Shiva Rajkumar: ಶಿವಣ್ಣನ ತೋಳಿನಲ್ಲಿ ಮಗುವಾದ ಪ್ರೀತಮ್! ಹ್ಯಾಟ್ರಿಕ್ ಹೀರೋ ಕ್ಯೂಟ್ ವಿಡಿಯೋ ವೈರಲ್
Shivanna: ಜನಮನ್ನಣೆ ಗಳಿಸಿರುವ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್’ ಹೊಸ ಸೀಸನ್ ನವೆಂಬರ್ 15ರಂದು ಆರಂಭವಾಯ್ತು. ಹೊಸ ಥೀಮ್‌ಗಳು, ಅದ್ಭುತ ಪ್ರತಿಭೆಗಳ ಪ್ರದರ್ಶನಗಳೊಂದಿಗೆ ಈ ಬಾರಿಯ ಶೋ ಮತ್ತಷ್ಟು ಮನ ರಂಜನೆ ನೀಡುತ್ತಲೇ ಇದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ರಲ್ಲಿ ಗದಗದಿಂದ ಪ್ರೀತಂ ಎಂಬ ಬಾಲಕ ಬಂದಿದ್ದಾನೆ. ಆತನಿಗೆ ಇನ್ನೂ ಏಳುವರ್ಷ. ಆದರೆ, ಅವನ ಪ್ರತಿಭೆ ಮಾತ್ರ ವಯಸ್ಸಿಗೂ ಮೀರಿದ್ದು.
ಶಿವಣ್ಣ ಪ್ರೀತಮ್ -
ಜನಮನ್ನಣೆ ಗಳಿಸಿರುವ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್’ ಹೊಸ (Dance Karnataka Dance) ಸೀಸನ್ ನವೆಂಬರ್ 15ರಂದು ಆರಂಭವಾಯ್ತು. ಹೊಸ ಥೀಮ್‌ಗಳು, ಅದ್ಭುತ ಪ್ರತಿಭೆಗಳ ಪ್ರದರ್ಶನಗಳೊಂದಿಗೆ ಈ ಬಾರಿಯ ಶೋ ಮತ್ತಷ್ಟು ಮನ ರಂಜನೆ ನೀಡುತ್ತಲೇ ಇದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ರಲ್ಲಿ ಗದಗದಿಂದ ಪ್ರೀತಂ ಎಂಬ ಬಾಲಕ ಬಂದಿದ್ದಾನೆ. ಆತನಿಗೆ ಇನ್ನೂ ಏಳುವರ್ಷ. ಆದರೆ, ಅವನ ಪ್ರತಿಭೆ ಮಾತ್ರ ವಯಸ್ಸಿಗೂ ಮೀರಿದ್ದು. ಅವನ ಡ್ಯಾನ್ಸ್ ಅಂದ್ರೆ ಶಿವಣ್ಣ ಅವರಿಂದ ಹಿಡಿದು ಅನೇಕರು ಮೆಚ್ಚಿಕೊಳ್ತಾರೆ. ಇದೀಗ ಪ್ರೀತಮ್ ಜೊತೆ ಶಿವಣ್ಣ ಮಗುವಾಗಿದ್ದಾರೆ. ಈ ಕ್ಯೂಟ್ ವಿಡಿಯೋವನ್ನು ಶಿವಣ್ಣ (Shivanna) ಶೇರ್ ಮಾಡಿಕೊಂಡಿದ್ದಾರೆ.
ಅನೇಕರು ಮೆಚ್ಚುಗೆ
ಪ್ರೀತಮ್ ಅವರ ಪ್ರತಿಭೆ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಜಡ್ಜ್ಗಳು ಈ ಪ್ರತಿಭೆಯನ್ನು ಕಂಡು ಶಾಕ್ ಆಗುತ್ತಲೇ ಇರ್ತಾರೆ. ಪ್ರೀತಮ್ ಹಾಗೂ ಶಿವಣ್ಣ ಇದೀ ಸೆಟ್‌ನಲ್ಲಿ ಸಮಯ ಕಳೆದಿದ್ದಾರೆ. ಪ್ರೀತಮ್‌ನನ್ನು ತಬ್ಬಿಕೊಂಡು ಸೆಟ್‌ನಲ್ಲಿಯೇ ಮಲಗಿ ಹಾಡು ಹೇಳಿದ್ದಾರೆ ಶಿವಣ್ಣ, ಪ್ರೀತಿಮ್ ಬಾಲಕ ಶಿವಣ್ಣನ ತೋಳಿನಲ್ಲಿ ಮಗು ರೀತಿ ಮಲಗಿದ್ದಾನೆ. ಈ ಕ್ಯೂಟ್ ವಿಡಿಯೋವನ್ನು ಗೀತಕ್ಕ ಅವರು ರೇಕಾರ್ಡ್ ಕೂಡ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಅನುಶ್ರೀ ಈ ವಿಡಿಯೋ ಶೇರ್ ಮಾಡಿ, ಪದಗಳೇ ಸಿಗುತ್ತಿಲ್ಲ…
ಈ ಬಾಂಧವ್ಯದಲ್ಲಿ ಕಲ್ಮಶವೇ ಇಲ್ಲ….
ಪ್ರೀತಿನೇ ಎಲ್ಲ ಎಂದು ಬರೆದುಕೊಂಡಿದ್ದಾರೆ. ಆಡೋಣ ನೀನು ನಾನು ಎಂಬ ರಾಜ್‌ಕುಮಾರ್ ಅವರ ಸಾಂಗ್ ಕೂಡ ಈ ಕ್ಯೂಟ್ ವಿಡಿಯೋಗೆ ಹಾಕಿದ್ದಾರೆ.
ವಿಡಿಯೋ ಭರ್ಜರಿ ವೈರಲ್
ಈ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ಶಿವಣ್ಣ ಕ್ಯೂಟ್‌ನೆಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನಮ್ ಶಿವಣ್ಣ ಹೀಗೆ ಇದ್ರೇನೆ ಚೆಂದ ಅಂತ ಕಮೆಂಟ್ ಮಾಡಿದ್ದಾರೆ ನೆಟ್ಟಿಗರು.
ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 7:30ಕ್ಕೆ ಪ್ರಸಾರವಾಗುತ್ತಿದೆ ಶೋ. ತನ್ನ ಮಾತಿನ ಮೂಲಕ ಜನಮನ್ನಣೆ ಪಡೆದ ಅನುಶ್ರೀ ಅವರು ಈ ಸೀಸನ್‌ನ ಆಂಕರ್ , ಜಡ್ಜಸ್ ಪ್ಯಾನೆಲ್‌ನಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಮತ್ತು ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಇದ್ದಾರೆ.
ಪ್ರತಿ ಎಪಿಸೋಡ್‌ನಲ್ಲಿ ವಿಭಿನ್ನ ಥೀಮ್‌ಗಳು, ರೋಮಾಂಚನಕಾರಿ ಫೇಸ್‌ಆಫ್‌ಗಳು ಮತ್ತು ಕರ್ನಾಟಕದ ಸಂಸ್ಕೃತಿ, ರಿದಮ್ ಮತ್ತು ಆತ್ಮಸ್ಥೈರ್ಯವನ್ನು ಪ್ರತಿಬಿಂಬಿಸುವ ಡಾನ್ಸ್ ಗಳು ಇದ್ದು, ಇದು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