ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ಮಗುವಿನ ವಿಡಿಯೊ ಮಾಡಿದವನ ಮೇಲೆ ನಟಿ ದೀಪಿಕಾ ಫುಲ್‌ ಗರಂ!

Deepika Padukone Daughter: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ದೀಪಿಕಾ ತಮ್ಮ ಮಗುವಿನ ಜೊತೆಗೆ ಪ್ರಯಾಣಿಸಿದ್ದಾರೆ. ಅವರ ಮಗುವಿಗೆ ಒಂದು ವರ್ಷವಾಗುತ್ತಿದ್ದರೂ ಕೂಡ ಇನ್ನು ಅವರ ಮಗು ವಿನ ಫೋಟೊ ಅವರು ರಿವೀಲ್ ಮಾಡಿರಲಿಲ್ಲ. ದೀಪಿಕಾ ಮಗುವನ್ನು ಅಪ್ಪಿಕೊಂಡು ನಡೆಯುತ್ತಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಈ ವೇಳೆ ದೀಪಿಕಾ ಆ ವ್ಯಕ್ತಿಯನ್ನು ರೆಕಾರ್ಡ್ ಮಾಡುವುದನ್ನು ನಿಲ್ಲಿಸುವಂತೆ ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಮಗುವಿನ ವಿಡಿಯೊ ಮಾಡಿದವನ ಮೇಲೆ ನಟಿ ದೀಪಿಕಾ ಫುಲ್‌ ಗರಂ!

Profile Pushpa Kumari Aug 25, 2025 4:56 PM

ನವದೆಹಲಿ: ಸೆಲೆಬ್ರಿಟಿಗಳು ಸಿನಿಮಾ ರಂಗದಲ್ಲಿ ಫೇಮಸ್ ಆದ ಬಳಿಕ ಅವರ ವೈಯಕ್ತಿಕ ವಿಚಾರಗಳು ಜನರಿಗೆ ಬಹಳ ಕುತೂಹಲಕಾರಿಯಾಗಿರುತ್ತದೆ. ಅಂತೆಯೇ ಮದುವೆಯಾದ ಬಳಿಕ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನಕ್ಕೆ ಅಧಿಕ ಆದ್ಯತೆ ನೀಡುತ್ತಿರುವುದು ಕಾಣಬಹುದು. ಅದರಲ್ಲೂ ಮಕ್ಕಳು ಜನಿಸಿದರೆ ಅವರನ್ನು ಸಾಮಾಜಿಕ ಜಾಲತಾಣ ಮಾಧ್ಯಮದ ಮುಂದೆ ತಮ್ಮ ಮಕ್ಕಳ ಮುಖ ತೋರ್ಪಡಿಸಲು ಇಚ್ಛಿಸಲಾರರು. ಅಂತೆಯೇ ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ನಟ ರಣವೀರ್ ಸಿಂಗ್ ಕೂಡ ತಮ್ಮ ಮಗುವಿನ ಆರೈಕೆಗೆ ಅಧಿಕ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದುವರೆಗೆ ಮಗುವಿನ ಫೋಟೊ ಕೂಡ ಅವರು ರಿವೀಲ್ ಮಾಡಿಲ್ಲ. ಹಾಗಿದ್ದರೂ ಇತ್ತೀಚೆಗಷ್ಟೆ ಅವರ ಮಗುವಿನ ಜೊತೆಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣಕ್ಕೆಂದು ತೆರಳಿದ್ದಾಗ ಮಗುವಿನ ಫೋಟೋ ರಿವಿಲ್ ಆಗಿದೆ.

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ದೀಪಿಕಾ ತಮ್ಮ ಮಗುವಿನ ಜೊತೆಗೆ ಪ್ರಯಾಣಿಸಿದ್ದಾರೆ. ಅವರ ಮಗುವಿಗೆ ಒಂದು ವರ್ಷವಾಗುತ್ತಿದ್ದರೂ ಕೂಡ ಇನ್ನು ಅವರ ಮಗುವಿನ ಫೋಟೊ ಅವರು ರಿವೀಲ್ ಮಾಡಿರಲಿಲ್ಲ. ದೀಪಿಕಾ ಮಗುವನ್ನು ಅಪ್ಪಿಕೊಂಡು ನಡೆಯುತ್ತಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಈ ವೇಳೆ ದೀಪಿಕಾ ಆ ವ್ಯಕ್ತಿಯನ್ನು ರೆಕಾರ್ಡ್ ಮಾಡುವುದನ್ನು ನಿಲ್ಲಿಸುವಂತೆ ಕಟ್ಟುನಿಟ್ಟಾಗಿ ಹೇಳಿದ್ದಾರೆ.

