'ಟಾಪ್ ನಾಚ್ ಸುಂದರಿ' ಫಸ್ಟ್ ಲುಕ್ ರಿಲೀಸ್ ಮಾಡಿದ ಡಾ. ಜಯಮಾಲಾ; ಆಲ್ಬಂ ಸಾಂಗ್ ಮೂಲಕ ಎಂಟ್ರಿ ಕೊಟ್ಟ ನಿರೂಪಕ ಯಶವಂತ್
'ಟಾಪ್ ನಾಚ್ ಸುಂದರಿ' ಹೆಸರಿನ ಹೊಸ ಕನ್ನಡ ಮ್ಯೂಸಿಕ್ ವಿಡಿಯೋ ಮೂಲಕ ನಿರೂಪಕ ಯಶವಂತ್ ಈಗ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಅವರು ಇತ್ತೀಚೆಗೆ ಈ ಹಾಡಿನ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
-
ಸಿನಿಮಾ ಹಾಲ್‌ನ ಕತ್ತಲ ಸಾಲಿನಲ್ಲಿ ಕುಳಿತು ಕನಸು ಕಾಣುತ್ತಿದ್ದ ಒಬ್ಬ ಯುವಕ, ಈಗ ತಾನೇ ಆ ಕನಸಿನ ಬೆಳಕಿನಡಿ (Spotlight) ನಿಂತಿದ್ದಾನೆ. ಈ ಹಾದಿ ಅಷ್ಟು ಸುಲಭದ್ದಲ್ಲ; ಇದು ವರ್ಷಗಳ ಪರಿಶ್ರಮ, ಭರವಸೆ ಮತ್ತು ನೂರಾರು ಕನಸುಗಳ ಫಲ. ಇದು ನಿರೂಪಕ ಮತ್ತು ನಟ ಯಶವಂತ್ ಅವರ ಜರ್ನಿ. ಹೌದು, ಅವರೀಗ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಟಾಪ್ ನಾಚ್ ಸುಂದರಿ’ (Top Notch Sundri) ಎಂಬ ಹೊಸ ಕನ್ನಡ ಮ್ಯೂಸಿಕ್ ವಿಡಿಯೋದ ಪೋಸ್ಟರ್ ಈಗ ಅಧಿಕೃತವಾಗಿ ರಿಲೀಸ್ ಆಗಿದೆ.
ಕನಸಿನ ಪಯಣಕ್ಕೆ ಹೊಸ ರೂಪ
ತಮ್ಮ ಜೀವನದ ಈ ಮಹತ್ವದ ಘಟ್ಟದ ಬಗ್ಗೆ ಭಾವುಕರಾಗಿ ಮಾತನಾಡಿರುವ ನಟ ಯಶವಂತ್, "ಇದು ಕೇವಲ ಒಂದು ಹಾಡಲ್ಲ, ನನ್ನ ಹಲವು ವರ್ಷಗಳ ಪರಿಶ್ರಮ ಮತ್ತು ಹೃದಯದ ಮಿಡಿತ. ಈ ಪ್ರಯಾಣದಲ್ಲಿ ನನ್ನನ್ನು ನಂಬಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ" ಎಂದು ತಿಳಿಸಿದ್ದಾರೆ. ಈ ಪೋಸ್ಟರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಶೀಘ್ರದಲ್ಲೇ ಅದ್ದೂರಿಯಾಗಿ ಮೂಡಿ ಬರಲಿದೆ ʼರಾಯರ ದರ್ಶನʼ ಆಲ್ಬಂ ಸಾಂಗ್
ಈಚೆಗೆ ಈ ಆಲ್ಬಂ ಸಾಂಗ್‌ನ ಫಸ್ಟ್ ಲುಕ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಅವರು ರಿಲೀಸ್ ಮಾಡಿ, ‘ಟಾಪ್ ನಾಚ್ ಸುಂದರಿ’ ಟೀಮ್‌ಗೆ ಶುಭ ಹಾರೈಸಿದ್ದಾರೆ. "ಹೊಸ ಹುಡುಗರ ಈ ಆಲೋಚನೆ ಕಂಡು ತುಂಬಾ ಸಂತೋಷ ಆಗುತ್ತದೆ. ಹೊಸ ತಂಡ, ಹೊಸ ಪ್ರತಿಭೆಗಳು ಬರಬೇಕು. ನಾನು ಕೂಡ ಯಾವಾಗಲೂ ಸುಂದರಿ ಅನ್ನೋ ಪದವನ್ನು ಬಳಸುತ್ತಲೇ ಇರುತ್ತೇನೆ. ನನಗೆ ಇದನ್ನು ಕಂಡು ಖುಷಿಯಾಗಿದೆ. ಈ ಹಾಡು ಯಶಸ್ಸಾಗಲಿ, ತಂಡಕ್ಕೆ ಒಳ್ಳೆಯದಾಗಲಿ" ಎಂದು ಡಾ. ಜಯಮಾಲಾ ಶುಭ ಹಾರೈಸಿದ್ದಾರೆ. ಹಾಗೆಯೇ, ನಟ ಸುಂದರ್ ರಾಜ್ ಅವರು ಕೂಡ ‘ಟಾಪ್ ನಾಚ್ ಸುಂದರಿ’ ಟೀಮ್‌ಗೆ ಶುಭ ಕೋರಿದ್ದಾರೆ.
ಆಲ್ಬಂ ಸಾಂಗ್ ರಿಲೀಸ್ ಮಾಡಿದ ಸಾ ರಾ ಮಹೇಶ್ ಪತ್ನಿ ಅನಿತಾ; ಹಾಡು ಕೇಳಿ ಸಾಧುಕೋಕಿಲ ಏನಂದ್ರು ನೋಡಿ!
ಶೀಘ್ರದಲ್ಲೇ ‘ಟಾಪ್ ನಾಚ್ ಸುಂದರಿ’ ಹಾಡು ರಿಲೀಸ್
ಈ ಹಾಡಿಯಲ್ಲಿ ಯಶವಂತ್ ಜೊತೆಗೆ ಪ್ರಕೃತಿ ರಾಜೇಂದ್ರ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಸುದರ್ಶನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ವಿನೀತ್ ಅವರ ಸಂಗೀತವಿದ್ದು, ಸುಹಾಸ್ ಅಮೀನ್ ಛಾಯಾಗ್ರಹಣ ಮಾಡಿದ್ದಾರೆ. ರಾಮ್‌ಚರಣ್ ಅವರ ನೃತ್ಯ ನಿರ್ದೇಶನ ಹಾಗೂ ದಿನೇಶ್ ಲಕ್ಕಿ ಅವರ ಸಾಹಿತ್ಯ ಈ ಹಾಡಿಗಿದೆ. ಯಶ್ ಮ್ಯೂಸಿಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಹಾಡಿಗೆ ಧರ್ಮ ರಾಜ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಕನ್ನಡಿಗರ ಮನಗೆಲ್ಲಲು ಸಜ್ಜಾಗಿರುವ ‘ಟಾಪ್ ನಾಚ್ ಸುಂದರಿ’ ಹಾಡು ಶೀಘ್ರದಲ್ಲೇ ರಿಲೀಸ್ ಆಗಲಿದೆ.