Readers Colony: ಮೂಲ ಮರೆಯದ ಹವ್ಯಕರು
ಉಣ್ಣುವ ತಂಬುಳಿ, ಕುಡಿಯುವ ತಂಬುಳಿ ಬೇರೆ. ಅದರಲ್ಲೂ ನೂರೆಂಟು ಬಗೆ- ಶುಂಠಿ, ಜೀರಿಗೆ- ಮೆಂತೆ, ಯಲಬದ್ಗೆ ಕೊಡಿ, ಅಂಬೆಕೊಂಬು, ಒಂದೆಲ್ಗ, ಮಾವು, ವಾಮಕಾಳು, ಪೇರಲೆ ಕೊಡಿ, ಪತ್ರೆ ಕೊಡಿ, ಒಗ್ಗರಣೆ ಸೊಪ್ಪು, ಉರಗೆಲೆ ಹೀಗೆ ಹಲವಾರು. ಹವ್ಯಕರ ಕಜ್ಜಾಯದಲ್ಲೂ ವಿವಿಧತೆ. ಊರಿನಿಂದ ಎಷ್ಟೇ ದೂರ ಹೋದರೂ, ಹವ್ಯಕರು ತಮ್ಮ ಮೂಲ ಮರೆಯಲಾರರು.
-
ಓದುಗರ ಓಣಿ
ಚಿಕಾಗೋ ಇರಲಿ, ಗೋವಾ ಇರಲಿ, ಹವ್ಯಕರ ತಂಬುಳಿಯ ಮಳೆಬಿಲ್ಲು ಇದ್ದೇ ಇರುತ್ತದೆ. ಒಂದೊಮ್ಮೆ ಅದಿಲ್ಲ ಅಂದರೆ, ಅವರಾರೂ ನಿಜ ಹವ್ಯಕರಾಗಲಾರರು! ಅಷ್ಟೊಂದು ಅವಿನಾಭಾವ ಸಂಬಂಧ ಹವ್ಯಕ- ತಂಬುಳಿ ಮಧ್ಯೆ. ವಿಶ್ವ ಹವ್ಯಕ ಸಮ್ಮೇಳನದ ಸಂದರ್ಭ, ಸಂಸದ ತೇಜಸ್ವಿ ಸೂರ್ಯ ಹೇಳಿದ ಹಾಗೆ, ಹವ್ಯಕರ ಬೆಳಗಿನ ತಿಂಡಿಯಲ್ಲಿ ದೋಸೆ ಇರಲೇ ಬೇಕು. ಇದು ಹವ್ಯಕರ ಐಡೆಂಟಿಟಿ! ಹವ್ಯಕರ ತಂಬುಳಿ ಅಂದರೆ ಬರಿ ತಂಬುಳಿ ಅಲ್ಲ, ಅಮೃತ! ಅದೆಷ್ಟು ಬಗೆ!