2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ಮತ್ತು ರಣವೀರ್ ಬಾಲಿವುಡ್ ಫೇಮಸ್ ಕಪಲ್ ಎಂದೇ ಹೇಳಬಹುದು. ಕಳೆದ ವರ್ಷ ಸೆಪ್ಟೆಂಬರ್ 8 ಅವರಿಗೆ ಹೆಣ್ಣು ಮಗುವಾಗಿದ್ದು ದುವಾ ಎಂದು ಹೆಸರಿಟ್ಟಿದ್ದರು. ಈ ಹಿಂದೆಯೇ ತಮ್ಮ ಮಗು ದುವಾ ಅವರನ್ನು ಕ್ಯಾಮೆರಾಗಳಿಂದ ದೂರ ವಿಡುವಂತೆ ದಂಪತಿಗಳು ಮಾಧ್ಯಮಕ್ಕೆ ಮನವಿಯನ್ನು ಮಾಡಿದ್ದರು. ಆದರೆ ಅವರ ಅನುಮತಿ ಇಲ್ಲದೆಯೂ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಕ್ಕೆ ನೆಟಿಜನ್‌ಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ವಿಡಿಯೋವನ್ನು ತೆಗೆದು ಹಾಕುವಂತೆ ಆಗ್ರಹಿಸಿದ್ದಾರೆ. ಈ ಮೂಲಕ ಸೆಲೆಬ್ರಿಟಿಗಳ ಗೌಪ್ಯತೆಯನ್ನು ಗೌರವಿಸುವಂತೆ ವಿಡಿಯೋ ಕಂಡ ನೆಟ್ಟಿಗರೊಬ್ಬರು ಕಾಮೆಂಟ್ ಕೂಡ ಹಾಕಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪೋಷಕರು ಅನುಮತಿ ನೀಡದಿದ್ದರೆ ಇದನ್ನು ಪೋಸ್ಟ್ ಮಾಡುವುದು ಸರಿಯಲ್ಲ. ಇದು ಅವರ ಗೌಪ್ಯತೆಯ ಮೇಲೆ ಮಾಡುವ ಆಕ್ರಮಣಕಾರಿ ನಡೆ ಎಂದು‌ ಬಳಕೆದಾರ ರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ದೀಪಿಕಾ ತನ್ನ ಮಗುವಿನ ಮುಖವನ್ನು ತೋರಿಸಬೇಡಿ ಎಂದು ಜನರನ್ನು ಬಹಿರಂಗವಾಗಿ ಕೇಳಿ ಕೊಂಡಿ ದ್ದಾರೆ, ಆದರೂ ಯಾರೋ ಒಬ್ಬರು ಅದನ್ನು ಚಿತ್ರೀಕರಿಸಿದ್ದಾರೆ. ಇದು ಓರ್ವ ನಟಿಗೆ, ತಾಯಿಗೆ ಅಗೌರವ ಸೂಚಿಸಿದಂತಿದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಹಾಕಿದ್ದಾರೆ.

ಇದನ್ನು ಓದಿ:Nidradevi Next Door Movie: ‘ನಿದ್ರಾದೇವಿ Next Door’ ಚಿತ್ರದ ಟೈಟಲ್‌ ಸಾಂಗ್‌ ಔಟ್‌: ಸೆ.12ಕ್ಕೆ ಚಿತ್ರ ರಿಲೀಸ್‌

ಸೆಲೆಬ್ರಿಟಿಗಳ ಬದುಕಲ್ಲಿ ಈತರ ಆಗುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಕೂಡ ಇದೇ ಪರಿಸ್ಥಿತಿ ನಿಭಾಯಿಸಿದ್ದಾರೆ. ತಮ್ಮ ಮಗಳು ರಾಹಾಳ ಫೋಟೋ ವೈರಲ್ ಆದ ಬಳಿಕ ದಂಪತಿಗಳು ಸುರಕ್ಷತೆ ಮತ್ತು ಗೌಪ್ಯತೆಯ ಕಾರಣಗಳನ್ನು ಉಲ್ಲೇಖಿಸಿ ಮಾಧ್ಯಮ ಗಳಿಂದ ತಮ್ಮ ಮಗುವನ್ನು ದೂರ ಉಳಿಸುವ ಬಗ್ಗೆ ಚಿಂತನೆ ನಡೆಸಿದ್ದನ್ನು ತಿಳಿಸಿದ್ದರು. ಬಳಿಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಕೂಡ ತಮ್ಮ ಮಕ್ಕಳ ಫೋಟೊ ಹರಿದಾಡಿದ್ದ ವಿಚಾರಕ್ಕೆ ಸಾಕಷ್ಟು ಸಲ ಅಸಮಧಾನಗೊಂಡಿದ್ದಾರೆ.