ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ನಿಮ್ಮನ್ನು ಕಳಿಸಿಯೇ ನಾನು ಹೊರಕ್ಕೆ ಹೋಗೋದು! ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ರಕ್ಷಿತಾಗೆ ಗೆಲುವು

Rakshitha: ಬಿಗ್‌ ಬಾಸ್‌ ಸೀಸನ್‌ 12ರ ವಿನ್ನರ್‌ ಗಿಲ್ಲಿ ನಟ ಆದ್ರೆ, ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆದರು. ಅದರಲ್ಲೂ ಗಿಲ್ಲಿಗೆ ಎಷ್ಟು ಕ್ರೇಜ್‌ ಇದೆಯೋ ಅಷ್ಟೇ ರಕ್ಷಿತಾ ಅವರಿಗೂ ಇದೆ. ಇದೀಗ ರಕ್ಷಿತಾ ಕುರಿತಾದ ವಿಡಿಯೋ ವೊಂದು ಸಖತ್‌ ವೈರಲ್‌ ಆಗ್ತಿದೆ. ಅದುವೇ ಅಶ್ವಿನಿ ಗೌಡ ಅವರಿಗೆ ಹಾಕಿದ ಚಾಲೆಂಜ್‌. ರಕ್ಷಿತಾ ಶೆಟ್ಟಿ ಅವರು ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ಗೆಲುವು ಕಂಡಿದ್ದಾರೆ. ‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’ ಎಂದು ಹೇಳಿದ್ದರು ರಕ್ಷಿತಾ ಅದರಂತೆ ಆಗಿದೆ.

ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ರಕ್ಷಿತಾಗೆ ಗೆಲುವು

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 19, 2026 11:27 AM

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ವಿನ್ನರ್‌ ಗಿಲ್ಲಿ ನಟ (Gilli Nata) ಆದ್ರೆ, ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆದರು. ಅದರಲ್ಲೂ ಗಿಲ್ಲಿಗೆ ಎಷ್ಟು ಕ್ರೇಜ್‌ ಇದೆಯೋ ಅಷ್ಟೇ ರಕ್ಷಿತಾ ಅವರಿಗೂ ಇದೆ. ಇದೀಗ ರಕ್ಷಿತಾ ಕುರಿತಾದ ವಿಡಿಯೋ ವೊಂದು ಸಖತ್‌ ವೈರಲ್‌ ಆಗ್ತಿದೆ. ಅದುವೇ ಅಶ್ವಿನಿ ಗೌಡ (Ashwini Gowda) ಅವರಿಗೆ ಹಾಕಿದ ಚಾಲೆಂಜ್‌. ರಕ್ಷಿತಾ ಶೆಟ್ಟಿ ಅವರು ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ಗೆಲುವು ಕಂಡಿದ್ದಾರೆ. ‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’ ಎಂದು ಹೇಳಿದ್ದರು ರಕ್ಷಿತಾ ಅದರಂತೆ ಆಗಿದೆ.

ಮೊದಲಿಗೆ ಅಶ್ವಿನಿ ಹಾಗೂ ರಕ್ಷಿತಾ ಮಧ್ಯೆ ಸಖತ್‌ ಕಿತ್ತಾಟ ಆರಂಭವಾಗಿತ್ತು. ಅದರಿಂದಲೇ ಇನ್ನಷ್ಟು ಹೈಪ್‌ ಪಡೆದುಕೊಂಡಿದ್ದರು ರಕ್ಷಿತಾ.

ಇದನ್ನೂ ಓದಿ: Bigg Boss Kannada 12: ತಮ್ಮ ಯಶಸ್ಸಿಗೆ ಕಾರಣರಾದ ಇವರೆಲ್ಲರಿಗೆ ಗಿಲ್ಲಿ ಸ್ಪೆಷಲ್‌ ಥ್ಯಾಂಕ್ಸ್‌! ವಿನ್ನರ್ ನಡೆಗೆ ಫ್ಯಾನ್ಸ್‌ ಮೆಚ್ಚುಗೆ

ಏನದು ಸನ್ನಿವೇಶ?

‘ನೀವು ವೋಟ್ ಹಾಕಿದರೆ ಅದನ್ನು ಕಾಲಲ್ಲಿ ತುಳಿದು ಹಾಕ್ತೀನಿ’ ಎಂದು ರಕ್ಷಿತಾ ಮನೆಯಲ್ಲಿ ಹೇಳಿದ್ದರು. ಆದರೆ, ಇದಕ್ಕೆ ಅಶ್ವಿನಿ ಗೌಡ ಅವರು ಬೇರೆಯದೇ ಅರ್ಥ ಕಲ್ಪಿಸಿದ್ದರು. ‘ಕಲಾವಿದೆ ಆಗಿರೋ ನನಗೆ ರಕ್ಷಿತಾ ಚಪ್ಪಲಿ ತೋರಿಸಿದ್ದಾರೆ’ ಎಂದು ಬಣ್ಣಿಸೋ ಪ್ರಯತ್ನ ಮಾಡಿದ್ದರು. ಆ ಬಳಿಕ ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆ ಆಯಿತು.

ಈ ಮನೆಯಲ್ಲಿ ಉಳಿದುಕೊಳ್ಳಲು ಯಾರು ಅರ್ಹರಲ್ಲ ಎಂದು ಹೇಳಬೇಕಿತ್ತು. ಜೊತೆಗೆ ಮುಖಕಕ್ಕೆ ಮಸಿ ಬಳಿಯಬೇಕಿತ್ತು. ಈ ವೇಳೆ ಅಶ್ವಿನಿ ಗೌಡ ಅವರು ರಕ್ಷಿತಾಗೆ ಹಾಗೂ ರಕ್ಷಿತಾ ಅವರು ಅಶ್ವಿನಿಗೆ ಮಸಿ ಬಳಿದರು. ರಕ್ಷಿತಾ ಅವರು ಅಶ್ವಿನಿ ಗೌಡ ಅವರನ್ನು ಆಯ್ಕೆ ಮಾಡಿ ಮುಖಕ್ಕೆ ಮಸಿ ಬಳಿದರು. ಈ ವೇಳೆ ಮಾತನಾಡಿದ ರಕ್ಷಿತಾ, ‘ನೀವು 100 ಸಿನಿಮಾ ಮಾಡಿರಬಹುದು.

ಆದರೆ, ವ್ಯಕ್ತಿಯನ್ನು ಹಾಕಿ ತುಳೀತೀರಲ್ಲ. ಹೀಗಾಗಿ ನೀವು ಮಾಡಿರೋ ಸಿನಿಮಾಗಳೆಲ್ಲ ವೇಸ್ಟ್’ ಎಂದು ರಕ್ಷಿತಾ ನೇರವಾಗಿ ಹೇಳಿದ್ದರು. ಆ ಬಳಿಕ ಅಶ್ವಿನಿ ಗೌಡ ಅವರು ರಕ್ಷಿತಾನ ಕರೆದು ಮಸಿ ಬಳೆದರು. ರಕ್ಷಿತಾ ಅವರು ಅಶ್ವಿನಿಗೆ ಒಂದು ಚಾಲೆಂಜ್ ಮಾಡಿದರು. ‘ನಿಮ್ಮನ್ನು ಕಳಿಸಿಯೇ ನಾನು ಹೊರಕ್ಕೆ ಹೋಗೋದು’ ಎಂದು ಶಪಥ ಮಾಡಿದ್ದರು. ಈಗ ಅದು ನಿಜವಾದಂತಿದೆ.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಟಾಪ್ 6ರಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ, ರಘು ಹಾಗೂ ಧನುಷ್ ಇದ್ದರು.