ಉಣ್ಣುವ ತಂಬುಳಿ, ಕುಡಿಯುವ ತಂಬುಳಿ ಬೇರೆ. ಅದರಲ್ಲೂ ನೂರೆಂಟು ಬಗೆ- ಶುಂಠಿ, ಜೀರಿಗೆ- ಮೆಂತೆ, ಯಲಬದ್ಗೆ ಕೊಡಿ, ಅಂಬೆಕೊಂಬು, ಒಂದೆಲ್ಗ, ಮಾವು, ವಾಮಕಾಳು, ಪೇರಲೆ ಕೊಡಿ, ಪತ್ರೆ ಕೊಡಿ, ಒಗ್ಗರಣೆ ಸೊಪ್ಪು, ಉರಗೆಲೆ ಹೀಗೆ ಹಲವಾರು. ಹವ್ಯಕರ ಕಜ್ಜಾಯದಲ್ಲೂ ವಿವಿಧತೆ. ಊರಿನಿಂದ ಎಷ್ಟೇ ದೂರ ಹೋದರೂ, ಹವ್ಯಕರು ತಮ್ಮ ಮೂಲ ಮರೆಯಲಾರರು. ಇನ್ನು, ಹವ್ಯಕ ಭಾಷೆಯ ವಿಶಿಷ್ಟತೆ ಬಲ್ಲವರೇ ಬಲ್ಲರು. ಕನ್ನಡ ಬರುವವರಿಗೂ ಹವ್ಯಕ ಭಾಷೆ ಅರ್ಥವಾಗದು. ಇದೊಂದು ರೀತಿ ಹಲವು ಭಾಷೆಗಳ ಸಮ್ಮಿಶ್ರಣದಿಂದ ಹೊರಹೊಮ್ಮಿದ್ದು. ಹೇಳಲು ಸುಲಭ ಅನಿಸಿದರೂ, ಬರೆಯುವುದು ಬಹಳ ಕಷ್ಟ. ಒತ್ತಿನ ಮೇಲೆ ಒತ್ತು ಕೊಡುತ್ತ ಹೋಗಬೇಕು. ಈ ಭಾಷೆಯ ಉಗಮದ ಬಗ್ಗೆ ಸಂಶೋಧನೆಯ ಅವಶ್ಯಕತೆಯೂ ಇದೆ. ಇಷ್ಟೆಲ್ಲ ನೆನಪಾಗಿದ್ದು, ವಿಶ್ವೇಶ್ವರ ಭಟ್ಟರ, ಅಮೆರಿಕ ಹವ್ಯಕ ಸಮೇಳನದ ಕುರಿತಾದ ‘ನೂರೆಂಟು ವಿಶ್ವ’ ಅಂಕಣದಿಂದ.
ಇದನ್ನೂ ಓದಿ: Readers Colony: ಸಾಹಿತಿಗಳ ಪರನಿಂದೆಯ ಸೊಗಸು
- ಶಂಕರನಾರಾಯಣ ಭಟ್, ಹೊನ್ನಾವರ
ರೈತರ ಹಿತ ಏಕಿಲ್ಲ?
ಒಂದೆಡೆ ಅರ್ಧ ಕರ್ನಾಟಕ ಮಳೆಯಲ್ಲಿ ನೆನೆಯುತ್ತಿದ್ದರೆ ಇನ್ನೊಂದೆಡೆ ಇನ್ನರ್ಧ ಕರ್ನಾಟಕ ಬರದಲ್ಲಿ ಬೇಯುತ್ತಿದೆ. ಮುಂಗಾರು ಮಳೆಯ ಕಣ್ಣುಮುಚ್ಚಾಲೆ ಆಟ ರಾಜ್ಯದ ಹಲವು ಜಿಲ್ಲೆಗಳ ರೈತರಲ್ಲಿ ಆತಂಕ ಸೃಷ್ಟಿಸಿದೆ. ಜುಲೈನಲ್ಲಿ ತಡವಾಗಿಯಾದರೂ ರಾಜ್ಯದ ಪ್ರಮುಖ ಜಲಾಶಯಗಳು ಜೀವ ತುಂಬಿಕೊಳ್ಳುತ್ತಿರುವುದು ಕೊಂಚ ಸಮಾಧಾನ ಮೂಡಿಸಿದೆ. ಆದರೆ ರಾಜ್ಯದ ಬರಪ್ರದೇಶಗಳ, ರೈತರ ಗ್ರಾಮೀಣರ ಸಂಕಟ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿ ರುವ ರಾಜ್ಯದ ಜನಪ್ರತಿನಿಽಗಳು ಎಸ್‌ಐಆರ್ ಜ್ವರ, ಬಿಡದಿ ಬೊಬ್ಬೆ, ಕುರ್ಚಿ ಕೆಮ್ಮು, ಪದವಿ ನಡುಕದಲ್ಲಿ ಮೈಮರೆತಿರುವುದು ಬೇಸರದ ಸಂಗತಿ. ಬರ ಹಾಗೂ ಮಳೆ ಕೊರತೆ, ಮಳೆಹಾನಿ, ಪರಿಹಾರ ಕ್ರಮಗಳನ್ನು ಮರೆತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿಫಲತೆ ಎಂದು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಬೊಬ್ಬಿಡುತ್ತಿರುವುದು ಬೇಸರದ ಸಂಗತಿ.
