ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮಿಳು ನಟ ಧನುಷ್‌ 55ನೇ ಸಿನಿಮಾಗೆ ʻಓಂʼ ಟೈಟಲ್‌; ರಿಲೀಸ್‌ ಡೇಟ್‌ ಘೋಷಣೆ!

ತಮಿಳು ನಟ ಧನುಷ್ ಅವರ 55ನೇ ಚಿತ್ರಕ್ಕೆ ‘ಓಂ’ ಎಂದು ಶೀರ್ಷಿಕೆ ಇಡಲಾಗಿದ್ದು, ಅಕ್ಟೋಬರ್ 16ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ‘ಅಮರನ್’ ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ, ಶ್ರೀಲೀಲಾ ನಾಯಕಿಯರಾಗಿದ್ದು, ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ.

ಅಂದು ಶಿವಣ್ಣ, ಇಂದು ಧನುಷ್;‌  ಗೆಲುವು ತಂದುಕೊಡಲಿದೆಯಾ ʻಓಂʼ?

-

Avinash GR
Avinash GR Jun 19, 2026 7:17 AM

ʻಓಂʼ ಎಂದಕೂಡಲೇ ಕನ್ನಡಿಗರಿಗೆ ಶಿವರಾಜ್‌ಕುಮಾರ್‌ ಅವರ ಬ್ಲಾಕ್‌ ಬಸ್ಟರ್‌ ಹಿಟ್‌ ʻಓಂʼ ಸಿನಿಮಾ ನೆನಪಾಗುತ್ತದೆ. 31 ವರ್ಷಗಳ ಹಿಂದೆ ಬಂದಿದ್ದ ಓಂ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಇದೀಗ ಅದೇ ಶೀರ್ಷಿಕೆ ಅಡಿಯಲ್ಲಿ ನಟ ಧನುಷ್‌ ಹೊಸದೊಂದು ತಮಿಳು ಸಿನಿಮಾ ಘೋಷಿಸಿದ್ದಾರೆ. ಹೌದು, ಧನುಷ್‌ ಅವರ ಮುಂದಿನ ಚಿತ್ರಕ್ಕೆ ‘ಓಂ’ (Om) ಎಂದು ಹೆಸರಿಡಲಾಗಿದ್ದು, ಚಿತ್ರತಂಡ ಟೈಟಲ್ ಟೀಸರ್ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ಓಂ ಚಿತ್ರವು ಇದೇ ವರ್ಷ ಅಕ್ಟೋಬರ್ 16ರಂದು ತೆರೆಕಾಣಲಿದೆ.

ʻಓಂʼ ಚಿತ್ರದ ಟೀಸರ್‌ನಲ್ಲಿ ಅಧಿಕಾರ, ಹಣ ಮತ್ತು ಕ್ರಾಂತಿಯ ಸುತ್ತ ಸುತ್ತುವ ಕಥೆ ಇದೆ ಎಂಬ ಮುನ್ಸೂಚನೆ ಇದೆ. ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರ ಪ್ರಕಾರ, ‘ಓಂ’ ಒಂದು ಕಾಲ್ಪನಿಕ ಕಥೆಯಾಗಿದ್ದರೂ, ಹಲವು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಅಮರನ್‌ ಯಶಸ್ಸಿನ ಬಳಿಕ ಅವರು ಈ ಬಾರಿ ಧನುಷ್‌ ಜೊತೆ ಕೈಜೋಡಿಸಿದ್ದಾರೆ.

Actor Dhanush: ನಟ ಧನುಷ್ ಸಿನಿಮಾ ಪ್ರಚಾರಕ್ಕಾಗಿ ಸುಳ್ಳು ಹೇಳಿದ್ರಾ ನಟ ಧನುಷ್‌? ನೆಟ್ಟಿಗರು ಫುಲ್‌ ಗರಂ

ಈ ಚಿತ್ರದಲ್ಲಿ ಮಮ್ಮುಟ್ಟಿಗೆ ಪ್ರಮುಖ ಪಾತ್ರ

ಈ ಚಿತ್ರದಲ್ಲಿ ಧನುಷ್ ಜೊತೆಗೆ ನಟಿ ಸಾಯಿ ಪಲ್ಲವಿ, ಶ್ರೀಲೀಲಾ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದು, ಜೊತೆಗೆ ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2018ರ 'ಪೆರನ್ಬು' ಚಿತ್ರದ ನಂತರ ಮಮ್ಮುಟ್ಟಿ ಮತ್ತೆ ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಜೊತೆಗೆ ಕರುಪ್ಪು ಚಿತ್ರದಲ್ಲಿ ಈಚೆಗಷ್ಟೇ ಮಿಂಚಿದ್ದ ಮಲಯಾಳಂ ನಟ ಇಂದ್ರನ್ಸ್‌ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

ಧನುಷ್ ಬಗ್ಗೆ ನಿರ್ದೇಶಕರು ಹೇಳಿದ್ದೇನು?

"ಧನುಷ್ ಅವರಂತಹ ಬಹುಮುಖ ಪ್ರತಿಭೆಯ ಕಲಾವಿದರನ್ನು ನಿರ್ದೇಶಿಸುವುದು ಒಂದು ಸವಾಲು. ಧನುಷ್ ಅವರು ಕಲಾತ್ಮಕ ಮತ್ತು ಕಮರ್ಷಿಯಲ್ ಎರಡೂ ಶೈಲಿಯ‌ ಸಿನಿಮಾಗಳ ನಟನೆಯನ್ನು ಅತ್ಯದ್ಭುತವಾಗಿ ಬ್ಯಾಲೆನ್ಸ್ ಮಾಡುತ್ತಾರೆ" ಎಂದು ನಿರ್ದೇಶಕ ರಾಜ್‌ಕುಮಾರ್ ಪ್ರಶಂಸಿಸಿದ್ದಾರೆ. ಧನುಷ್ ಅವರ ಸ್ವಂತ ಬ್ಯಾನರ್ ಆದ ‘ವಂಡರ್‌ಬಾರ್ ಫಿಲ್ಮ್ಸ್’ ಮತ್ತು ಶ್ರದ್ಧಾ ಅಗರ್ವಾಲ್ ಅವರ ‘ಆರ್ ಟೇಕ್ ಸ್ಟುಡಿಯೋಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

Kuberaa Movie: ʼಕುಬೇರʼನಿಗೂ ತಟ್ಟಿದ ಪೈರಸಿ ಕಾಟ; ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕಾಯ್ತು ಧನುಷ್‌-ರಶ್ಮಿಕಾ ಚಿತ್ರ

ಸಾಯಿ ಅಭ್ಯಂಕರ್ ಸಂಗೀತ ನೀಡಲಿದ್ದು, ಎಳಿಲ್ ಅರಸು ಅವರು ಛಾಯಾಗ್ರಹಣ ಮಾಡಲಿದ್ದಾರೆ. ಧನುಷ್ ಇತ್ತೀಚೆಗಷ್ಟೇ 'ಕರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಅಷ್ಟೇನೂ ದೊಡ್ಡ ಹಿಟ್‌ ಆಗಲಿಲ್ಲ. ಇದರ ಬೆನ್ನಲ್ಲೇ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬಯೋಪಿಕ್‌, ಸಂಗೀತ ನಿರ್ದೇಶಕ ಇಳಯರಾಜ ಅವರ ಬಯೋಪಿಕ್ ಚಿತ್ರಗಳಲ್ಲಿ ನಟಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.