ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Geetha Bharathi Bhat: ಚುಚ್ಚು ಮಾತುಗಳ ಬಾಣಕ್ಕೆ ಗೀತಾ ಭಾರತಿ ಭಟ್ ಡೋಂಟ್ ಕೇರ್; ನಟಿಗೆ ಪತಿಯೇ ಸಾಥ್‌

Geetha Bharathi Bhat: ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಾರತಿ ಭಟ್‌ ಅವರು ನಟಿಸಿದ್ದರು. ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟಿ ಗೀತಾ ಭಾರತಿ ಭಟ್, ಸಿನಿಮಾಗಳಲ್ಲೂ ಅಭಿನಯಿಸಿ, ಉತ್ತಮ ಗಾಯಕಿ ಸಹ ಆಗಿದ್ದಾರೆ. ಗೀತಾ ಭಾರತಿ ಭಟ್‌ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬ್ರಹ್ಮಾವರ ರಾಜಾರಾಮ್ ಭಟ್ ಅವರನ್ನ ಗೀತಾ ಭಾರತಿ ಭಟ್ ಮದುವೆಯಾಗಿದ್ದಾರೆ (Marriage). ಜೋಡಿ ನಂ 1 ಸೀಸನ್‌ 3 ಶೋನಲ್ಲಿ ಈ ಜೋಡಿ ಭಾಗವಹಿಸಿದೆ. ಈ ವೇಳೆ ತೂಕದ ವಿಚಾರವಾಗಿ ಮಾತನಾಡಿ ಭಾವುಕರಾದರು.

ಚುಚ್ಚು ಮಾತುಗಳ ಬಾಣಕ್ಕೆ  ಗೀತಾ ಭಾರತಿ ಭಟ್ ಡೋಂಟ್ ಕೇರ್!

ಗೀತಾ ಭಾರತಿ ಭಟ್ -

Yashaswi Devadiga
Yashaswi Devadiga Apr 5, 2026 7:28 PM

ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಾರತಿ ಭಟ್‌ (geetha bhat) ಅವರು ನಟಿಸಿದ್ದರು. ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟಿ ಗೀತಾ ಭಾರತಿ ಭಟ್, ಸಿನಿಮಾಗಳಲ್ಲೂ ಅಭಿನಯಿಸಿ, ಉತ್ತಮ ಗಾಯಕಿ ಸಹ ಆಗಿದ್ದಾರೆ. ಗೀತಾ ಭಾರತಿ ಭಟ್‌ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬ್ರಹ್ಮಾವರ ರಾಜಾರಾಮ್ ಭಟ್ ಅವರನ್ನ ಗೀತಾ ಭಾರತಿ ಭಟ್ ಮದುವೆಯಾಗಿದ್ದಾರೆ (Marriage). ಜೋಡಿ ನಂ 1 ಸೀಸನ್‌ 3 (Jodi Number 1) ಶೋನಲ್ಲಿ ಈ ಜೋಡಿ ಭಾಗವಹಿಸಿದೆ. ಈ ವೇಳೆ ತೂಕದ ವಿಚಾರವಾಗಿ ಮಾತನಾಡಿ ಭಾವುಕರಾದರು.

ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ 1 ಶೋ ಸೀಸನ್‌ 3 ಪ್ರಸಾರ ಆಗ್ತಿದೆ. ಎಲ್ಲರ ಅಚ್ಚುಮೆಚ್ಚಿನ, ನಕ್ಕು ನಗಿಸುವುದಕ್ಕೆ ಮನೆಮಾತಾದ ಕುರಿ ಪ್ರತಾಪ್ ಮತ್ತು ಶ್ವೇತಾ ಚೆಂಗಪ್ಪ ಅವರು ಈ ಶೋವನ್ನು ನಿರೂಪಣೆ ಮಾಡಲಿದ್ದಾರೆ. ಈ ಶೋನಲ್ಲಿ ತಮ್ಮದೇ ಆದ ವೃತ್ತಿರಂಗದಲ್ಲಿ ಹೆಸರು ಮಾಡಿದ ಹಿರಿಯ ಮತ್ತು ಇತ್ತೀಚಿಗೆ ಮದುವೆಯಾದ ಜೋಡಿಗಳು ಭಾಗವಹಿಸಿದ್ದಾರೆ. . ಈ ಶೋಗೆ ಗೀತಾ ಭಾರತಿ ಭಟ್‌ ಹಾಗೂ ರಾಜಾರಾಮ್‌ ಭಟ್‌ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಆಗ ದಪ್ಪ ಇರೋ ಬಗ್ಗೆ, ಕೆಲ ಜನರು ನೆಗೆಟಿವ್‌ ಆಗಿ ಮಾತನಾಡಿದ್ದರ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: Bhagyalakshmi Serial: 16 ವರ್ಷ ನರಕ! ಮದುವೆಗೆ ರೆಡಿಯಾದ ಭಾಗ್ಯ; ಗೆದ್ದೇ ಬಿಟ್ಟನಾ ತಾಂಡವ್‌?

