ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

War 2 Movie: 'ವಾರ್ 2' ಸಿನಿಮಾ ರಿಲೀಸ್‌ಗೆ ದಿನಗಣನೆ; ಜೂನಿಯರ್ ಎನ್‌ಟಿಆರ್- ಹೃತಿಕ್ ರೋಷನ್ ಭರ್ಜರಿ ಪ್ರಚಾರ

Jr NTR: ಹೈ ಆ್ಯಕ್ಷನ್, ಸಸ್ಪೆನ್ಸ್ ಥ್ರಿಲ್ಲರ್‌ ಇರುವ ʼವಾರ್ 2ʼ ಸಿನಿಮಾ ಮೂಲಕ ನಟ ಜೂನಿಯರ್ ಎನ್‌ಟಿಆರ್ ಬಾಲಿವುಡ್‌ಗೆ ಗ್ರ್ಯಾಂಡ್ ಆಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರ ರಿಲೀಸ್‌ ಆಗಲು ಸಿದ್ಧತೆ ನಡೆದಿದೆ. ಇದೀಗ ಜೂನಿಯರ್ ಎನ್‌ಟಿಆರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಫೋಟೊ ಒಂದನ್ನು ಶೇರ್ ಮಾಡಿ ಕೊಂಡಿದ್ದಾರೆ.

ʼವಾರ್ 2ʼ ಚಿತ್ರಕ್ಕೆ ವಿಭಿನ್ನವಾಗಿ ಪ್ರಚಾರ ಮಾಡಿದ ಸ್ಟಾರ್ ನಟರು

War 2

Profile Pushpa Kumari Aug 7, 2025 8:01 PM

ಮುಂಬೈ: ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ (Hrithik Roshan) ಹಾಗೂ ಜೂನಿಯರ್ ಎನ್‌ಟಿಆರ್ (Jr NTR) ಅಭಿನಯದ 'ವಾರ್ 2' ಸಿನಿಮಾ (War 2 Movie) ಬಿಡುಗಡೆಗೆ ಮುನ್ನವೇ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸುತ್ತಿದೆ. ಈ ಚಿತ್ರದ 'ಜನಾಬ್-ಎ-ಆಲಿ' ಹಾಡಿನ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು ಇದನ್ನು ನೋಡಿ ಹೃತಿಕ್ ರೋಷನ್‌ ಮತ್ತು ಎನ್‌ಟಿಆರ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಆಗಸ್ಟ್‌ 14ರಂದು ರಿಲೀಸ್‌ ಆಗಲಿರುವ ಈ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಹೃತಿಕ್ ರೋಷನ್ ನಟ ಜೂ. ಎನ್‌ಟಿಆರ್ ಅವರಿಗೆ 'ನಾಟು ನಾಟು' ಥೀಮ್‌ನ ಬೋರ್ಡ್ ಟ್ರಕ್ ಕಳುಹಿಸಿದ್ದಾರೆ. ಜೂನಿಯರ್ ಎನ್‌ಟಿಆರ್ ನಾಟು ನಾಟು ಟ್ರಕ್ ವೀಕ್ಷಿಸುತ್ತಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೈ ಆ್ಯಕ್ಷನ್ ಇರುವ, ಸಸ್ಪೆನ್ಸ್ ಥ್ರಿಲ್ಲರ್‌ ʼವಾರ್ 2ʼ ಸಿನಿಮಾ ಮೂಲಕ ನಟ ಜೂನಿಯರ್ ಎನ್‌ಟಿಆರ್ ಬಾಲಿವುಡ್‌ಗೆ ಗ್ರ್ಯಾಂಡ್ ಆಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಅವರು ನಾಟು ನಾಟು ಬಿಲ್‌ಬೋರ್ಡ್‌ನ ಟ್ರಕ್ ಜೊತೆಗೆ ಫೋಟೊ ತೆಗೆಸಿಕೊಂಡು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಆದ ಫೋಟೊದಲ್ಲಿ ನಿಮಗೆ ಬೇಕಾದಷ್ಟು ಯುದ್ಧ ಮಾಡಿ... ಆದರೆ ನಾನು ಈ ಯುದ್ಧವನ್ನು ಗೆಲ್ಲುತ್ತಿದ್ದೇನೆ...ಹೃತಿಕ್ ವರ್ಸಸ್ ಜೂನಿಯರ್ ಎನ್‌ಟಿಆರ್ ಎಂದು ಬರೆದಿರುವ ಜಾಹೀರಾತು ಬೋರ್ಡ್ ಟ್ರಕ್‌ನಲ್ಲಿರುವುದು ಕಾಣಬಹುದು. ಈ ರಿಟರ್ನ್ ಗಿಫ್ಟ್ ಚೆನ್ನಾಗಿದೆ ಹೃತಿಕ್ ಸರ್. ಆದರೆ ಇದು ಅಂತ್ಯವಲ್ಲ! ಆಗಸ್ಟ್ 14ರಂದು ನಿಜವಾಗಿಯೂ ಯುದ್ಧ ಪ್ರಾರಂಭವಾಗುತ್ತದೆ. ನಂತರ ಭೇಟಿಯಾಗೋಣ ಎಂದು ಬರೆದಿದ್ದಾರೆ.

