ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada: ಬಿಗ್‌ಬಾಸ್ ಸೀಸನ್‌ 13ರಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌; ಆಡಿಷನ್‌ ಪ್ರಕ್ರಿಯೆ ಹೇಗೆ?

Bigg Boss Kannada: ಇದೀಗ ಹೊಸ ಸೀಸನ್ ಬಗ್ಗೆ ಮತ್ತೊಂದು ಬಿಗ್ ಅಪ್‌ಡೇಟ್‌ ಹೊರಬಿದ್ದಿದೆ.'ಕಲರ್ಸ್ ಕನ್ನಡ'ದ 'ಕ್ವಾಟ್ಲಿ ಕಿಚನ್ ಸೀಸನ್ -2' ಗ್ಯಾಂಡ್ ಲಾಂಚ್ ವೇಳೆ 'ಬಿಗ್ ಬಾಸ್ -13' ಕುರಿತು ಬಿಗ್ ಅಪ್ಲೇಟ್ ನೀಡಲಾಗಿದೆ. ಈ ಸಲ 'ಬಿಗ್ ಬಾಸ್' ಮನೆಗೆ ಕಾಮನ್ ಮ್ಯಾನ್‌ಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಬಿಗ್ ಬಾಸ್ ಸೀಸನ್ -5'ನಲ್ಲಿ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗಿತ್ತು.

ಬಿಗ್‌ ಬಾಸ್ 13ರಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌; ಆಡಿಷನ್‌  ಹೇಗೆ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jun 7, 2026 8:21 AM

‘ಬಿಗ್ ಬಾಸ್ ಕನ್ನಡ 12’ ಹವಾ ಇನ್ನೂ ಕಮ್ಮಿ ಆಗಿಲ್ಲ. ಆಗಲೇ ‘ಬಿಗ್ ಬಾಸ್ ಕನ್ನಡ 13’ (Bigg Boss Kannada 13) ಶುರುವಾಗಲಿದೆ. ಈ ಬಾರಿ ಬಹುಬೇಗನೇ 13ನೇ ಸೀಸನ್ ಶುರುವಾಗಲಿದ್ಯಂತೆ. ಇದೀಗ ಹೊಸ ಸೀಸನ್ ಬಗ್ಗೆ ಮತ್ತೊಂದು ಬಿಗ್ ಅಪ್ಲೇಟ್ ಹೊರಬಿದ್ದಿದೆ.'ಕಲರ್ಸ್ ಕನ್ನಡ'ದ 'ಕ್ವಾಟ್ಲಿ ಕಿಚನ್ ಸೀಸನ್ -2' ಗ್ಯಾಂಡ್ ಲಾಂಚ್ ವೇಳೆ 'ಬಿಗ್ ಬಾಸ್ -13' ಕುರಿತು ಬಿಗ್ ಅಪ್ಲೇಟ್ ನೀಡಲಾಗಿದೆ. ಈ ಸಲ 'ಬಿಗ್ ಬಾಸ್' ಮನೆಗೆ ಕಾಮನ್ ಮ್ಯಾನ್‌ಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಬಿಗ್ ಬಾಸ್ ಸೀಸನ್ -5'ನಲ್ಲಿ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗಿತ್ತು.

ಅರ್ಜಿ ಸಲ್ಲಿಸೋದು ಹೇಗೆ?

ಸಾಮಾನ್ಯ ಜನರು ಬಿಗ್ ಬಾಸ್‌ಗೆ ಬರಲು ಒಂದು ಅರ್ಜಿಯನ್ನು ಭರ್ತಿ ಮಾಡಬೇಕು. ಇದರಲ್ಲಿ ತಮ್ಮ ಹೆಸರು, ವಿಳಾಸ, ವಯಸ್ಸು, ಅಡಿಷನ್ ವಿಡಿಯೋ ಮಾಡಿ colorskannada.jiostar.com ಗೆ ಕಳುಹಿಸಬೇಕು.ಈ ವಿಡಿಯೋವನ್ನು colorskannada.jiostar.com. ಸಾಮಾನ್ಯರ ಆಸೆಗಳಿಗೆ ರೆಕ್ಕೆ ಕೊಡುವ ಸಮಯ ಎಂದು ಬಿಗ್ ಬಾಸ್ ಪ್ರೋಮೊದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: Duniya Vijay: ದುನಿಯಾ ವಿಜಯ್ ಹೊಸ ತೆಲುಗು ಸಿನಿಮಾದಿಂದ ಹೊರ ಬಿತ್ತು ಬಿಗ್ ಅಪ್​​ಡೇಟ್!