ಚುಚ್ಚಿ ಹೇಳಿದರೆ ಕಷ್ಟ ಆಗುವುದು

ಬೊಟ್ಟು ಸರಿ ಇಲ್ಲ, ಪಿನ್‌ ಹಾಕಿಲ್ಲ ಅಂದ್ರೆ ಸರಿ ಮಾಡಿಕೊಳ್ಳಬಹುದು, ಎರಡು ನಿಮಿಷ ಸಾಕು. ಆದರೆ ಎರಡು ನಿಮಿಷದಲ್ಲಿ ಸಣ್ಣ ಆಗೋಕೆ ಆಗೋದಿಲ್ಲ. ನಾವು ಎಲ್ಲಿ ಸಿಕ್ಕಿದರೂ ಕೂಡ ಅದೇ ಮಾತು ಒತ್ತಿ ಒತ್ತಿ ಅದನ್ನೇ ಕೇಳೋದು ಎಷ್ಟು ಸರಿ? ಚುಚ್ಚಿ ಹೇಳಿದರೆ ಕಷ್ಟ ಆಗತ್ತೆ. ಫಿಟ್‌ನೆಸ್‌ ಜರ್ನಿ ಶುರು ಮಾಡಿ, ಸಣ್ಣ ಆಗಿದ್ದೆ. ಮತ್ತೆ ದಪ್ಪ ಆದೆ. ಅದಕ್ಕೆ ಅದರದ್ದೇ ಆದ ಕಾರಣ ಇರುತ್ತದೆ. ಎಲ್ಲರಿಗೂ ನಾನು ಕಾರಣ ಹೇಳಿಕೊಂಡು ಬರೋಕೆ ಆಗೋದಿಲ್ಲ. ನಾನು ಮತ್ತೆ ಪ್ರಯತ್ನಪಡ್ತಿದ್ದೀನಿ ಎಂದು ಗೀತಾ ಭಾರತಿ ಭಟ್‌ ಹೇಳಿದ್ದಾರೆ.

ಮನೆಗೆ ಹೋದಾಗ, ಒಬ್ಬರೇ ಇದ್ದಾಗ ಬೇಸರ ಆಗುವುದು. ಎರಡು ನಿಮಿಷದಲ್ಲಿ ಸರಿ ಮಾಡಲಾಗದ ವಿಷಯವನ್ನು ಪದೇ ಪದೇ ಹೇಳಿ ನೋವು ಮಾಡಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ.

ಪತಿ ರಾಜಾರಾಮ್‌ ಭಟ್‌ ಕೂಡ ಮಾತನಾಡಿದ್ದು, “ಗಂಡನಾಗಿ ಅವಳ ಜೊತೆ ಬೆನ್ನೆಲುಬಾಗಿ ಇರೋದು ನನ್ನ ಕರ್ತವ್ಯ. ಅದನ್ನು ನಾನು ನಿಭಾಯಿಸ್ತಿದ್ದೀನಿ, ಈಗ ಈ ವೇದಿಕೆ ಸಿಕ್ಕಿದ್ದು, ಅದನ್ನು ಉಳಿಸಿಕೊಳ್ತೀನಿ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಅಸಮಾಧಾನ

'ಲವ್ ಮಾಕ್ಟೇಲ್' ಚಿತ್ರದಲ್ಲಿ ಬಾಡಿಶೇಮಿಂಗ್ ಡೈಲಾಗ್ ಕುರಿತು ಗೀತಾ ಭಾರತಿ ಭಟ್ ಇತ್ತೀಚೆಗೆ ಅಸಮಾಧಾನ ಹೊರ ಹಾಕಿದ್ದರು. ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ‘ಹೂ ತರ ಇದ್ಲು, ಹೂಕೋಸ್ ತರ ಆಗಿದ್ದಾಳೆ’ ಎಂಬ ಡೈಲಾಗ್ ಇದೆ. ಈ ದೃಶ್ಯವನ್ನು ಗೀತಾ ಮಾಡಿದರು. ಯಾಕಾದರೂ ನಾನು ಈ ಸಿನಿಮಾ ಒಪ್ಪಿಕೊಂಡೆನೋ ಏನೋ ಎಂದು ಗೀತಾ ಭಾರತೀ ಭಟ್‌ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ಹಿರಿಯ ನಟಿ ಮಾಳವಿಕಾ ಅವಿನಾಶ್ ಜಡ್ಜ್ ಸ್ಥಾನದಲ್ಲಿದ್ದಾರೆ. ‘ಅಮೃತಧಾರೆ’ ಧಾರಾವಾಹಿ ಮೂಲಕ ಎಲ್ಲರ ಮೆಚ್ಚುಗೆ ಪಡೆದ ಭೂಮಿಕಾ-ಗೌತಮ್ ಅಲಿಯಾಸ್ ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ, ನೆನಪಿರಲಿ ಪ್ರೇಮ್ ಈ ಶೋ ನ ತೀರ್ಪುಗಾರರು.

ಇದನ್ನೂ ಓದಿ: Ranbir Kapoor: ರಾಮಾಯಣ ಕಥೆ ಹೇಳುವಾಗ ಮಗಳ ಪ್ರತಿಕ್ರಿಯೆ ಏನು? ರಣಬೀರ್ ಹೇಳಿದ್ದೇನು?

ರುದ್ರ ಮಾಸ್ಟರ್ – ನಿರೀಕ್ಷ, ಧನರಾಜ್ – ಪ್ರಜ್ಞಾ, ರಜನಿ-ಅರುಣ್ ಗೌಡ, ನಯನಾ ನಾಗರಾಜ್ – ಸುಹಾಸ್, ಬಾಳು ಬೆಳಗುಂದಿ – ಮಾಲಾಶ್ರೀ, ಜಗ್ಗಪ್ಪ – ಸುಶ್ಮಿತಾ, ಮಿಮಿಕ್ರಿ ಗೋಪಿ – ಉಷಾರಾಣಿ, ಗೀತಾ ಭಾರತೀ ಭಟ್ – ರಾಜಾರಾಮ್ ಭಟ್, ಕೋಟೆ ಪ್ರಭಾಕರ್ – ಮಾಲತಿ ಹಾಗೂ ಅಭಿಲಾಷ್ – ಅಪೂರ್ವ ಅವರು ಜೋಡಿ.ನಂ.1 ನಲ್ಲಿ ಸ್ಪರ್ಧಿಗಳಾಗಿದ್ದಾರೆ.