿ. ಅಲ್ಲದೇ, ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಬಾಸ್‌ ಟ್ಯೂಟೂ ಹಾಕಿಸಿಕೊಳ್ಳುವುದು ದೊಡ್ಡ ವಿಚಾರ. ರಘು ಸರ್‌ನ ಕನ್ವಿನ್ಸ್‌ ಮಾಡಿ, ನಾನು ಹಾಕಿಸಿಕೊಂಡೆ. ನಾನು ತುಂಬಾ ಲಕ್ಕಿ" ಎಂದು ರಜತ್‌ ಹೇಳಿದ್ದಾರೆ.