ಸ್ಯಾಂಡಲ್‌ವುಡ್‌ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಫ್ಯಾಮಿಲಿ ಎಂಟ್ರಿ; ʻಡಾಲಿʼ ಧನಂಜಯ್ ನಟನೆಯ ʻಅಣ್ಣ ಫ್ರಮ್ ಮೆಕ್ಸಿಕೋʼ ಚಿತ್ರಕ್ಕೆ ಹೂಡಿಕೆ
ನಟ ಡಾಲಿ ಧನಂಜಯ್ ಅಭಿನಯದ 'ಅಣ್ಣ from Mexico' ಚಿತ್ರದ ಟೀಸರ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ನಿರ್ಮಾಣಕ್ಕೆ ಇಳಿದಿದ್ದಾರೆ.
-
ʻಡಾಲಿʼ ಧನಂಜಯ್ ನಟನೆಯ 'ಅಣ್ಣ from Mexico' ಚಿತ್ರದ ಟೀಸರ್ ಈಚೆಗೆ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಅಂದಹಾಗೆ, ಈ ಸಿನಿಮಾದ ನಿರ್ಮಾಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬದ ಪಾಲು ಕೂಡ ಇದೆ.
ನಿರ್ಮಾಣ ಸಂಸ್ಥೆ ಆರಂಭಿಸಲು ಕಾರಣವೇನು?
"ಈ ಟೀಸರ್ ತುಂಬಾ ಥ್ರಿಲ್ಲಿಂಗ್ ಆಗಿದೆ, ಹೊಸತನದಿಂದ ಕೂಡಿದೆ. ಶ್ರೀಮಂತಿಕೆಯಿಂದ ಕಾಣಿಸುತ್ತಿದೆ. ಧನಂಜಯ್ ಆಕ್ಟಿಂಗ್ ಸೂಪರ್. ಅದರಲ್ಲೂ ಅವರು ಧರಿಸಿರುವ ಕರ್ನಾಟಕದ ಲಾಕೆಟ್ ಬಹಳ ಇಷ್ಟವಾಯ್ತು. ಟೀಸರ್‌ನಿಂದಲೇ ಈ ಸಿನಿಮಾ ಹೇಗಿರಬಹುದು ಎಂಬ ಕ್ಯೂರಿಯಾಸಿಟಿ ಹೆಚ್ಚಿಸುತ್ತದೆ. ನಾವು ಚಿತ್ರರಂಗಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಚಿತ್ರ ನಿರ್ಮಾಣ ಆರಂಭಿಸಿದ್ದೇವೆ. ನಾವು ಕೂಡ ಕನ್ನಡ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದವರು. ಕನ್ನಡ ಚಿತ್ರರಂಗ ಸಾಕಷ್ಟು ಶ್ರೀಮಂತವಾಗಿದೆ. ಈ ಚಿತ್ರದ ಕಥೆ ಕೇಳಿದ ಮೇಲೆ ಒಂದೊಳ್ಳೆಯ ಪ್ರಯೋಗ ಮಾಡುವ ಉದ್ದೇಶದಿಂದ ಚಾಮುಂಡಿ ತಾಯಿಯ ಆಶೀರ್ವಾದ ಪಡೆದು ಈ ಜರ್ನಿಯನ್ನು ಶುರು ಮಾಡಿದ್ದೇವೆ" ಎಂದು ಹೇಳುತ್ತಾರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್.
Sivakarthikeyan: ಬಹುನಿರೀಕ್ಷಿತ ʻಪರಾಶಕ್ತಿʼ ಸಿನಿಮಾದಲ್ಲಿ ʻಡಾಲಿʼ ಧನಂಜಯ್ ನಟನೆ; ಏನು ಪಾತ್ರ?
ಡಾಲಿ ಧನಂಜಯ್ ಹೇಳಿದ್ದೇನು?
"ಈ ಸಿನಿಮಾ ಶುರುವಾದ ಪ್ರಕ್ರಿಯೆ ನನಗೆ ಬಹಳ ಖುಷಿ ನೀಡಿತು. ನನ್ನ ಹೊಯ್ಸಳ ಸಿನಿಮಾದ ಶೂಟಿಂಗ್ ಬೆಳಗಾವಿಯಲ್ಲಿ ನಡೆಯುವಾಗ ನಾನು ಲಕ್ಷ್ಮೀ ಮೇಡಂ ಮನೆಗೆ ಊಟಕ್ಕೆ ಹೋಗಿದ್ದೆ. ʻನಮ್ಮ ಬ್ರದರ್‌ಗೆ (ಚನ್ನರಾಜ ಹಟ್ಟಿಹೊಳಿ) ಸಿನಿಮಾ ಮಾಡುವ ಆಸಕ್ತಿ ಇದೆ. ಏನು ಮಾಡಬಹುದು ನೋಡಿʼ ಎಂದು ಆಗ ಹೇಳಿದ್ದರು. ಆ ಬಳಿಕ ಈ ಜರ್ನಿ ಶುರುವಾಯ್ತು. ಚನ್ನರಾಜ ಅವರು ಪ್ರೊಡಕ್ಷನ್ ಮಾಡಿದ್ದಾರೆ ಎಂಬುವುದು ಗೊತ್ತಾಯ್ತು. ಅವರಿಗೆ ಸಖತ್ ಸ್ಟೈಲೀಶ್ ಆಗಿ, ಆಕ್ಷನ್ ಈ ರೀತಿ ನನ್ನನ್ನು ತೋರಿಸಬೇಕು ಎಂದುಕೊಂಡಿದ್ದರು. ಆದರೆ ಮೇಡಂ ಬರ್ತಾರೆ ಎಂದಾಗ ಆಕ್ಷನ್, ಮಾತ್ರವಲ್ಲ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಕೂಡ ಇರಬೇಕು ಎಂದುಕೊಂಡೆವು. ಯಾಕೆಂದರೆ ಅವರು ಜವಾಬ್ದಾರಿಯುವ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ ನಾವು ಬಡವ ರಾಸ್ಕಲ್ ಡೈರೆಕ್ಟರ್ ಅವರನ್ನು ಆಯ್ಕೆ ಮಾಡಿದೆವು. ಹೀಗೆ ಒಳ್ಳೆಯ ಟೀಮ್ ರೆಡಿ ಆಯ್ತು" ಎನ್ನುತ್ತಾರೆ ಡಾಲಿ ಧನಂಜಯ್.
3 BHK Movie: ʼ3 ಬಿಎಚ್‌ಕೆʼ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ಚೈತ್ರಾ ಆಚಾರ್; ಚಿತ್ರಕ್ಕೆ ಡಾಲಿ ಧನಂಜಯ್ ಸಾಥ್
'ಅಣ್ಣ from Mexico'ಚಿತ್ರಕ್ಕೆ ಬಡವ ರಾಸ್ಕಲ್ ಖ್ಯಾತಿಯ ನಿರ್ದೇಶಕ ಶಂಕರ್ ಗುರು ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದು, ರಂಗಾಯಣ ರಘು, ನಾಗಭೂಷಣ, ಪೂರ್ಣ ಮೈಸೂರು ಈ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದು, ಐರಾ ಫಿಲ್ಮ್ಸ್ ಹಾಗೂ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.