ಇದನ್ನು ಓದಿ:Janaki Vs State of Kerala Movie: ಸ್ವಾತಂತ್ರ್ಯ ದಿನಕ್ಕೆ ʻಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರ ಸ್ಟ್ರೀಮಿಂಗ್!.

ಇದಕ್ಕೆ ಪ್ರತಿಯಾಗಿ ಜೂನಿಯರ್ ಎನ್‌ಟಿಆರ್ ಕೂಡ ಹೃತಿಕ್ ಅವರ ಮುಂಬೈ ನಿವಾಸಕ್ಕೆ ಬಿಲ್ಬೋರ್ಡ್ ಟ್ರಕ್ ಕಳುಹಿಸಿದ್ದಾರೆ. ಅದರಲ್ಲಿ ಸಿನಿಮಾದ ಫೇಮಸ್ ಲೈನ್ ಕೂಡ ಬರೆದಿತ್ತು. ಈ ಬೋರ್ಡ್ ಜತೆಗೆ ಹೃತಿಕ್ ರೋಷನ್ ಕೂಡ ಫೋಟೊಗೆ ಪೋಸ್ ನೀಡಿದ್ದಾರೆ. ಸರಿ ಸವಾಲನ್ನು ಸ್ವೀಕರಿಸಲಾಗಿದೆ. ಇದನ್ನು ನೀವೇ ಆರಂಭಿಸಿದ್ದೀರಿ, ಯುದ್ಧಕ್ಕೆ 9 ದಿನ ಬಾಕಿ ಉಳಿದಿದೆ. ಶೀಘ್ರವೇ ಬರಲಿದ್ದೇನೆ ಎಂದು ಕ್ಯಾಪ್ಶನ್‌ ಣಿಡಿದ್ದಾರೆ.

ಅಯಾನ್ ಮುಖರ್ಜಿ ನಿರ್ದೇಶನದ ʼವಾರ್ 2ʼ ಸಿನಿಮಾ ರಿಲೀಸ್ ಆಗಲು ಒಂದು ವಾರ ಮಾತ್ರವೇ ಬಾಕಿ ಇದೆ‌. ʼವಾರ್ 2ʼ ಸಿನಿಮಾ ಟ್ರೈಲರ್‌ ಬಿಡುಗಡೆಯಾದಾಗಿನಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ. ಇದರಲ್ಲಿ ಕಬೀರ್ (ಹೃತಿಕ್‌ ರೋಷನ್) ಮತ್ತು ವಿಕ್ರಮ್ (ಜೂನಿಯರ್ ಎನ್‌ಟಿಆರ್ ಪಾತ್ರ) ನಡುವಿನ ಘರ್ಷಣೆ ತೋರಿಸಲಾಗಿದೆ. ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ವೇಳೆ ರಿಲೀಸ್‌ ಆಗಲಿರುವ ಸೂಪರ್ ಸ್ಟಾರ್ ರಜನಿಕಾಂತ್, ಉಪೇಂದ್ರ, ಆಮೀರ್ ಖಾನ್, ನಾಗಾರ್ಜುನ ಅಭಿನಯದ 'ಕೂಲಿ' ಸಿನಿಮಾಕ್ಕೆ ಭರ್ಜರಿ ಪೈಪೋಟಿ ಕೂಡ ನೀಡಲಿದೆ.