ಮನೆಯಲ್ಲೇ ಕುಳಿತು ಈ 4 ಸೂಪರ್ ಹಿಟ್ ಸಿನಿಮಾಗಳನ್ನು ನೋಡಿ; ಈ ವಾರ ಒಟಿಟಿಯಲ್ಲಿ ಯಾವೆಲ್ಲಾ ಚಿತ್ರಗಳು ಬರ್ತಿವೆ ಗೊತ್ತಾ?
OTT releases of this week: ಚಿತ್ರಮಂದಿರಗಳಲ್ಲಿ ಕೋಟಿ ಕೋಟಿ ಲೂಟಿ ಮಾಡಿದ ನಾಲ್ಕು ಯಶಸ್ವಿ ಸಿನಿಮಾಗಳು ಈ ವಾರ ಓಟಿಟಿ ವೇದಿಕೆಗೆ ಲಗ್ಗೆ ಇಟ್ಟಿವೆ. ಅಡಿವಿ ಶೇಷ್ ನಟನೆಯ ಆಕ್ಷನ್ ಸಿನಿಮಾ 'ಡಕಾಯಿತ್', ಮಲಯಾಳಂನ 'ವಾಳಾ 2' ಮುಂತಾದ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿವೆ.
-
ಈ ವಾರ ಓಟಿಟಿ ಪ್ರಿಯರಿಗೆ ಸಖತ್ ಸಿನಿಮಾಗಳೇ ಕಾಯುತ್ತಿವೆ. ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು ಸರಿಯಾದ ಸಮಯಕ್ಕೆ ರಿಲೀಸ್ ಆಗದೇ ಇರುವುದು ಒಂದು ಕಡೆಯಾದರೆ, ನಿರೀಕ್ಷೆಯನ್ನೇ ಹುಟ್ಟುಹಾಕದ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಬೆಳೆ ತೆಗೆದು ನಿರ್ಮಾಪಕರ ಜೇಬು ತುಂಬಿಸಿವೆ. ಜೊತೆಗೆ ಒಂದೊಂದಾಗಿ ಓಟಿಟಿಗೆ ಈಗ ಲಗ್ಗೆ ಇಡುತ್ತಿವೆ. ಈ ವಾರ ಓಟಿಟಿ ಪ್ರಿಯರಿಗಾಗಿ 4 ಯಶಸ್ವಿ ಸಿನಿಮಾಗಳು ಡಿಜಿಟಲ್ ವೇದಿಕೆಗೆ ಬಂದಿವೆ.
ಡಕಾಯಿತ್ (Dacoit: A Love Story)
ಅಡಿವಿ ಶೇಷ್ ಮತ್ತು ಮೃಣಾಲ್ ಠಾಕೂರ್ ನಟಿಸಿರುವ ಸಿನಿಮಾ ‘ಡಕಾಯಿತ್’. ಅನ್ನಪೂರ್ಣ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸುಪ್ರಿಯಾ ಯಾರ್ಲಗಡ್ಡ ನಿರ್ಮಿಸಿರುವ ಈ ಚಿತ್ರಕ್ಕೆ ಶಾನಿಯೆಲ್ ಡಿಯೋ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಜೊತೆ ಸೇರಿ ಅಡಿವಿ ಶೇಷ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಇದರಲ್ಲಿ ಅನುರಾಗ್ ಕಶ್ಯಪ್, ಅತುಲ್ ಕುಲಕರ್ಣಿ, ಪ್ರಕಾಶ್ ರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಉತ್ತಮ ಯಶಸ್ಸು ಕಂಡಿತ್ತು. ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಆಕ್ಷನ್ ಒಳಗೊಂಡ ಈ ಪ್ರೇಮಕಥೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾವು 50 ಕೋಟಿ ರೂ.ಗಳಿಗೂ ಅಧಿಕ ಕಮಾಯಿ ಮಾಡಿದೆ.
ಡೇಟಿಂಗ್ ಗಾಸಿಪ್ ನಡುವೆಯೇ ಮೃಣಾಲ್ ಠಾಕೂರ್‌ಗೆ ದೊಡ್ಡ ಆಫರ್ ಕೊಟ್ಟ ನಟ ಧನುಷ್! ಏನಿದು ಹೊಸ ನ್ಯೂಸ್?
