ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಜಗ್ಗಿ ಗರಂ! ಎಗರಾಡಬೇಡ ಎಂದ ಗಗನ್‌

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಈಗ ಜಗ್ಗ ಸಖತ್‌ ವೈಲೆಂಟ್‌ ಆಗಿದ್ದಾರೆ. ಈ ವೀಕೆಮಡ್‌ ಪಂಚಾಯ್ತಿಯಲ್ಲಿ ಜಗ್ಗ ಮಾತ್ರ ಕೋಪ ಮಾಡಿಕೊಳ್ಳಲ್ಲ, ಜಗಳ ಮಾಡಲ್ಲ ಅಂತ ಸುದೀಪ್‌ ಹೇಳಿದ್ದರು. ಆದರೀಗ ಸಖತ್‌ ವೈಲೆಂಟ್‌ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಊಟದ ತಟ್ಟೆ ತೊಳೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಶ್ ಹಾಗೂ ಗಗನ್ ನಡುವೆ ಜಗಳ ನಡೆದಿದೆ.

ಬಿಗ್ ಬಾಸ್ ಮನೆಯಲ್ಲಿ ಜಗ್ಗಿ ಗರಂ! ಎಗರಾಡಬೇಡ ಎಂದ ಗಗನ್‌

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 21, 2026 3:02 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಈಗ ಜಗ್ಗ ಸಖತ್‌ ವೈಲೆಂಟ್‌ ಆಗಿದ್ದಾರೆ. ಈ ವೀಕೆಮಡ್‌ ಪಂಚಾಯ್ತಿಯಲ್ಲಿ ಜಗ್ಗ ಮಾತ್ರ ಕೋಪ ಮಾಡಿಕೊಳ್ಳಲ್ಲ, ಜಗಳ ಮಾಡಲ್ಲ ಅಂತ ಸುದೀಪ್‌ ಹೇಳಿದ್ದರು. ಆದರೀಗ ಸಖತ್‌ ವೈಲೆಂಟ್‌ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಊಟದ ತಟ್ಟೆ ತೊಳೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಶ್ (Jagadeesh Gagan) ಹಾಗೂ ಗಗನ್ ನಡುವೆ ಜಗಳ ನಡೆದಿದೆ.

ಈಗ ಜಗ್ಗ ವೈಲಂಟ್

ಊಟ ಮಾಡಿದ ನಂತರ ಎಂಜಲು ತಟ್ಟೆಗಳನ್ನು ಅಲ್ಲೇ ಬಿಟ್ಟು ಹೋಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಗಗನ್ ಪ್ರಶ್ನಿಸಿದಾಗ, ಜಗ್ಗಿ ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ವಾದಿಸಿದ್ದಾರೆ ‘ಸಮಾಧಾನದಿಂದ ಮಾತನಾಡು. ತಮಾಷೆಯನ್ನು ತಮಾಷೆಯಾಗಿ ತೆಗೆದುಕೋ. ನನ್ನ ಹತ್ತಿರ ಎಗರಾಡಬೇಡ’ ಎಂದು ಗರಂ ಆಗಿದ್ದಾರೆ. ಜಗ್ಗಿ ಇಷ್ಟು ದಿನ ಸೈಲೆಂಟ್ ಆಗಿದ್ದರು. ಈಗ ಅವರು ವೈಲಂಟ್ ಆಗಿದ್ದಾರೆ.

ಇದನ್ನೂ ಓದಿ: Irumudi OTT: ಥಿಯೇಟರ್‌ನಲ್ಲಿ ಹಿಟ್, ಒಟಿಟಿಯಲ್ಲಿ ‘ಇರುಮುಡಿ’ ಟ್ರೋಲ್

ಮತ್ತೊಂದು ಕಡೆ ಮಂಜನನ್ನು ಎಲ್ಲ ಸ್ಪರ್ಧಿಗಳು ಟಾರ್ಗೆಟ್‌ ಮಾಡುತ್ತಿದ್ದಾರೆ. ಮಿಡ್‌ ವೀಕ್‌ ಎಲಿಮಿನೇಶನ್‌ ತಪ್ಪಿಸಿಕೊಳ್ಳಲು ಒಬ್ಬ ಸದಸ್ಯರನ್ನು ಹೊರಗೆ ಇಡಬೇಕಿತ್ತು. ಅದರಲ್ಲಿ ಮಂಜು ಅವರನ್ನು ಎಲ್ಲ ಸ್ಪರ್ಧಿಗಳು ಟಾರ್ಗೆಟ್‌ ಮಾಡಿದರು. ಧನುಷ್‌ ಕುಡ ಮಂಜು ಅವರಿಗೆ ಅರ್ಹತೆ ಇಲ್ಲ ಎಂದರು. ಬೇರೆಯವರ ವಿಚಾರ ಧಾರೆಗಳನ್ನು ತುಳಿಯೋಕೆ ಹೊರಟ ಮಂಜ ಹೊರಗೆ ಹೋಗಬೇಕು ಎಂದು ಕಿರಣ್‌ ಹೇಳಿದರು. ಒಟ್ಟಾರೆಯಾಗಿ ಮನೆಮಂದಿ ಈಗ ಮಂಜರನ್ನು ಟಾರ್ಗೆಟ್‌ ಮಾಡಿದ್ದಾರೆ.

ಬಿಗ್‌ ಬಾಸ್‌ (Bigg Boss kannada 13) ಅಂದ್ರೆನೇ ಹಾಗೇ. ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡ್ತಾನೆ ಇರುತ್ತೆ. ಹೊಸ ಪ್ರೋಮೋ ಔಟ್‌ ಆಗಿದೆ. ಅದರಲ್ಲೂ ಮಂಜ (Manja Kiran) , ಕಿರಣ್‌ ಮನೆಯೊಳಗೆ ಎಂಟ್ರಿ ಕೊಟ್ಟಂತಿದೆ. ಆದರೆ ಒಂದು ಶಾಕಿಂಗ್‌ ಅಪ್‌ಡೇಟ್‌ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ನೀಡಿದೆ. ಅದುವೇ EMERGENCY EXIT!

ಇದನ್ನೂ ಓದಿ: Bigg Boss Kannada 13: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ EMERGENCY EXIT! ಎಲ್ಲ ಸ್ಪರ್ಧಿಗಳು ನಾಮಿನೇಟ್‌

ಸ್ಪರ್ಧಿಗಳು ಮಲಗಿರುವಾಗ ಸೈರನ್‌ ಆಗಿದೆ. ಆಗ ಸುದೀಪ್‌ ಅವರು ಅನೌನ್ಸ್‌ ಮಾಡಿದ್ದಾರೆ. ಪ್ರತಿ ಸ್ಪರ್ಧಿಗಳನ್ನು ನಾವೇ ನಾಮಿನೇಟ್‌ ಮಾಡುತ್ತಿದ್ದೇವೆ. ಈ ವಾರ ಯಾವಾಗ ಏನು ಬೇಕಾದರೂ ಆಗುತ್ತೆ. EMERGENCY EXIT ರೆಡಿ ಆಗಿ ಎಂದಿದ್ದಾರೆ ಕಿಚ್ಚ.