- ಮಂಜುಳಾ ರಾಮಶೇಷ, ಹುಲಿಮಂಗಲ
ಕನ್ನಡ ಕಡ್ಡಾಯಗೊಳ್ಳಲಿ
ಪದವಿ ಹಂತದಲ್ಲಿ ಕನ್ನಡ ಬೋಧನೆಯನ್ನು ಕಡ್ಡಾಯಗೊಳಿಸುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಇತ್ತೀಚಿನ ಶಿಫಾರಸು ಕೇವಲ ಭಾಷಾ ಪ್ರೇಮವಲ್ಲ, ಅದು ನಮ್ಮ ಬೌದ್ಧಿಕ ಅಸ್ತಿತ್ವದ ಮರುಸ್ಥಾಪನೆ. ಜಾಗತಿಕ ಸಂಶೋಧನೆಗಳ ಪ್ರಕಾರ ಪ್ರಾದೇಶಿಕ ಭಾಷೆಗಳಲ್ಲಿ ಕಲಿಯುವುದರಿಂದ ವಿದ್ಯಾರ್ಥಿಗಳ ತಾರ್ಕಿಕ ಚಿಂತನೆ ಮತ್ತು ಸೃಜನಶೀಲತೆ ಶೇಕಡಾ 35ರಷ್ಟು ವೇಗವಾಗಿ ವಿಕಸನ ಗೊಳ್ಳುತ್ತದೆ. ಆದರೆ ಕೇವಲ ಸಾಂಪ್ರದಾಯಿಕ ಸಾಹಿತ್ಯ ಬೋಧನೆಯಿಂದ ಇಂದಿನ ತಾಂತ್ರಿಕ ತಲೆಮಾರನ್ನು ಆಕರ್ಷಿಸಲು ಸಾಧ್ಯವಿಲ್ಲ. ನಿಗದಿಪಡಿಸಿದ ವಾರದ 4 ಗಂಟೆಗಳಲ್ಲಿ ಕನಿಷ್ಠ ಒಂದು ತಾಸನ್ನು ಭಾಷಾ ತಂತ್ರಜ್ಞಾನ, ದತ್ತಾಂಶ ವಿಶ್ಲೇಷಣೆ ಮತ್ತು ಸ್ಥಳೀಯ ಮಾರುಕಟ್ಟೆ ಸಂಶೋಧನೆಗೆ ಬಳಸಬೇಕು. ಸಾಂಸ್ಕೃತಿಕ ಬೇರುಗಳನ್ನು ಜಾಗತಿಕ ಜ್ಞಾನದ ಆರ್ಥಿಕತೆಗೆ ಜೋಡಿಸಿದಾಗ ಮಾತ್ರ ಯುವಜನರಲ್ಲಿ ನೈಜ ಆಸಕ್ತಿ ಮೂಡಲು ಸಾಧ್ಯ. ಕನ್ನಡವು ಕೇವಲ ಭಾವನಾತ್ಮಕ ವಿಷಯವಾಗಿ ಉಳಿಯದೆ ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಉದ್ಯೋಗಶೀಲತೆಯ ಪ್ರಬಲ ಶಕ್ತಿಯಾಗ ಬೇಕಿದೆ. ಶೈಕ್ಷಣಿಕ ವಲಯದಲ್ಲಿ ಈ ಬದಲಾವಣೆ ತಕ್ಷಣವೇ ಜಾರಿಯಾಗಲಿ.
- ಡಾ.ವಿಜಯಕುಮಾರ್ ಎಚ್.ಕೆ., ರಾಯಚೂರು