ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಕೌಂಡಿನ್ಯ ಈಗ ಬಿಗ್​​ಬಾಸ್​​ಗೆ!

Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ (vaishnavi koundinya) ಎಂಟ್ರಿ ಕೊಟ್ಟಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿರುವ ವೈಷ್ಣವಿ, ತಮ್ಮ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಮಿಥುನ ರಾಶಿ'ಯಲ್ಲಿ ನಾಯಕಿಯಾಗಿ ಮಿಂಚಿದ್ದ ವೈಷ್ಣವಿ ಕೌಂಡಿನ್ಯ ಪ್ರೇಮ ಕಾವ್ಯದಲ್ಲಿ ನಟಿಸಿದ್ದರು.

ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಕೌಂಡಿನ್ಯ ಈಗ ಬಿಗ್​​ಬಾಸ್​​ಗೆ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 6, 2026 10:54 PM

ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ (vaishnavi koundinya) ಎಂಟ್ರಿ ಕೊಟ್ಟಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿರುವ ವೈಷ್ಣವಿ, ತಮ್ಮ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ (Serial) 'ಮಿಥುನ ರಾಶಿ'ಯಲ್ಲಿ ನಾಯಕಿಯಾಗಿ ಮಿಂಚಿದ್ದ ವೈಷ್ಣವಿ ಕೌಂಡಿನ್ಯ ಪ್ರೇಮ ಕಾವ್ಯದಲ್ಲಿ ನಟಿಸಿದ್ದರು.

ಲವ್ ಯೂ ಮುದ್ದು' ಸಿನಿಮಾದ ಪ್ರೀಮಿಯರ್ ನಲ್ಲಿ ವೈಷ್ಣವಿ ಕೌಂಡಿನ್ಯ ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿ, ಹಾಟ್ ಆಗಿ ಕಾಣಿಸಿಕೊಂಡ ವಿಚಾರ ಭಾರಿ ಸದ್ದು ಮಾಡಿತ್ತು. ನಮ್ಮನೆ ಯುವರಾಣಿ'ಯ ಮೂಲಕ ಜನಮನ ಗೆದ್ದ ನಾಯಕ ರಘು ಹಾಗೂ ವೈಷ್ಣವಿ.ಅಂದಹಾಗೆ ‘ಮಿಥುನರಾಶಿ’ ಧಾರಾವಾಹಿಯಲ್ಲಿ ವೈಷ್ಣವಿ ಅವರು ರಾಶಿ ಪಾತ್ರ ನಿಭಾಯಿಸಿದ್ದರು. ಆಟೋ ಓಡಿಸುವ ಪಾತ್ರ ಇದಾಗಿತ್ತು. ಅಕ್ಕನಿಗೋಸ್ಕರ ಎಲ್ಲ ತ್ಯಾಗ ಮಾಡುವ ರಾಶಿ, ಆಮೇಲೆ ಅನಿರೀಕ್ಷಿತವಾಗಿ ಉದ್ಯಮಿಯನ್ನು ಮದುವೆ ಆಗುತ್ತಾಳೆ. ಹೀಗೆ ಕಥೆ ಸಾಗಿತ್ತು.ವೈಷ್ಣವಿ ಬಿಗ್‌ ಬಾಸ್‌ ಮಿನಿ ಸೀಸನ್‌ಗೂ ಕೂಡ ಕಾಲಿಟ್ಟಿದ್ದರು. ಇನ್ನು ocd ತುಂಬಾ ಇದೆ ಎಂದು ವೇದಿಕೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ದೊಡ್ಮನೆಗೆ ಬಂದ ʻಸೀತಾರಾಮʼ ಖ್ಯಾತಿಯ ಗಗನ್ ಚಿನ್ನಪ್ಪ

ಈಗಾಗಲೇ ಜಗದೀಶ್, ಸೌಂದರ್ಯ ಶೆಟ್ಟಿ, ಅವಿನಾಶ್, ಪ್ರಥಮ ಪ್ರಸಾದ್, ಗಗನ್ ಚಿನ್ನಪ್ಪ, ಸಂಗೀತಾ ಭಟ್ ಹಾಗೂ ಕಾವ್ಯಾ ಗೌಡ ಸೇರಿದಂತೆ ಹಲವು ಸ್ಪರ್ಧಿಗಳು ಬಿಗ್‌ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರೂ ಫ್ಲೈಟ್‌ ಬೋರ್ಡಿಂಗ್ ಪಾಸ್ ಹಿಡಿದುಕೊಂಡೇ ‘ದೊಡ್ಮನೆ’ ಪ್ರಯಾಣ ಆರಂಭಿಸಿರುವುದು ಈ ಸೀಸನ್‌ನ ವಿಶೇಷತೆಯಾಗಿದೆ.

ಇದನ್ನೂ ಓದಿ: Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಗೆ ಎಂಟ್ರಿ ಕೊಟ್ಟ ಲಿಖಿತ್‌ ಗೋಂದಿ

ಮತ್ತೊಂದೆಡೆ, ‘ಅಗ್ನಿ ಪರೀಕ್ಷೆ’ ಕಾರ್ಯಕ್ರಮದ ಮೂಲಕ ವೀಕ್ಷಕರ ವೋಟಿಂಗ್ ಆಧಾರದ ಮೇಲೆ ಕಿರಣ್ ಶಾಸ್ತ್ರಿ ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಕಿರಣ್, ವೀಕ್ಷಕರೇ ತಮ್ಮನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾರೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.