ವಾಳಾ 2 (Vaala 2)
ಮಲಯಾಳಂನಲ್ಲಿ ಸಣ್ಣ ಸಿನಿಮಾವಾಗಿ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿದ ಚಿತ್ರ ‘ವಾಳಾ 2’. ಕೇವಲ 10 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 220 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿ ವಾಳಾ 2 ಕೂಡ ಸ್ಥಾನ ಪಡೆದಿದೆ.
ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಈ ಸಿನಿಮಾ ಈಗ ಜಿಯೋ ಹಾಟ್‌ಸ್ಟಾರ್‌ನಲ್ಲಿ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಶಾಲೆಯಲ್ಲಿ 'ವೇಸ್ಟ್ ಬ್ಯಾಚ್' ಎಂದು ಹೆಸರು ಪಡೆದ ನಾಲ್ವರು ಹುಡುಗರು ಜೀವನದಲ್ಲಿ ಸೆಟಲ್ ಆಗಲು ಹೇಗೆ ಕಷ್ಟಪಡುತ್ತಾರೆ ಎಂಬುದೇ ಈ ಚಿತ್ರದ ಕಥೆ. ಹೊಸಬರೇ ನಟಿಸಿರುವ ಈ ಸಿನಿಮಾದಲ್ಲಿನ ಕಥೆ, ಎಮೋಷನ್ಸ್ ಮತ್ತು ಕಾಮಿಡಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.
ಲವ್ ಇನ್ಸೂರೆನ್ಸ್ ಕಂಪನಿ (LIK)
ಪ್ರದೀಪ್ ರಂಗನಾಥನ್ ಮತ್ತು ಕೃತಿ ಶೆಟ್ಟಿ ನಟಿಸಿರುವ ‘LIK - ಲವ್ ಇನ್ಸೂರೆನ್ಸ್ ಕಂಪನಿ’ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರದಲ್ಲಿ ಎಸ್. ಜೆ. ಸೂರ್ಯ ಪ್ರಮುಖ ಪಾತ್ರ ಮಾಡಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಒಂದು ಮಟ್ಟಕ್ಕೆ ಕಲೆಕ್ಷನ್ ಮಾಡಿದೆ. ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವಿವಿಧ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
Kartavya OTT: ಈ ಮೂವಿ ಮೂಲಕ ಮತ್ತೆ ಸೈಫ್ ಅಲಿ ಖಾನ್ ಒಟಿಟಿಗೆ ಎಂಟ್ರಿ! ಸ್ಟ್ರೀಮಿಂಗ್ ಯಾವಾಗ?
ಭರತನಾಟ್ಯ 2: ಮೋಹಿನಿಯಾಟ್ಟಂ
ಸೈಜು ಕುರುಪ್ ಅಭಿನಯದ ‘ಭರತನಾಟ್ಯ 2: ಮೋಹಿನಿಯಾಟ್ಟಂ’ ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ನೆಟ್‌ಫ್ಲಿಕ್ಸ್‌ನಲ್ಲಿ (Netflix) ಸ್ಟ್ರೀಮಿಂಗ್ ಆಗುತ್ತಿದೆ. 2024ರಲ್ಲಿ ಬಿಡುಗಡೆಯಾಗಿದ್ದ ‘ಭರತನಾಟ್ಯ’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾ, ಹೆಚ್ಚು ಗಂಭೀರವಾದ ಕ್ರೈಮ್ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ.
ಶಶಿಧರನ್ ನಾಯರ್ ಕುಟುಂಬದ ರಹಸ್ಯವೊಂದು ಬಯಲಾದಾಗ ಎದುರಾಗುವ ಸಂಕಷ್ಟಗಳು ಮತ್ತು ಅಪರಾಧ ಜಗತ್ತಿನ ಕರಾಳ ಮುಖಗಳನ್ನು ಹಾಸ್ಯದೊಂದಿಗೆ ಹೇಳಲಾಗಿದೆ. ಸೈಜು ಕುರುಪ್, ಸೂರಜ್ ವೆಂಜರಮೂಡು, ಜಗದೀಶ್, ವಿನಯ್ ಫೋರ್ಟ್, ಕಲಾರಂಜಿನಿ ಮುಂತಾದವರು ನಟಿಸಿದ್ದು, ಕೃಷ್ಣದಾಸ್ ಮುರಳಿ ನಿರ್ದೇಶನ ಮಾಡಿದ್ದಾರೆ. 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 40 ಕೋಟಿಗೂ ಅಧಿಕ ಗಳಿಕೆ ಮಾಡಿದೆ.