ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಬಿಗ್‌ ಬಾಸ್‌ʼನಿಂದ ಬಂದ ದುಡ್ಡಲ್ಲಿ ಗಿಲ್ಲಿ ನಟ 25 ಎಕರೆ ಜಮೀನು ತಗೊಂಡ್ರಾ? ವೈರಲ್‌ ಸುದ್ದಿಗೆ ತಮ್ಮದೇ ಸ್ಟೈಲ್‌ನಲ್ಲಿ ಡಿಚ್ಚಿ ಕೊಟ್ಟ ಪಳಾರ್!‌

25 ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂಬ ವೈರಲ್ ಸುದ್ದಿಗೆ ಸ್ವತಃ ಬಿಗ್ ಬಾಸ್ ವಿಜೇತ ಗಿಲ್ಲಿ ನಟ ಬ್ರೇಕ್ ಹಾಕಿದ್ದಾರೆ. 25 ಎಕರೆ ಜಮೀನು ಖರೀದಿಸಿ ಫಾರ್ಮ್‌ಹೌಸ್ ಮಾಡಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಅವರು, "ನಾನು ಜಮೀನು ತಗೊಂಡಿರುವ ವಿಚಾರ ನನಗೇ ಗೊತ್ತಿಲ್ಲ" ಎಂದು ತಮಾಷೆ ಮಾಡಿದ್ದಾರೆ.

ಗಿಲ್ಲಿ ನಟ 25 ಎಕರೆ ಜಮೀನು ತಗೊಂಡ್ರಾ? ವೈರಲ್ ಸುದ್ದಿ ಬಗ್ಗೆ ಹೇಳಿದ್ದೇನು?

-

Avinash GR
Avinash GR Feb 9, 2026 7:47 PM

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ದಾಖಲೆ ಪ್ರಮಾಣದ ವೋಟ್‌ಗಳನ್ನು ಪಡೆದು ವಿಜೇತರಾದವರು ಗಿಲ್ಲಿ ನಟ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಗಿಲ್ಲಿ ನಟ ಅವರ ಹವಾ ಜೋರಾಗಿದೆ. ಗಿಲ್ಲಿ ಅಂತೂ ಯಾರ ಕೈಗೂ ಸಿಗದಷ್ಟು ಬ್ಯುಸಿ ಆಗಿದ್ದಾರೆ. ಈ ನಡುವೆ ಅವರ ಬಗ್ಗೆ ಹರಿದಾಡುತ್ತಿರುವ ವೈರಲ್‌ ಸುದ್ದಿಗಳಿಗೇನೂ ಕೊರತೆ ಇಲ್ಲ. ಅದರಲ್ಲಿ ಒಂದು ಗಿಲ್ಲಿ ಜಮೀನು ಖರೀದಿ ಮಾಡಿದ್ದಾರೆ ಎಂಬುದು!

ಹೌದು, ಗಿಲ್ಲಿ ನಟ ಅವರಿಗೆ ಬಿಗ್‌ ಬಾಸ್‌ ಶೋನಿಂದ 50 ಲಕ್ಷ ರೂ.ಗಳಿಗೂ ಅಧಿಕ ಹಣ ಸಿಕ್ಕಿದ್ದು, ಅದರಲ್ಲಿ ಅವರು ಸುಮಾರ 25 ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸದ್ಯ ತಮ್ಮ ಮುಂದಿನ ʻಸೂಪರ್‌ ಹಿಟ್‌ʼ ಸಿನಿಮಾದ ಪ್ರಮೋಷನ್‌ಗೆ ಆಗಮಿಸಿದ್ದ ಗಿಲ್ಲಿ ನಟ ಅವರು ಈ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. "ನಾನು ಜಮೀನು ತಗೊಂಡಿರುವ ವಿಚಾರ ನನಗೇ ಗೊತ್ತಿಲ್ಲ" ಎಂದು ತಮಾಷೆ ಮಾಡಿದ್ದಾರೆ ಗಿಲ್ಲಿ ನಟ!

Bigg Boss 12: ʻನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ, ಊರಗೆಲ್ಲಾ ಗೊತ್ತೂ ಗಿಲ್ಲಿ ಗಮ್ಮತ್ತುʼ; ಪಳಾರ್‌ ಗಿಲ್ಲಿ ನಟನ ಬಗ್ಗೆ ʻಬಿಗ್‌ ಬಾಸ್‌ʼ ಪಂಚ್‌ ಲೈನ್

2 ಎಕರೆ ತಗೊಳ್ಳೋದೇ ಕಷ್ಟವಿದೆ!