ಅವಕಾಶ ಸಿಗದೇ ಇರುವ ಆಸೆಗಳಿಗೆ ಅರ್ಥನೇ ಇರೋದಿಲ್ಲ. ಈ ಬಾರಿ ನಿಮ್ಮಂಥ ಸಾಮಾನ್ಯರ https://vishwavani.news/admin/pages/80304/unpublish/ಆಸೆಗಳಿಗೆ ರೆಕ್ಕೆ ಕಟ್ಟುವ ಅವಕಾಶ ನೀಡುತ್ತಿದ್ದಾರೆ ಬಿಗ್‌ಬಾಸ್. ಕೈತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದೀರಾ? ನಿಮಗೆ ಬಿಗ್‌ಬಾಸ್ ಮನೆಗೆ ಸ್ವಾಗತ. ಪ್ರತಿಬಾರಿ ಬಿಗ್‌ಬಾಸ್ ಶೋ ಬಂದಾಗಲೂ ಕಾಮನ್‌ಮ್ಯಾನ್‌ಗೆ ಅವಕಾಶ ಕೊಡಿ ಎನ್ನುವ ಕೂಗು ಕೇಳಿ ಬರುತ್ತದೆ.

ಈ ಬಾರಿ ಅಂತಹ ಅವಕಾಶ ಸಿಕ್ಕಿದೆ. ನಿಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಸಮಯ ಬಂದಿದೆ. ಈ ಪ್ರಕ್ರಿಯೆ ಮೂಲಕ ನಿಮ್ಮ ಕನಸು ನನಸಾಗಿಸಿಕೊಳ್ಳಿ ಎಂದಿದೆ ವಾಹಿನಿ.

ಇದಕ್ಕೂ ಮುನ್ನ 2017ರಲ್ಲಿ ನಡೆದಿದ್ದ 5ನೇ ಸೀಸನ್‌ನಲ್ಲಿ ಕಾಮನ್‌ಮ್ಯಾನ್‌ಗೆ ಅವಕಾಶ ನೀಡಲಾಗಿತ್ತು. ಮೂಲತಃ ಸೇಲ್ಸ್‌ಮನ್ ದಿವಾಕರ್ ಫಿನಾಲೆವರೆಗೂ ಹೋಗಿ ಗಮನ ಸೆಳೆದಿದ್ದರು. ಅಂತಿಮವಾಗಿ ರನ್ನರ್ ಅಪ್ ಆಗಿ ಸುದ್ದಿ ಆಗಿದ್ದರು. ಬಳಿಕ 'ರೇಸ್' ಎಂಬ ಕನ್ನಡ ಸಿನಿಮಾದಲ್ಲಿ ಕೂಡ ದಿವಾಕರ್ ನಟಿಸಿದ್ದರು.

ಇದನ್ನೂ ಓದಿ: Rachita Ram: ಟಾಲಿವುಡ್‌ಗೆ ರಚಿತಾರಾಮ್ ರೀ ಎಂಟ್ರಿ? ಏನಿದು ಅಪ್‌ಡೇಟ್‌?

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಸೆಪ್ಟೆಂಬರ್ 28, 2025 ರಂದು ಶುರುವಾಯ್ತು. ಈಗಿನ್ನೂ ಜೂನ್ ತಿಂಗಳು. ಈಗಲೇ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಹಾಗಾದ್ರೆ, ಆಗಸ್ಟ್ ವೇಳೆಗೆ ‘ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮ ಶುರುವಾಗಬಹುದಾ?ಎಂಬುದು ವೀಕ್ಷಕರ ಪ್ರಶ್ನೆ ಆಗಿದೆ.