"ಗಿಲ್ಲಿ ನಟ 25 ಎಕರೆ ಜಮೀನು ತಗೊಂಡು, ಫಾರ್ಮ್‌ಹೌಸ್‌ ಮಾಡಿದ್ದಾರೆ ಎಂಬ ಮಾಹಿತಿ ಇದೆ" ಎಂದು ಕೇಳುತ್ತಿದ್ದಂತೆಯೇ, “ನಿಜವಾಗಲೂ ನಾನು ಜಮೀನು ತಗೊಂಡಿರೋದು ನನಗೇ ಗೊತ್ತಿಲ್ಲ. ಆ ಸುದ್ದಿಗಳನ್ನು ನಾನು ಕೂಡ ನೋಡಿದ್ದೇನೆ. ಅಲ್ಲಾ, 25 ಎಕರೆ ಜಮೀನು ಅಂತೆ! 2 ಎಕರೆ ಜಮೀನು ತಗೊಳ್ಳೋದು ಕೂಡ ಈಗಿನ ಕಾಲದಲ್ಲಿ ಕಷ್ಟ ಇದೆ, ಹೀಗಿರುವಾಗ ಬಿಗ್‌ ಬಾಸ್‌ನಿಂದ ಬಂದಕೂಡಲೇ 20-25 ಎಕರೆ ಜಮೀನು ಖರೀದಿ ಮಾಡೋಕೆ ಆಗುತ್ತಾ" ಎಂದು ಪ್ರಶ್ನೆ ಮಾಡುತ್ತಾರೆ. ಅಂದಹಾಗೆ, ತಮ್ಮ ಹುಟ್ಟೂರಿನಲ್ಲಿ ಜಮೀನು ಖರೀದಿಸಿ, ಅಲ್ಲೊಂದು ಫಾರ್ಮ್‌ ಹೌಸ್‌ ಮಾಡಬೇಕು ಎಂಬುದು ಗಿಲ್ಲಿಯ ಆಸೆಯಂತೆ. ಅದನ್ನು ಹಿಂದೊಮ್ಮೆ ಹೇಳಿಕೊಂಡಿದ್ದರು.

ಮನೆಗೆ ಕರೆಸಿ ಗಿಲ್ಲಿ ನಟನಿಗೆ 10 ಲಕ್ಷ ರೂ. ನೀಡಿದ ಸುದೀಪ್;‌ ಬಿಗ್‌ ಬಾಸ್‌ ವಿನ್ನರ್‌ಗೆ ʻಕಿಚ್ಚʼ ಕೊಟ್ಟ ಸಲಹೆ ಏನು ಗೊತ್ತಾ?

ಸಿನಿಮಾ ಅವಕಾಶಗಳು ಜಾಸ್ತಿ

ಸದ್ಯ ದೊಡ್ಮನೆಯಿಂದ ಹೊರಗೆ ಬಂದಮೇಲೆ ಗಿಲ್ಲಿ ನಟ ಅವರಿಗೆ ಸಿಕ್ಕಾಪಟ್ಟೆ ಸಿನಿಮಾ ಅವಕಾಶಗಳು ಸಿಗುತ್ತಿವೆಯಂತೆ. ಆದರೆ, ಸರಿಯಾಗಿ ಆಲೋಚಿಸಿ, ಒಪ್ಪಿಕೊಳ್ಳಬೇಕು ಎಂದು ಗಿಲ್ಲಿ ನಟ ನಿರ್ಧರಿಸಿದ್ದಾರಂತೆ. ಅಂದಹಾಗೆ, ಬಿಗ್‌ ಬಾಸ್‌ನಿಂದ ಹೊರಗೆ ಬಂದಮೇಲೆ ಇಲ್ಲಿಗೆ ಹೊಂದಿಕೊಳ್ಳಲು ಅವರಿಗೆ ಇನ್ನೂ ಸಮಯ ಬೇಕಿದೆಯಂತೆ. ಇಷ್ಟೊಂದು ಪ್ರೀತಿ, ಅಭಿಮಾನವನ್ನು ಗಿಲ್ಲಿ ಕನಸಿನಲ್ಲಿಯೂ ಊಹಿಸಿರಲಿಲ್ಲ.

ಸೂಪರ್‌ ಹಿಟ್‌ ಮುನ್ನಾ ಭಾಯ್‌

ಸದ್ಯ ವಿಜಯಾನಂದ್‌ ನಿರ್ದೇಶನ ಮಾಡಿರುವ ಸೂಪರ್‌ ಹಿಟ್‌ ಎಂಬ ಸಿನಿಮಾದಲ್ಲಿ ಮುನ್ನಾ ಭಾಯ್‌ ಎಂಬ ಪಾತ್ರವನ್ನು ಗಿಲ್ಲಿ ನಟ ಅವರು ನಿಭಾಯಿಸಿದ್ದು, ಈ ಸಿನಿಮಾವು ಫೆ.27ರಂದು ತೆರೆಗೆ ಬರಲಿದೆ. ಅಂದಹಾಗೆ, ಈ ಚಿತ್ರದ ಗಿಲ್ಲಿ ಹೀರೋ ಆಗುತ್ತಿದ್ದು, ಜೊತೆಗೆ ಗೌರವ್‌ ಶೆಟ್ಟಿ ಕೂಡ ಇದರಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.